Viral Video: ಇವ್ನೇ ನಿಜವಾದ ಹೀರೋ! ನೀರಿಗೆ ಬಿದ್ದ ಮಗಳ ಜೀವ ಉಳಿಸಲು ತಂದೆ ಮಾಡಿದ್ದೇನು ಗೊತ್ತಾ?
ಇತ್ತೀಚೆಗೆ 14 ಡೆಕ್‌ಗಳ ಡಿಸ್ನಿ ಡ್ರೀಮ್ ಫೋರ್‍ನೈಟ್ ಬಹಾಮಿಯನ್ ಕ್ರೂಸ್‌ನಿಂದ ಫೋರ್ಟ್ ಲಾಡರ್‌ಡೇಲ್‌ಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಬಾಲಕಿಯೊಬ್ಬಳು ಆಯತಪ್ಪಿ ನೀರಿಗೆ ಬಿದ್ದಿದ್ದಾಳೆ. ಆದರೆ ತಕ್ಷಣ ಆಕೆಯ ತಂದೆ ನೀರಿಗೆ ಧುಮುಕಿ ಮಗಳನ್ನು ರಕ್ಷಿಸಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಎಲ್ಲರ ಗಮನ ಸೆಳೆದಿದೆ.


ತಂದೆಯಾದವನು ತನ್ನ ಮಕ್ಕಳಿಗಾಗಿ ಯಾವ ತ್ಯಾಗಕ್ಕೂ ಮುಂದಾಗುತ್ತಾನೆ. ಅದಕ್ಕೆ ನಿದರ್ಶನ ಎಂಬಂತೆ ಇತ್ತೀಚೆಗೆ ನಡೆದ ಘಟನೆಯೇ ಸಾಕ್ಷಿ! ತಂದೆಯೊಬ್ಬ 14 ಡೆಕ್‌ಗಳ ಡಿಸ್ನಿ ಕ್ರೂಸ್‌ನ ಹಡಗಿನಿಂದ ಬಿದ್ದ ತನ್ನ ಮಗಳಿಗಾಗಿ ತನ್ನ ಪ್ರಾಣವನ್ನು ಲೆಕ್ಕಿಸದೆ ಸಾಗರಕ್ಕೆ ಧುಮುಕಿ ಆಕೆಯ ಜೀವವನ್ನು ಉಳಿಸಿದ್ದಾನೆ. ಹಡಗಿನಲ್ಲಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯವನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಈಗ ವೈರಲ್(Viral Video) ಆಗಿದೆ.
ವರದಿಯ ಪ್ರಕಾರ, ಡೆಕ್ 4 ರಲ್ಲಿ ಬಾಲಕಿಯ ತಂದೆ ಆಕೆಯ ಫೋಟೋ ತೆಗೆಯುತ್ತಿದ್ದಾಗ ಆ ವೇಳೆ ಆಕೆ ಆಯತಪ್ಪಿ ವಾಕಿಂಗ್ ಟ್ರ್ಯಾಕ್‍ನಿಂದ ಬಿದ್ದಿದ್ದಾಳೆ. ವೈರಲ್ ಆದ ವಿಡಿಯೊದಲ್ಲಿ ಆ ವ್ಯಕ್ತಿ ಅಟ್ಲಾಂಟಿಕ್ ಸಾಗರದಲ್ಲಿ ಈಜುತ್ತಿರುವಾಗ ರೆಸ್ಕ್ಯೂ ಬೋಟ್ ಅವರ ಬಳಿಗೆ ಬಂದಿದೆ. ನಂತರ ಅದರ ಸಿಬ್ಬಂದಿಗಳು ಅವನನ್ನು ಮತ್ತು ಅವನ ಮಗಳನ್ನು ಸುರಕ್ಷಿತವಾಗಿ ಎಳೆದು ಬೋಟಿನೊಳಗೆ ಕರೆತಂದಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವಾರು ನೆಟ್ಟಿಗರು ಆ ವ್ಯಕ್ತಿಯನ್ನು ಹೊಗಳಿದ್ದಾರೆ. "ಮಕ್ಕಳು ಅಪಾಯದಲ್ಲಿದ್ದಾಗ ಪೋಷಕರು ತಮ್ಮ ಜೀವದ ಹಂಗನ್ನು ತೊರೆದು ಮಕ್ಕಳಿಗಾಗಿ ಹೋರಾಡುತ್ತಾರೆ " ಎಂದು ಒಬ್ಬರು ಬರೆದಿದ್ದಾರೆ.
ಮಗಳನ್ನು ರಕ್ಷಿಸಲು ಹೋದ ಅಪ್ಪ ನೀರುಪಾಲು!
ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಶೆಟ್ಟಿಹಳ್ಳಿಯಲ್ಲಿ ಘಟನೆ ನಡೆದಿದೆ. ಕೆರೆಯಲ್ಲಿ ಕೈ ಕಾಲು ತೊಳೆಯಲು ಹೋದ ಮಗಳು, ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ಈ ವೇಳೆ ರಕ್ಷಿಸಲು ತಂದೆ ನೀರಿಗೆ ಇಳಿದಿದ್ದು, ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಶಾಲೆಗೆ ರಜೆ ಇದ್ದ ಕಾರಣ ನಾಗೇಶ್, ಮಗಳನ್ನು ಕರೆದುಕೊಂಡು ತೋಟಕ್ಕೆ ಹೋಗಿದ್ದರು. ಸಂಜೆ ವಾಪಸ್ ಬರುವಾಗ ದಾರಿ ಸಮೀಪವಿದ್ದ ಕೆರೆಯಲ್ಲಿ ಕೈ ಕಾಲು ತೊಳೆಯಲು ಧನುಶ್ರೀ ನೀರಿಗೆ ಇಳಿದಿದ್ದು, ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ತಕ್ಷಣ ಮಗಳನ್ನು ರಕ್ಷಿಸಲು ನೀರಿಗೆ ಇಳಿದ ತಂದೆ ಕೂಡ ಆಯತಪ್ಪಿ ಮಗಳೊಂದಿಗೆ ನೀರು ಪಾಲಾಗಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಭೂಕಂಪದಿಂದ ಎಲ್ಲರೂ ಮನೆಬಿಟ್ಟು ಓಡುತ್ತಿದ್ದರೆ, ಈ ಹುಡುಗ ಮಾತ್ರ ತಿನ್ನುವುದರಲ್ಲಿ ಬ್ಯುಸಿ!
ಮಗುವನ್ನು ಸಿಂಹದ ಬಳಿ ನಿಲ್ಲಿಸಿದ ಅಪ್ಪ!
ತಂದೆಯೊಬ್ಬ ತನ್ನ ಮಗನನ್ನು ಸಿಂಹದ ಹತ್ತಿರ ನಿಲ್ಲಿಸಿ ಫೋಟೊ ತೆಗೆಯುವುದಕ್ಕೆ ಪ್ರಯತ್ನಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ತಂದೆಯೊಬ್ಬ ತನ್ನ ಮಗುವನ್ನು ದೊಡ್ಡ ಸಿಂಹದ ಬಳಿ ನಿಲ್ಲಿಸಿ ಫೋಟೊ ತೆಗೆಯುವುದಕ್ಕೆ ಪ್ರಯತ್ನಿಸಿದ್ದಾನೆ. ಆದರೆ ಆ ಮಗು ಸಿಂಹವನ್ನು ಕಂಡು ಹೆದರಿ ಜೋರಾಗಿ ಕೂಗಿದೆ. ಇದು ಸಿಂಹಕ್ಕೂ ಕೂಡ ಕಿರಿಕಿರಿಯಾಗಿದೆ. ಅಪ್ಪನ ಈ ಕೃತ್ಯ ಕಂಡು ನೆಟ್ಟಿಗರು ಕಿಡಿಕಾರಿದ್ದಾರೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.