ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹೋಳಿ ಹೆಸರಲ್ಲಿ ಅನಾಚಾರ; ಚಲಿಸುವ ರೈಲಿನ ಮೇಲೆ ಸಗಣಿ ನೀರು ಎರಚಿದ ಕಿಡಿಗೇಡಿಗಳು

Viral Video: ಹೋಳಿ ಹಬ್ಬದ ದಿನ ಬಣ್ಣದ ಹೆಸರಿನಲ್ಲಿ ಹಲವರು ಮಿತಿ ಮೀರಿ ವರ್ತಿಸುತ್ತಾರೆ. ಅದಕ್ಕೆ ಉದಾಹರಣೆ ಎಂಬಂತೆ ಪುರುಷರ ಗುಂಪೊಂದು ಹಾದುಹೋಗುವ ರೈಲಿಗೆ ಸಗಣಿ ನೀರು ಮತ್ತು ಬಣ್ಣದ ದ್ರವ ಎರಚಿದೆ. ಪ್ರಯಾಣಿಕರ ಸುರಕ್ಷತೆ ಬಗ್ಗೆ ಈ ಘಟನೆ ಆತಂಕ ಮೂಡಿಸಿದೆ.

ಹೋಳಿಯಂದು ಚಲಿಸುವ ರೈಲಿಗೆ ಸಗಣಿ ನೀರು ಎರಚಿದ ಕಿಡಿಗೇಡಿಗಳು

ಚಲಿಸುವ ರೈಲಿಗೆ ಸಗಣಿ ನೀರು ಎರಚಿದ ಕಿಡಿಗೇಡಿಗಳು -

Profile
Pushpa Kumari Mar 6, 2026 9:19 PM

ನವದೆಹಲಿ, ಮಾ. 6: ಹೋಳಿ ಅಂದ್ರೆ ಬಣ್ಣಗಳ ಹಬ್ಬ. ಈ ದಿನ ಬಣ್ಣದ ಓಕುಳಿಯಲ್ಲಿ ಮಿಂದೇಳುವ ಖುಷಿ ಎಲ್ಲರಲ್ಲೂ ಇರುತ್ತದೆ. ಆದರೆ ಈ ಹಬ್ಬದ ದಿನವೇ ಹಲವು ಅಮಾನುಷ, ನಾಗರಿಕ ಸಮಾಜವೇ ತಲೆ ತಗ್ಗಿಸುವ ಘಟನೆಗಳು ನಡೆಯುತ್ತವೆ. ಗುರುವಾರ (ಮಾರ್ಚ್‌ 5) ಮಹಾರಾಷ್ಟ್ರದಲ್ಲಿ ಮೊಮ್ಮಗನ ಮೇಲೆ ಅಜ್ಜಿಯೇ ಕುದಿಯುವ ನೀರನ್ನು ಸುರಿದಿದ್ದ ಘಟನೆ ನಡೆದಿತ್ತು. ಇದರಿಂದ ಬಾಲಕನಿಗೆ ತೀವ್ರ ಗಾಯವಾಗಿದೆ. ಈ ನಡುವೆ ಚಲಿಸುವ ರೈಲಿನ ಮೇಲೆ ಯುವಕರ ಗುಂಪೊಂದು ಬಣ್ಣದ ನೀರು, ಕೆಸರು ಮತ್ತು ಸಗಣಿಯನ್ನು ಎಸೆಯುತ್ತಿರುವ ದೃಶ್ಯ (Viral Video) ಕಂಡು ಬಂದಿದೆ.

ಹೋಳಿ ಹಬ್ಬದ ದಿನ ಬಣ್ಣದ ಹೆಸರಿನಲ್ಲಿ ಕೆಲವರು ಮಿತಿ ಮೀರಿ, ಸಭ್ಯತೆ ಮೀರಿ ವರ್ತಿಸುತ್ತಾರೆ. ಅದಕ್ಕೆ ಉದಾಹರಣೆಯಂತಿದೆ ಈ ಘಟನೆ. ಪುರುಷರ ಗುಂಪೊಂದು ಹಾದುಹೋಗುವ ರೈಲಿಗೆ ಬಣ್ಣದ ದ್ರವ, ಸಗಣಿ ನೀರು ಮತ್ತು ಕೆಸರು ಎರಚಿದ್ದು, ಆನ್‌ಲೈನ್‌ನಲ್ಲಿ ಟೀಕೆಗೆ ಗುರಿಯಾಗಿದೆ. ಜತೆಗೆ ಈ ಘಟನೆ ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಂಭೀರ ಪೃಸ್ನೆಯನ್ನು ಹುಟ್ಟುಹಾಕಿದೆ.

ವಿಡಿಯೊ ನೋಡಿ:



ವಿಡಿಯೊದಲ್ಲಿ ಹಲವು ಪುರುಷರು ರೈಲ್ವೆ ಹಳಿಯ ಬಳಿ ನಿಂತಿರುವುದು ಕಂಡು ಬಂದಿದೆ. ರೈಲ್ವೆ ಬೋಗಿ ಪಕ್ಕದಲ್ಲಿ ಹಾದು ಹೋಗುವಾಗ ಒಬ್ಬಾತ ಬಕೆಟ್‌ನಿಂದ ಬಣ್ಣದ, ಸಗಣಿ ನೀರನ್ನು ಪ್ರಯಾಣಿಕರತ್ತ ಎರಚುತ್ತಾನೆ. ನೀರು ಚಲಿಸುವ ಬೋಗಿಯ ಕಿಟಕಿಗಳ ಮೇಲೆ ಚಿಮ್ಮುತ್ತದೆ. ರೈಲು ವೇಗವಾಗಿ ಚಲಿಸುತ್ತಿದ್ದರೂ ಕಿಂಚಿತ್ತೂ ಭಯವಿಲ್ಲದೆ ನಗುತ್ತ ಕೃತ್ಯ ಎಸಗಿದ್ದಾರೆ.

ಪ್ರಿಯಕರನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಯುವತಿ

ಸದ್ಯ ಈ ವಿಡಿಯೊ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನೆಟ್ಟಿಗರು ಯುವಕರ ಕೃತ್ಯಕ್ಕೆ ಕಿಡಿಕಾರಿದ್ದಾರೆ. ನೆಟ್ಟಿಗರೊಬ್ಬರು ರೈಲ್ವೆ ಅಧಿಕಾರಿಗಳು ಅಂತಹ ಜನರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಹೀಗೆ ಮಾಡುತ್ತಿರುವುದು ಕಂಡುಬಂದರೆ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಆಕ್ರೋಸ ವ್ಯಕ್ತಪಡಿಸಿದ್ದಾರೆ.