ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹಾವು ಕಚ್ಚಿ ಮಹಿಳೆ ಸಾವು; ದಿಂಬಿನಡಿಯಲ್ಲಿತ್ತು ವಿಷ ಸರ್ಪ! ವೈರಲ್‌ ವಿಡಿಯೊ ಇಲ್ಲಿದೆ

ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಹಾವು ಕಚ್ಚಿ ಸೋಫಿಯಾ ಎಂಬ 26 ವರ್ಷದ ಮಹಿಳೆ ಸಾವನಪ್ಪಿದ್ದಾಳೆ. ರಾತ್ರಿ ಮಲಗಿದ್ದಾಗ 3 ಗಂಟೆ ಸುಮಾರಿಗೆ ದಿಂಬಿನ ಅಡಿಯಲ್ಲಿ ಅವಿತಿದ್ದ ವಿಷಪೂರಿತ ಹಾವು ಕಚ್ಚಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಆಕೆ ಬದುಕುಳಿಯಲಿಲ್ಲ. ಈ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿ ಜನರನ್ನು ಬೆಚ್ಚಿಬೀಳಿಸಿದೆ.

ಮಹಿಳೆಯ ಜೀವ ತೆಗೆದ ದಿಂಬು; ಏನಿದು ವೈರಲ್‌ ಸ್ಟೋರಿ!

Profile pavithra Jul 17, 2025 3:09 PM

ಲಖನೌ: ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ವಿಷಪೂರಿತ ಹಾವು ಕಚ್ಚಿ ಮಹಿಳೆಯೊಬ್ಬಳು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಮಹಿಳೆ ರಾತ್ರಿ ಮಲಗಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ್ರೂ ಆಕೆಯ ಜೀವ ಉಳಿಸಲು ಆಗಲಿಲ್ಲ. ಈ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿ ಜನರನ್ನು ಬೆಚ್ಚಿಬೀಳಿಸಿದೆ.

ಬೌಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬ್ವಾ ತಿತಾರ್ಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸೋಫಿಯಾ (26) ಹಾವು ಕಚ್ಚಿ ಸತ್ತ ನತದೃಷ್ಟ ಮಹಿಳೆ. ಬುಧವಾರ(ಜುಲೈ 16) ರಾತ್ರಿ ಮಲಗಿದ್ದಾಗ 3 ಗಂಟೆ ಸುಮಾರಿಗೆ ಸೋಫಿಯಾ ಅವಳಿಗೆ ಮನೆಯಲ್ಲಿ ಹಾವು ಕಚ್ಚಿದೆ. ಹಾವು ಕಚ್ಚಿದ ನಂತರ ಅವಳು ಭಯ ಮತ್ತು ನೋವಿನಿಂದ ಕಿರುಚಲು ಶುರುಮಾಡಿದ್ದಾಳೆ. ಅವಳ ಕೂಗು ಕೇಳಿ ಕುಟುಂಬ ಸದಸ್ಯರು ಅವಳ ಕೋಣೆಗೆ ಓಡಿಬಂದು ನೋಡಿದಾಗ ಹಾವು ಅವಳ ದಿಂಬಿನ ಕೆಳಗೆ ಅಡಗಿರುವುದನ್ನು ಕಂಡು ಶಾಕ್ ಆಗಿದ್ದಾರೆ.



ನಂತರ ಅವಳನ್ನು ಹಾವಿನ ಜೊತೆಗೆ ಬಹ್ರೈಚ್ ವೈದ್ಯಕೀಯ ಕಾಲೇಜಿಗೆ ಸೇರಿಸಿದ್ದಾರೆ. ವೈದ್ಯರು ಸೋಫಿಯಾಗೆ ಆರಂಭಿಕ ಚಿಕಿತ್ಸೆ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋಗೆ ಕಳುಹಿಸಿದ್ದಾಗ ಮಾರ್ಗಮಧ್ಯೆ ಆಕೆ ಸಾವನ್ನಪ್ಪಿದ್ದಾಳೆ. ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಮಹಿಳೆ ಹಾವು ಕಚ್ಚಿ ಸತ್ತಿದ್ದು ಇದೇ ಮೊದಲಲ್ಲ. ಇತ್ತೀಚೆಗಷ್ಟೇ ಕೈಸರ್‌ಗಂಜ್ ಪ್ರದೇಶದ ಸಖೌಟಾ ಗ್ರಾಮದ ನಿವಾಸಿ ರಮೇಶ್ ಎಂಬಾತನ ಪತ್ನಿ 40 ವರ್ಷದ ಕಲಾವತಿ ಹಾವು ಕಚ್ಚಿ ಸಾವನ್ನಪ್ಪಿದಳು. ಕಲಾವತಿ ತನ್ನ ಹೊಲದಲ್ಲಿ ಭತ್ತ ನಾಟಿ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಈ ಸುದ್ದಿಯನ್ನೂ ಓದಿ:Viral Video: ದೇವಾಲಯದಲ್ಲಿ ಕಾಣಿಸಿಕೊಂಡ ಬೃಹತ್‌ ಸರ್ಪವನ್ನು ಚಿಕ್ಕ ಕೋಲು ಹಿಡಿದು ಹೊರದಬ್ಬಿದ ವೃದ್ಧ; ಭಾರೀ ವೈರಲ್‌ ಆಗ್ತಿದೆ ಈ ವಿಡಿಯೊ

ಗ್ರಾಮಸ್ಥರ ಪ್ರಕಾರ, ಕಲಾವತಿ ತನ್ನ ಹೊಲದಲ್ಲಿ ಭತ್ತವನ್ನು ನೆಡುತ್ತಿದ್ದಾಗ ವಿಷಪೂರಿತ ಹಾವು ಕಚ್ಚಿತು. ಕುಟುಂಬವು ಅವಳನ್ನು ತಕ್ಷಣ ಕೈಸರ್‌ಗಂಜ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿತು. ಆದರೆ ವೈದ್ಯರ ಅವಿರತ ಪ್ರಯತ್ನಗಳ ಹೊರತಾಗಿಯೂ, ಅವಳ ಜೀವವನ್ನು ಉಳಿಸಲಾಗಲಿಲ್ಲ. ಸ್ವಲ್ಪ ಸಮಯದವರೆಗೆ ಅವಳಿಗೆ ಚಿಕಿತ್ಸೆ ನೀಡಿದ ನಂತರ, ವೈದ್ಯರು ಅವಳು ಸತ್ತಿದ್ದಾಳೆಂದು ಘೋಷಿಸಿದ್ದಾರೆ.