ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಕ್ಷಯ್ ಖನ್ನಾ ಹವಾ: ‘ಧುರಂಧರ್’ ಚಿತ್ರದ ಜನಪ್ರಿಯ ಹಾಡಿಗೆ ರೋಬೋಟ್ ಭರ್ಜರಿ ಸ್ಟೆಪ್‌

Viral Video: ಅಕ್ಷಯ್ ಖನ್ನಾ ಅವರ 'FA9LA' ಹಾಡಿನ ಕ್ರೇಜ್ ಜೋರಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಬಹುತೇಕರು ರೀಲ್ಸ್ ಮಾಡಿ ವೈರಲ್ ಆಗುತ್ತಿದ್ದಾರೆ. ಸದ್ಯ ಐಐಟಿ ಬಾಂಬೆಯ ಟೆಕ್‌ಫೆಸ್ಟ್‌ನಲ್ಲಿ ಪ್ರದರ್ಶನಗೊಂಡ‌ ಹ್ಯುಮನಾಯ್ಡ್ ರೋಬೋಟ್ ಕೂಡ ಇದೇ ಹಾಡಿಗೆ ಭರ್ಜರಿಯಾಗಿ ಸ್ಟೆಪ್ ಹಾಕಿದೆ. ಅಕ್ಷಯ್ ಖನ್ನಾ ಅವರ ಎಂಟ್ರಿ ಸಾಂಗ್ 'FA9LA' ಹಾಡಿನ ತಾಳಕ್ಕೆ ತಕ್ಕಂತೆ ‌ಕುಣಿದಿದೆ.

ಐಐಟಿ ಬಾಂಬೆಯಲ್ಲಿ ʼಧುರಂಧರ್ʼ ಹಾಡಿಗೆ‌ ಭರ್ಜರಿ ಸ್ಟೆಪ್ ಹಾಕಿದ ರೋಬೋಟ್

'ಧುರಂಧರ್’ ಚಿತ್ರದ ದೃಶ್ಯ -

Profile
Pushpa Kumari Jan 1, 2026 9:18 PM

ಮುಂಬೈ, ಜ. 1: ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಬಾಲಿವುಡ್‌ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ. ಡಿಸೆಂಬರ್ 5ರಂದು ಬಿಡುಗಡೆಯಾದ ʼಧುರಂಧರ್ʼನ ಹವಾ ಎಲ್ಲಡೆ ಜೋರಾಗಿದ್ದು 2025ರ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಆಗಿ ಹೊರ ಹೊಮ್ಮಿದೆ. ಈ ಚಿತ್ರದ ಹಾಡುಗಳಂತೂ ಸಿಕ್ಕಪಟ್ಟೆ ವೈರಲ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡ್‌ನಲ್ಲಿವೆ. ಈ ಚಿತ್ರದಲ್ಲಿ ನಟ ಅಕ್ಷಯ್ ಖನ್ನಾ ಕಾಣಿಸಿಕೊಂಡಿರುವ 'FA9LA' ಹಾಡಿನ ಕ್ರೇಜ್ ರೋಬೋಟ್‌ ಲೋಕಕ್ಕೂ ತಲುಪಿದೆ. ಐಐಟಿ ಬಾಂಬೆ‌ ಟೆಕ್‌ಫೆಸ್ಟ್ 2025ರಲ್ಲಿ ಹುಮನಾಯ್ಡ್ ರೋಬೋಟ್ ʼಧುರಂಧರ್ʼ ಚಿತ್ರದ ಸೂಪರ್ ಹಿಟ್ ಹಾಡಿಗೆ ಸ್ಟೆಪ್ ಹಾಕುವ ಮೂಲಕ ಭಾರೀ ವೈರಲ್ (Viral Video) ಆಗಿದೆ.

ಅಕ್ಷಯ್ ಖನ್ನಾ ಅವರ 'FA9LA' ಹಾಡಿನ ಕ್ರೇಜ್ ಜೋರಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿನವರು ರೀಲ್ಸ್ ಮಾಡಿ ವೈರಲ್ ಆಗಿದ್ದರು. ಸದ್ಯ ಐಐಟಿ ಬಾಂಬೆಯ ಟೆಕ್‌ಫೆಸ್ಟ್‌ನಲ್ಲಿ ಪ್ರದರ್ಶನಗೊಂಡ‌ ಹ್ಯುಮನಾಯ್ಡ್ ರೋಬೋಟ್ ಕೂಡ ಇದೇ ಹಾಡಿಗೆ ಭರ್ಜರಿಯಾಗಿ ಸ್ಟೆಪ್ ಹಾಕಿದೆ. ಅಕ್ಷಯ್ ಖನ್ನಾ ಅವರ ಎಂಟ್ರಿ ಸಾಂಗ್ 'FA9LA' ಹಾಡಿನ ತಾಳಕ್ಕೆ ತಕ್ಕಂತೆ ‌ಕುಣಿದಿದೆ. ಈ ರೋಬೋಟ್‌ನ ನೃತ್ಯದ ಶೈಲಿಯನ್ನು ಕಂಡ ನೆಟ್ಟಿಗರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವಿಡಿಯೊ ನೋಡಿ:

ಸದ್ಯ ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕೂಡ ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ವಿಡಿಯೊವನ್ನು AI-ರಚಿತ ದೃಶ್ಯ ಅಂದರೆ ಅನೇಕರು ಇದನ್ನು ರಜನಿಕಾಂತ್ ಅಭಿನಯದ ರೋಬೋಟ್ ಚಿತ್ರಕ್ಕೆ ಹೋಲಿಸಿ ಚಿಟ್ಟಿ 2.0 ಎಂದು ಕರೆದಿದ್ದಾರೆ. ಈ ರೋಬೋಟ್ ಯೂನಿಟ್ರಿ ಸಂಸ್ಥೆಯ ಅತ್ಯಾಧುನಿಕ ಪ್ರದರ್ಶನಕ್ಕೆ ಸೇರಿದ್ದಾಗಿದ್ದು, ಇತ್ತೀಚೆಗಷ್ಟೇ ಟೈಮ್ ಮ್ಯಾಗಜೀನ್ ಈ ತಂತ್ರಜ್ಞಾನವನ್ನು 2025ರ ಅತ್ಯುತ್ತಮ ಆವಿಷ್ಕಾರಗಳಲ್ಲಿ ಒಂದು ಎಂದು ಹೇಳಿತ್ತು.

ವಧುವಿನ ಲೆಹೆಂಗಾ ಹಿಡಿದುಕೊಂಡು ಸಪ್ತಪದಿ ತುಳಿಯಲು ಮುಂದಾದ ಸ್ನೇಹಿತೆಯರು

ಡಿಸೆಂಬರ್ 5ರಂದು ಬಿಡುಗಡೆಯಾದ 'ಧುರಂಧರ್' ಸಿನಿಮಾ ಹೊಸ ದಾಖಲೆ ಬರೆಯುತ್ತಿದೆ. ಈ ಸಿನಿಮಾ ಸದ್ಯ ಭಾರತದಲ್ಲಿ ಸುಮಾರು 701 ಕೋಟಿ ರುಪಾಯಿಗಿಂತಲೂ ಹೆಚ್ಚು ಗಳಿಕೆ ಮಾಡಿದ್ದು ಈಗಾಗಲೇ ಟಾಪ್ ಸ್ಥಾನದಲ್ಲಿದ್ದ ಸಿನಿಮಾಗಳ‌ ದಾಖಲೆಗಳನ್ನು ಮುರಿದು 2025ರ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿದೆ.