ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಮಿಳುನಾಡು ವಿಧಾನಸಭೆಯಲ್ಲಿ ಅಪರೂಪದ ಪ್ರಸಂಗ: ಸಿಎಂ ಕುರ್ಚಿ ಬಿಟ್ಟು ಸಚಿವರ ಸಾಲಿನಲ್ಲಿ ಕುಳಿತ ವಿಜಯ್

CM Vijay: ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ವಿಧಾನಸಭೆಯಲ್ಲಿ ತಮ್ಮ ಆಸನವನ್ನು ಬಿಟ್ಟು ಸಚಿವರ ಸಾಲಿನಲ್ಲಿ ಕುಳಿತು ಗಮನ ಸೆಳೆದಿದ್ದಾರೆ. ಸಚಿವರಾದ ಕೆ.ಎ. ಸೆಂಗೊಟ್ಟಯ್ಯನ್ ಮತ್ತು ಆಧವ್ ಅರ್ಜುನ ಅವರ ನಡುವೆ ಕುಳಿತ ವಿಜಯ್ ಅವರ ಅಪರೂಪದ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಿಎಂಗೆ ಮೀಸಲಾದ ಆಸನ ತೊರೆದು ಸಚಿವರ ಜತೆ ಕುಳಿತ ವಿಜಯ್

ಸಿಎಂ ವಿಜಯ್ -

Profile
Sushmitha Jain Aug 27, 2026 10:45 PM

ಚೆನ್ನೈ, ಆ. 27: ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ (CM Vijay) ಗುರುವಾರ ವಿಧಾನಸಭೆಯಲ್ಲಿ ತಮ್ಮ ಎಂದಿನ ಆಸನವನ್ನು ಬಿಟ್ಟು ಸಚಿವರ ಸಾಲಿನಲ್ಲಿ ಕುಳಿತು ಗಮನ ಸೆಳೆದಿದ್ದಾರೆ. ಅವರ ಈ ಅಪರೂಪದ ನಡೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ. ವಿಧಾನಸಭೆಯ ಮಧ್ಯಾಹ್ನದ ಅಧಿವೇಶನ ಆರಂಭವಾಗುತ್ತಿದ್ದಂತೆ ವಿಜಯ್ ಕೆಲಕಾಲ ಮುಖ್ಯಮಂತ್ರಿಗೆ ಮೀಸಲಾಗಿರುವ ಆಸನದಲ್ಲಿ ಕುಳಿತ ಬಳಿಕ ಸಚಿವರ ಸಾಲಿನತ್ತ ತೆರಳಿ, ಸಚಿವರಾದ ಕೆ.ಎ. ಸೆಂಗೊಟ್ಟಯ್ಯನ್ ಹಾಗೂ ಆಧವ್ ಅರ್ಜುನ ಅವರ ನಡುವೆ ಕುಳಿತರು. ಈ ವೇಳೆ ಅವರು ಸಚಿವರೊಂದಿಗೆ ಸಂವಹನ ನಡೆಸುತ್ತಿರುವ ದೃಶ್ಯಗಳು ವೈರಲ್ ಆಗಿವೆ.

ಸಾಮಾನ್ಯವಾಗಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿಗೆ ಸ್ಪೀಕರ್‌ರ ಆಸನದ ಸಮೀಪ ಪ್ರತ್ಯೇಕ ಹಾಗೂ ವಿಶಾಲವಾದ ಆಸನವನ್ನು ಮೀಸಲಿಡಲಾಗಿರುತ್ತದೆ. ಮುಖ್ಯಮಂತ್ರಿಯ ಪಕ್ಕದಲ್ಲಿ ಸಚಿವರು ತಮ್ಮ ಹಿರಿಯತೆಯ ಆಧಾರದ ಮೇಲೆ ಕುಳಿತುಕೊಳ್ಳುತ್ತಾರೆ. ಸಚಿವರ ಸಾಲಿಗೆ ಎದುರಿನ ಆಸನಗಳಲ್ಲಿ ವಿರೋಧ ಪಕ್ಷದ ನಾಯಕರು ಹಾಗೂ ವಿಧಾನಸಭಾ ಪಕ್ಷಗಳ ನಾಯಕರಿಗೆ ಸ್ಥಾನ ಕಲ್ಪಿಸಲಾಗುತ್ತದೆ.

ಸಿಎಂ ಕುರ್ಚಿ ತೊರೆದು ಸಚಿವ ಬಳಿ ಕುಳಿತ ಸಿಎಂ ವಿಜಯ್‌:



ಮೂಲಗಳ ಪ್ರಕಾರ, ಈ ಹಿಂದೆ ಯಾವುದೇ ತಮಿಳುನಾಡು ಮುಖ್ಯಮಂತ್ರಿ ಸಚಿವರಿಗೆ ಮೀಸಲಾಗಿರುವ ಆಸನದಲ್ಲಿ ಕುಳಿತಿರಲಿಲ್ಲ. ಹೀಗಾಗಿ ವಿಜಯ್‌ ನಡೆ ಗಮನ ಸೆಳೆದಿದೆ.

ಕರೂರು ಸಂತ್ರಸ್ತರಿಗೆ ಸರ್ಕಾರಿ ನೌಕರಿ ಕೇಸ್‌; ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ತಡೆ, CM ವಿಜಯ್ ಸರ್ಕಾರಕ್ಕೆ ಸುಪ್ರೀಂನಲ್ಲಿ ಗೆಲುವು

ಇದಕ್ಕೂ ಮುನ್ನ ವಿಜಯ್ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹದಲ್ಲಿ ಸಿಲುಕಿರುವ ತಮಿಳುನಾಡಿನ ನಿವಾಸಿಗಳ ರಕ್ಷಣೆಗೆ ಸಂಬಂಧಿಸಿದಂತೆ ಅವರು ಉನ್ನತ ಮಟ್ಟದ ಪರಿಶೀಲನಾ ಸಭೆಯನ್ನೂ ನಡೆಸಿದರು. ಒಟ್ಟು 103 ಮಂದಿ ತಮಿಳುನಾಡಿನವರು ಎರಡು ಗುಂಪುಗಳಲ್ಲಿ ನೇಪಾಳಕ್ಕೆ ತೆರಳಿದ್ದರು.

100 ದಿನಗಳಲ್ಲಿ ಹಲವು ಮಹತ್ವದ ಘೋಷಣೆ

ಮುಖ್ಯಮಂತ್ರಿಯಾಗಿ 100 ದಿನಗಳನ್ನು ಪೂರೈಸಿರುವ ವಿಜಯ್ ನೇತೃತ್ವದ ಸರ್ಕಾರ ಹಲವು ಪ್ರಮುಖ ಘೋಷಣೆಗಳನ್ನು ಮಾಡಿದೆ. ಹಾಲು ಉತ್ಪಾದಕರು, ಶಾಸಕರು, ಆರೋಗ್ಯ ಕ್ಷೇತ್ರ ಹಾಗೂ ಮಹಿಳಾ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಹಲವು ಕ್ರಮಗಳನ್ನು ಘೋಷಿಸಲಾಗಿದೆ.

ಮೂರನೇ ಮಗುವಿಗೆ ಲಭ್ಯವಿರುವ ಹೆರಿಗೆ ರಜೆಯನ್ನು 12 ವಾರಗಳಿಂದ 365 ದಿನಗಳಿಗೆ ಹೆಚ್ಚಿಸುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ. ಜತೆಗೆ ಆವಿನ್ ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್‌ಗೆ 38 ರುಪಾಯಿಯಿಂದ 41 ರುಪಾಯಿ ಹೆಚ್ಚಿಸಲಾಗಿದ್ದು, 3.16 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರಿಗೆ ಇದರಿಂದ ಪ್ರಯೋಜನವಾಗಲಿದೆ.

ಶಾಸಕರಿಗೂ ಮಹತ್ವದ ಘೋಷಣೆ ಮಾಡಿರುವ ವಿಜಯ್, ಎಲ್ಲ ಶಾಸಕರಿಗೆ ಸರ್ಕಾರಿ ವಾಹನ ಹಾಗೂ ತಿಂಗಳಿಗೆ 1 ಲಕ್ಷ ರುಪಾಯಿ ಪ್ಯಾಕೇಜ್ ನೀಡುವುದಾಗಿ ತಿಳಿಸಿದ್ದಾರೆ. ಇದರಲ್ಲಿ 75,000 ರುಪಾಯಿ ಇಂಧನ, ನಿರ್ವಹಣೆ ಮತ್ತು ಚಾಲಕ ವೆಚ್ಚಕ್ಕೆ ಹಾಗೂ 25,000 ರುಪಾಯಿ ಕಚೇರಿ ಸಹಾಯಕರ ವೆಚ್ಚಕ್ಕೆ ಮೀಸಲಾಗಿರಲಿದೆ.