ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮಾವ ಅಡುಗೆ ಮಾಡ್ತಿದ್ರೆ ಕಿಲಾಡಿ ಸೊಸೆಯಂದಿರು ರೀಲ್ಸ್‌ನಲ್ಲಿ ಫುಲ್‌ ಬ್ಯುಸಿ ; ವಿಡಿಯೊ ನೋಡಿ

ರಾಜಸ್ಥಾನದಿಂದ ವರದಿಯಾಗಿದೆ ಎಂದು ಹೇಳಲಾದ ಹಾಸ್ಯಮಯ ವಿಡಿಯೊದಲ್ಲಿ ಸಾಂಪ್ರದಾಯಿಕ ರಾಜಸ್ಥಾನಿ ಉಡುಪು ಧರಿಸಿದ ಇಬ್ಬರು ಮಹಿಳೆಯರು ನೆಲದ ಮೇಲೆ ಕುಳಿತು ಮಗುವನ್ನು ಹಿಡಿದುಕೊಂಡು ರೀಲ್ಸ್ ಮಾಡಿದರೆ ಇನ್ನೊಂದು ಕಡೆಯಲ್ಲಿ ಅವರ ಮಾವ ರೊಟ್ಟಿಯನ್ನು ತಯಾರಿಸಿದ್ದಾರೆ. ಈ ವಿಡಿಯೊ ಎಲ್ಲರ ಗಮನಸೆಳೆದು ವೈರಲ್ ಆಗಿದೆ.

ಮಾವ ಅಡುಗೆ ಮಾಡ್ತಿದ್ರೆ ಸೊಸೆಯಂದಿರು ಮಾಡಿದ ಕೆಲಸ ನೋಡಿ!

Profile pavithra May 2, 2025 7:37 PM

ಜೈಪುರ್: ರೀಲ್ಸ್‌ ಅನ್ನುವುದು ಈಗ ಕ್ರೇಜ್‌ ಆಗಿದೆ. ಏನೇ ಮಾಡಿದ್ರೂ ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿ ವ್ಯೂವ್ಸ್‌, ಲೈಕ್ಸ್‌ಗಳಿಗಾಗಿ ಕಾತರದಿಂದ ಕಾಯುತ್ತಾರೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ರಾಜಸ್ಥಾನದ ಮಹಿಳೆಯ ವಿಡಿಯೊವೊಂದು ಸಖತ್‌ ಸದ್ದು ಮಾಡುತ್ತಿದೆ. ಅಂಥದ್ದೇನಿದೆ ಆ ವಿಡಿಯೊದಲ್ಲಿ ಅಂದುಕೊಳ್ಳುತ್ತಿದ್ದೀರಾ...? ಸಾಮಾನ್ಯವಾಗಿ ಮನೆಯಲ್ಲಿ ಸೊಸೆ ಅಡುಗೆ ಮಾಡಿ ಅತ್ತೆ ಮಾವನಿಗೆ ಬಡಿಸುತ್ತಾರೆ. ಆದರೆ ಈ ವಿಡಿಯೊದಲ್ಲಿ ಮಾವ ಅಡುಗೆ ಮಾಡುತ್ತಿದ್ದರೆ ಸೊಸೆಯಂದಿರು ರೀಲ್ಸ್ ಮಾಡುವುದರಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿ ನೆಟ್ಟಿಗರನ್ನು ರಂಜಿಸಿದೆ.

ರಾಜಸ್ಥಾನದ ಈ ಹಾಸ್ಯಮಯ ವಿಡಿಯೊದಲ್ಲಿ ಸಾಂಪ್ರದಾಯಿಕ ರಾಜಸ್ಥಾನಿ ಉಡುಪುಗಳನ್ನು ಧರಿಸಿದ ಇಬ್ಬರು ಮಹಿಳೆಯರು ನೆಲದ ಮೇಲೆ ಕುಳಿತು ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವುದು ಸೆರೆಯಾಗಿದೆ. ಮಹಿಳೆಯರಲ್ಲಿ ಒಬ್ಬಳು ಸಣ್ಣ ಮಗುವನ್ನು ಹಿಡಿದಿದ್ದಾಳೆ.ಮಹಿಳೆಯರಿಬ್ಬರು ರೀಲ್ಸ್‌ ಮಾಡುತ್ತಿದ್ದರೆ, ಅವರ ಹಿಂದೆ ಇದ್ದ ಮಾವ ರೊಟ್ಟಿಗಳನ್ನು ಬೇಯಿಸುತ್ತಿದ್ದನಂತೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.‌

ವಿಡಿಯೊ ಇಲ್ಲಿದೆ ನೋಡಿ...

ಈ ವಿಡಿಯೊ ನೋಡಿ ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. ಇದು ನೈತಿಕ ಅವನತಿಯ ಸಮಯ.ಕಲಿಯುಗದ ಸಂಕೇತ ಎಂದು ಕೆಲವರು ತಮಾಷೆಯಾಗಿ ಕರೆದಿದ್ದಾರೆ. ಕುಟುಂಬ ಪಾತ್ರಗಳು ಹೇಗೆ ವ್ಯತಿರಿಕ್ತವಾಗಿ ಕಾಣುತ್ತವೆ ಎಂಬುದರ ಬಗ್ಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಇತರರು ಆ ವ್ಯಕ್ತಿ ಸಂಬಂಧಿಕರಿಗಿಂತ ಕೆಲಸದವನಾಗಿರಬಹುದು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಶಾಲು ಮಾರಾಟ ಮಾಡುತ್ತಿದ್ದ ಕಾಶ್ಮೀರಿ ವ್ಯಕ್ತಿಗಳ ಮೇಲೆ ಹಲ್ಲೆ ; ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌

ಈ ಹಿಂದೆ ರಾಜಸ್ಥಾನಿ ಕುಟುಂಬದ ಸೊಸೆಯೊಬ್ಬಳು ತನ್ನ ಅತ್ತೆ-ಮಾವನ ಮನೆಯಲ್ಲಿ ರೊಟ್ಟಿ ತಯಾರಿಸುವ ವಿಡಿಯೊವೊಂದು ವೈರಲ್ ಆಗಿತ್ತು. ಇಲ್ಲಿ ಮಹಿಳೆ ರೊಟ್ಟಿ ತಯಾರಿಸುವಾಗ ಒಂದೊಂದೆ ರೊಟ್ಟಿ ತಟ್ಟಿ ತಯಾರಿಸುವ ಬದಲು ಅಡುಗೆ ಮನೆಯ ಕೌಂಟರ್‌ನ ಮೇಲೆ ಹಿಟ್ಟನ್ನು ಉದ್ದಕ್ಕೆ ತಟ್ಟಿಕೊಂಡು ನಂತರ ಅವಳು ಒಂದು ಬಟ್ಟಲನ್ನು ತೆಗೆದುಕೊಂಡು ಅದನ್ನು ಹಿಟ್ಟಿನ ಮೇಲೆ ಇಟ್ಟು ರೊಟ್ಟಿಗಳ ಆಕಾರಕ್ಕೆ ಕತ್ತರಿಸಿದ್ದಾಳೆ. ಮತ್ತು ಈ ರೀತಿಯಾಗಿ 5 ರೊಟ್ಟಿಗಳನ್ನು ಒಟ್ಟಿಗೆ ತಯಾರಿಸುತ್ತಾಳೆ. ಈ ವಿಡಿಯೊ ಎಲ್ಲರ ಗಮನಸೆಳೆದು ವೈರಲ್ ಆಗಿತ್ತು.