ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನಲ್ಲಿ 2BHK ಫ್ಲ್ಯಾಟ್‌ಗೆ 70 ಸಾವಿರ ರೂ. ಬಾಡಿಗೆ! ಮಾಲೀಕನ ಷರತ್ತು ಕೇಳಿ ಐಟಿ ಉದ್ಯೋಗಿ ಶಾಕ್‌!

Viral News: ಉದ್ಯೋಗದ ನೆಪವಾಗಿ ಸಿಲಿಕಾನ್ ಸಿಟಿಯಲ್ಲಿ ಬದುಕು ಕಟ್ಟಿಕೊಂಡವರು ಅನೇಕರು ಇದ್ದಾರೆ. ಆದರೆ ಇಲ್ಲಿನ ಜೀವನ ಶೈಲಿ ದುಬಾರಿಯಾಗಿದ್ದು ಬಾಡಿಗೆ ದರದ ಬಗ್ಗೆ ಚರ್ಚೆಗಳು ಆಗುತ್ತಿರುತ್ತವೆ. ಬಾಡಿಗೆ ಮನೆಮಾಲೀಕರು ದುಪ್ಪಟ್ಟು ಹಣ ವಸೂಲಿ ಮಾಡುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈ ನಡುವೆ ಐಟಿ ಉದ್ಯೋಗಿಯೊಬ್ಬರು ದುಡಿದ ಹಣವನ್ನೂ ಪೂರ್ತಿ ಬಾಡಿಗೆ ಕಟ್ಟಲು ಉಪಯೋಗ ಮಾಡಬೇಕೆ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ದುಬಾರಿ ಬಾಡಿಗೆ ವಸೂಲಿ ಬಗ್ಗೆ ಐಟಿ ಉದ್ಯೋಗಿ ಕಿಡಿ!

ಇಂಟರ್ ನೆಟ್ ಚಿತ್ರ -

Profile
Pushpa Kumari Oct 2, 2026 4:15 PM

ಬೆಂಗಳೂರು,ಅ.2: ಉದ್ಯೋಗದ ನೆಪವಾಗಿ ಸಿಲಿಕಾನ್ ಸಿಟಿಯಲ್ಲಿ ಬದುಕು ಕಟ್ಟಿಕೊಂಡವರು ಅನೇಕರು ಇದ್ದಾರೆ. ಆದರೆ ಇಲ್ಲಿನ ಜೀವನ ಶೈಲಿ ದುಬಾರಿಯಾಗಿದ್ದು ಬಾಡಿಗೆ ದರದ ಬಗ್ಗೆ ಚರ್ಚೆಗಳು ಆಗುತ್ತಿರುತ್ತವೆ. ಬಾಡಿಗೆ ಮನೆಮಾಲೀಕರು ದುಪ್ಪಟ್ಟು ಹಣ ವಸೂಲಿ ಮಾಡುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈ ನಡುವೆ ಐಟಿ ಉದ್ಯೋಗಿಯೊಬ್ಬರು ದುಡಿದ ಹಣವನ್ನೂ ಪೂರ್ತಿ ಬಾಡಿಗೆ ಕಟ್ಟಲು ಉಪಯೋಗ ಮಾಡಬೇಕೆ? ಎಂದು ಪ್ರಶ್ನಿಸಿದ್ದಾರೆ. 2BHK ಫ್ಲ್ಯಾಟ್‌ಗೆ ಮಾಲೀಕರೊಬ್ಬರು ತಿಂಗಳಿಗೆ 70,000 ಬಾಡಿಗೆ ಹಾಗೂ 3 ರಿಂದ 4 ಲಕ್ಷ ಡೆಪಾಸಿಟ್ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಪೋಸ್ಟ್ ನಲ್ಲಿ (Viral News) ಬರೆದುಕೊಂಡಿದ್ದಾರೆ.

ದುಬಾರಿ ಹಣ ಪಾವತಿ ಮಾಡುವ ಜೊತೆಗೆ ಸೂಕ್ತವಾದ ಫ್ಲಾಟ್ ಅನ್ನು ಹುಡುಕು ವುದು ಕಷ್ಟಕರೆಂದು ಉದ್ಯೋಗಿ ರೆಡ್ಡಿಟ್‌ ನಲ್ಲಿ ಬರೆದುಕೊಂಡಿದ್ದಾರೆ. “ಬೆಂಗಳೂರಿನ ಬಾಡಿಗೆ ದರ ದಿನದಿಂದ ದಿನಕ್ಕೆ ಹಾಸ್ಯಾಸ್ಪದವಾಗುತ್ತಿದೆ” ಎಂಬ ಶೀರ್ಷಿಕೆಯ ಪೋಸ್ಟ್‌ ನಲ್ಲಿ, ಒಬ್ಬ ಮನೆ ಮಾಲೀಕನು ತಿಂಗಳ ಬಾಡಿಗೆಯಲ್ಲಿ ಸುಮಾರು 70,000 ರೂ. ಮತ್ತು 2 BHK ಅಪಾರ್ಟ್ಮೆಂಟ್‌ಗೆ 3-4 ಲಕ್ಷ ರೂ. ಠೇವಣಿ ಬೇಡಿಕೆ ಇಟ್ಟಿದ್ದನ್ನು ಹೇಳಿಕೊಂಡಿದ್ದಾರೆ.

Viral Video: ಮಧ್ಯ ರಸ್ತೆಯಲ್ಲೇ ಭರ್ಜರಿ ಭೋಜನ; ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲೇ ಪಾರ್ಟಿ ಮಾಡಿದ ಕುಟುಂಬ

ಈ ಮನೆಗೆ ಸಂಪೂರ್ಣ ಸುಸಜ್ಜಿತವಾಗಿದೆ ಎಂದು ಜಾಹೀರಾತು ಕೂಡ ನೀಡಿದ್ದಾರೆ. ವಾಷಿಂಗ್ ಮೆಷಿನ್, ಡೈನಿಂಗ್ ಟೇಬಲ್ ನಂತ ಯಾವುದೇ ಸೌಲಭ್ಯ ಇಲ್ಲ,ಎರಡನೇ ಕೋಣೆಯಲ್ಲಿ ಹಾಸಿಗೆಯೂ ಇರಲಿಲ್ಲ.​ ಬಾಡಿಗೆದಾರರು ಕೊನೆಗೆ ತಿಂಗಳಿಗೆ 65,000 ಹಾಗೂ 3 ತಿಂಗಳ ಡೆಪಾಸಿಟ್ ನೀಡುವುದಾಗಿ ಹೇಳಿದ್ದರೂ ಮಾಲೀಕ ಒಪ್ಪದಿದ್ದಾಗ, ಅವರು ಆ ಮನೆಯನ್ನು ಬೇಡವೆಂದು ತಿಳಿಸಿ ಹೊರ ನಡೆದಿದ್ದಾರೆ.

ಮಾಲೀಕರು ಕೇಳಿದಷ್ಟು ಹಣ ಪಾವತಿ ಮಾಡಬೇಡಿ. ಐಟಿ ಸಂಬಳವೇನೂ ಮುಗಿಯದ ಸಂಪತ್ತು ಅಲ್ಲ. ನಮಗೆ ತಕ್ಕ ಮೌಲ್ಯಕ್ಕೆ ಸಿಗದೇ ಇದ್ದಾಗ ಬಿಟ್ಟು ಬಿಡಿ. ಎಂದು ಅವರು ಇತರರಿಗೆ ಕಿವಿಮಾತು ಹೇಳಿದ್ದಾರೆ. ಈ ಪೋಸ್ಟ್ ಬೆಂಗಳೂರಿನ ಬಾಡಿಗೆ ಬೆಲೆಗಳ ಬಗ್ಗೆ ಇತರ ಬಳಕೆದಾರರಲ್ಲಿ ಚರ್ಚೆಯನ್ನು ಹುಟ್ಟುಹಾಕಿತು.ಕೆಲವರು ಫ್ರಾನ್ಸ್‌ನಂತಹ ವಿದೇಶದ ನಗರಗಳಿಗಿಂತಲೂ ಬೆಂಗಳೂರಿನ ಬಾಡಿಗೆ ದುಪ್ಪಟ್ಟು ಆಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.