ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬಿಸಿಲಿನ ತಾಪಕ್ಕೆ ಕುಸಿದು ಬಿದ್ದ ಕುದುರೆ; ಹೃದಯ ವಿದ್ರಾವಕ ವಿಡಿಯೊ ವೈರಲ್!

ಕೋಲ್ಕತಾದ ಜನನಿಬಿಡ ರಸ್ತೆಯಲ್ಲಿ ಕುದುರೆಯೊಂದು ಬಿಸಿಲಿನ ತಾಪಕ್ಕೆ ಕುಸಿದು ಬಿದ್ದಿದ್ದು, ಆ ವೇಳೆ ಕರುಣೆ ಇಲ್ಲದ ಕುದುರೆಯ ಮಾಲೀಕ ಅದನ್ನು ಹೊಡೆದು ಮೇಲೆತ್ತಲು ಯತ್ನಿಸಿದ್ದಾನೆ. ಈ ಆಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಸಿಲಿನ ತಾಪಕ್ಕೆ ಕುಸಿದು ಬಿದ್ದ ಕುದುರೆ; ಕೊನೆಗೆ ಆಗಿದ್ದೇನು?

Profile pavithra May 2, 2025 8:06 PM

ಕೊಲ್ಕತ್ತಾ: ಕೋಲ್ಕತಾದ ಜನನಿಬಿಡ ರಸ್ತೆಯಲ್ಲಿ ಕುದುರೆಯೊಂದು ಬಿಸಿಲಿನ ತಾಪಕ್ಕೆ ಕುಸಿದು ಬಿದ್ದಿದ್ದು, ಆ ವೇಳೆ ಕರುಣೆ ಇಲ್ಲದ ಕುದುರೆಯ ಮಾಲೀಕ ಅದನ್ನು ಹೊಡೆದು ಮೇಲೆತ್ತಲು ಯತ್ನಿಸಿದ್ದಾನೆ. ಈ ಆಘಾತಕಾರಿ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೊದಲ್ಲಿ, ತೀವ್ರ ಶಾಖ ಮತ್ತು ಬಳಲಿಕೆಯಿಂದಾಗಿ ದಣಿದ ಕುದುರೆ ಕುಸಿದು ಬಿದ್ದಿರುವುದು ಸೆರೆಯಾಗಿದೆ. ಆದರೆ ಅದರ ಮಾಲೀಕ ಅದಕ್ಕೆ ಸಹಾಯ ನೀಡುವ ಬದಲು ಅದನ್ನು ಹೊಡೆದು ಎಳೆಯುವುದು ಸೆರೆಯಾಗಿದೆ.

ಮೂಲತಃ ಪ್ರಾಣಿ ಹಕ್ಕುಗಳ ಸಂಸ್ಥೆ ಪೆಟಾ ಇಂಡಿಯಾ ಪೋಸ್ಟ್ ಮಾಡಿದ ಈ ವಿಡಿಯೊ ತ್ವರಿತವಾಗಿ ವೈರಲ್ ಆಗಿದ್ದು, ಕಾರ್ಯಕರ್ತರು, ಸೆಲೆಬ್ರಿಟಿಗಳು ಮತ್ತು ಸಂಬಂಧಪಟ್ಟ ನಾಗರಿಕರಿಂದ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಪೆಟಾ ಇಂಡಿಯಾ, ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳುವಾಗ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಇತರ ಅಧಿಕಾರಿಗಳಿಗೆ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದೆ.

ವಿಡಿಯೊ ಇಲ್ಲಿದೆ ನೋಡಿ...



ನಟಿ ಪೂಜಾ ಭಟ್ "ಈ ಘಟನೆ ಹೃದಯ ವಿದ್ರಾವಕವಾಗಿದೆ. ಕೋಲ್ಕತಾದ ಬೀದಿಗಳಲ್ಲಿ ಬಿಸಿಲು ಮತ್ತು ಆಯಾಸದಿಂದ ಕುದುರೆಯೊಂದು ಕುಸಿದು ಬಿದ್ದಿದೆ. ಆದರೆ ಅದಕ್ಕೆ ಯಾವುದೇ ಸಹಾಯ ನೀಡದೆ ಅದನ್ನು ಮುಂದೆ ಸಾಗುವಂತೆ ಹೊಡೆಯಲಾಗಿದೆ. ಈ ರೀತಿ ಕ್ರೂರವಾಗಿ ಕುದುರೆ ಎಳೆಯುವ ಗಾಡಿಗಳನ್ನು ನಿಷೇಧಿಸಿ ಮಾನವೀಯ, ಪ್ರಗತಿಪರ ಇ-ಗಾಡಿಗಳಿಗೆ ಬದಲಾಯಿಸಬೇಕೆಂದು ಬೇಡಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾ ನೆಟ್ಟಿಗರು ಸಹ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. "ಇದು ತುಂಬಾ ಕ್ರೂರವಾಗಿದೆ! ಅವರು ಕುದುರೆಗೆ ಆಹಾರವನ್ನು ನೀಡುತ್ತಿದ್ದಾರೆಯೇ?" ಎಂದು ಒಬ್ಬರು ಕೇಳಿದರೆ, ಇನ್ನೊಬ್ಬರು "ಅಂತಹ ಜನರನ್ನು ಕರುಣೆಯಿಲ್ಲದೆ ಶಿಕ್ಷಿಸಬೇಕು" ಎಂದು ಹೇಳುವ ಮೂಲಕ ಕಠಿಣ ಶಿಕ್ಷೆಗೆ ಕರೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಬಾಲ್ಯದಲ್ಲಿ ಆಡಿ ಬೆಳೆದ ಮನೆಯನ್ನು ಕಂಡು ಬಿಕ್ಕಿ ಬಿಕ್ಕಿ ಅತ್ತ ವಿದೇಶಿಗ! ಭಾವನಾತ್ಮಕ ವಿಡಿಯೊ ಇಲ್ಲಿದೆ

ಈ ಘಟನೆಗೆ ಸಂಬಂಧಿಸಿದಂತೆ ಕುದುರೆಯ ಹ್ಯಾಂಡ್ಲರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕೋಲ್ಕತಾ ಪೊಲೀಸರು ಖಚಿತಪಡಿಸಿದ್ದಾರೆ. ಪೆಟಾದ ದೂರಿನ ಮೇರೆಗೆ ಬಿಎನ್ಎಸ್ ಮತ್ತು ಪಿಸಿಎ ಕಾಯ್ದೆಯ ಕಾನೂನಿನ ಸರಿಯಾದ ವಿಭಾಗಗಳ ಅಡಿಯಲ್ಲಿ ಎಫ್ಐಆರ್‍ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೂ ಅಧಿಕಾರಿಗಳು ಕುದುರೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಸದ್ಯಕ್ಕೆ ಕುದುರೆ ಪಶುವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಪೆಟಾ ತ್ವರಿತ ಕ್ರಮಕ್ಕಾಗಿ ಪೊಲೀಸರಿಗೆ ಧನ್ಯವಾದ ಅರ್ಪಿಸಿದೆ.