ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜ್ಯುವೆಲ್ಲರಿ ಶಾಪ್‌ನಲ್ಲಿ ನೀರೆಂದು ಭಾವಿಸಿ ಆ್ಯಸಿಡ್ ಕುಡಿದ ಶಿಕ್ಷಕಿ: ಬೆಚ್ಚಿಬೀಳಿಸುವ ದೃಶ್ಯ ವೈರಲ್

Viral Video: ಆಭರಣ ಅಂಗಡಿಗೆ ಭೇಟಿ ನೀಡಿದ್ದ ಶಿಕ್ಷಕಿಯೊಬ್ಬರು ನೀರೆಂದು ಭಾವಿಸಿ ಆ್ಯಸಿಡ್ ಕುಡಿದ ಪ್ರಕರಣವೊಂದು ದಾಖಲಾಗಿದ್ದು ದೇಶದ ಜನರನ್ನೇ ಬೆಚ್ಚಿ ಬೀಳಿಸಿದೆ. ಮಹಿಳೆಯೂ ಗಂಭೀರವಾಗಿ ಅಸ್ವಸ್ಥಗೊಂಡಿದ್ದು ಈ ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶುಕ್ರವಾರ ಸಂಜೆ ಹಾಪುರದ ಅರ್ಜುನ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕಿ ತನ್ನ ತಾಯಿಯೊಂದಿಗೆ ಹತ್ತಿರದ ಆಭರಣ ಅಂಗಡಿಗೆ ಭೇಟಿ ನೀಡಿದ್ದಾಗ ಸಂಭವಿಸಿದೆ.

ಆಭರಣ ಅಂಗಡಿಯಲ್ಲಿ ನೀರಿನ ಬದಲಾಗಿ ಆ್ಯಸಿಡ್ ಕುಡಿದ ಮಹಿಳೆ

ಆಭರಣ ಅಂಗಡಿಯಲ್ಲಿ ನೀರಿನ ಬದಲಾಗಿ ಆಸಿಡ್ ಕುಡಿದ ಮಹಿಳೆ -

Profile
Pushpa Kumari Jul 12, 2026 4:01 PM

ಹಾಪುರ್, ಜು.12: ಉತ್ತರ ಪ್ರದೇಶದಲ್ಲಿ ಅಘಾತಕಾರಿ ಘಟನೆಯೊಂದು ಕಂಡು ಬಂದಿದೆ. ಆಭರಣ ಅಂಗಡಿಗೆ ಭೇಟಿ ನೀಡಿದ್ದ ಶಿಕ್ಷಕಿಯೊಬ್ಬರು ನೀರೆಂದು ಭಾವಿಸಿ ಆ್ಯಸಿಡ್ ಕುಡಿದ ಪ್ರಕರಣವೊಂದು ದಾಖಲಾಗಿದ್ದು ದೇಶದ ಜನರನ್ನೇ ಬೆಚ್ಚಿ ಬೀಳಿಸಿದೆ. ಮಹಿಳೆಯೂ ಗಂಭೀರವಾಗಿ ಅಸ್ವಸ್ಥ ಗೊಂಡಿದ್ದು ಈ ಘಟನೆ ದೃಶ್ಯ ಸಿಸಿಟಿವಿಯಲ್ಲಿ (Viral News) ಸೆರೆಯಾಗಿದೆ. ಶುಕ್ರವಾರ ಸಂಜೆ ಹಾಪುರದ ಅರ್ಜುನ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕಿ ತನ್ನ ತಾಯಿಯೊಂದಿಗೆ ಹತ್ತಿರದ ಆಭರಣ ಅಂಗಡಿಗೆ ಭೇಟಿ ನೀಡಿದ್ದಾಗ ಸಂಭವಿಸಿದೆ.

ಚಿನ್ನದ ಅಂಗಡಿಗೆ ಬಂದಿದ್ದ ಶಿಕ್ಷಕಿಯೊಬ್ಬರು ನೀರೆಂದು ಭಾವಿಸಿ ಆ್ಯಸಿಡ್ ಕುಡಿದು ಗಂಭೀರವಾಗಿ ಅಸ್ವಸ್ಥಗೊಂಡಿದ್ದಾರೆ. ಶಿಕ್ಷಕಿ ರಿಯಾ ಎಂಬುವವರು ತಮ್ಮ ತಾಯಿಯೊಂದಿಗೆ ಜ್ಯುವೆಲ್ಲರಿ ಶಾಪ್‌ಗೆಂದು ಬಂದಿದ್ದರು. ಅಲ್ಲಿದ್ದ ಸೀಲ್ ಮಾಡಿದ ಬಿಸ್ಲರಿ ಬಾಟಲಿಯನ್ನು ತಾಯಿ ತನ್ನ ಮಗಳಿಗೆ ನೀಡಿದ್ದಾರೆ. ಶಿಕ್ಷಕಿ ಅದನ್ನು ತೆರೆದು ಕುಡಿದ ಕೆಲವೇ ಸೆಕೆಂಡುಗಳಲ್ಲಿ ಗಂಟಲಿನಲ್ಲಿ ತೀವ್ರ ಉರಿ ಕಾಣಿಸಿಕೊಂಡಿದೆ. ತಕ್ಷಣವೇ ಅವರು ಗಾಬರಿಯಿಂದ ಅಂಗಡಿಯಿಂದ ಹೊರಗೆ ಓಡಿದ್ದಾರೆ. ಇದನ್ನು ಕಂಡು ತಾಯಿ ಮತ್ತು ಅಂಗಡಿ ಮಾಲೀಕ ಏನು ತಿಳಿಯದೆ ಗಾಬರಿಯಿಂದ ಅವರ ಹಿಂದೆ ಓಡಿದ್ದಾರೆ.

ವಿಡಿಯೊ ನೋಡಿ:



ಸ್ಥಳೀಯ ವರದಿಗಳ ಪ್ರಕಾರ, ಶಿಕ್ಷಕಿ ಆಭರಣ ಅಂಗಡಿಗೆ ಭೇಟಿ ನೀಡಿದಾಗ, ಅವಳು ಕುಡಿಯುವ ನೀರು ಕೇಳಿದ್ದಳು. ಅಂಗಡಿ ಮಾಲೀಕರು ತನ್ನ ಅಂಗಡಿಯಲ್ಲಿನ ಸಹಾಯಕರಿಗೆ ಪಕ್ಕದ ಅಂಗಡಿಯಿಂದ ನೀರಿನ ಬಾಟಲಿಯನ್ನು ತರಲು ಹೇಳಿದರು. ನೀರು ಕುಡಿದ ಕೆಲವೇ ಕ್ಷಣಗಳಲ್ಲಿ ಕುಸಿದುಬಿದ್ದಳು.

ಮಳೆಯಿಂದ ಜಲಾವೃತಗೊಂಡ ಮದುವೆ ಮಂಟಪ: ವಧುವನ್ನು ಎತ್ತಿಕೊಂಡು ಹೆಜ್ಜೆಹಾಕಿದ ವರ

ವೈರಲ್ ಆದ ದೃಶ್ಯದಲ್ಲಿ ಶಿಕ್ಷಕಿ ಮತ್ತು ಅವರ ತಾಯಿ ಆಭರಣ ಅಂಗಡಿಯಲ್ಲಿ ಕುಳಿತಿರುವುದನ್ನು ತೋರಿಸಲಾಗಿದೆ. ಅಂಗಡಿಯಲ್ಲಿದ್ದ ಸೀಲ್ ಮಾಡಿದ ಬಿಸ್ಲರಿ ಬಾಟಲಿಯನ್ನು ತಾಯಿ ತನ್ನ ಮಗಳಿಗೆ ನೀಡಿದ್ದಾರೆ. ಶಿಕ್ಷಕಿ ಅದನ್ನು ತೆರೆದು ಕುಡಿದ ಕೆಲವೇ ಸೆಕೆಂಡುಗಳಲ್ಲಿ ಗಂಟಲಿನಲ್ಲಿ ಉರಿಯೂತ ಕಂಡು ಬಂದಿದ್ದು ಅವಳು ಅಂಗಡಿಯಿಂದ ಇದ್ದಕ್ಕಿದ್ದಂತೆ ಹೊರಗೆ ಓಡಿ ಹೋಗಿದ್ದಾಳೆ.

​ಘಟನೆಯ ನಂತರ ಶಿಕ್ಷಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯದ ಮಾಹಿತಿ ಪ್ರಕಾರ, ಶಿಕ್ಷಕಿ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದು, ಜನರು ಈ ವಿಷಯದ ಬಗ್ಗೆ ಸರಿಯಾದ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತಿದ್ದಾರೆ. ​ಸಾಮಾನ್ಯವಾಗಿ ಜ್ಯುವೆಲ್ಲರಿ ಶಾಪ್‌ಗಳಲ್ಲಿ ಚಿನ್ನದ ಒಡವೆಗಳನ್ನು ಸ್ವಚ್ಛಗೊಳಿಸಲು ಆ್ಯಸಿಡ್ ಬಳಕೆ ಮಾಡುತ್ತಾರೆ. ಕಂಪನಿಯಿಂದಲೇ ಬಂದ ನೀರಿನ ಬಾಟಲಿಯಲ್ಲಿ ಆಸಿಡ್ ಇತ್ತೇ ಅಥವಾ ಅಂಗಡಿಯಲ್ಲಿದ್ದ ಆ್ಯಸಿಡ್ ಬಾಟಲಿ ಬದಲಾಯಿತೇ ಎಂಬ ಗೊಂದಲ ಏರ್ಪಟ್ಟಿದೆ.

ಈಗಾಗಲೇ ಪೊಲೀಸರು ಜ್ಯುವೆಲ್ಲರಿ ಶಾಪ್ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಂಗಡಿಯ ಮಾಲೀಕರನ್ನು ನಿರ್ಲಕ್ಷ್ಯಕ್ಕಾಗಿ ಬಂಧಿಸಬೇಕು ಎನ್ನುವ ಆಗ್ರಹ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬಂದಿದೆ.