ಕ್ಷುಲ್ಲಕ ವಿಚಾರಕ್ಕೆ ಯುವತಿಯ ಕಪಾಳಕ್ಕೆ ಬಾರಿಸಿದ ಯುವಕ; ಹಲ್ಲೆ ವಿಡಿಯೋ ವೈರಲ್
Viral Video: ಲಿಫ್ಟ್ ವಿಚಾರವಾಗಿ ನಡೆದ ಸಣ್ಣ ಮಾತಿನ ಚಕಮಕಿಯಿಂದ ಯುವಕನೊಬ್ಬ ಯುವತಿ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪುಣೆಯ ವಸತಿ ಕಟ್ಟಡ ವೊಂದರಲ್ಲಿ ಈ ಘಟನೆ ನಡೆದಿದ್ದು ಲಿಫ್ಟ್ ಬಳಿ ಮಹಿಳೆ ಮತ್ತು ಯುವಕನ ನಡುವೆ ನಡೆದ ಸಣ್ಣ ವಾಗ್ವಾದವು ದೈಹಿಕ ವಾಗ್ವಾದವಾಗಿ ಉಲ್ಬಣಗೊಂಡಿದೆ. ಸದ್ಯ ಈ ದೃಶ್ಯ ನೋಡಿದ ಅನೇಕರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.
ಪುಣಿಯಲ್ಲಿ ಮಹಿಳೆ ಮೇಲೆ ಕ್ರೂರವಾಗಿ ಹಲ್ಲೆ -
ಪುಣೆ, ಮೇ 16: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ವರದಿಯಾಗುತ್ತಲೇ ಇವೆ. ಇದೀಗ ಲಿಫ್ಟ್ ವಿಚಾರವಾಗಿ ನಡೆದ ಸಣ್ಣ ಮಾತಿನ ಚಕಮಕಿಯಿಂದ ಯುವಕನೊಬ್ಬ ಯುವತಿ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪುಣೆಯ ವಸತಿ ಕಟ್ಟಡ ವೊಂದರಲ್ಲಿ ಈ ಘಟನೆ ನಡೆದಿದ್ದು ಲಿಫ್ಟ್ ಬಳಿ ಮಹಿಳೆ ಮತ್ತು ಯುವಕನ ನಡುವೆ ನಡೆದ ಸಣ್ಣ ವಾಗ್ವಾದವು ದೈಹಿಕ ವಾಗ್ವಾದವಾಗಿ ಉಲ್ಬಣಗೊಂಡಿದೆ. ಸದ್ಯ ಈ ದೃಶ್ಯ ನೋಡಿದ (Viral Video) ಅನೇಕರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ನಡೆದ ಈ ಜಗಳವು ಕೊನೆಗೆ ದೈಹಿಕ ಹಲ್ಲೆಯಾಗಿ ಮಾರ್ಪಟ್ಟಿದೆ. ಯುವಕ ಲಿಫ್ಟ್‌ನಿಂದ ಹೊರ ಬಂದು ಆಕಸ್ಮಿಕವಾಗಿ ಹತ್ತಿರದಲ್ಲಿ ನಿಂತಿದ್ದ ಮಹಿಳೆಗೆ ಡಿಕ್ಕಿ ಹೊಡೆದಾಗ ಈ ಜಗಳ ಪ್ರಾರಂಭ ಆಗಿದೆ. ಈ ಕೃತ್ಯದ ಸಿಸಿಟಿವಿ ದೃಶ್ಯಗಳು ಸೆರೆಯಾಗಿದ್ದು ಸಾರ್ವಜನಿಕರು ಯುವಕನ ನಡೆಯ ವಿರುದ್ಧ ಕಿಡಿಕಾರಿದ್ದಾರೆ. ಸಣ್ಣ ವಿಚಾರಕ್ಕೆ ಉಂಟಾದ ಈ ಕಲಹಕ್ಕೆ ಈ ರೀತಿಯಾಗಿ ಹಲ್ಲೆ ಮಾಡುವುದು ತಪ್ಪು ಎಂದು ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ.
ವಿಡಿಯೋ ನೋಡಿ:
ಮೇ 15 ರಂದು ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ವೈರಲ್ ಆದ ಮಾಹಿತಿಯಂತೆ ಯುವಕನೊಬ್ಬ ಲಿಫ್ಟ್ ನಿಂದ ಹೊರಗೆ ಬರುತ್ತಿದ್ದಂತೆ ಯುವತಿಯೊಬ್ಬರಿಗೆ ಆಕಸ್ಮಿಕವಾಗಿ ಆತನ ಮೈ ತಾಗಿದೆ. ಈ ವಿಚಾರವಾಗಿ ನಡೆದ ಜಗಳ ಕೊನೆಗೆ ವಿಕೋಪಕ್ಕೆ ತಿರುಗಿದೆ. ಮೊದಲಿಗೆ ಯುವತಿ ಆ ಯುವಕನ ಕೆನ್ನೆಗೆ ಬಾರಿಸಿದ್ದಾಳೆ. ಮೊದಲು ಆ ಯುವಕ ಸುಮ್ಮ ನಾಗಿದ್ದರು ಮಹಿಳೆ ಮತ್ತೆ ಹೊಡೆಯಲು ಹೋಗಿದ್ದಾಳೆ. ಈ ವೇಳೆ ಪರಿಸ್ಥಿತಿ ಕೈಮೀರಿದ್ದು, ಯುವಕ ಆಕೆಯನ್ನು ದೂರ ತಳ್ಳಿದ್ದಾನೆ.
Viral Video: ರೀಲ್ಸ್ ತಂದ ಅವಾಂತರ; ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ
ಕೋಪಗೊಂಡ ಯುವಕ ಭೀಕರವಾಗಿ ಆಕೆಯ ಕೆನ್ನೆಗೆ ಬಾರಿಸಿದ್ದಾನೆ. ಅಷ್ಟಕ್ಕೇ ನಿಲ್ಲಿಸದ ಯುವಕ, ಆಕೆಯ ಹೆಗಲನ್ನು ಹಿಡಿದು ಮೊಣಕಾಲಿನಿಂದ ಹೊಟ್ಟೆಯ ಭಾಗಕ್ಕೆ ತೊಳೆದು ಬಳಿಕ ನೆಲಕ್ಕೆ ತಳ್ಳಿದ್ದಾನೆ. ಯುವತಿ ಕೈ ಮುಗಿದು ಬೇಡಿಕೊಂಡರು ಯುವಕ ಮತ್ತೆ ಮತ್ತೆ ಹಿಂಸಿಸುತ್ತಿದ್ದಾನೆ. ಯುವಕನು ಅಲ್ಲಿದ್ದ ಹತ್ತಿರದ ಬಕೆಟ್ ಅನ್ನು ಹಿಡಿದು ಆಕೆಯ ತಲೆಗೆ ಸರಿಯಾಗಿ ಗುದ್ದಿದ್ದಾನೆ.
ಭಯಭೀತರಾಗಿ ನೆಲದ ಮೇಲೆ ಬಿದ್ದ ಯುವತಿ ತನಗೇನೂ ಮಾಡದಂತೆ ಕೈಮುಗಿದು ಬೇಡಿಕೊಂಡಿದ್ದಾಳೆ. ಆದರೂ ಹಿಂಸೆ ನೀಡುತ್ತಲೇ ಇದ್ದನು. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಅನೇಕರು ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನಿಸಿದ್ದಾರೆ. ಬಳಕೆದಾರರೊಬ್ಬರು ಈ ರೀತಿಯಾಗಿ ಹಿಂಸೆ ನೀಡುವುದು ತಪ್ಪು ಎಂದು ಬರೆದಿದ್ದಾರೆ.