ನಾಸಿಕ್ ಘಟಿಕೋತ್ಸವ ಮುಗಿದ ಬೆನ್ನಲ್ಲೇ ಗೆಳತಿಗೆ ರೋಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿದ ಸೇನಾ ಪೈಲಟ್ ವಿಡಿಯೊ ವೈರಲ್
Viral News: ಮಹಾರಾಷ್ಟ್ರದ ನಾಸಿಕ್‌ನ ಯುದ್ಧ ಸೇನಾ ವಾಯುಯಾನ ತರಬೇತಿ ಶಾಲೆಯಲ್ಲಿ ಹೊಸದಾಗಿ ಅರ್ಹತೆ ಪಡೆದ ಪೈಲಟ್ ಕ್ಯಾಪ್ಟನ್ ಭಾರದ್ವಾಜ್ ತಮ್ಮ ವೃತ್ತಿ ಜೀವನದ ದೊಡ್ಡ ಸಾಧನೆಯ ದಿನದಂದೇ ಪ್ರೀತಿ ವ್ಯಕ್ತಪಡಿಸಿದ್ದಾರೆ. ಬಹು ಕಾಲದ ಗೆಳತಿಗೆ ಮದುವೆ ಪ್ರಸ್ತಾಪ ಮಾಡುವ ಮೂಲಕ ಅಚ್ಚರಿ ಪಡಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಗೆಳತಿಗೆ ಲವ್ ಪ್ರಪೋಸ್ ಮಾಡಿದ ಸೇನಾ ಪೈಲಟ್ -
ಮುಂಬೈ, ಜೂ. 3: ಪ್ರೀತಿಯನ್ನು ವ್ಯಕ್ತ ಪಡಿಸಲು ಸರಿಯಾದ ಸಮಯ ಬೇಕು ಎನ್ನುವುದನ್ನು ನೀವು ಕೇಳಿಬರಬಹುದು. ಕೆಲಸ ಪಡೆದ ನಂತರ, ಆರ್ಥಿಕವಾಗಿ ಸಬಲರಾದ ಬಳಿಕ ಹೀಗೆ ಕೆಲವರು ತಮ್ಮ ಕನಸುಗಳನ್ನು ನನಸಾಗಿಸಿ ಪ್ರೀತಿಯ ಮುದ್ರೆ ಒತ್ತುತ್ತಾರೆ. ಅದೇ ರೀತಿ ಮಹಾರಾಷ್ಟ್ರದ ನಾಸಿಕ್‌ನ ಘಟಿಕೋತ್ಸವದಲ್ಲಿ ಎಲ್ಲರ ಗಮನ ಸೆಳೆಯುವ ಘಟನೆಯೊಂದು ನಡೆದಿದೆ. ನಾಸಿಕ್‌ನ ಯುದ್ಧ ಸೇನಾ ವಾಯುಯಾನ ತರಬೇತಿ ಶಾಲೆಯಲ್ಲಿ ಹೊಸದಾಗಿ ಅರ್ಹತೆ ಪಡೆದ ಪೈಲಟ್ ಕ್ಯಾಪ್ಟನ್ ಭಾರದ್ವಾಜ್ ವೃತ್ತಿ ಜೀವನದ ದೊಡ್ಡ ಸಾಧನೆಯ ದಿನದಂದೇ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಬಹು ಕಾಲದ ಗೆಳತಿಗೆ ಮದುವೆ ಪ್ರಸ್ತಾಪ ಮಾಡುವ ಮೂಲಕ ಅಚ್ಚರಿ ಪಡಿಸಿದ್ದಾರೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.
ವಾಯುಯಾನ ತರಬೇತಿಯನ್ನು ಪೂರ್ಣಗೊಳಿಸಿದ ಬಳಿಕ ಯುವ ಅಧಿಕಾರಿ ದೀರ್ಘಕಾಲದ ಗೆಳತಿ ಆರುಷಿಗೆ ಪ್ರಪೋಸ್ ಮಾಡಿದ್ದಾರೆ. ಪದವಿ ಘಟಿಕೋತ್ಸವ ಸಮಾರಂಭದ ಬಳಿಕ ಅಲ್ಲಿ ನೆರೆದಿದ್ದ ಸಹ ಅಧಿಕಾರಿಗಳು, ಕುಟುಂಬಸ್ಥರ ನಡುವೆ ಕ್ಯಾಪ್ಟನ್ ಭಾರದ್ವಾಜ್ ಮಂಡಿಯೂರಿ ಆರುಷಿಗೆ ಉಂಗುರ ತೊಡಿಸಿ ಪ್ರಪೋಸ್ ಮಾಡಿದ್ದಾರೆ. ಆಶ್ಚರ್ಯದಿಂದ ನೋಡುತ್ತ ನಿಂತ ಆರುಷಿ ಭಾವುಕರಾಗಿದ್ದಾರೆ. ನೆರೆದಿದ್ದವರ ಚಪ್ಪಾಳೆ ತಟ್ಟಿ ಮತ್ತು ಹರ್ಷೋದ್ಗಾರ ಮಾಡಿ ಹಾರೈಸಿದ್ದಾರೆ. ಈ ಅಪರೂಪದ ದೃಶ್ಯ ಭಾರಿ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ.
ವಿಡಿಯೊ ನೋಡಿ:
Nashik, Maharashtra - In a heartwarming and emotional moment that stole the show, newly commissioned Indian Army pilot Bharat Bhardwaj proposed to his girlfriend Arushi in front of a cheering crowd immediately after the passing-out parade at the Combat Army Aviation Training… pic.twitter.com/qbChTU0UEZ
— NextMinute News (@nextminutenews7) June 2, 2026
ಕ್ಯಾಪ್ಟನ್ ಭಾರದ್ವಾಜ್ ಕೂಡ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ʼʼಸೇನಾ ಅಧಿಕಾರಿಗಳು ಸಮವಸ್ತ್ರದಲ್ಲಿ ಸೆಲ್ಯೂಟ್ ವಿನಿಮಯ ಮಾಡಿಕೊಂಡರೆ, ಮನೆಯಲ್ಲಿ ನಿಜವಾದ ಅಧಿಕಾರ ಹೆಂಡತಿಗೆ ಸೇರಿದೆʼʼ ಎಂದು ತಮಾಷೆ ಮಾಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಒಬ್ಬರು ʼʼಹೃದಯಸ್ಪರ್ಶಿ ದೃಶ್ಯʼʼ ಎಂದು ಕರೆದಿದ್ದಾರೆ. ಮತ್ತೊಬ್ಬರು, ʼʼಅವರ ಗೆಳತಿ ಬಹಳನೇ ಪುಣ್ಯವಂತರುʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ರೈಲಿನಲ್ಲೇ ಮಿನಿ ಕನ್ಸರ್ಟ್: ಅಹಮದಾಬಾದ್-ಲಖನೌ ಪ್ರಯಾಣಿಕರಿಂದ ಫುಲ್ ಮಸ್ತಿ
ನಾಸಿಕ್‌ನಲ್ಲಿರುವ ಯುದ್ಧ ಸೇನಾ ವಾಯುಯಾನ ತರಬೇತಿ ಶಾಲೆಯು ಭಾರತೀಯ ಸೇನೆಯ ಪ್ರಮುಖ ತರಬೇತಿ ಸಂಸ್ಥೆಗಳಲ್ಲಿ ಒಂದು. ವಾಯುಯಾನ ಕಾರ್ಯಾಚರಣೆಗಳು ಮತ್ತು ಯುದ್ಧ ಹೆಲಿಕಾಪ್ಟರ್ ಕಾರ್ಯಾಚರಣೆಗಳಿಗೆ ಅಧಿಕಾರಿಗಳನ್ನು ಸಿದ್ಧಪಡಿಸುವಲ್ಲಿ ಈ ಸಂಸ್ಥೆಯು ಪ್ರಧಾನ ಪಾತ್ರ ವಹಿಸುತ್ತಿದೆ.