ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಶಾಲು ಮಾರಾಟ ಮಾಡುತ್ತಿದ್ದ ಕಾಶ್ಮೀರಿ ವ್ಯಕ್ತಿಗಳ ಮೇಲೆ ಹಲ್ಲೆ ; ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌

ಮಸ್ಸೂರಿಯಲ್ಲಿ ಇಬ್ಬರು ಕಾಶ್ಮೀರಿ ಶಾಲು ಮಾರಾಟಗಾರರಿಗೆ ಮೂವರು ಸ್ಥಳೀಯ ಪುರುಷರು ಕಿರುಕುಳ ನೀಡಿದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಕಾಶ್ಮೀರಿ ಶಾಲು ಮಾರಾಟಗಾರರಿಗೆ ಥಳಿಸಿದ ಮೂವರ ಬಂಧನ!

Profile pavithra Apr 30, 2025 4:14 PM

ಡೆಹ್ರಡೂನ್: ಉತ್ತರಾಖಂಡದ ಮಸ್ಸೂರಿಯಲ್ಲಿ ಇಬ್ಬರು ಕಾಶ್ಮೀರಿ ಶಾಲು ಮಾರಾಟಗಾರರಿಗೆ ಮೂವರು ಸ್ಥಳೀಯ ಪುರುಷರು ಕಿರುಕುಳ ನೀಡಿದ್ದು, ಅಂಗಡಿಯನ್ನು ಮುಚ್ಚುವಂತೆ ಒತ್ತಾಯಿಸಿದ್ದಾರೆ. ಈ ವಿಡಿಯೊ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ವೈರಲ್(Viral Video) ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪುರುಷರು ಮಾರಾಟಗಾರರಿಗೆ ಪದೇ ಪದೇ ಕಪಾಳಮೋಕ್ಷ ಮಾಡುವುದು, ನಿಂದಿಸುವುದು ಮತ್ತು ರಸ್ತೆ ಬದಿಯ ಅಂಗಡಿಯನ್ನು ಮುಚ್ಚುವಂತೆ ಒತ್ತಾಯಿಸುವುದು ವಿಡಿಯೊದಲ್ಲಿ ಸೆರೆಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆ ಮೂವರನ್ನು ಅರೆಸ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ.

ವೈರಲ್ ವಿಡಿಯೊದಲ್ಲಿ ಮೂವರು ವ್ಯಕ್ತಿಗಳು ಮಾರಾಟಗಾರರ ಮೇಲೆ ಪದೇ ಪದೇ ಹೊಡೆಯುವುದು, ಕಪಾಳಮೋಕ್ಷ ಮಾಡುವುದು ಮತ್ತು ಕೂಗಾಡುವುದು ಸೆರೆಯಾಗಿದೆ. ಮಾರಾಟಗಾರರಲ್ಲಿ ಒಬ್ಬ ತಾನು ಜಮ್ಮು ಮತ್ತು ಕಾಶ್ಮೀರದ ನಿವಾಸಿ ಎಂದು ಸಾಬೀತುಪಡಿಸಲು ಆಧಾರ್ ಕಾರ್ಡ್ ತೋರಿಸಿದ್ದಾನೆ. ಪುರುಷರು ಮಾರಾಟಗಾರರಿಗೆ ತಮ್ಮ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ಹೋಗುವಂತೆ ಹೇಳಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...



ಈ ವಿಡಿಯೊ ವೈರಲ್ ಆದ ನಂತರ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಹಾಗಾಗಿ ಉತ್ತರಾಖಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ತೆಹ್ರಿ ಗರ್ವಾಲ್‍ನ ಸೂರಜ್ ಸಿಂಗ್, ಹಥಿಪೋನ್‍ನ ಪ್ರದೀಪ್ ಸಿಂಗ್ ಮತ್ತು ಮಸ್ಸೂರಿಯ ಕಂಪನಿ ಗಾರ್ಡನ್ ಪ್ರದೇಶದ ಅಭಿಷೇಕ್ ಉನಿಯಾಲ್ ಎಂದು ಗುರುತಿಸಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ಘಟನೆಯನ್ನು ಖಂಡಿಸಿರುವ ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘ (ಜೆಕೆಎಸ್ಎ) ರಾಷ್ಟ್ರೀಯ ಸಂಚಾಲಕ ನಾಸಿರ್ ಖುಹಾಮಿ, ದಾಳಿಕೋರರು "ಬಜರಂಗದಳದ ಸದಸ್ಯರು" ಎಂದು ಆರೋಪಿಸಿದ್ದಾರೆ. ಇದಲ್ಲದೆ, ಸುಮಾರು 16 ಇತರ ಕಾಶ್ಮೀರಿ ವ್ಯಾಪಾರಿಗಳನ್ನು, ಹೆಚ್ಚಾಗಿ ಕುಪ್ವಾರಾ ಜಿಲ್ಲೆಯವರಾಗಿದ್ದು, ಮಸ್ಸೂರಿಯಲ್ಲಿ ಬೆದರಿಕೆ, ಕಿರುಕುಳ ಮತ್ತು ತಮ್ಮ ಬಾಡಿಗೆ ಮನೆಗಳನ್ನು ಖಾಲಿ ಮಾಡುವಂತೆ ಒತ್ತಾಯಿಸಲಾಗಿದೆ ಎಂದು ಜೆಕೆಎಸ್ಎ ರಾಷ್ಟ್ರೀಯ ಸಂಚಾಲಕರು ಹೇಳಿದ್ದಾರೆ.
ಈ ನಡುವೆ ಅರೆಸ್ಟ್ ಆದ ಅಪರಾಧಿಗಳು ತಮ್ಮ ಕೃತ್ಯಗಳನ್ನು ಒಪ್ಪಿಕೊಂಡು ಆ ಬಗ್ಗೆ ಕ್ಷಮೆಯಾಚಿಸಿದ್ದಾರೆ ಮತ್ತು ಭವಿಷ್ಯದಲ್ಲಿ ಅಂತಹ ನಡವಳಿಕೆಯನ್ನು ಪುನರಾವರ್ತಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಪೊಲೀಸ್ ಕಾಯ್ದೆಯಡಿ ಅವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಆಂಟಿಲಿಯಾ ಮುಂದೆ ಆಟೋ ಡ್ರೈವರ್‌ನಂತೆ ನಿಂತ ಮುಖೇಶ್ ಅಂಬಾನಿ; ಏನಿದು ವೈರಲ್‌ ವಿಡಿಯೊ

ಕಾಶ್ಮೀರಿ ಮಾರಾಟಗಾರರನ್ನು ಥಳಿಸಿದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಪುರುಷರ ಗುಂಪೊಂದು ಇಬ್ಬರು ಕಾಶ್ಮೀರಿಗಳನ್ನು ನಿಂದಿಸುವ, ಕಪಾಳಮೋಕ್ಷ ಮಾಡುವ ಮತ್ತು ಥಳಿಸುವ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕಾಶ್ಮೀರಿ ಬೀದಿ ಬದಿ ವ್ಯಾಪಾರಿಗಳನ್ನು ಥಳಿಸಿದ ಆರೋಪದ ಮೇಲೆ ಸ್ಥಳೀಯ ನಿವಾಸಿ ಬಜರಂಗ್ ಸೋಂಕರ್ ಎಂಬಾತನನ್ನು ಲಖನೌ ಪೊಲೀಸರು ಬಂಧಿಸಿದ್ದರು.