ಪ್ರವಾಸಿಗರೇ ಎಚ್ಚರ! ಗೋವಾದಲ್ಲಿ 'ಗಿಫ್ಟ್ ಕೂಪನ್' ಹೆಸರಲ್ಲಿ ನಡೆಯುತ್ತಿದೆ ಮಹಾಮೋಸ: ಏನಿದು ಪ್ರಕರಣ?
Viral Video: ಗೋವಾದಲ್ಲಿ ಪ್ರವಾಸಿಗರಿಗೆ ಗಿಫ್ಟ್ ಕೂಪನ್ ಹೆಸರಲ್ಲಿ ವಚನೆ ನಡೆಯುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ. ಸ್ಥಳೀಯರು ಈ ಬಗ್ಗೆ ಗಮನ ಸೆಳೆದಿದ್ದಾರೆ. ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಹಗರಣವನ್ನು ಸಾರ್ವಜನಿಕರು ಬಹಿರಂಗಪಡಿಸಿದ್ದಾರೆ. ಸದ್ಯ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗೋವಾದಲ್ಲಿ ಪ್ರವಾಸಿಗರಿಗೆ 'ಗಿಫ್ಟ್ ಕೂಪನ್' ವಂಚನೆ -
ಪಣಜಿ, ಏ. 25: ಇತ್ತೀಚೆಗೆ ಲಕ್ಕಿ ಕೂಪನ್, ಲಕ್ಕಿಡಿಪ್ ಎಂಬ ಹೆಸರಲ್ಲಿ ವಂಚನೆ ಎಸಗುತ್ತಿರುವ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಗೋವಾದಲ್ಲಿ ಪ್ರವಾಸಿಗರಿಗೆ ನಕಲಿ ಗಿಫ್ಟ್ ಕೂಪನ್ ನೀಡಿ ಮೋಸ ಮಾಡಲಾಗುತ್ತಿದೆ ಎನ್ನಲಾಗಿದೆ. ಸ್ಥಳೀಯ ವ್ಯಕ್ತಿಯೊಬ್ಬರು ಈ ಬಗ್ಗೆ ದೂರಿದ್ದಾರೆ. ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಹಗರಣವನ್ನು ಗೋವಾದ ಸ್ಥಳೀಯ ವ್ಯಕ್ತಿ ಬಹಿರಂಗಪಡಿಸಿದ್ದಾರೆ. ಸದ್ಯ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ಬಹುತೇಕರು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಲಕ್ಕಿಡಿಪ್ ಘೋಷಿಸಿ ಡ್ರಾ ಮಾಡದೆ ವಂಚಿಸುತ್ತಿರುವ ಆರೋಪ ಕೆಲವು ಕಡೆಗಳಲ್ಲಿ ಕೇಳಿ ಬಂದಿದೆ. ಗೋವಾದ ಪ್ರವಾಸಿಗರಿಗೆ ಅಪರಿಚಿತರು ನಕಲಿ ಅದೃಷ್ಟ ಕೂಪನ್‌ಗಳನ್ನು ನೀಡುವ ಮೂಲಕ ಮೋಸ ಮಾಡುತ್ತಿದ್ದಾರೆ ಎಂದು ವ್ಯಕ್ತಿಯೊಬ್ಬರು ವಿಡಿಯೊ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ವಿಡಿಯೊ ನೋಡಿ:
This happened to me in Mumbai. One evening, while entering a shopping mall with my family, we were handed 2-3 coupons at the entrance. I passed them to my wife without thinking much.
— New Bharat Speaks 🇮🇳 (@Vishwas1228) April 25, 2026
The coupons had some numbers printed on them.
A few days later, I received a call informing me… pic.twitter.com/PDitOieDWy
ಗೋವಾದ ರಸ್ತೆಯಲ್ಲಿ ಪ್ರವಾಸಿಗರನ್ನು ಮಾತನಾಡಿಸಿ ಉಚಿತ ಉಡುಗೊರೆ ಎಂದು ಕೂಪನ್ ನೀಡುತ್ತಿದ್ದಾರೆ. ಆದರೆ ಇದರ ನೆಪದಲ್ಲಿ ನಡೆಯುತ್ತಿದ್ದ ದೊಡ್ಡ ಜಾಲವನ್ನು ಗೋವಾದ ವ್ಯಕ್ತಿ ಕ್ಯಾಮರಾ ಮುಂದೆ ಬಯಲು ಮಾಡಿದ್ದಾರೆ. ಕ್ಯಾಮರಾದಲ್ಲಿ ಸೆರೆಯಾದ ಈ ದೃಶ್ಯ ಸಾರ್ವಜನಿಕ ಸ್ಥಳಗಳಲ್ಲಿ ವಂಚನೆಗಳು ಹೇಗೆ ನಡೆಯುತ್ತದೆ ಮತ್ತು ಅನೇಕರು ಈ ಬಗ್ಗೆ ಹೇಗೆ ಎಚ್ಚರವಾಗಿರಬೇಕೆಂದು ಸ್ಪಷ್ಟ ಪಡಿಸುತ್ತದೆ.
ಇಬ್ಬರು ವ್ಯಕ್ತಿಗಳು ದಂಪತಿಯನ್ನು ಮಾತನಾಡಿಸುತ್ತಿರುವುದನ್ನು ಕ್ಲಿಪ್ ತೋರಿಸುತ್ತದೆ. ಈ ವೇಳೆ ಅಲ್ಲಿಗೆ ಬಂದ ಸ್ಥಳೀಯ ವ್ಯಕ್ತಿ, ಆ ದಂಪತಿಯನ್ನು ಎಚ್ಚರಿಸಿ ವಂಚಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ಇದನ್ನು ನಾನು ನಿಮಗೆ ಎಷ್ಟು ಬಾರಿ ವಿವರಿಸಬೇಕು? ಇಲ್ಲಿಯೇ ನಿಲ್ಲಿಸಿ! ಇವರು ವಂಚಕರು. ಇವರು ಎಲ್ಲೆಡೆ ಸುತ್ತಾಡುತ್ತಾ ಗೋವಾದ ಖ್ಯಾತಿಯನ್ನು ಹಾಳು ಮಾಡುತ್ತಿದ್ದಾರೆʼʼ ಎಂದು ಎಚ್ಚರಿಸಿದ್ದಾರೆ.
ʼʼದಯವಿಟ್ಟು ಇಂತಹ ಕೃತ್ಯಕ್ಕೆ ಉತ್ತೇಜನ ನೀಡಬೇಡಿ. ಅವರು ಪ್ರವಾಸೋದ್ಯಮವನ್ನು ಸಂಪೂರ್ಣವಾಗಿ ನಾಶಪಡಿಸಬಹುದುʼʼ ಎಂದು ಕಿಡಿಕಾರಿದ್ದಾರೆ. ಆ ಬಳಿಕ ಇಬ್ಬರು ಪುರುಷರು ತಮ್ಮ ಬೈಕ್‌ನಲ್ಲಿ ಹೊರಡಲು ಪ್ರಯತ್ನಿಸಿದ್ದು ಅಲ್ಲಿಯೇ ನಿಲ್ಲಿಸಿ ಪೊಲೀಸರಿಗೆ ಕರೆ ಮಾಡುವುದಾಗಿ ಎಂದು ಆ ವ್ಯಕ್ತಿ ಹೇಳಿದ್ದಾರೆ. ಈ ಮಾತು ಕೇಳಿ ವಂಚಕರು ಸ್ಥಳದಿಂದ ಹೊರಟು ಹೋಗಿದ್ದಾರೆ.
ಶೇಕಡಾ 49 ಅಂಕ ಪಡೆದ SSLC ವಿದ್ಯಾರ್ಥಿಯ ಫೋಟೊ ಶೇರ್ ಮಾಡಿದ ವ್ಯಕ್ತಿಯ ವಿರುದ್ಧ ನೆಟ್ಟಿಗರ ಆಕ್ರೋಶ
ಅವರು ಹೋದ ನಂತರ, ಸ್ಥಳೀಯ ವ್ಯಕ್ತಿ, ʼʼವಂಚಕರು ಹೆಚ್ಚಾಗಿ ದಂಪತಿಯನ್ನು ಅಥವಾ ಶ್ರೀಮಂತವಾಗಿ ಕಾಣುವ ಪ್ರವಾಸಿಗರನ್ನು ಗುರಿಯಾಗಿಸಿ ಕೊಳ್ಳುತ್ತಾರೆ. ನಿಮಗೆ ಬಹುಮಾನ ಬಂದಿದೆ ಎಂದು ಹೇಳಿ ಒಂದು ರೆಸ್ಟೋರೆಂಟ್ ಗೆ ಕಳುಹಿಸಿ ಅಲ್ಲಿಗೆ ಹೋದ ನಂತರ, ಗಂಟೆಗಟ್ಟಲೆ ಮಾತನಾಡಿ ಇನ್ಯಾವುದೋ ಸ್ಕೀಮ್ ಹೆಸರಲ್ಲಿ ಸಾವಿರಾರು ರೂಪಾಯಿ ಹಣ ದೋಚುತ್ತಾರೆʼʼ ಎಂದು ಈ ಜಾಲದ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ನೆಟ್ಟಿಗರು ತಮ್ಮ ಅನುಭವವನ್ನು ಶೇರ್ ಮಾಡಿದ್ದಾರೆ. ಒಬ್ಬರು, ʼʼಕಷ್ಟಪಡದೆ ಸಿಗುವ ಯಾವುದೇ ಉಡುಗೊರೆಯ ಹಿಂದೆ ಮೋಸದ ಜಾಲ ಇರಬಹುದುʼʼ ಎಂದು ಬರೆದಿದ್ದಾರೆ.