ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಪುಟ್ಟ ಮಕ್ಕಳ ಮೇಲೆ ಬಿಸಿ ಹಾಲು ಸುರಿದ ಅರ್ಚಕ: ವಿಡಿಯೋ ನೋಡಿ
Viral News: ಅರ್ಚಕರೊಬ್ಬರು ಸಣ್ಣ ಮಕ್ಕಳ ಮೇಲೆ ಬಿಸಿ ಹಾಲು ಸುರಿದ ಘಟನೆವೊಂದು ನಡೆದಿದೆ. ಸದ್ಯ ಈ ದೃಶ್ಯವು ಮಕ್ಕಳ ಸುರಕ್ಷತೆ ಬಗ್ಗೆ ಕಳವಳ ಉಂಟು ಮಾಡುವಂತೆ ಮಾಡಿದೆ. ಇದೊಂದು ಧಾರ್ಮಿಕ ಆಚರಣೆಯ ಭಾಗವಗಿದ್ದರೂ ಮಕ್ಕಳ ಆರೋಗ್ಯದ ಬಗ್ಗೆ ಹಲವಾರು ಪ್ರಶ್ನೆ ಮಾಡಿದ್ದಾರೆ.
ಪುಟ್ಟ ಮಕ್ಕಳ ಮೇಲೆ ಬಿಸಿ ಹಾಲು ಸುರಿದ ಅರ್ಚಕ -
ನವದೆಹಲಿ, ಎ.8: ಧಾರ್ಮಿಕ ವಿಧಿವಿಧಾನದ ಹೆಸರಿನಲ್ಲಿ ಅರ್ಚಕರೊಬ್ಬರು ಸಣ್ಣ ಮಕ್ಕಳ ಮೇಲೆ ಬಿಸಿ ಹಾಲು ಸುರಿದ ಘಟನೆವೊಂದು ನಡೆದಿದೆ. ಸದ್ಯ ಈ ದೃಶ್ಯವು (Viral News) ಮಕ್ಕಳ ಸುರಕ್ಷತೆ ಬಗ್ಗೆ ಕಳವಳ ಉಂಟು ಮಾಡುವಂತೆ ಮಾಡಿದೆ. ಇದೊಂದು ಧಾರ್ಮಿಕ ಆಚರಣೆಯ ಭಾಗವಗಿದ್ದರೂ ಮಕ್ಕಳ ಆರೋಗ್ಯದ ಬಗ್ಗೆ ಹಲವಾರು ಪ್ರಶ್ನೆ ಮಾಡಿದ್ದಾರೆ.
ಅರ್ಚಕರೊಬ್ಬರು ಇಬ್ಬರು ಚಿಕ್ಕ ಮಕ್ಕಳಿಗೆ ಧಾರ್ಮಿಕ ಆಚರಣೆಯ ಭಾಗವಾಗಿ ಹಾಲನ್ನು ಸುರಿದಿದ್ದಾರೆ. ಅರ್ಚಕರು ಪಾತ್ರೆಯಲ್ಲಿರುವ ಹಾಲನ್ನು ಸಣ್ಣ ಮಕ್ಕಳಿಗೆ ಸುರಿದಿದ್ದಾರೆ. ಹಾಲು ಮೈಮೇಲೆ ಬೀಳುತ್ತಿದ್ದಂತೆ ಮಕ್ಕಳು ಅಸಹಾಯಕತೆ ಹಾಗೂ ಭಯದಿಂದ ಜೋರಾಗಿ ಅತ್ತಿದ್ದಾರೆ.
ವಿಡಿಯೋ ನೋಡಿ
A fat boobless Hindooo Priest pours boiling milk cooked on top of cow dung on a small child.
— Dr Dariya M Khan (@DrDariyaMKhan) April 7, 2026
As American, we are ok without this 10,000 year old civilisation. https://t.co/mS4fSs9jAZ
Viral Video: ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!
ಈ ಸಂದರ್ಭದಲ್ಲಿ ಅರ್ಚಕರು ಒಂದು ಮಗುವನ್ನು ಪಕ್ಕಕ್ಕೆ ಇರಿಸಿ ಮತ್ತೆ ಹಾಲಿನ ಅಭಿಷೇಕವನ್ನು ಮಾಡುತ್ತಾರೆ. ಹತ್ತಿರದಲ್ಲಿ ಹಲವಾರು ಜನರು ದೃಶ್ಯವನ್ನು ಸದ್ದಿಲ್ಲದೆ ವೀಕ್ಷಿಸುತ್ತಿರುವುದನ್ನು ತೋರಿಸುತ್ತದೆ. ಈ ಕ್ಲಿಪ್ ತ್ವರಿತವಾಗಿ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು ಅನೇಕ ಜನರು ಮಕ್ಕಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಬಳಸುತ್ತಿರುವ ಹಾಲು ತುಂಬಾ ಬಿಸಿಯಾಗಿದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದರು.
ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡು ಬರುವ ಹಾಲಿನ ಅಭಿಷೇಕ ಅಥವಾ ಆಶೀರ್ವಾದ ಸಮಾರಂಭದ ಒಂದು ಆಚರಣೆಯಾಗಿದ್ದು ಮಕ್ಕಳ ಸಮೃದ್ಧಿಗಾಗಿ ಸುರಕ್ಷಿತ ಕೋಣೆಯ ತಾಪಮಾನದಲ್ಲಿ ಹಾಲನ್ನು ಸುರಿಯಲಾಗುತ್ತದೆ. ಇದು ಉತ್ತರ ಪ್ರದೇಶದ ಭಾಗದಲ್ಲಿ ಮಕ್ಕಳ ರಕ್ಷಣೆ ಮತ್ತು ಏಳಿಗೆಗಾಗಿ ಮಾಡುವ 'ಅಭಿಷೇಕ' ಆಗಿದೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ನಮ್ಮಲ್ಲಿ ಮೂಢನಂಬಿಕೆ ಇನ್ನೂ ಮಿತಿಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.