ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇದು ಮರಿ ಸಿಂಹವಲ್ಲ, ಬೆಕ್ಕು ಮರಾಯ್ರೆ: ಮಾರ್ಜಾಲದ ಮೇಕಪ್‌ ಕಂಡು ಬೆರಗಾದ ನೆಟ್ಟಿಗರು

Viral News: ಇಲ್ಲೊಂದು ಬೆಕ್ಕು ನೋಡಲು ಪುಟ್ಟ ಸಿಂಹದ ಮರಿಯಂತೆ ಕಾಣಿಸಿಕೊಂಡಿದೆ. ಇದರ ಕೂದಲನ್ನು ವಿಶೇಷವಾಗಿ ಕತ್ತರಿಸಿ ಈ ರೀತಿಯ ಬದಲಾವಣೆ ತರಲಾಗಿದೆ. ನೆಟ್ಟಿಗರು ಈ ಬೆಕ್ಕನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅನೇಕರು ಇದನ್ನು ಕ್ಯೂಟ್ ಎಂದು ಕರೆದರೆ, ಇನ್ನು ಕೆಲವರು ಅದರ ಸ್ಟೈಲಿಶ್ ಲುಕ್‌ಗೆ ಫಿದಾ ಆಗಿದ್ದಾರೆ.

ಸಿಂಹದ ಮರಿಯೋ ಬೆಕ್ಕೋ: ನೋಡುಗರಿಗೆ ಗೊಂದಲ ಮೂಡಿಸಿದ ನೋಟ

ಸಿಂಹದ ಮರಿಯಂತೆ ಕಂಡು ಬಂದ ಬೆಕ್ಕು -

Profile
Pushpa Kumari Apr 13, 2026 7:07 PM

ನವದೆಹಲಿ, ಏ. 13: ಸಾಮಾನ್ಯವಾಗಿ ಬೆಕ್ಕೆಂದರೆ ಬಗುತೇಕರಿಗೆ ಅಚ್ಚುಮೆಚ್ಚು. ಇದರ ಮುದ್ದಾಟದ ದೃಶ್ಯಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿರುತ್ತವೆ. ಇಲ್ಲೊಂದು ಬೆಕ್ಕು ತನ್ನ ವಿಶಿಷ್ಟ ಲುಕ್‌ನಿಂದಲೇ ಗಮನ ಸೆಳೆಯುತ್ತಿದೆ. ಈ ಬೆಕ್ಕು ನೋಡಲು ಪುಟ್ಟ ಸಿಂಹದ ಮರಿಯಂತೆ ಕಾಣಿಸುತ್ತಿದೆ. ಇದರ ಕೂದಲನ್ನು ವಿಶೇಷವಾಗಿ ಕತ್ತರಿಸಿ, ಸಿಂಹದ ಮರಿಯ ಆಕಾರ ನೀಡಲಾಗಿದೆ. ಬಹುತೇಕರು ಈ ಬೆಕ್ಕನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮರಿಯೋ ಎಂಬ ಕಿತ್ತಳೆ ಬಣ್ಣದ ಬೆಕ್ಕು ಗಮನ ಸೆಳೆದಿದ್ದು ಇದರ ಆಕಾರ ವಿಭಿನ್ನವಾಗಿದೆ. ಇದು ಸಾಕುವ ಮನೆ ಬೆಕ್ಕಿನಂತೆ ಕಾಣದೆ ಸಿಂಹ ಮರಿಯಂತೆ ಕಂಡು ಬಂದಿದೆ. ಮರಿಯೋವನ್ನು ಹೊಸ ರೀತಿಯಲ್ಲಿ ಕ್ಷೌರ ಮಾಡಲಾಗಿದೆ.

ಬೆಕ್ಕಿನ ಮರಿಯ ಮುಖದ ಸುತ್ತಲೂ ಹಾಗೂ ಬಾಲ ಹಾಗೂ ಕಾಲು ಭಾಗದಲ್ಲಿ ಕೂದಲನ್ನು ಇಟ್ಟು ಉಳಿದ ಭಾಗವನ್ನು ಫುಲ್ ಶೇವಿಂಗ್ ಮಾಡಲಾಗಿದೆ. ಬೆಕ್ಕು ಕಾಡಿನ ರಾಜನಂತೆ ಮನೆಯ ಹೊರಗೆ- ಒಳಗೆ ಗಾಂಭೀರ್ಯದಿಂದ ನಡೆಯುತ್ತಿದೆ. ಹಲವು ಬಳಕೆದಾರರು ಬೆಕ್ಕಿನ ರೂಪ ಕಂಡು ಅಚ್ಚರಿ ವ್ಯಕ್ತಪಡಿಸುತ್ತಾರೆ.

ರೀಲ್ಸ್‌ಗಾಗಿ ಇದೆಂಥ ಹುಚ್ಚಾಟ? ಚಲಿಸುವ ಟ್ರಕ್‌ ಕೆಳಗೆ ಬೈಕ್‌ ಓಡಿಸಿದ ಯುವಕ

ಅನೇಕರು ಇದಕ್ಕೆ ಕ್ಯೂಟ್ ಎಂದು ಕರೆದರೆ ಇನ್ನು ಕೆಲವರು ಅದರ ಸ್ಟೈಲಿಶ್ ಲುಕ್‌ಗೆ ಫಿದಾ ಆಗಿದ್ದಾರೆ. ಸಾಮಾನ್ಯವಾಗಿ ಬೆಕ್ಕಿನ ಕೂದಲು ತೆಗೆಯಬಾರದು ಎಂದು ಸಲಹೆ ನೀಡುತ್ತಾರೆ. ಇದು ದೇಹದ ಉಷ್ಣತೆಯನ್ನು ನಿರ್ವಹಿಸಲು ಸಹಾಯ ಮಾಡುವುದಲ್ಲದೆ ಅವುಗಳ ಚರ್ಮವನ್ನು ರಕ್ಷಿಸುತ್ತದೆ. ಆದರೆ ಮರಿಯೋಗೆ ಆರೋಗ್ಯ ಸಮಸ್ಯೆ ಇರುವುದರಿಂದಈ ಕಾರಣಕ್ಕಾಗಿ ವೈದ್ಯಕೀಯ ಸಲಹೆಯ ಮೇರೆಗೆ ಈ ರೀತಿ ಕಟಿಂಗ್ ಮಾಡಲಾಗಿದೆ. ಬೆಕ್ಕು ಹೇಗೆ ಕಾಣುತ್ತಿದೆ ಎಂಬ ಕಾರಣ ದಿಂದಾಗಿ ಮಾತ್ರವಲ್ಲ, ನಾವು ನಮ್ಮ ಸಾಕುಪ್ರಾಣಿಗಳನ್ನು ಹೇಗೆ ನೋಡಿಕೊಳ್ಳುತ್ತೇವೆ ಎಂಬುದರ ಕುರಿತು ಈ ವಿಡಿಯೊ ಅನೇಕರಿಗೆ ಹತ್ತಿರವಾಗಿದೆ.