ಫೋಟೋ ತೆಗೆಯುವ ವಿಚಾರಕ್ಕೆ ಗಲಾಟೆ: ವಿಧಾನ ಸೌಧದ ಮುಂಭಾಗದಲ್ಲೇ ಯುವಕರ ಗುದ್ದಾಟ!
Viral Video: ರಾಜಧಾನಿಯ ಅತ್ಯಂತ ಬಿಗಿ ಭದ್ರತೆಯ ಸ್ಥಳವಾಗಿರುವ ವಿಧಾನ ಸೌಧದ ಮುಂಭಾಗದಲ್ಲೇ ಅಘಾತಕಾರಿ ಘಟನೆಯೊಂದು ಕಂಡುಬಂದಿದೆ. ನೇಪಾಳ ಮೂಲದ ಯುವಕರ ಗುಂಪಿನ ನಡುವೆ ಭೀಕರ ಜಗಳ ನಡೆದಿದ್ದು ಇದರಲ್ಲಿ ಭಾಗಿಯಾದ ನಾಲ್ವರನ್ನು ಪೋಲೀಸರು ಬಂಧಿಸಿದ್ದಾರೆ...
ವಿಧಾನ ಸೌಧದ ಮುಂಭಾಗದಲ್ಲೇ ಯುವಕರ ಗುದ್ದಾಟ -
ಬೆಂಗಳೂರು,ಜು.1: ರಾಜಧಾನಿಯ ಅತ್ಯಂತ ಬಿಗಿ ಭದ್ರತೆಯ ಸ್ಥಳವಾಗಿರುವ ವಿಧಾನ ಸೌಧದ ಮುಂಭಾಗದಲ್ಲೇ ಅಘಾತಕಾರಿ ಘಟನೆಯೊಂದು ಕಂಡು ಬಂದಿದೆ. ನೇಪಾಳ ಮೂಲದ ಯುವಕರ ಗುಂಪಿನ ನಡುವೆ ಭೀಕರ ಜಗಳ ನಡೆದಿದ್ದು ಇದರಲ್ಲಿ ಭಾಗಿಯಾದ ನಾಲ್ವರನ್ನು ಪೋಲೀಸರು ಬಂಧಿಸಿದ್ದಾರೆ. ವೈರಲ್ (Viral News) ವಿಡಿಯೋದಲ್ಲಿ ನೇಪಾಳಿ ಯುವಕರು ಬೆಂಗಳೂರಿನ ವಿಧಾನಸೌಧದ ಹೊರಗೆ ಗುದ್ದಾಡುವುದು,ಪರಸ್ಪರ ಹೊಡೆದಾಡಿಕೊಳ್ಳುವ ದೃಶ್ಯ ಕಂಡು ಬಂದಿದೆ..
ಜೂನ್ 28 ರಂದು ಈ ಘಟನೆ ಕಂಡುಬಂದಿದೆ. ಫೋಟೋ ತೆಗೆಯುವ ನೆಪದಲ್ಲಿ ಭಿನ್ನಾಭಿಪ್ರಾಯ ಕಂಡುಬಂದಿದ್ದು ಸರ್ಕಾರಿ ಕಟ್ಟಡದ ಹೊರಗಿನ ಪಾದಚಾರಿ ಮಾರ್ಗದಲ್ಲಿಯೇ ಹೊಡೆದಾಡಿ ಕೊಂಡಿದ್ದಾರೆ. ಮೊದಲಿಗೆ ಯುವಕರಲ್ಲಿ ಮಾತಿನ ಚಕಮಕಿ ನಡೆದಿದ್ದು ನಂತರ ದೈಹಿಕ ಘರ್ಷಣೆಗೆ ಕಾರಣವಾಯಿತು. ಅತ್ಯಂತ ಪ್ರಮುಖ ಹಾಗೂ ಬಿಗಿ ಭದ್ರತೆಯ ಪ್ರದೇಶವಾಗಿರುವ ವಿಧಾನ ಸೌಧದ ಮುಂಭಾಗದಲ್ಲೇ ಯುವಕರ ನಡುವೆ ಭೀಕರ ಮಾರಾಮಾರಿ ನಡೆದಿದೆ.
ವಿಡಿಯೋ ನೋಡಿ:
Brawl in front of Vidhana Soudha #Bengaluru after a verbal spat between two groups of Nepali youths escalated into physical altercation pic.twitter.com/fp5n0pekHD
— Nabila Jamal (@nabilajamal_) June 30, 2026
ವರದಿಗಳ ಪ್ರಕಾರ, ಒಂದು ಗುಂಪು ಫೋಟೋ ತೆಗೆಯುವಾಗ ತಮ್ಮ ದಾರಿಯನ್ನು ತಡೆದಿದ್ದಾರೆ ಎಂದು ಮತ್ತೊಂದು ಗುಂಪು ಆರೋಪಿಸಿ ವಾಗ್ವಾದ ಪ್ರಾರಂಭವಾಯಿತು. ಮಾತಿನ ಚಕಮಕಿಯಾಗಿ ಪ್ರಾರಂಭವಾದದ್ದು ತ್ವರಿತವಾಗಿ ಕ್ಷಣಾರ್ಧದಲ್ಲೇ ವಿಕೋಪಕ್ಕೆ ತಿರುಗಿ ಹೊಡೆದಾಡಿಕೊಳ್ಳುವ ಹಂತಕ್ಕೆ ತಲುಪಿದೆ.
Viral News: ಕರ್ನಾಟಕ ಮಾತ್ರವಲ್ಲ ಆಸ್ಟ್ರೇಲಿಯಾದಲ್ಲೂ ಇದೆ ಮಂಗಳೂರು; ಏನೀದರ ಇತಿಹಾಸ?
ಹಗಲು ಹೊತ್ತಿನಲ್ಲೇ ಈ ಗಲಾಟೆ ನಡೆದಿದ್ದು ಸಾರ್ವಜನಿಕ ರಸ್ತೆಯಲ್ಲೇ ಯುವಕರು ಪರಸ್ಪರ ಗುದ್ದಾಡಿಕೊಳ್ಳುತ್ತಿರುವ, ಶರ್ಟ್ ಹಿಡಿದು ಎಳೆದಾಡುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾ ದಲ್ಲಿ ಬಹಳಷ್ಟು ವೈರಲ್ ಆಗಿವೆ. ಇತರರು ಮೊಬೈಲ್ ಫೋನ್‌ಗಳಲ್ಲಿ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ. ಘಟನೆಯ ಬಳಿಕ ವಿಧಾನಸೌಧ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಯುವಕರ ವಿರುದ್ಧ ಕೇಸ್ ದಾಖಲಾಗಿದೆ.