ಮಧ್ಯ ಪ್ರದೇಶದ ಶಿಕ್ಷಣ ಸಂಸ್ಥೆಗಳ ದುಸ್ಥಿತಿ ನೋಡಿ: ಮಗುವಿನಿಂದ ಕಾಲು ಮಸಾಜ್! ಅಪ್ರಾಪ್ತ ವಿದ್ಯಾರ್ಥಿಯಿಂದ ಮದ್ಯ ತರಿಸಿಕೊಂಡ ಶಿಕ್ಷಕ
Viral Video: ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡದೆ ಕಾಲಹರಣ ಮಾಡುತ್ತಿರುವ ಅನೇಕ ಘಟನೆಗಳು ವರದಿಯಾಗುತ್ತಿವೆ. ಶಾಲಾ ಅವಧಿಯಲ್ಲಿ ಮೊಬೈಲ್ ವೀಕ್ಷಿಸುವುದು, ಕ್ಲಾಸ್ ರೂಮ್‌ನಲ್ಲೇ ನಿದ್ದೆ ಮಾಡುವುದು ಹೀಗೆ ಬೇಜವಾಬ್ದಾರಿಯ ನಡವಳಿಕೆ ಪ್ರದರ್ಶಿಸುತ್ತಿದ್ದಾರೆ. ಇದೀಗ ಮಧ್ಯ ಪ್ರದೇಶದ ಶಿಕ್ಷಣ ಸಂಸ್ಥೆಗಳಲ್ಲಿನ ಶಿಕ್ಷಕರ ನಡವಳಿಕೆಯ ಬಗ್ಗೆ ಪೋಷಕರು ಕಳವಳ ವ್ಯಕ್ತಪಡಿಸುವಂತಹ ವಿಡಿಯೊ ವೈರಲ್ ಆಗಿದೆ.
ಪಾಠದ ಬದಲು ಮಕ್ಕಳಿಂದಲೇ ವೈಯಕ್ತಿಕ ಕೆಲಸ ಮಾಡಿಸಿದ ಮಧ್ಯ ಪ್ರದೇಶದ ಶಿಕ್ಷಕರು -
ಭೋಪಾಲ್, ಅ. 2: ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಸಮರ್ಪಕ ಶಿಕ್ಷಣ ನೀಡದೆ ಕಾಲ ಹರಣ ಮಾಡುತ್ತಿರುವ ಅನೇಕ ಘಟನೆಗಳು ವರದಿಯಾಗುತ್ತಿವೆ. ಶಾಲಾ ಅವಧಿಯಲ್ಲಿ ಮೊಬೈಲ್ ವೀಕ್ಷಿಸುವುದು, ಕ್ಲಾಸ್ ರೂಮ್‌ನಲ್ಲೇ ನಿದ್ದೆ ಮಾಡುವುದು ಹೀಗೆ ಜವಾಬ್ದಾರಿ ಇಲ್ಲದ ನಡವಳಿಕೆ ತೋರಿಸುತ್ತಿದ್ದಾರೆ. ಇದೀಗ ಮಧ್ಯ ಪ್ರದೇಶದ ಶಿಕ್ಷಣ ಸಂಸ್ಥೆಗಳಲ್ಲಿನ ಶಿಕ್ಷಕರ ನಡವಳಿಕೆಯ ಬಗ್ಗೆ ಪೋಷಕರು ಕಳವಳ ವ್ಯಕ್ತ ಪಡಿಸುವಂತಹ ವಿಡಿಯೊ ವೈರಲ್ (Viral News) ಆಗಿದೆ. ಛಿಂದ್ವಾರಾ, ಭೋಪಾಲ್ ಮತ್ತು ಛತ್ತರ್‌ಪುರದ ಶಾಲೆಗಳಲ್ಲಿ ಶಿಕ್ಷಕರು ಪಾಠದ ಬದಲು ತಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಿಸಿಕೊಂಡಿದ್ದಾರೆ.
ಮಧ್ಯ ಪ್ರದೇಶದ ಛಿಂದ್ವಾರಾ ಜಿಲ್ಲೆಯ ಪಾರಾಸಿಯಾ ವ್ಯಾಪ್ತಿಯ ಚಾಚಾ ಮೊಹಲ್ಲಾದ ಅಂಗನವಾಡಿ ಕೇಂದ್ರದಲ್ಲಿ ಸಿಬ್ಬಂದಿಯ ನಡವಳಿಕೆಯ ಬಗ್ಗೆ ಕಳವಳ ಮೂಡಿಸುವ ವಿಡಿಯೊವೊಂದು ಹೊರ ಬಿದ್ದಿದೆ. ಅಂಗನವಾಡಿ ಸಹಾಯಕಿ ನೆಲದ ಮೇಲೆ ಮಲಗಿದ್ದು, ಚಿಕ್ಕ ಬಾಲಕಿಯೊಬ್ಬಳು ಕಾಲುಗಳ ಮೇಲೆ ನಿಂತು ತನ್ನ ಪಾದಗಳಿಂದ ಮಸಾಜ್ ಮಾಡುತ್ತಿದ್ದಾಳೆ. ಶಿಕ್ಷಕಿ ಎಲ್ಲಿ ಹೆಚ್ಚು ಒತ್ತಡ ಹಾಕಬೇಕು ಎಂದು ಮಗುವಿಗೆ ಹೇಳುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ವಿಡಿಯೊ ನೋಡಿ:
छिंदवाड़ा जिले के परासिया चांदामेटा के वार्ड क्रमांक 12 (चाचा मोहल्ला) स्थित आंगनबाड़ी केंद्र से एक चिंताजनक और शर्मनाक मामला सामने आया है। आंगनबाड़ी की सहायिका द्वारा एक नन्हीं बालिका से अपने पैर दबवाने का वीडियो सोशल मीडिया पर तेजी से वायरल हो रहा है।#chhindwara #parasia… pic.twitter.com/o80Q2BGdc3
— Lallu Ram (@lalluram_news) October 2, 2026
ಇನ್ನು ಭೋಪಾಲ್‌ನ ಗಾಂಧಿ ನಗರದಲ್ಲಿರುವ ಸರ್ಕಾರಿ ಮಹಾತ್ಮ ಗಾಂಧಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಮಕ್ಕಳನ್ನು ಬಳಸಿಕೊಂಡಿರುವ ಇನ್ನೊಂದು ಘಟನೆ ವರದಿಯಾಗಿದೆ. ಶಾಲಾ ಅವಧಿಯಲ್ಲಿ ಶಿಕ್ಷಕಿಯೊಬ್ಬರು ಕುರ್ಚಿಯ ಮೇಲೆ ಕುಳಿತು ಒಂದು ಕಾಲನ್ನು ಇನ್ನೊಂದು ಕುರ್ಚಿಯ ಮೇಲೆ ಇರಿಸಿಕೊಂಡಿದ್ದು ವಿದ್ಯಾರ್ಥಿಯೊಬ್ಬರು ಅವರ ಪಾದವನ್ನು ಮಸಾಜ್ ಮಾಡುತ್ತಿದ್ದಾಳೆ. ಶಾಲೆಯ ಗೇಟ್ ಬಳಿ ಬಿದ್ದಿದ್ದರಿಂದ ಕಾಲು ಉಳುಕಿತ್ತು, ಹೀಗಾಗಿ ಮಗು ಸಹಾಯ ಮಾಡುತ್ತಿತ್ತು ಎಂದು ಶಿಕ್ಷಕಿ ಹೇಳಿಕೆ ನೀಡಿದ್ದಾಳೆ.
#WATCH | #Bhopal: Govt School Teacher Gets Foot Massage From Student; Video Goes Viral#MPNews #MadhyaPradesh pic.twitter.com/LJ4JaddI4P
— Free Press Madhya Pradesh (@FreePressMP) August 10, 2025
ಮತ್ತೊಂದು ಪ್ರಕರಣದಲ್ಲಿ, ಛತ್ತರ್‌ಪುರದ ಸರ್ಕಾರಿ ಶಾಲಾ ಶಿಕ್ಷಕನೊಬ್ಬ ಶಾಲಾ ಆವರಣದಲ್ಲಿ ಮದ್ಯಪಾನ ಮಾಡಿದ್ದಾನೆ. ಅಷ್ಟೇ ಅಲ್ಲದೆ ಅಪ್ರಾಪ್ತ ವಿದ್ಯಾರ್ಥಿಗಳ ಕೈಯಲ್ಲಿ ಮದ್ಯ ತರಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
#WATCH | 'Bhagwan Das Ne Mangwayi...': Govt School Student Exposes Teacher Sent Him To Buy Liquor In Chhatarpur #MPnews #MadhyaPradesh #MPschool pic.twitter.com/3mjWt6EgQ2
— Free Press Madhya Pradesh (@FreePressMP) August 17, 2026
ಈ ಬಗ್ಗೆ ದೂರು ಸ್ವೀಕರಿಸಿದರೆ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಆರೋಪಗಳು ನಿಜವೆಂದು ಕಂಡುಬಂದರೆ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳ ಲಾಗುವುದು ಎಂದೂ ಅವರು ಹೇಳಿದ್ದಾರೆ. ಸದ್ಯ ಈ ಎಲ್ಲ ಘಟನೆಗಳು ಮಕ್ಕಳ ಭವಿಷ್ಯದ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಪೋಷಕರು ಸರ್ಕಾರಿ ಶಾಲೆ ಬಿಟ್ಟು ಖಾಸಗಿ ಶಾಲೆಯತ್ತ ಗಮನ ಹರಿಸಲು ಇಂತಹ ಘಟನೆಗಳೇ ಕಾರಣವಾಗುತ್ತಿದೆ ಎಂದು ನೆಟ್ಟಿರು ಪ್ರತಿಕ್ರಿಯಿಸಿದ್ದಾರೆ.