ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತದಲ್ಲಿನ ಪ್ರಯಾಣ ಸುರಕ್ಷತೆ, ಸ್ವಚ್ಛತೆ ಬಗ್ಗೆ ಸಿಹಿ-ಕಹಿ ಅನುಭವ ಶೇರ್ ಮಾಡಿದ ಸಿಂಗಾಪುರ ಯುವತಿ; ಹೇಳಿದ್ದೇನು?

Viral Video: ಸಿಂಗಾಪುರದ ಯುವತಿಯೊಬ್ಬರು ಭಾರತದಲ್ಲಿ ಎದುರಾದ ಸಿಹಿ ಹಾಗೂ ಕಹಿ ಅನುಭವ ಎರಡನ್ನು ಹಂಚಿಕೊಂಡಿದ್ದಾರೆ. ಅವರು ಉತ್ತರ ಭಾರತದ ಪ್ರವಾಸದ ವೇಳೆ ತಾಜ್ ಮಹಲ್, ಹವಾ ಮಹಲ್ ಹಾಗೂ ಕೆಂಪು ಕೋಟೆ ಸೇರಿ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.‌ ಉತ್ತರ ಭಾರತದ ಮೂಲಕ ಪ್ರಯಾಣಿಸುವ ತನ್ನ ಮೊದಲ ಅನಿಸಿಕೆಗಳನ್ನು ವಿವರಿಸುತ್ತ, ಅನುಭವವು ತೀವ್ರ ಅಸ್ತವ್ಯಸ್ತವಾಗಿತ್ತು ಎಂದು ಅವರು ಒಪ್ಪಿಕೊಂಡಿದ್ದಾರೆ.

ಭಾರತದ ಪ್ರಯಾಣದ ಅನುಭವ ಹಂಚಿಕೊಂಡ ಸಿಂಗಾಪುರ ಯುವತಿ

ಭಾರತದ ಪ್ರಯಾಣದ ಅನುಭವ ಹಂಚಿಕೊಂಡ ಸಿಂಗಾಪುರ ಮಹಿಳೆ -

Profile
Pushpa Kumari May 16, 2026 6:45 PM

ನವದೆಹಲಿ, ಮೇ 16: ಭಾರತಕ್ಕೆ ಭೇಟಿ ನೀಡಿದ ವಿದೇಶಿಗರು ಇಲ್ಲಿನ ಆಚಾರ ವಿಚಾರ, ಸಂಸ್ಕೃತಿ ಬಗ್ಗೆ ಕೊಂಡಾಡುತ್ತಾರೆ. ಭಾರತದ ಆತಿಥ್ಯ, ವೈವಿಧ್ಯತೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದವರೂ ಇದ್ದಾರೆ. ಇದೀಗ ಸಿಂಗಾಪುರದ ಯುವತಿಯೊಬ್ಬರು ಭಾರತದ ಬಗ್ಗೆ ಸಿಹಿ ಹಾಗೂ ಕಹಿ ಅನುಭವ ಎರಡನ್ನೂ (Viral News) ಹಂಚಿಕೊಂಡಿದ್ದಾರೆ. ಅವರು ಉತ್ತರ ಭಾರತದ ಪ್ರವಾಸದ ವೇಳೆ ತಾಜ್ ಮಹಲ್, ಹವಾ ಮಹಲ್ ಹಾಗೂ ಕೆಂಪು ಕೋಟೆ ಸೇರಿ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದು, ಈ ಬಗ್ಗೆ ಹೇಳಿಕೊಂಡಿದ್ದಾರೆ.

ಸಿಂಗಾಪುರದ ಕಂಟೆಂಟ್ ಕ್ರಿಯೇಟರ್ ತ್ಯೆನ್ ರಾಸಿಫ್ ಈ ವಿಡಿಯೊ ಶೇರ್ ಮಾಡಿದ್ದಾರೆ. ಪ್ರವಾಸಿಯಾಗಿರುವ ಅವರು ಉತ್ತರ ಭಾರತದ ಮೂಲಕ ಪ್ರಯಾಣಿಸಿದ ತಮ್ಮ ಪ್ರಾಮಾಣಿಕ ಅನುಭವವನ್ನು ಹಂಚಿಕೊಂಡಿದ್ದಾರೆ‌. ಸಿಂಗಾಪುರದಂತ ಸ್ವಚ್ಛ ಮತ್ತು ಶಿಸ್ತುಬದ್ಧ ಪರಿಸರದಲ್ಲಿ ಬೆಳೆದ ತಮಗೆ ನೈಜ ಭಾರತವನ್ನು ನೋಡುವ ಕುತೂಹಲವಿತ್ತು.‌ ಇದೀಗ ಈ ಅನುಭವ ತಮಗಾಗಿದೆ ಎಂದಿದ್ದಾರೆ.

ವಿಡಿಯೊ ನೋಡಿ:

ಉತ್ತರ ಭಾರತದ ಮೂಲಕ ಪ್ರಯಾಣಿಸಿದ ಮೊದಲ ಅನಿಸಿಕೆಗಳನ್ನು ವಿವರಿಸುತ್ತ, ಅಲ್ಲಿನ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು ಎಂದು ಅವರು ಒಪ್ಪಿಕೊಂಡಿದ್ದಾರೆ. ಧೂಳು, ಸಂಚಾರ ಅವ್ಯವಸ್ಥೆ ಎಂದು ಅವರು ಬಣ್ಣಿಸಿದ್ದಾರೆ. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಹಾಕಿರುವ ಕಸದ ರಾಶಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪುರುಷರು ತಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದ ರೀತಿಯ ಬಗ್ಗೆ ಉಲ್ಲೇಖಿಸಿದ್ದಾರೆ. ನೀವು ಪ್ರಶಾಂತವಾದ ಸ್ಥಳ ಬಯಸುವುದಾದರೆ ಖಂಡಿತ ನಿಮ್ಮ ಆಯ್ಕೆಯಲ್ಲ ಎಂದು ಬರೆದಿದ್ದಾರೆ‌.

ಶೇಕಡಾ 49 ಅಂಕ ಪಡೆದ SSLC ವಿದ್ಯಾರ್ಥಿಯ ಫೋಟೊ ಶೇರ್ ಮಾಡಿದ ವ್ಯಕ್ತಿಯ ವಿರುದ್ಧ ಆಕ್ರೋಶ

ಅದಾಗ್ಯೂ ತ್ಯೆನ್ ರಾಸಿಫ್ ಭಾರತದ ಸಂಸ್ಕೃತಿ, ಇತಿಹಾಸಕ್ಕೆ ಮನ ಸೋತಿದ್ದಾರೆ. ಇದುವರೆಗೆ ಭೇಟಿ ನೀಡಿದ ಅತ್ಯಂತ ಸುಂದರ ಸ್ಥಳಗಳಲ್ಲಿ ಒಂದು ಎಂದು ಬಣ್ಣಿಸಿದ್ದಾರೆ. ದೇಶದ ಶ್ರೀಮಂತ ಪರಂಪರೆ ಮತ್ತು ವರ್ಣರಂಜಿತ ಎಂಬುದಾಗಿ ಸುತ್ತಮುತ್ತಲಿನ ಪ್ರದೇಶಗಳನ್ನು ಹೊಗಳಿದ್ದಾರೆ. ಸಾಮಾನ್ಯವಾಗಿ ವಿದೇಶಿ ಮಹಿಳೆಯರಿಗೆ ಭಾರತ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಕಾಡಬಹುದು. ಈ ಬಗ್ಗೆ ಮಾತನಾಡಿರುವ ಅವರು, "ಪ್ರವಾಸದ ವೇಳೆ ಕೆಲವೊಂದು ಕಡೆ ಆತಂಕ ಎದುರಾಗಿದ್ದು ನಿಜ. ಆದರೆ ನನ್ನ ಸುರಕ್ಷತೆ ಬಗ್ಗೆ ಕಾಳಜಿ ವಹಿಸಿದ ಹಲವು ಒಳ್ಳೆಯ ವ್ಯಕ್ತಿಗಳೂ ನನಗೆ ಸಿಕ್ಕರು. ಹಿಂದೆ ಪ್ರಯಾಣಿಸಿದ ಅನೇಕ ಅಭಿವೃದ್ಧಿ ಹೊಂದಿದ ನಗರಗಳಿಗಿಂತ ಭಾರತವೇ ಸುರಕ್ಷಿತʼʼ ಎಂದು ಹೇಳಿದ್ದಾರೆ.