'ರಸ್ತೆಯೇ ಮಕ್ಕಳಿಗೆ ಪರೀಕ್ಷಾ ಕೊಠಡಿ': ವಿದ್ಯಾರ್ಥಿಗಳ ವಿಡಿಯೊ ವೈರಲ್!
Viral Video: ಬಿಹಾರದ ಸೀವಾನ್ ಜಿಲ್ಲೆಯ ಕೋಚಿಂಗ್ ಸೆಂಟರ್ ವೊಂದರ ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿಯೇ ಪರೀಕ್ಷೆ ಬರೆಯುತ್ತಿದ್ದಾರೆ. ಅವರ ಸುತ್ತಲೂ ವಾಹನಗಳು ಚಲಿಸುತ್ತವೆ, ಜನರು ನಡೆದುಕೊಂಡು ಹೋಗುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯತ್ತ ಗಮನ ಹರಿಸಿದ್ದಾರೆ
ರಸ್ತೆಬದಿಯಲ್ಲೇ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು -
ಸೀವಾನ್,ಎ.11: ಇತ್ತೀಚೆಗೆ ಶಿಕ್ಷಣ ಕ್ಷೇತ್ರ ಎಷ್ಟೇ ಅಭಿವೃದ್ಧಿ ಆದರೂ ಇನ್ನೂ ಕೆಲವು ಶಾಲೆಗಳು ಮೂಲಭೂತ ಸೌಕರ್ಯದಿಂದ ವಂಚಿತ ಗೊಳ್ಳುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬಿಹಾರದ (Bihar) ಸೀವಾನ್ ಜಿಲ್ಲೆಯ ಕೋಚಿಂಗ್ ಸೆಂಟರ್‌ವೊಂದರ ವಿದ್ಯಾರ್ಥಿ ಗಳು ರಸ್ತೆ ಬದಿಯಲ್ಲಿಯೇ ಪರೀಕ್ಷೆ ಬರೆಯುತ್ತಿ ದ್ದಾರೆ. ಅವರ ಸುತ್ತಲೂ ವಾಹನಗಳು ಚಲಿಸುತ್ತವೆ, ಜನರು ನಡೆದುಕೊಂಡು ಹೋಗುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯತ್ತ ಗಮನ ಹರಿಸಿದ್ದಾರೆ.
ಶಿಕ್ಷಣ ಪಡೆಯಲು ಸರಿಯಾದ ಕೊಠಡಿ ಇಲ್ಲದಿದ್ದರೂ, ಮೂಲಭೂತ ಸೌಕರ್ಯಗಳ ಸಮಸ್ಯೆಯ ನಡುವೆಯೂ ವಿದ್ಯಾರ್ಥಿಗಳು ಆಸಕ್ತಿಯಿಂದ ಪರೀಕ್ಷೆ ಬರೆಯುತ್ತಿದ್ದಾರೆ.. ಸದ್ಯ ರಾಜ್ಯದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದರು. ತರಗತಿ ಕೊಠಡಿಗಳಿಲ್ಲ, ಮೇಜುಗಳಿಲ್ಲ, ಅವರ ಸುತ್ತಲೂ, ದೈನಂದಿನ ಜೀವನ ಮುಂದುವರಿಯುತ್ತದೆ, ವಾಹನಗಳು ಚಲಿಸುತ್ತವೆ, ಜನರು ನಡೆದುಕೊಂಡು ಹೋಗುತ್ತಾರೆ, ಆದರೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಲ್ಲಿ ಬ್ಯುಸಿಯಾಗಿದ್ದಾರೆ.
Viral Video: ಭಾರತೀಯ ಮೊಮೊಸ್ ರುಚಿಗೆ ಅಮೆರಿಕದ ಯುವಕ ಫುಲ್ ಫಿದಾ
ವಿಡಿಯೋ ನೋಡಿ:
बिहार के सिवान जिले के किसी कोचिंग संस्थान के बच्चे टेस्ट पेपर दे रहे हैं। pic.twitter.com/5j2fNioKqD
— Pranchal Yadav (@vipul_vns) April 10, 2026
ಜೈಕಿ ಯಾದವ್ ಎಂಬುವವರು ಈ ವಿಡಿಯೋ ಹಂಚಿಕೊಂಡಿದ್ದಾರೆ. "ಬಿಹಾರದ ಕೋಚಿಂಗ್ ಸೆಂಟರ್ ಮಕ್ಕಳು ರಸ್ತೆ ಬದಿಯಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಬಹುಶಃ ಇದೇ ಕಾರಣಕ್ಕೆ ಬಿಹಾರದ ಶಿಕ್ಷಣ ಪ್ರಮಾಣ ಭಾರತದಲ್ಲೇ ಅತ್ಯಂತ ಕಡಿಮೆಯಿದೆ ಎಂದು ಬರೆದಿದ್ದಾರೆ. ಇದು ಸಾರ್ವಜನಿಕ ಶಿಕ್ಷಣ ಮೂಲಸೌಕರ್ಯದಲ್ಲಿನ ಸಮಸ್ಯೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹಲವಾರು ಬಳಕೆ ದಾರರು ಹೇಳಿದ್ದಾರೆ. ಬಳಕೆದಾರರೊಬ್ಬರು ಸರ್ಕಾರಿ ಶಾಲೆಗಳು ಸೌಲಭ್ಯ ಪೂರೈಸಲು ಸಾಧ್ಯವಾಗದ ಕಾರಣ ಕಿಕ್ಕಿರಿದ ಖಾಸಗಿ ಕೇಂದ್ರಗಳು ಹುಟ್ಟಿಕೊಂಡಿವೆ ಅಂದಿದ್ದಾರೆ.
ಸರಿಯಾದ ಸೌಲಭ್ಯಗಳಿಲ್ಲದಿದ್ದರೂ ಮಕ್ಕಳ ಶ್ರದ್ಧೆಯನ್ನು ಅನೇಕರು ಕೊಂಡಾಡಿದ್ದಾರೆ...ಇಂತಹ ಮಕ್ಕಳಿಗೆ ಸರಿಯಾದ ಸೌಲಭ್ಯ ನೀಡಿ ಎಂದು ಸರಕಾರಕ್ಕೆ ಕೆಲವರು ಕಾಮೆಂಟ್ ಮೂಲಕ ಮನವಿ ಮಾಡಿದ್ದಾರೆ.