ಕೇವಲ 30 ಸೆಕೆಂಡ್‌ಗಳಲ್ಲಿ ಕೇರಳದ 14 ಜಿಲ್ಲೆಗಳ ಸೌಂದರ್ಯ ಸೆರೆ ಹಿಡಿದ ಡ್ರೋನ್ ವಿಡಿಯೊ; ನೀವೂ ನೋಡಿ
Viral Video: ದೇವರ ಸ್ವಂತ ನಾಡು ಎಂದೇ ಜನಪ್ರಿಯವಾಗಿರುವ ಕೇರಳವು ಹಲವು ಹಚ್ಚ ಹಸಿರಿನ ಗುಡ್ಡಗಳು, ಕಡಲ ತೀರಗಳು ಮತ್ತು ಮಂಜಿನ ಗಿರಿಧಾಮಗಳಿಗೆ ಹೆಸರುವಾಸಿ. ಇಲ್ಲಿನ ಸೌಂದರ್ಯವನ್ನು ಸವಿಯಬೇಕು ಎನ್ನುವವರಿಗೆ 14 ಜಿಲ್ಲೆಗಳ ಪ್ರಮುಖ ತಾಣಗಳನ್ನು ಪರಿಚಯಿಸುವ ಡ್ರೋನ್ ದೃಶ್ಯವೊಂದು ಭಾರಿ ವೈರಲ್ ಆಗುತ್ತಿದೆ. ಅರುಣ್ ಪಿ. ಜೋಸ್ ಎನ್ನುವವರು ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಕೇರಳದ ಡ್ರೋನ್ ವಿಡಿಯೊ -
ತಿರುವನಂತಪುರ, ಜ. 18: ಶ್ರೀಮಂತ ನೈಸರ್ಗಿಕ ಸೌಂದರ್ಯಕ್ಕೆ ಕೇರಳವು ಹೆಚ್ಚು ಪ್ರಸಿದ್ಧಿ ಪಡೆದಿದೆ. ಇದನ್ನು ಕಣ್ತುಂಬಿಕೊಳ್ಳಲು ಪ್ರಕೃತಿ ಪ್ರೇಮಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳವು ಹಲವು ಹಚ್ಚ ಹಸಿರಿನ ಗುಡ್ಡಗಳು, ಕಡಲ ತೀರಗಳು ಮತ್ತು ಮಂಜಿನ ಗಿರಿಧಾಮಗಳಿಗೆ ಹೆಸರುವಾಸಿ. ಇಲ್ಲಿನ 14 ಜಿಲ್ಲೆಗಳ ಪ್ರಮುಖ ತಾಣಗಳನ್ನು ಪರಿಚಯಿಸುವ ಡ್ರೋನ್ ದೃಶ್ಯವೊಂದು ಭಾರಿ ವೈರಲ್ ಆಗುತ್ತಿದೆ. ಅರುಣ್ ಪಿ. ಜೋಸ್ ಎನ್ನುವವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ (Viral Video). ಈ ವಿಡಿಯೊದ ಪ್ರಮುಖ ಹೈಲೈಟ್ ಎಂದರೆ ಇದು ಎಲ್ಲ 14 ಜಿಲ್ಲೆಗಳ ಪ್ರಮುಖ ತಾಣಗಳ ಡ್ರೋನ್ ದೃಶ್ಯಗಳನ್ನು ಕೇವಲ 30 ಸೆಕೆಂಡುಗಳಲ್ಲಿ ನಿಮ್ಮ ಮುಂದಿಡುತ್ತದೆ.
ವಿಡಿಯೊದಲ್ಲಿ ಪರಿಚಯಿಸಿದ ಹಲವು ಪ್ರವಾಸಿ ತಾಣಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ. ಸೆರೆಹಿಡಿಯಲಾದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ತಿರುವನಂತಪುರಂನಲ್ಲಿರುವ ಶಿವನ ವಿಗ್ರಹ, ಕೊಲ್ಲಂನಲ್ಲಿರುವ ಜಟಾಯು ಸಾಹಸ ಕೇಂದ್ರ, ಕೋಟಯಂನ ಹೂವಿನ ನೋಟ, ತ್ರಿಶೂರ್‌ನ ಅತಿರಪಲ್ಲಿ ಜಲಪಾತ, ವಯನಾಡಿನ ಬಾಣಾಸುರ ಸಾಗರ ಅಣೆಕಟ್ಟು, ಇಡುಕ್ಕಿಯ ವಾಗಮೋನ್, ಪಾಲಕ್ಕಾಡ್‌ನ ಪದಿಂಜರಂಗಡಿ, ಎರ್ನಾಕುಲಂನ ಕುಜಿಪಿಲ್ಲಿ, ಮಲಪ್ಪುರಂನ ಚಾಲಿಯಾರ್ ನದಿ, ಕಾಸರಗೋಡಿನ ಪಯಸ್ವಿನಿ ನದಿ ಮತ್ತು ಕೋಝಿಕ್ಕೋಡ್‌ನ ಕರಿಯತುಂಪರ ಸೇರಿದೆ.
ವಿಡಿಯೊ ನೋಡಿ:
ಅರುಣ್ ಪಿ. ಜೋಸ್ ಎಂಬವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೊ ಕೇರಳದ 14 ಜಿಲ್ಲೆಗಳ ಸುಂದರ ಸ್ಥಳಗಳನ್ನು ತೆರೆದಿಟ್ಟಿದೆ. ಅವುಗಳಲ್ಲಿ ಪ್ರತಿಯೊಂದೂ ಸ್ಥಳವು ಸಂಸ್ಕೃತಿ ಮತ್ತು ಇತಿಹಾಸದ ವಿಶಿಷ್ಟ ಮಿಶ್ರಣ ಎನಿಸಿಕೊಂಡಿದೆ. "ಕೇರಳದ 14 ಜಿಲ್ಲೆಗಳು...ಕೇವಲ 30 ಸೆಕೆಂಡುಗಳಲ್ಲಿ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾದ ಈ ವಿಡಿಯೊ ಈಗ ಭಾರಿ ವೈರಲ್ ಆಗುತ್ತಿದೆ. ಈ ಪುಟ್ಟ ವಿಡಿಯೊದಲ್ಲಿ ಕೇರಳದ ಪ್ರಮುಖ ಪ್ರವಾಸಿ ತಾಣಗಳನ್ನು ಅತ್ಯಂತ ಆಕರ್ಷಕವಾಗಿ ತೋರಿಸಲಾಗಿದೆ.
ಶಾಲಾ ಬಸ್ಸಿನಲ್ಲಿ ನೇತಾಡುತ್ತಾ ಹೋಗುತ್ತಿರುವ ವಿದ್ಯಾರ್ಥಿಗಳು; ವಿಡಿಯೋ ವೈರಲ್
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಹಲವರು ಕೇರಳದ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. ನೆಟ್ಟಿಗರೊಬ್ಬರು ಕೇರಳ ಭೂಮಿಯ ಮೇಲಿನ ಸ್ವರ್ಗ ಎಂದು ಬರೆದಿದ್ದಾರೆ. ನೈಸರ್ಗಿಕವಾಗಿ ಸುಂದರವಾಗಿದೆ. ಇಲ್ಲಿಗೆ ಭೇಟಿ ನೀಡಲೇ ಬೇಕು ಮತ್ತೊಬ್ಬ ಇನ್‌ಸ್ಟಾಗ್ರಾಮ್ ಬಳಕೆದಾರರು ಬರೆದಿದ್ದಾರೆ. ಮೂರನೇ ವ್ಯಕ್ತಿ ನಾನು ಈಗಾಗಲೇ ಈ ಸ್ಥಳವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.