ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

''ಭೂಮಿ ಸ್ಥಿರವಾಗಿದೆʼʼ ಎನ್ನುವ ಮೂಲಕ ವಿಜ್ಞಾನಕ್ಕೇ ಸವಾಲೆಸಿದ ಮುಸ್ಲಿಂ ವಿದ್ವಾಂಸ; ಮಕ್ಕಳನ್ನು ತಪ್ಪು ದಾರಿಗೆಳೆಯಬೇಡಿ ಎಂದ ನೆಟ್ಟಿಗರು

Viral Video: ವಸ್ತು ಪ್ರದರ್ಶನ, ವಿಜ್ಞಾನ ಮಾಡೆಲ್ ಇತ್ಯಾದಿ ಕ್ರಿಯಾತ್ಮಕ ಚಟುವಟಿಕೆ ಮೂಲಕ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಮುಂದಾಗುತ್ತಾರೆ. ಆದರೆ ಪಾಕಿಸ್ತಾನದಲ್ಲಿ ಮುಸ್ಲಿಂ ವಿದ್ವಾಂಸವೊಬ್ಬರು ವಿದ್ಯಾರ್ಥಿಗಳಿಗೆ "ವಿಜ್ಞಾನ ಸುಳ್ಳು, ಭೂಮಿ ಚಲಿ ಸುವುದಿಲ್ಲ" ಎಂದು ಹೇಳಿದ್ದಾರೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಭೂಮಿ ಸ್ಥಿರವಾಗಿದೆ; ವಿಜ್ಞಾನ ಸುಳ್ಳು ಎಂದ ಮುಸ್ಲಿಂ ವಿದ್ವಾಂಸ

ಭೂಮಿ ಸ್ಥಿರವಾಗಿದೆ ಎಂದ ಇಸ್ಲಾಮಿಕ್ ವಿದ್ವಾಂಸ -

Profile
Pushpa Kumari Apr 25, 2026 5:11 PM

ಇಸ್ಲಾಮಾಬಾದ್‌, ಏ. 25: ಇತ್ತೀಚೆಗೆ ಶಾಲೆಗಳಲ್ಲಿ ಮಕ್ಕಳಿಗೆ ಸೃಜನಶೀಲ ಕೌಶಲ್ಯಗಳ ಕಲಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ‌. ವಸ್ತು ಪ್ರದರ್ಶನ, ವಿಜ್ಞಾನ ಮಾಡೆಲ್ ಇತ್ಯಾದಿ ಕ್ರಿಯಾತ್ಮಕ ಚಟುವಟಿಕೆ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆಯಲಾಗುತ್ತದೆ. ಇದೀಗ ಪಾಕಿಸ್ತಾನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ವಾಂಸನೊಬ್ಬ ವಿಜ್ಞಾನವನ್ನು ಅಲ್ಲಗೆಳೆಯುವ ಹೇಳಿಕೆ ನೀಡುವ ಮೂಲಕ ವಿದ್ಯಾರ್ಥಿಗಳ ದಾರಿಗೆಳೆಯುವ ಪ್ರಯತ್ನ ಮಾಡಿದ್ದಾನೆ. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಆತ ವಿದ್ಯಾರ್ಥಿಗಳ "ವಿಜ್ಞಾನ ಸುಳ್ಳು, ಭೂಮಿ ಚಲಿಸುವುದಿಲ್ಲ" ಎಂದು ಹೇಳಿದ್ದಾನೆ. ಸದ್ಯ ಈ ಸುದ್ದಿ (Viral Video) ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಪಾಕಿಸ್ತಾನದ ವಿದ್ಯಾರ್ಥಿಯೊಬ್ಬ ಸೂರ್ಯ ಮತ್ತು ಚಂದ್ರ ಗ್ರಹಣಗಳನ್ನು ವಿವರಿಸುವ ಮಾದರಿಯನ್ನು ರಚಿಸಿದ್ದ. ಭೂಮಿಯು ಸೂರ್ಯನ ಸುತ್ತ ಹೇಗೆ ಚಲಿಸುತ್ತದೆ ಎಂಬುದನ್ನು ಆತ ಇತರ ವಿದ್ಯಾರ್ಥಿಗಳೊಗೆ ವಿವರಣೆ ನೀಡುತ್ತಿದ್ದ. ಆದರೆ ಇದನ್ನು ವೀಕ್ಷಿಸುತ್ತಿದ್ದ ಮೌಲಾನಾ (ಮುಸ್ಲಿಂ ವಿದ್ವಾಂಸ), ʼʼವಿಜ್ಞಾನ ಸುಳ್ಳು, ಭೂಮಿ ಚಲಿಸುವುದಿಲ್ಲʼʼ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ವಿಡಿಯೊ ನೋಡಿ:



ವಿದ್ಯಾರ್ಥಿಯೊಬ್ಬ ಇತರರ ಮುಂದೆ ನಿಂತು ತನ್ನ ಮಾಡೆಲ್ ತೋರಿಸುವುದರೊಂದಿಗೆ ಕ್ಲಿಪ್ ಪ್ರಾರಂಭವಾಗುತ್ತದೆ. ʼʼನಾನು ಸೂರ್ಯ ಮತ್ತು ಚಂದ್ರ ಗ್ರಹಣಗಳ ಮಾದರಿಯನ್ನು ಸಿದ್ಧ ಪಡಿಸಿದ್ದೇನೆ.‌ ಎರಡೂ ಗ್ರಹಣಗಳು ಹೇಗೆ ಸಂಭವಿಸುತ್ತದೆʼʼ ಎಂದು ವಿವರಿಸಲು ಪ್ರಾರಂಭಿಸಿದ್ದಾನೆ. ಇದನ್ನು ಗಮನಿಸುತ್ತಿದ್ದ ವಿದ್ವಾಂಸ ಮಧ್ಯ ಪ್ರವೇಶಿಸಿ, ವಿದ್ಯಾರ್ಥಿಯ ವಿವರಣೆಯನ್ನು ತಡೆದಿದ್ದಾನೆ.

ಬೆರಳಿನ ತುದಿಯಲ್ಲೇ ಉರಿದ ಗ್ಯಾಸ್ ಸ್ಟೌವ್: ಇದು ಪವಾಡವಲ್ಲ ವಿಜ್ಞಾನ!

''ಪವಿತ್ರ ಗ್ರಂಥದಲ್ಲಿ, ಅಲ್ಲಾಹನು ಭೂಮಿಯು ಸ್ಥಿರವಾಗಿದೆ ಎಂದು ಹೇಳುತ್ತಾನೆ. ಕುರಾನ್ ಹೀಗೆ ಹೇಳುತ್ತದೆ. ಆದರೆ ‌ ವಿಜ್ಞಾನವು ಭೂಮಿ ಚಲಿಸುತ್ತದೆ ಎಂದು ವಿವರಿಸುತ್ತದೆ. ಆದರೆ ಧರ್ಮಗ್ರಂಥಗಳ ಪ್ರಕಾರ ಭೂಮಿಯು ಸ್ಥಿರವಾಗಿದೆ. ಕುರಾನ್‌ನಲ್ಲಿ ಬರೆದಿರುವುದು ಮಾತ್ರ ಸರಿ ಅಲ್ಲವೇ?" ಎಂದು ಮೌಲಾನಾ ಕೇಳಿದಾಗ ವಿದ್ಯಾರ್ಥಿ ದಿಕ್ಕು ತೋಚದೆ ʼʼಹೌದುʼʼ ಎಂದು ಉತ್ತರಿಸಿದ್ದಾನೆ.

ಈ ಕ್ಲಿಪ್ ಆನ್‌ಲೈನ್‌ನಲ್ಲಿ ಹರಡುತ್ತಿದ್ದಂತೆ, ಜನರು ವಿಭಿನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಇದನ್ನು ಟೀಕಿಸಿದರೆ, ಇನ್ನು ಕೆಲವರು ವ್ಯಂಗ್ಯದಿಂದ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ರು, ʼʼಇಂತಹ ಜನರಿಗೆ ಪ್ರತ್ಯೇಕ ಶಾಲೆಗಳು ಇದ್ದರೆ ಒಳ್ಳೆಯದುʼʼ ಎಂದಿದ್ದಾರೆ. ಮತ್ತೊಬ್ಬರು, ʼʼಇನ್ನೊಬ್ಬರ ಭಾವನೆಗಳಿಗೆ ಯಾವತ್ತು ಧಕ್ಕೆ ಉಂಟು ಮಾಡಬಾರದುʼʼ ಎಂದು ಸಲಹೆ ನೀಡಿದ್ದಾರೆ.