ಯುವತಿಯ ಅದ್ಭುತ ಕ್ರಿಯೇಟಿವಿ: ಸೋಡಾ ಕ್ಯಾನ್‌ನಲ್ಲಿ ಮೂಡಿಬಂತು ಶಾರುಖ್ ಖಾನ್ ಭಾವಚಿತ್ರ
Viral Video: ಇಲ್ಲೊಬ್ಬ ಯುವತಿಯ ಕ್ರಿಯೇಟಿವಿಟಿಗೆ ನೆಟ್ಟಿಗರು ಫಿದಾ ಆಗಿದ್ದು ನೂರಾರು ವೇಸ್ಟ್ ಸೋಡಾ ಕ್ಯಾನ್ ಬಳಸಿ ಸಂದರ ಕಲಾಕೃತಿ ರಚಿಸಿದ್ದಾರೆ. ಒಂದೊಂದಾಗಿ ಅವರು ಕಪ್ಪು, ನೀಲಿ, ಹಸಿರು ಮತ್ತು ಕಿತ್ತಳೆ ಬಣ್ಣಗಳಲ್ಲಿರುವ ಕ್ಯಾನ್‌ಗಳನ್ನು ಬಳಸಿ ಬಾಲಿವುಡ್ ನಟ ಶಾರುಖ್ ಖಾನ್ ಅವರ ಸುಂದರ ಚಿತ್ರವನ್ನು ಬಿಡಿಸುವ ಮೂಲಕ ಮೆಚ್ಚುಗೆ ಗಳಿಸಿದ್ದಾರೆ.
ಸೋಡಾ ಕ್ಯಾನ್‌ಗಳಿಂದ ಶಾರುಖ್ ಖಾನ್ ಭಾವಚಿತ್ರ ರಚಿಸಿದ ಯುವತಿ -
ನವದೆಹಲಿ, ಮಾ. 6: ಶ್ರಮ ಪಟ್ಟರೆ ಎಲ್ಲವೂ ಸಾಧ್ಯ ಅನ್ನುವ ಮಾತನ್ನು ನೀವು ಕೇಳಿರಬಹುದು. ಅದೇ ರೀತಿ ಇಲ್ಲೊಬ್ಬ ಯುವತಿಯ ಕ್ರಿಯೇಟಿವಿಟಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಆಕೆ ನೂರಾರು ವೇಸ್ಟ್ ಸೋಡಾ ಕ್ಯಾನ್ ಬಳಸಿ ಸಂದರ ಕಲಾಕೃತಿ ರಚಿಸಿದ್ದಾರೆ. ಒಂದೊಂದಾಗಿ ಅವರು ಕಪ್ಪು, ನೀಲಿ, ಹಸಿರು ಮತ್ತು ಕಿತ್ತಳೆ ಬಣ್ಣಗಳಲ್ಲಿರುವ ಕ್ಯಾನ್‌ಗಳನ್ನು ಬಳಸಿ ಬಾಲಿವುಡ್ ನಟ ಶಾರುಖ್ ಖಾನ್ ಅವರ ಸುಂದರ ಚಿತ್ರವನ್ನು ಬಿಡಿಸುವ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಯುವತಿ ಕಸದಿಂದ ರಸ ಎನ್ನುವ ಕಾನ್ಸೆಪ್ಟ್ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಮೊದಲು ಪಂಚಿಂಗ್ ಯಂತ್ರವನ್ನು ಬಳಸಿ ಆಕೆ ಕ್ಯಾನ್‌ಗಳನ್ನು ಸಣ್ಣ ವೃತ್ತಾಕಾರವನ್ನಾಗಿ ಕತ್ತರಿಸುತ್ತಾಳೆ. ನಂತರ ಬಿಳಿ ಬಣ್ಣದ ಕ್ಯಾನ್ವಾಸ್ ಮೇಲೆ ಕಪ್ಪು ಬಣ್ಣದ ಡಬ್ಬಿಯನ್ನು ಬಳಸಿದ್ದಾಳೆ. ನಂತರ ಆ ಸಣ್ಣ, ಬಹುವರ್ಣದ ವೃತ್ತಗಳನ್ನು ಒಂದರ ನಂತರ ಒಂದರಂತೆ ಖಾಲಿ ಕ್ಯಾನ್ವಾಸ್ ಮೇಲೆ ಹೊಡೆಯಲು ಪ್ರಾರಂಭಿಸಿದ್ದಾಳೆ. ಆ ಸಣ್ಣ ಬಣ್ಣದ ಲೋಹದ ತುಣುಕುಗಳನ್ನು ಬಡಿದು ಆಕೃತಿಯನ್ನು ರಚಿಸಲಾಗಿದೆ.
ವಿಡಿಯೊ ನೋಡಿ:
ಪ್ರಾರಂಭದಲ್ಲಿ ವೀಕ್ಷಕರಿಗೆ ಅವಳು ಏನು ಮಾಡುತ್ತಿದ್ದಾಳೆಂದು ಅರ್ಥವಾಗಿರಲಿಲ್ಲ. ಅಂತಿಮವಾಗಿ, ನೂರಾರು ಸಣ್ಣ ತುಣುಕುಗಳನ್ನು ಮೇಲ್ಮೈಯಲ್ಲಿ ಇರಿಸಿದ ನಂತರ ಕ್ಯಾಮರಾ ನಿಧಾನವಾಗಿ ಪೂರ್ಣಗೊಂಡ ಕಲಾಕೃತಿಯನ್ನು ಬಹಿರಂಗಪಡಿಸಿದಾಗ ಎಲ್ಲರಿಗೂ ಅಚ್ಚರಿ ಎದುರಾಗಿತ್ತು. ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಭಾವಚಿತ್ರವಾಗಿ ಮೂಡಿ ಬಂದಿತ್ತು.
ಈ ವಿಡಿಯೊ ಭಾರಿ ವೈರಲ್ ಆಗಿದ್ದು, ಕ್ರಿಯೇಟಿವಿ ಅಂದ್ರೆ ಹೀಗಿರಬೇಕು ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ಈಗಾಗಲೇ 13 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದ್ದು ಯುವತಿಯ ಕೌಶಲಕ್ಕೆ ಫಿದಾ ಆಗಿದ್ದಾರೆ. ಒಬ್ಬರು ಕಠಿಣ ಪರಿಶ್ರಮಿ ಮತ್ತು ಅತ್ಯಂತ ಪ್ರತಿಭಾನ್ವಿತ ಹುಡುಗಿ ಎಂದಿದ್ದಾರೆ.