80ರ ವರ್ಷದ ತಂದೆಯನ್ನು ಮೊದಲ ಬಾರಿಗೆ ಬೀಚ್‌ಗೆ ಕರೆದೊಯ್ದ ಮಗ; ಭಾವುಕ ಕ್ಷಣದ ವಿಡಿಯೊ ವೈರಲ್
Viral Video: 80 ವರ್ಷದ ವೃದ್ಧ ತಂದೆ ಮೊದಲ ಬಾರಿಗೆ ಬೀಚ್‌ಗೆ ಕಾಲಿಟ್ಟು ರೋಮಾಂಚಿತರಾಗಿರುವ ವಿಡಿಯೊ ವೈರಲ್ ಆಗಿದೆ. ಒಡಿಶಾದ ಕೊನಾರ್ಕ್ ಬಳಿಯ ಚಂದ್ರಭಾಗ ಬೀಚ್‌ಗೆ ವೃದ್ಧ ತಂದೆಯನ್ನು ಮಗ ಕರೆದುಕೊಂಡು ಹೋಗಿದ್ದು ಅವರು ಸಣ್ಣ ಮಗುವಿನಂತೆ ಖುಷಿ ಪಟ್ಟಿದ್ದಾರೆ. ಅವರು ಸಮುದ್ರ ತೀರವನ್ನು ಸಮೀಪಿಸುತ್ತಿದ್ದಂತೆ, ತನ್ನ ಕೈಗಳನ್ನು ಮುಗಿದು ಪ್ರಾರ್ಥನೆ ಮಾಡಿದ್ದಾರೆ. ಕೆಲವು ಕ್ಷಣಗಳ ನಂತರ, ಅಲೆಗಳು ಅವರ ಪಾದಗಳನ್ನು ನಿಧಾನವಾಗಿ ಸ್ಪರ್ಶಿಸಿದಾಗ ಮೌನವಾಗಿ ನಿಂತು ನೋಡಿದ್ದಾರೆ.
ಮೊದಲ ಬಾರಿಗೆ ಬೀಚ್‌ಗೆ ಬಂದ 80 ವರ್ಷದ ವ್ಯಕ್ತಿ -
ಭುವನೇಶ್ವರ, ಆ. 6: ಹೆತ್ತವರ ಸಣ್ಣ- ಪುಟ್ಟ ಆಸೆಗಳನ್ನು ಮಕ್ಕಳು ಈಡೇರಿಸಿದರೆ ಅದಕ್ಕಿಂದ ದೊಡ್ಡ ಯಶಸ್ಸು ಯಾವುದೂ ಇಲ್ಲ. ಸಾಕಿ- ಸಲಹಿದ ಪೋಷಕರನ್ನು ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿ. ಇದೀಗ ತಂದೆ- ಮಗನ ಬಾಂಧವ್ಯ ಸಾರುವ ಅತ್ಯಂತ ಭಾವನಾತ್ಮಕ ವಿಡಿಯೊವೊಂದು ವೈರಲ್ (Viral News) ಆಗುತ್ತಿದೆ. 80 ವರ್ಷದ ತಂದೆಯನ್ನು ಮೊದಲ ಬಾರಿಗೆ ಮಗನೊಬ್ಬ ಬೀಚ್ ಗೆ ಕರೆದುಕೊಂಡು ಹೋಗಿದ್ದು ಈ ಭಾವನಾತ್ಮಕ ದೃಶ್ಯ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.
80 ವರ್ಷದ ವೃದ್ಧ ತಂದೆ ಮೊದಲ ಬಾರಿಗೆ ಬೀಚ್‌ನಲ್ಲಿ ಸಮಯ ಕಳೆಯುತ್ತಿರುವ ವಿಡಿಯೊ ನೆಟ್ಟಿಗರ ಗಮನ ಸೆಳೆದಿದೆ. ಒಡಿಶಾದ ಕೊನಾರ್ಕ್ ಬಳಿಯ ಚಂದ್ರಭಾಗ ಬೀಚ್‌ಗೆ ವೃದ್ಧ ತಂದೆಯನ್ನು ಮಗ ಕರೆದುಕೊಂಡು ಹೋಗಿದ್ದು, ಅವರು ಸಣ್ಣ ಮಗುವಿನಂತೆ ಖುಷಿ ಪಟ್ಟಿದ್ದಾರೆ. ಸಮುದ್ರ ತೀರವನ್ನು ಸಮೀಪಿಸುತ್ತಿದ್ದಂತೆ, ಪ್ರಾರ್ಥನೆ ಮಾಡಿ ಜಲ ರಾಶಿಗೆ ನಮಸ್ಕರಿಸಿದ್ದಾರೆ. ಕೆಲವು ಕ್ಷಣಗಳ ನಂತರ, ಅಲೆಗಳು ಅವರ ಪಾದಗಳನ್ನು ನಿಧಾನವಾಗಿ ಸ್ಪರ್ಶಿಸಿದಾಗ, ಮೌನವಾಗಿ ನಿಂತು ನೋಡಿದ್ದಾರೆ.
ವಿಡಿಯೊ ನೋಡಿ:
ಅವರ ಮಗ ಈ ಭಾವನಾತ್ಮಕ ಕ್ಷಣವನ್ನು ರೆಕಾರ್ಡ್ ಮಾಡಿದ್ದಾರೆ. ಆ ಕ್ಷಣವನ್ನು ಪರಿಚಯಿಸುತ್ತಾ, ʼʼನನ್ನ ತಂದೆ ಎಂದಿಗೂ ಸಮುದ್ರ ತೀರವನ್ನು ನೋಡಿಲ್ಲ. ನಾನು ಅವರನ್ನು ಜೀವನದಲ್ಲಿ ಮೊದಲ ಬಾರಿಗೆ ಕಡಲ ತೀರಕ್ಕೆ ಕರೆತಂದಿದ್ದೇನೆ. ನನ್ನ ತಂದೆಯ ಮೊದಲ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ನೋಡೋಣʼʼ ಎಂದು ಹೇಳಿದ್ದಾರೆ.
ನ್ಯಾಯ ಸಿಕ್ಕಿಲ್ಲ ಎಂದು ಬೇಸತ್ತು ಪೊಲೀಸ್ ಠಾಣೆಯಲ್ಲೇ ವಿಷ ಸೇವಿಸಿದ ಯುವತಿ!
ನೀರಿನ ದಂಡೆಯ ಹತ್ತಿರ ಹೋದಂತೆ ಅವರು ಕೈಮುಗಿದು ಪ್ರಣಾಮ ಸಲ್ಲಿಸಿದ್ದಾರೆ. ತಣ್ಣನೆಯ ಅಲೆಗಳು ಅವರ ಕಾಲುಗಳನ್ನು ಸ್ಪರ್ಶಿಸಿದಾಗ ಸಮುದ್ರದ ವಿಸ್ತಾರವನ್ನು ನೋಡುತ್ತಾ ಮೌನವಾಗಿ ನಿಂತು ಬಿಟ್ಟಿದ್ದಾರೆ. "ಬಾಬುಜಿ, ನೀರು ನಿಮ್ಮ ಕಾಲ ಬಳಿ ಬರುತ್ತಿದೆ, ನಿಮಗೆ ಏನೆನಿಸುತ್ತಿದೆ?" ಎಂದು ಮಗ ಕೇಳಿದಾಗ, "ಜೀವನದಲ್ಲಿ ಇಂತಹ ದೊಡ್ಡ ಜಲರಾಶಿಯನ್ನು ನಾನು ನೋಡಿಲ್ಲ, ನಾನು ಅದನ್ನು ನೋಡುತ್ತಲೇ ಇರಬೇಕು ಎನಿಸುತ್ತಿದೆ'' ಎಂದು ಪ್ರತಿಕ್ರಿಯಿಸಿದ್ದಾರೆ.
ಈ ವಿಡಿಯೊಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಸಾಗರಕ್ಕೆ ಮೊದಲು ನಮಸ್ಕರಿಸಿದ್ದಾರೆ. ಇವರು ಪ್ರಕೃತಿಯ ನಿಜವಾದ ಮೌಲ್ಯವನ್ನು ಅರ್ಥ ಮಾಡಿಕೊಂಡಿದ್ದಾನೆ ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಇವರ ಮುಗ್ಧತೆ ಎದ್ದು ತೋರುತ್ತಿದೆʼʼ ಎಂದಿದ್ದಾರೆ.