ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

174 ಪ್ರಯಾಣಿಕರ ಜೀವ ಉಳಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗಾಗಿ ಹನುಮಾನ್ ಚಾಲೀಸಾ ಪಠಿಸಿದ ಇಸ್ರೇಲ್ ಗಾಯಕ: ಮೈ ನವಿರೇಳಿಸುವ ವಿಡಿಯೊ ವೈರಲ್‌

Viral Video: 174 ಪ್ರಯಾಣಿಕರ ಜೀವ ಉಳಿಸಿದ ಭಾರತದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ ಅವರಿಗೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರಾಣವನ್ನು ಲೆಕ್ಕಿಸದೆ ಪ್ರಯಾಣಿಕರಿಗಾಗಿ ಹೋರಾಟ ನಡೆಸಿದ ಅವರ ಧೈರ್ಯ ಮತ್ತು ಸಾಹಸವನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಇದೀಗ ಇಸ್ರೇಲ್ ಗಾಯಕರೊಬ್ಬರು ಹನುಮಾನ್ ಚಲೀಸಾ ಪಠಿಸಿದ್ದು, ವಿಡಿಯೊ ವೈರಲ್‌ ಆಗಿದೆ.

ಸ್ಮಿತ್ ಮಚ್ಚಾರ್‌ಗಾಗಿ ಹನುಮಾನ್ ಚಾಲೀಸಾ ಪಠಿಸಿದ ಇಸ್ರೇಲ್ ಗಾಯಕ

ಸ್ಮಿತ್ ಮಚ್ಚಾರ್‌ಗಾಗಿ ಹನುಮಾನ್ ಚಾಲೀಸಾ ಪಠಿಸಿದ ಇಸ್ರೇಲ್ ಗಾಯಕ -

Profile
Pushpa Kumari Oct 9, 2026 4:04 PM

ಜೆರುಸಲೇಂ, ಅ. 9: ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಫ್ಲೈದುಬೈ ವಿಮಾನ ಚಲಾಯಿಸುತ್ತಿದ್ದಾಗ ಸಹ-ಪೈಲಟ್‌ ನಡೆಸಿದ ಹಲ್ಲೆಯ ನಡುವೆಯೂ ಧೈರ್ಯದಿಂದ 174 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ (Smit Machchhar) ಅವರಿಗೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರಾಣವನ್ನು ಲೆಕ್ಕಿಸದೆ ಪ್ರಯಾಣಿಕರಿಗಾಗಿ ಹೊರಾಟ ನಡೆಸಿದ ಅವರ ಧೈರ್ಯ ಮತ್ತು ಸಾಹಸ ಎಲ್ಲರ ಗಮನ ಸೆಳೆದಿದೆ. ಇದೀಗ ಇಸ್ರೇಲ್ ಗಾಯಕರೊಬ್ಬರು ಹನುಮಾನ್ ಚಲೀಸಾ ಪಠಿಸಿ ಅವರಿಗೆ ಗೌರವ ಸಲ್ಲಿಸಿದ್ದಾರೆ. ಈ ವಿಡಿಯೊ ವೈರಲ್‌ ಆಗಿದೆ.

ಆಕಾಶದಲ್ಲಿ ಸಂಭವಿಸಿದ ಭಯಾನಕ ತುರ್ತು ಪರಿಸ್ಥಿತಿಯ ಸಮಯದಲ್ಲೂ ಧೃತಿಗೆಡದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ ಅವರಿಗೆ ಇಸ್ರೇಲಿಗರು ಧನ್ಯವಾದ ಅರ್ಪಿಸಿದ್ದಾರೆ. ವಿಮಾನದಲ್ಲಿ ಶೇಕಡಾ 90ರಷ್ಟು ಇಸ್ರೇಲುಗರೇ ಇದ್ದರು. ಇದೀಗ ಗಾಯಕರೊಬ್ಬರು ಹನುಮಾನ್ ಚಾಲೀಸಾ ಪಠಿಸಿ ಅವರಿಗೆ ಅರ್ಪಿಸಿದ್ದಾರೆ.

ವಿಡಿಯೊ ನೋಡಿ:

ಸ್ಮಿತ್ ಅವರಿಗೆ ಗೌರವ ಸಲ್ಲಿಸಲು ಇಸ್ರೇಲ್‌ನ ಪ್ರಸಿದ್ಧ ಗಾಯಕ ಬೆನ್ ರೈವಿಟ್ಜ್ ಹನುಮಾನ್ ಚಾಲೀಸಾ ಪಠಿಸಿ ವಿಡಿಯೊ ಹಂಚಿಕೊಂಡಿದ್ದಾರೆ. ʼʼಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ ಒಬ್ಬ ಭಾರತೀಯ ಹೀರೋ. ಅವರು ಅನೇಕ ಜೀವಗಳನ್ನು ಉಳಿಸಿದ್ದಾರೆ. ನಾನು ಅವರಿಗಾಗಿ ಇದನ್ನು  ಅರ್ಪಿಸಲು ಬಯಸುತ್ತೇನೆ. ಅವರು ಸಂಪೂರ್ಣವಾಗಿ ಹಾಗೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ" ಎಂದು ಗಾಯಕ ಬರೆದಿದ್ದಾರೆ.

ಇಂಗ್ಲೆಂಡ್‌ನ ದುಬಾರಿ ಶಸ್ತ್ರಚಿಕಿತ್ಸೆಯಿಂದ ಬೇಸತ್ತು ಭಾರತಕ್ಕೆ ಬಂದ ವ್ಯಕ್ತಿ

ʼʼವಿಮಾನದ ಕಾಕ್‌ಪಿಟ್‌ನಲ್ಲಿ ಜೀವಭಯ ಉಂಟಾದಾಗ ಹನುಮಾನ್ ಚಾಲೀಸಾ ಪಠಿಸಿದ್ದೆ. ಇದರಿಂದ ಸಾಕಷ್ಟು ಧೈರ್ಯ ಲಭಿಸಿತು. ಹನುಮಾನ್ ಚಾಲೀಸಾ ಪಠಣದಿಂದಲೇ ಧೈರ್ಯ ಮತ್ತು ಶಕ್ತಿ ಸಿಕ್ಕಿತು ಎಂದು ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಹಂಚಿಕೊಂಡಿದ್ದರು. ​ಈ ಘಟನೆ ನೆನಪಿಸಿಕೊಂಡ ಇಸ್ರೇಲ್ ಗಾಯಕ ಬೆನ್ ರೈವಿಟ್ಜ್, ಹನುಮಾನ್ ಚಾಲೀಸಾ ಪಠಿಸಿ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಹೃದಯಸ್ಪರ್ಶಿ ನಡೆಯು ಭಾರತ ಮತ್ತು ಇಸ್ರೇಲ್ ಬಳಕೆದಾರರ ಮನಗೆದ್ದಿದೆ. ಪೈಲಟ್‌ನನ್ನು  ಗೌರವಿಸಿದ್ದಕ್ಕಾಗಿ ಅನೇಕರು ಗಾಯಕರನ್ನು ಶ್ಲಾಘಿಸಿದ್ದಾರೆ. ವಿಡಿಯೊ ನೋಡಿದ ಭಾರತೀಯರು ಮೈ ರೋಮಾಂಚನಗೊಂಡಿದ್ದಾಗಿ ತಿಳಿಸಿದ್ದಾರೆ. ಒಬ್ಬರು, ʼʼನಿಮ್ಮ ಧ್ವನಿ ಎಷ್ಟು ಸುಂದರವಾಗಿದೆ. ದೇವರು ನಿಮ್ಮನ್ನು ಆಶೀರ್ವದಿಸಲಿʼʼ ಎಂದು ಬರೆದಿದ್ದಾರೆ.