Viral Video: ದೇವಾಲಯದಲ್ಲಿ ಕಾಣಿಸಿಕೊಂಡ ಬೃಹತ್ ಸರ್ಪವನ್ನು ಚಿಕ್ಕ ಕೋಲು ಹಿಡಿದು ಹೊರದಬ್ಬಿದ ವೃದ್ಧ; ಭಾರೀ ವೈರಲ್ ಆಗ್ತಿದೆ ಈ ವಿಡಿಯೊ
ಉತ್ತರಪ್ರದೇಶದ ಬರ್ಸಾನಾದ ಲಾಡ್ಲಿ ಜಿ ಮಂದಿರದಲ್ಲಿ ಸುಮಾರು ನಾಲ್ಕರಿಂದ ಐದು ಅಡಿ ಉದ್ದದ ಹಾವೊಂದು ಕಂಡುಬಂದಿದೆ. ಆ ವೇಳೆ ವೃದ್ಧನೊಬ್ಬ ಉದ್ದನೆಯ ಕೋಲಿನಿಂದ ಹಾವನ್ನು ತಳ್ಳಿ ಹೊರಗೆ ಹಾಕಿದ್ದಾನೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.


ಲಖನೌ: ಹಾವು ಕಂಡರೆ ಜನರು ಜೀವ ಭಯದಿಂದ ಎದ್ದೋ ಬಿದ್ದೋ ಓಡುತ್ತಾರೆ ನಿಜ. ಆದರೆ ಕೆಲವರು ದೇವಾಲಯಗಳಲ್ಲಿ ಹಾವನ್ನು ಕಂಡಾಗ ಅದಕ್ಕೆ ಪೂಜೆ ಮಾಡುತ್ತಾರೆ. ಹೀಗಿರುವಾಗ ಬರ್ಸಾನಾದ ಶ್ರೀ ಲಾಡ್ಲಿ ಜಿ ಮಂದಿರದಲ್ಲಿ ಸುಮಾರು ನಾಲ್ಕರಿಂದ ಐದು ಅಡಿ ಉದ್ದದ ಹಾವೊಂದು(Snake) ಕಂಡುಬಂದಿದ್ದು, ಆ ವೇಳೆ ವೃದ್ಧನೊಬ್ಬ ಉದ್ದನೆಯ ಕೋಲಿನಿಂದ ಹಾವನ್ನು ತಳ್ಳುವ ಮೂಲಕ ಅದನ್ನು ಹೊರಗೆ ಹಾಕಿದ್ದಾನೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಪ್ರಾಣಿ ಹಿಂಸೆಯ ಬಗ್ಗೆ ಮಾತನಾಡಿದರೆ ಕೆಲವರು ಭಕ್ತರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ ದೇವಾಲಯದ ಹೊರಗೆ ನಾಲ್ಕರಿಂದ ಐದು ಅಡಿ ಉದ್ದದ ಹಾವೊಂದು ಓಡಾಡುವುದು ಸೆರೆಯಾಗಿದೆ. ಈ ಮಧ್ಯೆ, ಒಬ್ಬ ವೃದ್ಧ ವ್ಯಕ್ತಿ ತನ್ನ ಕೈಯಲ್ಲಿ ಉದ್ದವಾದ ಮರದ ಕೋಲಿನಿಂದ ಹಾವನ್ನು ದೂರ ತಳ್ಳಿದ್ದಾನೆ. ಇದರಿಂದ ಅದು ಕೊನೆಗೆ ಹೊರಗೆ ಹೋಗಿದೆ.
ವಿಡಿಯೊ ಇಲ್ಲಿದೆ ನೋಡಿ...
सांप की पूजा करने वाले देश में मंदिर में सांप घुस आया फिर देखिए कैसे उसकी पूजा की गई
— DJ_Mech1007 (@DJ_Mech1007) July 14, 2025
👇👇👇👇 pic.twitter.com/dylFM8v3S8
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವೃದ್ಧನ ಧೈರ್ಯವನ್ನು ಕಂಡು ನೆಟ್ಟಿಗರನ್ನು ಆತನನ್ನು ಹೊಗಳಿದ್ದಾರೆ. ಆದರೆ ಇನ್ನೊಂದು ಕಡೆ ಈ ವಿಡಿಯೊದಲ್ಲಿ ಪ್ರಾಣಿ ಹಿಂಸೆ ಕಂಡುಬಂದಿದ್ದರಿಂದ ಟೀಕೆಗೆ ಗುರಿಯಾಗಿದೆ. ಆ ವ್ಯಕ್ತಿ ಹಾವನ್ನು ತಳ್ಳುವ ಬದಲು ಮರದ ಕೋಲಿನಿಂದ ಹೊಡೆದಿದ್ದಾನೆ ಎಂದು ಹೇಳಲಾಗಿದೆ. "ಹಾವುಗಳನ್ನು ಪೂಜಿಸುವ ದೇಶದಲ್ಲಿ, ಒಂದು ಹಾವು ದೇವಸ್ಥಾನಕ್ಕೆ ಬಂದಾಗ ಅದನ್ನು ಹೇಗೆ ಪೂಜಿಸಲಾಯಿತು ಎಂದು ನೋಡಿ" ಎಂದು ಒಬ್ಬರು ಬರೆದಿದ್ದಾರೆ.
"ನಾಗ ಪಂಚಮಿಯಂದು, ನಾಗ ದೇವತೆ ದೇವಸ್ಥಾನಕ್ಕೆ ಬರುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ ದೇವಸ್ಥಾನದಲ್ಲಿ ಹಾವು ಕಂಡರೆ ಹಾಲಿನಿಂದ ಅದನ್ನು ಪೂಜಿಸಲಾಗುತ್ತದೆ. ಈ ಬಾರಿ ಅವರು ಸ್ವಲ್ಪ ಬೇಗನೆ ಬಂದರು, ಆದ್ದರಿಂದ ಅವರನ್ನು ಹೊರಗೆ ಕಳುಹಿಸಲಾಗಿದೆ" ಎಂದು ಮತ್ತೊಬ್ಬರು ಬರೆದಿದ್ದಾರೆ.
ವೃದ್ಧನ ಕಾರ್ಯವನ್ನು ಸಮರ್ಥಿಸಿಕೊಂಡು ಅನೇಕರು ಕಾಮೆಂಟ್ ಮಾಡಿದ್ದಾರೆ. ಒಬ್ಬರು, "ಅವರು ಅರ್ಚಕರಲ್ಲ, ಅವರು ಹೂವು ಮಾರಾಟಗಾರ. ಎರಡನೆಯ ವಿಷಯವೆಂದರೆ ನಮ್ಮ ಸಂಸ್ಕೃತಿಯು ಎಲ್ಲರೊಂದಿಗೂ ಹೇಗೆ ವರ್ತಿಸಲು ನಮಗೆ ಕಲಿಸುತ್ತದೆ. ಹಾವು ವಿಷಕಾರಿ ಎಂದು ಎಲ್ಲರಿಗೂ ತಿಳಿದಿದೆ ಮತ್ತು ಪ್ರತಿದಿನ ಸಾವಿರಾರು ಜನರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ಹಾವು ಯಾರನ್ನಾದರೂ ಕಚ್ಚಿದ್ದರೆ, ಆಗ ನೀವು ದೇವಸ್ಥಾನವನ್ನು ದೂರುತ್ತೀರಿ. ಮೂರ್ಖ ಜನರು" ಎಂದು ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಬೈಕ್‌ನಲ್ಲಿ ಜೋಡಿಗಳ ರೊಮ್ಯಾನ್ಸ್; ಹಸಿ-ಬಿಸಿ ವಿಡಿಯೊ ಫುಲ್ ವೈರಲ್
ಮತ್ತೊಬ್ಬರು, "ವ್ಯತ್ಯಾಸವು ದೃಷ್ಟಿಕೋನದಲ್ಲಿದೆ. ಅದೇ ವ್ಯಕ್ತಿ ಬಯಸಿದ್ದರೆ, ಅವನು ಹಾವನ್ನು ಕೊಲ್ಲಬಹುದಿತ್ತು. ಆದರೆ ಅವನು ಹಾಗೆ ಮಾಡಲಿಲ್ಲ. ಬದಲಾಗಿ, ಅವನು ಕೋಲನ್ನು ಬಳಸಿ ದೇವಾಲಯದಿಂದ ನಿಧಾನವಾಗಿ ಹೊರಗೆ ತಳ್ಳಿದನು. ಇದರಿಂದ ಯಾರ ಜೀವಕ್ಕೂ ಹಾನಿಯಾಗಲಿಲ್ಲ, ಹಾನಿ ಮಾಡದೆ ಒಂದು ಮಾರ್ಗವನ್ನು ಕಂಡುಕೊಳ್ಳುವುದು ಪೂಜಿಸುವ ಸಮಾಜವು ಕಲಿಸುವ ಪಾಠ. " ಎಂದಿದ್ದಾರೆ.