ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಯನಾಡು ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡ ರೈಹಾನ್ ವಾದ್ರಾ ಮತ್ತು ಅವಿವಾ ಬೇಗ್: ಪ್ರಿಯಾಂಕಾ ಗಾಂಧಿ ಪರ ಪ್ರಚಾರದ ವಿಡಿಯೊ ವೈರಲ್

2024ರ ಲೋಕಸಭಾ ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಅವರ ಕುಟುಂಬ ವಯನಾಡು ರ‍್ಯಾಲಿಯಲ್ಲಿ ಪಾಲ್ಗೊಂಡ ಅಪರೂಪದ ವಿಡಿಯೊ ಇತ್ತೀಚೆಗೆ ವೈರಲ್ ಆಗಿದೆ. ಪ್ರಿಯಾಂಕಾ ಗಾಂಧಿ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಅವರ ಪುತ್ರ ರೈಹಾನ್ ವಾದ್ರಾ ತಮ್ಮ ದೀರ್ಘಕಾಲದ ಗೆಳತಿ ಅವಿವಾ ಬೇಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಅವಿವಾ ಮತ್ತು ರೈಹಾನ್ ರ‍್ಯಾಲಿಯಲ್ಲಿ ಪಾಲ್ಗೊಂಡ ಹಳೆ ವಿಡಿಯೊ ಮತ್ತೆ ಮುನ್ನಲೆಗೆ ಬಂದಿದೆ.

ಪ್ರಿಯಾಂಕಾ ಗಾಂಧಿ ಚುನಾವಣಾ ರ‍್ಯಾಲಿಯಲ್ಲಿ ರೈಹಾನ್-ಅವಿವಾ ಮಿಂಚು

ರೈಹಾನ್ ವಾದ್ರಾ ಮತ್ತು ಅವಿವಾ ಬೇಗ್ -

Profile
Pushpa Kumari Dec 31, 2025 8:49 PM

ನವದೆಹಲಿ, ಡಿ. 31: ಪ್ರತಿಯೊಬ್ಬರಿಗೂ ತಾವು ಬೆಳೆದು ಬಂದ ಹಾದಿ ಸ್ಮರಣೀಯವಾಗಿರುತ್ತದೆ. ಅವುಗಳು ಫೋಟೊ ಮತ್ತು ವಿಡಿಯೊ ಮೂಲಕ ಸದಾ ಜೀವಂತವಾಗಿ ಉಳಿಯುತ್ತದೆ. ಅವುಗಳನ್ನು ನೋಡುವಾಗ ಹಳೆ ನೆನಪುಗಳು ಮತ್ತೆ ಮರುಕಳಿಸುವುದೂ ಇದೆ. 2024ರ ಲೋಕಸಭಾ ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ಅವರ ಕುಟುಂಬ ವಯನಾಡು ರ‍್ಯಾಲಿಯಲ್ಲಿ ಪಾಲ್ಗೊಂಡ ಅಪರೂಪದ ವಿಡಿಯೊ ವೈರಲ್ ಆಗಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಅವರ ಪುತ್ರ ರೈಹಾನ್ ವಾದ್ರಾ (Raihan Vadra) ತಮ್ಮ ದೀರ್ಘಕಾಲದ ಗೆಳತಿ ಅವಿವಾ ಬೇಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಅದರ ಬೆನ್ನಲ್ಲೆ ಅವಿವಾ ಮತ್ತು ರೈಹಾನ್ ರ‍್ಯಾಲಿಯಲ್ಲಿ ಪಾಲ್ಗೊಂಡ ಹಳೆ ವಿಡಿಯೊ ಮುನ್ನಲೆಗೆ ಬಂದಿದೆ. ಈ ಮೂಲಕ ನಿಶ್ಚಿತಾರ್ಥಕ್ಕೂ ಮೊದಲೇ ಇವರಿಬ್ಬರ ನಡುವೆ ಉತ್ತಮ ಬಾಂಧವ್ಯ ಇತ್ತು ಎನ್ನುವುದಕ್ಕೆ ಈ ವಿಡಿಯೊ ಸಾಕ್ಷಿ ನುಡಿದಿದೆ.

ಲೋಕಸಭಾ ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ರೈಹಾನ್ ವಾದ್ರಾ ವಯನಾಡಿನಲ್ಲಿ ಅವರ ತಾಯಿ ಪ್ರಿಯಾಂಕಾ ಗಾಂಧಿ ವಾದ್ರಾ ಪರವಾಗಿ ರ‍್ಯಾಲಿಯಲ್ಲಿ ಪಾಲ್ಗೊಂಡಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಅದೇ ರ‍್ಯಾಲಿಯಲ್ಲಿ ಅವಿವಾ ಭಾಗವಹಿಸಿದ್ದು ಕಂಡು ನೆಟ್ಟಿಗರು ಕೂಡ ಆಶ್ಚರ್ಯಗೊಂಡಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಕಾಂಗ್ರೆಸ್ ಮುಖಂಡರು ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ರೈಹಾನ್ ಮತ್ತು ಅವಿವಾ ಜನಸಮೂಹದಲ್ಲಿ ಒಟ್ಟಿಗೆ ಇರುವುದನ್ನು ಕಾಣಬಹುದು.

ವಿಡಿಯೊ ನೋಡಿ:



ರ‍್ಯಾಲಿ ನಡೆಯುತ್ತಿದ್ದ ಸಮಯದಲ್ಲಿ ರೈಹಾನ್ ಸ್ವಲ್ಪ ದೂರವೇ ಇದ್ದು ಮಾಧ್ಯಮಗಳೊಂದಿಗೆ ಅವರು ಸಂವಹನ ನಡೆಸಲಿಲ್ಲ. ರೈಹಾನ್ ಮತ್ತು ಅವಿವಾ ಒಬ್ಬರನ್ನೊಬ್ಬರು ಪರಸ್ಪರ ನೋಡಿ ಮುಗುಳ್ನಗುತ್ತಿರುವ ದೃಶ್ಯಗಳು ಹೈಲೈಟ್ ಆಗಿದೆ. ರೈಹಾನ್ ಮತ್ತು ಅವಿವಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾದ ಒಂದು ದಿನದ ನಂತರ ಈ ವಿಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.

ಶಿಮ್ಲಾ ಆಸ್ಪತ್ರೆ ಗಲಾಟೆ ಪ್ರಕರಣ; ಪರಸ್ಪರ ಅಪ್ಪಿಕೊಂಡು ಕ್ಷಮೆಯಾಚಿಸಿದ ವೈದ್ಯ-ರೋಗಿ!

ಈ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ವಯನಾಡು ಕ್ಷೇತ್ರವನ್ನು ತೊರೆದು ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡಿದ್ದರು. 2024ರ ನವೆಂಬರ್‌ನಲ್ಲಿ ವಯನಾಡು ಕ್ಷೇತ್ರದ ಉಪಚುನಾವಣೆ ನಡೆದಿದ್ದು ಪ್ರಿಯಾಂಕಾ ಗಾಂಧಿ ತಮ್ಮ ಪ್ರತಿಸ್ಪರ್ಧಿ ಸಿಪಿಐನ ಸತ್ಯನ್ ಮೊಕೇರಿ ಅವರನ್ನು ನಾಲ್ಕು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು. ಇದೀಗ ಅವೆಲ್ಲ ನೆನಪುಗಳು ವಿಡಿಯೊ ಮೂಲಕ ಮತ್ತೆ ನೆನಪಾಗುತ್ತಿದೆ.

ವರದಿಯೊಂದರ ಪ್ರಕಾರ ರೈಹಾನ್ ಹಿಂದೆಯೇ ಅವಿವಾ ಬೇಗ್ ಅವರಿಗೆ ಪ್ರಪೋಸ್ ಮಾಡಿದ್ದು ಅವರು ಒಪ್ಪಿಕೊಂಡಿದ್ದರಂತೆ. ವೃತ್ತಿಯಲ್ಲಿ ರೈಹಾನ್ ಛಾಯಾಗ್ರಾಹಕರಾಗಿದ್ದು ವನ್ಯಜೀವಿ ಮತ್ತು ವಾಣಿಜ್ಯ ಛಾಯಾಗ್ರಹಣದಲ್ಲಿ ಅವರಿಗೆ ಅಪಾರ ಆಸಕ್ತಿಯಿದೆ. ಹೀಗಾಗಿ ಇವರು ರಾಜಕೀಯದಿಂದ ದೂರ ಉಳಿದುಬಿಟ್ಟಿದ್ದಾರೆ. ಅವಿವಾ ದೆಹಲಿಯ ಮಾಡ್ರನ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದು ಅವರೂ ಛಾಯಾಗ್ರಾಹಕಿಯಾಗಿದ್ದಾರೆ. ಅವರು ಅಟೆಲಿಯರ್ 11ರ ಸಹ-ಸಂಸ್ಥಾಪಕಿಯೂ ಆಗಿದ್ದು ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದು ಬಳಿಕ ಪ್ರೀತಿಯಾಗಿದ್ದು ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವಿವಾ ಅವರ ತಾಯಿ ನಂದಿತಾ ಬೇಗ್, ಪ್ರಿಯಾಂಕಾ ಗಾಂಧಿಯವರ ಸ್ನೇಹಿತೆ ಎನ್ನಲಾಗಿದೆ.