ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಥುರಾ ದೋಣಿ ದುರಂತ: ಭೀಕರ ಅಪಘಾತ ದೃಶ್ಯದ ವಿಡಿಯೊ ವೈರಲ್!

Viral Video: ಯಮುನಾ ನದಿಯಲ್ಲಿ ದೋಣಿ ಅಪಘಾತ ಉಂಟಾದ ದೃಶ್ಯ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗುತ್ತಿದೆ. ದುರಂತದ ಮೊದಲು ಏನಾಯಿತು ಎಂಬುದನ್ನು ತೋರಿಸುವ ಈ ದೃಶ್ಯಗಳು ನೋಡುಗರಿಗೆ ಆತಂಕ ಉಂಟು ಮಾಡಿದೆ. ಈ ಘಟನೆಯಲ್ಲಿ ಪಂಜಾಬ್ ಮೂಲದ 10 ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ..

ಮಥುರಾ ದೋಣಿ ದುರಂತ: ಲೈಫ್ ಜಾಕೆಟ್ ಇಲ್ಲದೆ ದೋಣಿ ಪ್ರಯಾಣ!

ಮಥುರಾ ದೋಣಿ ದುರಂತ -

Profile
Pushpa Kumari Apr 11, 2026 7:36 PM

ಮಥುರಾ,ಎ.11: ಇತ್ತೀಚೆಗೆ ದೋಣಿ ದುರಂತಗೊಂಡ ಅನೇಕ ಘಟನೆಗಳು ಕಂಡು ಬಂದಿವೆ. ಇದೀಗ ಯಮುನಾ ನದಿಯಲ್ಲಿ ದೋಣಿ ಅಪಘಾತ ಉಂಟಾದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ. ದುರಂತದ ಮೊದಲು ಏನಾಯಿತು ಎಂಬುದನ್ನು ತೋರಿಸುವ ಈ ದೃಶ್ಯಗಳು ನೋಡುಗರಿಗೆ ಆತಂಕ ಉಂಟು ಮಾಡಿದೆ. ಈ ಘಟನೆಯಲ್ಲಿ ಪಂಜಾಬ್ ಮೂಲದ 10 ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ.

ಏಪ್ರಿಲ್ 10 ರಂದು ಉತ್ತರ ಪ್ರದೇಶದ ಮಥುರಾ ನಗರದ ಯಮುನಾ ನದಿಯಲ್ಲಿ ಪ್ರವಾಸಿ ದೋಣಿ ಮಗುಚಿ ಕನಿಷ್ಠ ಹತ್ತು ಜನರು ಪ್ರಾಣ ಕಳೆದುಕೊಂಡರು. ಮಾಹಿತಿಯ ಪ್ರಕಾರ, ಮಥುರಾದ ಬಂಕೆ ಬಿಹಾರಿ ದೇವಸ್ಥಾನದಿಂದ ಸುಮಾರು 2.5 ಕಿಮೀ ದೂರದಲ್ಲಿರುವ ಕೇಸಿ ಘಾಟ್ ಬಳಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಆ ಸಮಯದಲ್ಲಿ ದೋಣಿ ಯಲ್ಲಿ ಸುಮಾರು 30 ಜನರು ಇದ್ದರು, ಆದರೆ ಅದರ ಸಾಮರ್ಥ್ಯ ಕೇವಲ 15 ಜನರದ್ದು ಆಗಿತ್ತು.

ವಿಡಿಯೋ ನೋಡಿ:



ಯಾವುದೇ ಮುಂಜಾಗ್ರತೆ ವಹಿಸದೇ ಕೆಲವರು ದೋಣಿಯಲ್ಲಿ ನಿಂತುಕೊಂಡೆ ಪ್ರಯಾಣ ಮಾಡುತ್ತಿದ್ದರು. ಯಾವುದೇ ರೀತಿ ಲೈಫ್ ಜಾಕೆಟ್ ಧರಿಸದೇ ಪ್ರಯಾಣ ಮಾಡಿದ್ದರು. ಸದ್ಯ ಈ ದೃಶ್ಯ ಜನದಟ್ಟಣೆ ಮತ್ತು ಮೂಲಭೂತ ಮುನ್ನೆಚ್ಚರಿಕೆಗಳ ಕೊರತೆ ಸೇರಿದಂತೆ ಗಂಭೀರ ಸುರಕ್ಷತಾ ಕಾಳಜಿಗಳನ್ನು ಎತ್ತಿ ತೋರಿಸಿವೆ‌.

Viral Video: ರೀಲ್ಸ್‌ಗಾಗಿ ಇದೆಂಥ ಹುಚ್ಚಾಟ? ಚಲಿಸುವ ಟ್ರಕ್‌ ಕೆಳಗೆ ಬೈಕ್‌ ಓಡಿಸಿದ ಯುವಕ

ಬಳಕೆದಾರ ಪಿಯೂಷ್ ರೈ ವಿಡಿಯೊ ಹಂಚಿಕೊಂಡಿದ್ದು ಮಥುರಾದಲ್ಲಿ ಸ್ಟೀಮರ್‌ನಲ್ಲಿ ಪ್ರಯಾಣಿಸುತ್ತಿರುವ ಭಕ್ತರ ಗುಂಪನ್ನು ತೋರಿಸುತ್ತದೆ. ದೋಣಿಯಲ್ಲಿ ಜನಸಂದಣಿ ಹೆಚ್ಚಾಗಿದ್ದು ಜನರು ಪರಸ್ಪರ ಹತ್ತಿರ ಕುಳಿತು ನಿಂತಿದ್ದಾರೆ. ಇದು ಪ್ರಯಾಣಿಕರ ಸಂಖ್ಯೆ ಅನುಮತಿಸಲಾದ ಮಿತಿಯನ್ನು ಮೀರಿರಬಹುದು ಎಂದು ಸೂಚಿಸುತ್ತದೆ.

ದೋಣಿ ಉರುಳುವ ಮೊದಲು ದೋಣಿ ಪಾಂಟೂನ್ ಸೇತುವೆಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ದೋಣಿ ಮಗುಚಿ ಬಿದ್ದಿದೆ ಎಂದು ತೋರುತ್ತದೆ. ಹತ್ತು ಶವಗಳನ್ನು ಸ್ಥಳದಿಂದ ಹೊರತೆಗೆಯಲಾಗಿದೆ. 16 ರಿಂದ 17 ಜನರನ್ನು ರಕ್ಷಿಸಲಾಗಿದ್ದರೂ, ಕಾಣೆಯಾದವರನ್ನು ಹುಡುಕಲು ಇನ್ನೂ ಕಾರ್ಯಾಚರಣೆ ನಡೆಯುತ್ತಿದೆ.