ಕ್ಲಿನಿಕ್‌ಗೆ ನುಗ್ಗಲು ಹೋಗಿ ಶಟರ್ ಮಧ್ಯೆಯೇ ಸಿಲುಕಿದ ಕಳ್ಳ: ವಿಡಿಯೊ ನೋಡಿ
Viral Video: ಕ್ಲಿನಿಕ್ ಒಳಗೆ ನುಗ್ಗಲು ಹೋದ ಯುವಕ ಶಟರ್ ನಡುವೆಯೇ ಸಿಲುಕಿಕೊಂಡಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಕ್ಲಿನಿಕ್ ಸಿಬ್ಬಂದಿ ಬಂದು ಶಟರ್ ತೆರೆಯಲು ಪ್ರಯತ್ನಿಸಿದಾಗ, ಅದು ಚಲಿಸದಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ.
ಕ್ಲಿನಿಕ್‌ಗೆ ಕಳ್ಳತನಕ್ಕೆ ಹೋಗಿ ಶಟರ್ ಮಧ್ಯೆಯೇ ಸಿಲುಕಿದ ಕಳ್ಳ -
ಲಖನೌ, ಏ. 13: ಇಲ್ಲೊಬ್ಬ ಕಳ್ಳತನ ಮಾಡಲು ಹೋಗಿ ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ. ಕಳ್ಳತನ ಮಾಡುವ ಉದ್ದೇಶದಿಂದ ಕ್ಲಿನಿಕ್ ಒಳಗೆ ನುಗ್ಗಲು ಹೋದ ಯುವಕ ಶಟರ್ ನಡುವೆಯೇ ಸಿಲುಕಿಕೊಂಡಿದ್ದಾನೆ. ಈ ಘಟನೆಯೂ (Viral News) ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಕ್ಲಿನಿಕ್ ಸಿಬ್ಬಂದಿ ಬಂದು ಶಟರ್ ತೆರೆಯಲು ಪ್ರಯತ್ನಿಸಿದಾಗ ಅದು ಚಲಿಸದಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ.
ಗಾಜಿಯಾಬಾದ್ ಕ್ಲಿನಿಕ್ ದರೋಡೆ ಮಾಡಲು ಪ್ರಯತ್ನಿಸುತ್ತಿರುವ ಕಳ್ಳ ಶಟರ್ ಮತ್ತು ಗೋಡೆಯ ನಡುವೆ ಸಿಲುಕಿಕೊಂಡಿದ್ದಾನೆ. ಸಿಬ್ಬಂದಿ ಸಾಮಾನ್ಯ ದಿನದಂತೆ ಅಂದೂ ಬೆಳಗ್ಗೆ ಕ್ಲಿನಿಕ್‌ಗೆ ಆಗಮನಿಸಿದ್ದಾನೆ. ಏನೋ ಸರಿಯಿಲ್ಲ ಎಂದು ಅರಿತುಕೊಂಡ ತಕ್ಷಣ ಕಾರ್ಯಪ್ರವೃತ್ತನಾಗಿದ್ದಾನೆ. ರಾತ್ರಿ ಯಾರೂ ಇಲ್ಲದ ಸಂದರ್ಭದಲ್ಲಿ ಯುವಕ ಶಟರ್ ಬಗ್ಗಿಸಿ ಒಳಗೆ ನುಗ್ಗಲು ಯತ್ನಿಸಿದ್ದಾನೆ. ಆದರೆ ದುರದೃಷ್ಟವಶಾತ್ ಆತನ ತಲೆ ಮತ್ತು ಕುತ್ತಿಗೆ ಶಟರ್ ಮತ್ತು ಗೋಡೆಯ ನಡುವೆ ಸಿಲುಕಿಕೊಂಡಿದೆ.
ವಿಡಿಯೊ ನೋಡಿ:
In Ghaziabad, Uttar Pradesh, a thief got his neck stuck in a clinic's metal rolling shutter while breaking in last night. He hung there until afternoon, when firefighters rescued him using a ladder. pic.twitter.com/YnmrZT4IrO
— Ghar Ke Kalesh (@gharkekalesh) April 11, 2026
ಕ್ಲಿನಿಕ್ ಸಿಬ್ಬಂದಿ ಪರಿಶೀಲಿಸಿದಾಗ ಸ್ವಲ್ಪ ಸಮಯದ ನಂತರ, ಒಳಗಿನಿಂದ ಶಬ್ದ ಕೇಳಿ ಬಂದವು. ಸಿಬ್ಬಂದಿ ಶಟರ್ ಎತ್ತಲು ಪ್ರಯತ್ನಿಸಿದರು. ಆದರೆ ಅದು ಜ್ಯಾಮ್ ಆಗಿದ್ದಂತೆ ತೋರುತ್ತಿತ್ತು. ಹಿಂಭಾಗದಿಂದ ಕ್ಲಿನಿಕ್ ಪ್ರವೇಶಿಸಿದಾಗ, ಕಿರಿದಾದ ಅಂತರದಲ್ಲಿ ಸಿಲುಕಿಕೊಂಡಿದ್ದ ಯುವಕನನ್ನು ಕಂಡು ಅವರು ಆಶ್ಚರ್ಯಗೊಂಡಿದ್ದಾರೆ.
ಶಾಲಾ ಬಸ್ಸಿನಲ್ಲಿ ನೇತಾಡುತ್ತಾ ಹೋಗುತ್ತಿರುವ ವಿದ್ಯಾರ್ಥಿಗಳು; ವಿಡಿಯೋ ವೈರಲ್
ಅವನ ದೇಹವು ಒಳಗೆ ಸಿಲುಕಿದೆ. ಆದರೆ ಅವನ ತಲೆ ಶಟರ್ ಮತ್ತು ಗೋಡೆಯ ನಡುವೆ ಇತ್ತು. ಕೂಡಲೇ ಅಗ್ನಿಶಾಮಕ ದಳದವರು ಶೀಘ್ರದಲ್ಲೇ ಸ್ಥಳಕ್ಕೆ ತಲುಪಿ ಎಚ್ಚರಿಕೆಯಿಂದ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಅಗ್ನಿಶಾಮಕ ದಳದವರು ಏಣಿ ಮತ್ತು ಕಬ್ಬಿಣದ ಉಪಕರಣಗಳನ್ನು ಬಳಸಿ ಸುಮಾರು ಸಮಯದ ಕಾರ್ಯಾಚರಣೆ ನಡೆಸಿ ಯುವಕನನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.