ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೆಕ್ಯುರಿಟಿ ಗಾರ್ಡ್ ಜತೆ ರಕ್ಷಾ ಬಂಧನ ಹಬ್ಬ ಆಚರಿಸಿದ ಪುಟ್ಟ ಬಾಲಕಿ: ಮುದ್ದಾದ ವಿಡಿಯೊ ವೈರಲ್

Raksha Bandhan: ಎಲ್ಲೆಡೆ ರಾಖಿ ಹಬ್ಬದ ಸಂಭ್ರಮ ಜೋರಾಗಿದೆ. ತನ್ನ ಅಣ್ಣ,ತಮ್ಮಂದಿರಿಗೆ ರಾಖಿ ಕಟ್ಟಲು ಸಹೋದರಿಯರು ಕಾತುರರಾಗಿದ್ದಾರೆ. ಈ ನಡುವೆ ನವ ದೆಹಲಿಯ ವಸತಿ ಸಮುಚ್ಚಯವೊಂದರಲ್ಲಿ ವಾಸಿಸುವ ಬಾಲಕಿ ಭದ್ರತಾ ಸಿಬ್ಬಂದಿ ಜೊತೆ ರಾಖಿ ಹಬ್ಬವನ್ನು ಸಂಭ್ರಮಿಸಿದ್ದಾಳೆ. ತನ್ನ ಕುಟುಂಬ ವನ್ನು ದಿನವಿಡೀ ರಕ್ಷಣೆ ಮಾಡುವ ಭದ್ರತಾ ಸಿಬ್ಬಂದಿಯೊಂದಿಗೆ ಈ ದಿನವನ್ನು ಕಳೆದಿದ್ದಾಳೆ.

ಸೆಕ್ಯುರಿಟಿ ಗಾಎಡ್‌ಗೆ ರಾಖಿ ಕಟ್ಟಿದ ಪುಟ್ಟ ಕಂದಮ್ಮ: ಕ್ಯೂಟ್ ವಿಡಿಯೊ ನೋಡಿ

ದೆಹಲಿಯ ವಸತಿ ಸಮುಚ್ಚಯದಲ್ಲಿ ಸೆಕ್ಯುರಿಟಿ ಗಾರ್ಡ್‌ಗೆ ರಾಖಿ ಕಟ್ಟಿದ ಪುಟ್ಟ ಕಂದಮ್ಮ -

Profile
Pushpa Kumari Aug 27, 2026 9:49 PM

ನವದೆಹಲಿ, ಆ. 27: ರಕ್ಷಾಬಂಧನದ ಹಬ್ಬದ ಸಂದರ್ಭದಲ್ಲಿ (Raksha Bandhan) ಬಾಲಕಿಯೊಬ್ಬಳ ಮುದ್ದಾದ ವಿಡಿಯೊ ಭಾರಿ ವೈರಲ್ (Viral News) ಆಗಿದೆ. ಆಕೆ ಕೇವಲ ತನ್ನ ಸಹೋದರನ್ನು ಮಾತ್ರ ಅಣ್ಣನ ಸ್ಥಾನದಲ್ಲಿ ನೋಡಿಲ್ಲ, ಬದಲಾಗಿ ತನ್ನ ಕುಟುಂಬವನ್ನು ದಿನವಿಡೀ ರಕ್ಷಣೆ ಮಾಡುವ ಭದ್ರತಾ ಸಿಬ್ಬಂದಿಯನ್ನು ಅಣ್ಣಂದಿರು ಎಂದು ಕರೆದು ರಾಖಿ ಕಟ್ಟಿ ಸಂಭ್ರಮಿಸಿದ್ದಾಳೆ. ಈ ಕ್ಯೂಟ್ ವಿಡಿಯೊ ವೈರಲ್ ಆಗುತ್ತಿದ್ದಂತೆ ಬಾಲಕಿಯ ಔದರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಎಲ್ಲೆಡೆ ರಾಖಿ ಹಬ್ಬದ ಸಂಭ್ರಮ ಜೋರಾಗಿದೆ. ಅಣ್ಣ, ತಮ್ಮಂದಿರಿಗೆ ರಾಖಿ ಕಟ್ಟಲು ಸಹೋದರಿಯರು ಕಾತುರರಾಗಿದ್ದಾರೆ. ಈ ನಡುವೆ ನವ ದೆಹಲಿಯ ವಸತಿ ಸಮುಚ್ಚಯವೊಂದರಲ್ಲಿ ವಾಸಿಸುವ ಬಾಲಕಿ ಭದ್ರತಾ ಸಿಬ್ಬಂದಿ ಜತೆ ರಾಖಿ ಹಬ್ಬವನ್ನು ಸಂಭ್ರಮಿಸಿದ್ದಾಳೆ. ತನ್ನ ಕುಟುಂಬವನ್ನು ದಿನವಿಡೀ ರಕ್ಷಣೆ ಮಾಡುವ ಭದ್ರತಾ ಸಿಬ್ಬಂದಿಯೊಂದಿಗೆ ಈ ದಿನವನ್ನು ಕಳೆದಿದ್ದಾಳೆ.

ರಕ್ಷಾ ಬಂಧನಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗ, ಪುಟ್ಟ ಬಾಲಕಿ ತನ್ನದೇ ಆದ ವಿಶೇಷ ರೀತಿಯಲ್ಲಿ ಹಬ್ಬವನ್ನು ಆಚರಿಸಿದ್ದಾಳೆ. ಅವಳು ತನ್ನ ಸಹೋದರರಿಗೆ ಮಾತ್ರ ಆಚರಣೆಯನ್ನು ಸೀಮಿತಗೊಳಿಸಲಿಲ್ಲ. ತನ್ನ ವಸತಿ ಸೊಸೈಟಿಯಲ್ಲಿ ಇರುವ ಭದ್ರತಾ ಸಿಬ್ಬಂದಿಗೆ ರಾಖಿ ಕಟ್ಟಲು ನಿರ್ಧರಿಸಿದ್ದಾಳೆ.‌ ಆಕೆ ಪ್ರೀತಿಯಿಂದ ಅವರನ್ನು ಭದ್ರತಾ ಭಯ್ಯಾಸ್ ಎಂದು ಕರೆಯುತ್ತಿದ್ದಳು.

ವಿಡಿಯೊ ನೋಡಿ:



ತನ್ನ ಸ್ವಂತ ಸಹೋದರರಿಗೆ ತಂದಂತಹ ರಾಖಿಯನ್ನೇ ಈ ಭದ್ರತಾ ಸಿಬ್ಬಂದಿಗೂ ತರಬೇಕು ಎಂದು ಬಾಲಕಿ ಪಟ್ಟು ಹಿಡಿದ್ದಳು ಎಂದು ಆಕೆಯ ತಾಯಿ ವಿಡಿಯೊದಲ್ಲಿ ತಿಳಿಸಿದ್ದಾರೆ. ವೈರಲ್ ಕ್ಲಿಪ್‌ನಲ್ಲಿ, ಚಿಕ್ಕ ಬಾಲಕಿ ಮೊದಲು ಎಲ್ಲ ಭದ್ರತಾ ಸಿಬ್ಬಂದಿಗೆ ತಿಲಕ ಹಚ್ಚಿ ನಂತರ ಅವರ ಮಣಿಕಟ್ಟಿಗೆ ರಾಖಿಗಳನ್ನು ಕಟ್ಟುವುದನ್ನು ಕಾಣಬಹುದು. ಅವರಿಗೆ ಸಿಹಿತಿಂಡಿಗಳನ್ನು ಸಹ ತಿನ್ನಿಸಿದ್ದಾಳೆ.

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ಮಗುವಿನ ಪ್ರೀತಿ ಹಾಗೂ ಪೋಷಕರು ಕಲಿಸಿದ ಉತ್ತಮ ಸಂಸ್ಕಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು ಸಮುದಾಯವನ್ನು ಸುರಕ್ಷಿತವಾಗಿಡಲು ಕೆಲಸ ಮಾಡುವ ಜನರನ್ನು ಗುರುತಿಸಿ ಶ್ಲಾಘಿಸಿದ್ದಕ್ಕಾಗಿ ಬಾಲಕಿಯನ್ನು ಹೊಗಳಿದ್ದಾರೆ‌. ಇನ್ನೊಬ್ಬರು, ʼʼಮಕ್ಕಳಿಗೆ ಜನರನ್ನು ಗೌರವಿಸಲು ಮೊದಲು ಕಲಿಸಬೇಕು. ಆಗ ಮಾತ್ರ ಇಂತಹ ಸಂಸ್ಕಾರದ ಅರಿವು ಮೂಡುತ್ತದೆʼʼ ಎಂದ್ದಾರೆ.