Viral Video: ಚಲಿಸುತ್ತಿರುವ ರೈಲಿನಲ್ಲಿ ಯುವಕನ ದುಸ್ಸಾಹಸ, ಫೋನ್ ಕಸಿದುಕೊಳ್ಳಲು ಯತ್ನ; ನೆಟ್ಟಿಗರು ಕೆಂಡಾಮಂಡಲ
Teen Risks Life with Moving Train Stunt: ಯುವಕನೊಬ್ಬ ಚಲಿಸುತ್ತಿರುವ ರೈಲಿನಲ್ಲಿ ದುಸ್ಸಾಹಸ ಪ್ರದರ್ಶಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಅವನ ಒಂದು ಕಾಲು ರೈಲಿನ ಮೇಲೆ, ಇನ್ನೊಂದು ಕಾಲನ್ನು ಪ್ಲಾಟ್‌ಫಾರ್ಮ್‌ನಲ್ಲಿ ಎಳೆದಿದ್ದಾನೆ. ಜತೆಗೆ ಮಹಿಳೆಯೊಬ್ಬರ ಫೋನ್ ಕಸಿದುಕೊಳ್ಳಲೂ ಪ್ರಯತ್ನಿಸಿದ್ದಾನೆ.

-

ಮುಂಬೈ: ಸಾಮಾಜಿಕ ಮಾಧ್ಯಮ (Social Media)ವು ಅನೇಕ ವಿಶಿಷ್ಟ ರೀಲ್‌ಗಳಿಂದ ತುಂಬಿದೆ. ಜತೆಗೆ ಲೈಕ್, ಕಮೆಂಟ್‍ಗಾಗಿ ಕೆಲವರು ಅಪಾಯಕಾರಿ ಸಾಹಸಗಳನ್ನು ಮಾಡುವ ಮೂಲಕ ತಮ್ಮ ಜೀವವನ್ನು ಪಣಕ್ಕಿಡುವ ದುಸ್ಸಾಹಸ ಮಾಡುತ್ತಾರೆ. ಕೆಲವರು ತಮ್ಮ ಸುರಕ್ಷತೆಗಿಂತ ರೀಲ್‌ಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಇದೀಗ ಯುವಕನೊಬ್ಬ ಚಲಿಸುತ್ತಿರುವ ರೈಲಿನಲ್ಲಿ ದುಸ್ಸಾಹಸ ಪ್ರದರ್ಶಿಸುತ್ತಿರುವ ವಿಡಿಯೊವೊಂದು ವೈರಲ್ (Viral Video) ಆಗಿದೆ. ಮುಂಬೈಯಲ್ಲಿ ನಡೆದ ಘಟನೆ ಇದಾಗಿದ್ದು, ವಿಡಿಯೊ ನೋಡಿದ ಅನೇಕರು ಕಿಡಿಕಾರಿದ್ದಾರೆ.
ವಿಡಿಯೊದಲ್ಲಿ ರಾಹುಲ್ ಕುಮಾರ್ ಯಾದವ್ ಎಂಬ ಯುವಕ ರೈಲಿನಿಂದ ಹೊರಗೆ ನೇತಾಡುತ್ತಿರುವುದನ್ನು ಕಂಡು ಬಂದಿದೆ. ಅವನ ಒಂದು ಕಾಲು ರೈಲಿನ ಮೇಲೆ, ಇನ್ನೊಂದು ಕಾಲನ್ನು ಪ್ಲಾಟ್‌ಫಾರ್ಮ್‌ನಲ್ಲಿ ಎಳೆಯುತ್ತಿದ್ದಾನೆ. ಮತ್ತೊಬ್ಬ ಯುವಕ ಕೂಡ ಬಾಗಿಲಿನಲ್ಲಿ ನೇತಾಡುತ್ತಿರುವುದು ಕಂಡುಬಂದಿದೆ. ಮುಂದೆ ಇದ್ದವ ಈ ಸಾಹಸವನ್ನು ತನ್ನ ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದಾನೆ.
ವಿಡಿಯೊ ವೀಕ್ಷಿಸಿ:
ವಿಡಿಯೊದ ನಿಖರವಾದ ಸ್ಥಳ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅನೇಕರು ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆತ ಕಾಲು ಜಾರಿ ಬಿದ್ದಿದ್ದರೆ ಅಥವಾ ಏನಾದರೂ ಅಡ್ಡ ಬಂದಿದ್ದರೆ, ಅದು ದೊಡ್ಡ ಅಪಘಾತಕ್ಕೆ ಕಾರಣವಾಗುತ್ತಿತ್ತು ಎಂದು ಆಕ್ರೋಶಗೊಂಡಿದ್ದಾರೆ. ವಿಡಿಯೊದಾದ್ಯಂತ, ಯುವಕನು ಚಲಿಸುವ ರೈಲಿನಿಂದ ನೇತಾಡುತ್ತಾ ಅವನು ತನ್ನ ಪಾದವನ್ನು ಪ್ಲಾಟ್‌ಫಾರ್ಮ್‌ನಲ್ಲಿ ಎಳೆಯುವುದನ್ನು ಕಾಣಬಹುದು. ಒಂದು ಹಂತದಲ್ಲಿ, ಅವನು ಮಹಿಳೆಯೊಬ್ಬರ ಫೋನ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ರೈಲಿನ ವೇಗ ಮತ್ತು ದೂರದಿಂದಾಗಿ ಅವನು ಅವಳನ್ನು ತಲುಪಲು ವಿಫಲನಾಗುತ್ತಾನೆ.
ಈ ದುಸ್ಸಾಹಸವು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಕೆರಳಿಸಿದೆ. ಕೆಲವು ಬಳಕೆದಾರರು ಮುಂಬೈ ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದು, ವಿಡಿಯೊದಲ್ಲಿರುವ ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಯುವಕನಿಗೆ ಜವಾಬ್ದಾರಿ ಹೆಗಲೇರಿದಾಗ ಸುಧಾರಿಸುತ್ತಾನೆ ಎಂದು ಬಳಕೆದಾರರೊಬ್ಬರು ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಅವನನ್ನು ಪತ್ತೆ ಹಚ್ಚಿ, ಶಿಕ್ಷೆ ನೀಡಿ, ಇದರಿಂದ ಇಂತಹ ಅಪರಾಧಗಳು ಮತ್ತೆ ಸಂಭವಿಸುವುದಿಲ್ಲ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.
ವ್ಯಕ್ತಿಯೊಬ್ಬರು, ಇಂಥವರು ತಮ್ಮ ಹೆತ್ತವರ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಕಿಡಿ ಕಾರಿದ್ದಾರೆ. ಇದನ್ನೆಲ್ಲ ಮಾಡುವುದರಿಂದ ಅವರು ಏನು ಸಾಧಿಸುತ್ತಾರೆ ಎಂದು ಮತ್ತೊಬ್ಬರು ಕೇಳಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇನ್ನೂ ಕೂಡ ಮುಂಬೈ ಪೊಲೀಸರು ಅಥವಾ ಭಾರತೀಯ ರೈಲ್ವೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಅಥವಾ ಸಾಹಸದಲ್ಲಿ ಭಾಗಿಯಾಗಿರುವ ಜನರ ವಿರುದ್ಧ ಕ್ರಮ ಕೈಗೊಂಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಘಟನೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ರೈಲ್ವೆ ಅಧಿಕಾರಿಗಳು ಪದೇ ಪದೆ ಈ ಅಪಾಯಕಾರಿ ಸಾಹಸಗಳ ವಿರುದ್ಧ ಜನರಿಗೆ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ.
ಇದನ್ನೂ ಓದಿ: Viral Video: ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಸಿನಿಮೀಯ ಶೈಲಿಯಲ್ಲಿ ಕೈದಿಗಳು ಎಸ್ಕೇಪ್- ಈ ವಿಡಿಯೊ ನೋಡಿ