ಮೂರನೇ ಬಾರಿ ವಿವಾಹ ಪರೀಕ್ಷೆಗಿಳಿದ ಐಎಎಸ್ ಆಫೀಸರ್; ಮತ್ತೆ ಮದುವೆಯಾದ ಅಧಿಕಾರಿ, ಪತ್ನಿ ಕೂಡ ಐಎಎಸ್!
Officer Marries for the Third Time: ಮಧ್ಯಪ್ರದೇಶದಲ್ಲಿ ಐಎಎಸ್ ಅಧಿಕಾರಿಯೊಬ್ಬರು ಮೂರನೇ ಬಾರಿ ವಿವಾಹವಾಗಿದ್ದು, ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ವಿಶೇಷವೆಂದರೆ, ಅವರ ಪತ್ನಿಯೂ ಐಎಎಸ್ ಅಧಿಕಾರಿಯಾಗಿರುವುದು ಎಲ್ಲರ ಗಮನ ಸೆಳೆದಿದೆ. ಈ ವಿವಾಹದ ಬಗ್ಗೆ ಭಾರಿ ಕುತೂಹಲ ಮೂಡಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಸಖತ್ ಸುದ್ದಿಯಾಗಿದೆ.
ಮೂರನೇ ಮದುವೆಯಾದ ಐಎಎಸ್ ಅಧಿಕಾರಿ -
ಇಂದೋರ್: ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಕೆಲವು ಗಂಡೈಕ್ಳ ಪಾಡಾದರೆ, ಉತ್ತಮ ಓದು ಹಾಗೂ ದೊಡ್ಡ ಹುದ್ದೆಯಲ್ಲಿರುವ ಹುಡುಗಿಗೆ ಸೂಕ್ತ ವರ ಸಿಗುತ್ತಿಲ್ಲ ಎಂಬುದು ಇದೀಗ ಪ್ರಚಲಿತದಲ್ಲಿರುವ ಮಾತು. ಈ ನಡುವೆ, ಮಧ್ಯಪ್ರದೇಶದಲ್ಲಿ (Madhya Pradesh) ಹಿರಿಯ ಐಎಎಸ್ ಅಧಿಕಾರಿ ಅವಿ ಪ್ರಸಾದ್ ಮೂರನೇ ಬಾರಿಗೆ ವಿವಾಹವಾಗುವ ಮೂಲಕ ಗಮನ ಸೆಳೆದಿದ್ದಾರೆ. ಅಚ್ಚರಿ ಎಂದರೆ, ಅವರ ಮೂವರು ಸಂಗಾತಿಗಳು ಕೂಡ ಐಎಎಸ್ ಅಧಿಕಾರಿಗಳಾಗಿದ್ದಾರೆ (IAS Officers).
ಹೌದು, ಮಧ್ಯಪ್ರದೇಶ ಕೇಡರ್‌ನ 2014ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಪ್ರಸಾದ್, ಫೆಬ್ರವರಿ 11, 2026 ರಂದು ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ 2017ರ ಬ್ಯಾಚ್ ಅಧಿಕಾರಿ ಅಂಕಿತಾ ಧಾಕ್ರೆ ಅವರನ್ನು ವಿವಾಹವಾದರು. ಧಾಕ್ರೆ ಪ್ರಸ್ತುತ ರಾಜ್ಯ ಆಡಳಿತ ಸೇವೆಗಳ ಸಚಿವಾಲಯದಲ್ಲಿ ಉಪ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಮದುವೆ ಸಮಾರಂಭದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.
Love Jihad: ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ರಿಜಿಸ್ಟರ್ಡ್ ವಿವಾಹ, ಲವ್ ಜಿಹಾದ್ ಆರೋಪ, ಹೆತ್ತವರ ದೂರು
ಮೂಲತಃ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯವರಾದ ಪ್ರಸಾದ್, 2013ರಲ್ಲಿ ಐಪಿಎಸ್‌ಗೆ ಆಯ್ಕೆಯಾಗುವ ಮೂಲಕ ಯುಪಿಎಸ್‌ಸಿಯಲ್ಲಿ ಉತ್ತೀರ್ಣರಾದರು. 2014 ರಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 13ನೇ ರ‍್ಯಾಂಕ್ ಗಳಿಸಿದರು. ಈ ಮೂಲಕ ಐಎಎಸ್ ಅಧಿಕಾರಿಯಾದರು. ಪ್ರಸಾದ್ ಅವರು ರಾಜಕೀಯ ಕುಟುಂಬದ ಹಿನ್ನೆಲೆಯುಳ್ಳವರು. ಅವರ ತಾತ ತಂಬೇಶ್ವರ ಪ್ರಸಾದ್ ಅಲಿಯಾಸ್ ಬಚ್ಚಾ ಬಾಬು, ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದರು.
ಪ್ರಸಾದ್ ಅವರ ಐಎಎಸ್ ಅಧಿಕಾರಿ ರಿಜು ಬಫ್ನಾ ಅವರೊಂದಿಗೆ ಮೊದಲ ವಿವಾಹವಾಗಿದ್ದರು. ಪ್ರಸ್ತುತ ಅವರು ಮಧ್ಯಪ್ರದೇಶದ ಶಾಜಾಪುರದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಬ್ಬರೂ ದೆಹಲಿಯಲ್ಲಿ ನಾಗರಿಕ ಸೇವೆಗಳಿಗೆ ತಯಾರಿ ನಡೆಸುತ್ತಿದ್ದಾಗ ಭೇಟಿಯಾಗಿ, ಪ್ರೀತಿ ಹುಟ್ಟಿಕೊಂಡಿತು ಎನ್ನಲಾಗಿದೆ. ನಂತರ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಆದರೆ, ಕೆಲವೇ ವರ್ಷಗಳಲ್ಲಿ ಅವರ ದಾಂಪತ್ಯ ಜೀವನ ಮುರಿದುಬಿತ್ತಿ. ಈ ದಂಪತಿ ವಿಚ್ಛೇದನ ಪಡೆದುಕೊಂಡರು.
Sri Raghavendra Mahathme: ವಾರಾಂತ್ಯದಲ್ಲಿ ಭಕ್ತಿಸುಧೆ! ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ ವಿವಾಹ ವೈಭವ
ನಂತರ ಅವರು 2016 ರ ಬ್ಯಾಚ್‌ನ ಐಎಎಸ್ ಅಧಿಕಾರಿ ಮಿಶಾ ಸಿಂಗ್ ಅವರನ್ನು ವಿವಾಹವಾದರು. ಮದುವೆಯ ನಂತರ, ಸಿಂಗ್ ಮಧ್ಯಪ್ರದೇಶಕ್ಕೆ ತೆರಳಿದರು. ಸುಮಾರು ನಾಲ್ಕು ವರ್ಷಗಳ ನಂತರ ದಂಪತಿಗಳು ಬೇರ್ಪಟ್ಟರು. ಸಿಂಗ್ ಪ್ರಸ್ತುತ ರತ್ಲಂನಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2025 ರಲ್ಲಿ ಅವರು ಡಿಸಿ ಆಗಿ ಅಧಿಕಾರ ವಹಿಸಿಕೊಂಡರು. ಇದೀಗ ಮೂರನೇ ವಿವಾಹವಾಗಿದ್ದು, ಈ ಪತ್ನಿ ಕೂಡ ಐಎಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಾಜ್ಯ ಆಡಳಿತದಲ್ಲಿ, ಪ್ರಸಾದ್ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವುಗಳಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಮತ್ತು ಬಹು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಆಗಿ ಸೇವೆ ಸಲ್ಲಿಸಿದ್ದಾರೆ. ಕಟ್ನಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಪ್ರಸಾದ್, ತಮ್ಮ ಅಧಿಕಾರಾವಧಿಯಲ್ಲಿ ಅಪೌಷ್ಟಿಕತೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದ್ದರು. ಅವರ ಈ ಕ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಪ್ರಸ್ತುತ ಅವರು ಮಧ್ಯಪ್ರದೇಶದಲ್ಲಿ ಉದ್ಯೋಗ ಖಾತರಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.