ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

20 ವರ್ಷದ ಬಿಟ್ಟು ತಬಾಹಿ ಸ್ವಚ್ಛತಾ ಅಭಿಯಾನಕ್ಕೆ ನೆಟ್ಟಿಗರು ಫಿದಾ: ಗುರುಗ್ರಾಮದಲ್ಲಿ ಬರೋಬ್ಬರಿ 2,435 ಕೆಜಿ ತ್ಯಾಜ್ಯ ಸಂಗ್ರಹ

Viral News: ಮಧ್ಯ ಪ್ರದೇಶದಿಂದ ತಮ್ಮ ಸ್ವಚ್ಛತಾ ಅಭಿಯಾನವನ್ನು ಆರಂಭಿಸಿರುವ ಬಿಟ್ಟು ತಬಾಹಿ ಪರಿಸರ ಜಾಗೃತಿ ಮೂಲಕ ಎಲ್ಲೆಡೆ ಖ್ಯಾತಿ ಪಡೆದಿದ್ದಾರೆ‌. ಇದೀಗ ರಾಷ್ಟ್ರೀಯ ರಾಜಧಾನಿ ವಲಯಕ್ಕೂ ಪರಿಸರ ಆಂದೋಲನ ಕಾರ್ಯಕ್ರಮವನ್ನು ವಿಸ್ತರಣೆ ಮಾಡಿದ್ದಾರೆ. ವಿಶ್ವ ಸ್ವಚ್ಚತಾ ದಿನದ ಅಂಗವಾಗಿ ದೆಹಲಿಯ ಯಮುನಾ ನದಿ ತೀರದಲ್ಲಿ ಸ್ವಯಂ ಸೇವಕರೊಂದಿಗೆ ಒಟ್ಟುಗೂಡಿ 585 ಕೆಜಿ ತ್ಯಾಜ್ಯ ವಿಲೇವಾರಿ ಮಾಡಿದ್ದು ಗುರುಗ್ರಾಮ ಮತ್ತು ನೋಯ್ಡಾದ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಅವರು ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದಾರೆ.

ಗುರುಗ್ರಾಮದಲ್ಲಿ 2,435 ಕೆಜಿ ತ್ಯಾಜ್ಯ ತೆರವುಗೊಳಿಸಿದ ಬಿಟ್ಟು ತಬಾಹಿ

ಗುರುಗ್ರಾಮದಲ್ಲಿ 2,435 ಕೆಜಿ ತ್ಯಾಜ್ಯ ತೆರವು ಗೊಳಿಸಿದ ಬಿಟ್ಟು ತಬಾಹಿ ಗುಂಪು -

Profile
Pushpa Kumari Sep 23, 2026 7:47 PM

ಗುರುಗ್ರಾಮ, ಸೆ. 23: ಮಧ್ಯ ಪ್ರದೇಶದಿಂದ ತಮ್ಮ ಸ್ವಚ್ಛತಾ ಅಭಿಯಾನವನ್ನು ಆರಂಭಿಸಿರುವ 20 ವರ್ಷದ ಬಿಟ್ಟು ತಬಾಹಿ (Bittu Tabahi) ಪರಿಸರ ಜಾಗೃತಿ ಮೂಲಕ ದೇಶದೆಲ್ಲೆಡೆ ಖ್ಯಾತಿ ಪಡೆದಿದ್ದಾರೆ‌. ಇದೀಗ ರಾಷ್ಟ್ರೀಯ ರಾಜಧಾನಿ ವಲಯಕ್ಕೂ ಪರಿಸರ ಆಂದೋಲನ ಕಾರ್ಯಕ್ರಮವನ್ನು ವಿಸ್ತರಿಸಿದ್ದಾರೆ. ವಿಶ್ವ ಸ್ವಚ್ಛತಾ ದಿನದ ಅಂಗವಾಗಿ ದೆಹಲಿಯ ಯಮುನಾ ನದಿ ತೀರದಲ್ಲಿ ಸ್ವಯಂ ಸೇವಕರೊಂದಿಗೆ ಒಟ್ಟುಗೂಡಿ 585 ಕೆಜಿ ತ್ಯಾಜ್ಯ ವಿಲೇವಾರಿ ಮಾಡಿದ್ದಾರೆ (Viral News). ಗುರುಗ್ರಾಮ ಮತ್ತು ನೋಯ್ಡಾದ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಅವರು ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದಾರೆ. ಸದ್ಯ ಇವರ ಪರಿಸರ ಕಾಳಜಿಗೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸೆಪ್ಟೆಂಬರ್ 20ರಂದು ಅವರು ದೆಹಲಿಯಿಂದ ಮೂರು ದಿನಗಳ ನೂತನ ಅಭಿಯಾನವನ್ನು ಪ್ರಾರಂಭಿಸಿದರು. ಗುರುಗ್ರಾಮದಲ್ಲಿ ಬಿಟ್ಟು ಮತ್ತು ಅವರ ತಂಡವು ಖೇಡ್ಕಿ ದೌಲಾ ಪ್ರದೇಶವನ್ನು ಸ್ವಚ್ಛಗೊಳಿಸಿದ್ದು 2,435 ಕೆಜಿ ತ್ಯಾಜ್ಯ ವನ್ನು ಸಂಗ್ರಹಿಸಿದ್ದಾರೆ. ಬಿಟ್ಟು ಶೇರ್ ಮಾಡಿದ ವಿಡಿಯೊದಲ್ಲಿ ಅವರು ತಮ್ಮ ತಂಡದೊಂದಿಗೆ ಸ್ವಚ್ಛತಾ ಕಾರ್ಯವನ್ನು ಪ್ರಾರಂಭಿಸುವುದನ್ನು ತೋರಿಸಿದೆ.

ವಿಡಿಯೊ ನೋಡಿ:

ಇಂತಹ ತ್ಯಾಜ್ಯದಿಂದ ಬೀದಿ ದನಗಳಿಗೆ ಎದುರಾಗುವ ಪ್ರಾಣಾಪಾಯದ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ನಿವಾಸಿಗಳು ಕೂಡ ತಂಡದೊಂದಿಗೆ ಕೈಜೋಡಿಸಿ ಆ ಪ್ರದೇಶವನ್ನು ಸ್ವಚ್ಛಗೊಳಿಸಲು ಸಹಾಯ ಮಾಡಿದ್ದಾರೆ.

ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲೇ ಪಾರ್ಟಿ ಮಾಡಿದ ಕುಟುಂಬ

ನಂತರ ಈ ಅಭಿಯಾನವು ನೋಯ್ಡಾಗೆ ವಿಸ್ತರಣೆಯಾಯಿತು. ಸೆಕ್ಟರ್ 94ರಲ್ಲಿರುವ 'ಯುವ ಶಕ್ತಿ ಘಾಟ್'ನಲ್ಲಿ ಬೆಳಗ್ಗೆ 6 ಗಂಟೆಗೆ ಮುಂದಿನ ಸ್ವಚ್ಛತಾ ಕಾರ್ಯ ನಡೆಯಲಿದೆ ಎಂದು ಬಿಟ್ಟು ಘೋಷಿಸಿದ್ದಾರೆ.

ಮಧ್ಯ ಪ್ರದೇಶದ ರಾಜ್‌ಗಢ ಜಿಲ್ಲೆಯಲ್ಲಿ ಬಿಟ್ಟು ಈ ಸ್ವಚ್ಛತಾ ಕಾಯಕ ಆರಂಭಿಸಿದ್ದರು. 2026ರ ಜನವರಿ 26ರಂದು ಸ್ನೇಹಿತರೊಂದಿಗೆ ಅಜ್ನಾರ್ ನದಿಯನ್ನು ಸ್ವಚ್ಛಗೊಳಿಸಲು ಇಳಿದ ಅವರು, ಕಾಲ ಕ್ರಮೇಣ ಏಕಾಂಗಿಯಾಗಿಯೇ ಈ ಕಾರ್ಯ ಮುಂದುವರಿಸಿದರು. ಈ ಪ್ರಯತ್ನಕ್ಕೆ 'ದಿ ಓಷನ್ ಕ್ಲೀನಪ್' ಸಂಸ್ಥೆಯ ಸ್ಥಾಪಕ ಮತ್ತು ಸಿಇಒ ಬೋಯಾನ್ ಸ್ಲಾಟ್ ಅವರ ಮೆಚ್ಚುಗೆ ಗಳಿಸಿದ್ದು ಆ ಸಂಸ್ಥೆಯೊಂದಿಗೆ ಕೆಲಸ ಮಾಡುವ ಅವಕಾಶವನ್ನು ಕೂಡ ನೀಡಿದ್ದರು.