ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಬ್ಬರು ಗಂಡಂದಿರ ಮುದ್ದಿನ ಹೆಂಡ್ತಿ; ಅನುಮಾನವೇ ಬಾರದಂತೆ ಒಂದು ವರ್ಷ ಸಂಸಾರ ಮಾಡಿದ ಮಹಿಳೆ, ಕೊನೆಗೆ ಬಹಿರಂಗವಾಗಿದ್ದು ಹೇಗೆ ಗೊತ್ತಾ?

Wife of Two Husbands: ಮಲೇಷ್ಯಾದ ಮಹಿಳೆಯೊಬ್ಬಳು ಇಬ್ಬರು ಗಂಡಂದಿರೊಂದಿಗೆ ಒಂದು ವರ್ಷ ಗುಟ್ಟಾಗಿ ಸಂಸಾರ ನಡೆಸಿದ್ದಾಳೆ. ಕೊನೆಗೆ ಈ ಗುಟ್ಟು ಅತ್ತಿಗೆಯಿಂದ ರಟ್ಟಾಗಿದೆ. ಈ ಸತ್ಯವನ್ನು ಮಹಿಳೆಯ ಮೊದಲನೇ ಪತಿಯ ಸಹೋದರಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಸುದ್ದಿ ಓದಿದ ಜನರು ಅವಕ್ಕಾಗಿದ್ದಾರೆ.

ಇಬ್ಬರು ಗಂಡಂದಿರ ಮುದ್ದಿನ ಹೆಂಡ್ತಿ; ವಿಚಿತ್ರ ಸಂಸಾರದ ರೋಚಕ ಕಥೆ ಇಲ್ಲಿದೆ

ಇಬ್ಬರು ಗಂಡಂದಿರೊಂದಿಗೆ 1 ವರ್ಷ ಸಂಸಾರ ಮಾಡಿದ ಮಹಿಳೆ -

Priyanka P
Priyanka P Dec 14, 2025 10:01 PM

ಬ್ಯಾಂಕಾಕ್: ʼಇಬ್ಬರು ಹೆಂಡ್ತಿರ ಮುದ್ದಿನ ಗಂಡʼ ಎಂಬ ಕನ್ನಡದ ಚಲನಚಿತ್ರವನ್ನು ನೋಡಿರುತ್ತೀರಿ. ಹಾಗೆಯೇ ಇಲ್ಲೊಬ್ಬಳು ಇಬ್ಬರು ಪುರುಷರನ್ನು ಗುಪ್ತವಾಗಿ ಮದುವೆಯಾಗಿ ಸಂಸಾರ ನಡೆಸುತ್ತಿದ್ದಳು. ಒಂದು ವರ್ಷದವರೆಗೆ ಯಾವುದೇ ಅನುಮಾನ ಬಾರದಂತೆ ಇಬ್ಬರೊಂದಿಗೆ ಸಂಸಾರ ನಡೆಸಿದ್ದು ಮಾತ್ರ ವಿಚಿತ್ರವಾಗಿದೆ. ಮಲೇಷ್ಯಾದ ಮಹಿಳೆಯೊಬ್ಬಳು ಥಾಯ್ಲೆಂಡ್‍ನಲ್ಲಿ (Thailand) ನೆಲೆಸಿದ್ದು, ಇಬ್ಬರು ಗಂಡಂದಿರನ್ನು ಹೊಂದಿದ್ದಾಳೆ. ಒಬ್ಬಾತ ಡೇ ಶಿಫ್ಟ್ ಕೆಲಸ ಮಾಡುತ್ತಿದ್ದರೆ, ಇನ್ನೊಬ್ಬ ನೈಟ್ ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಈ ಪ್ರಕರಣ ಬೆಳಕಿಗೆ ಬಂದಿರಲಿಲ್ಲ (viral news).

ಒಂದು ವರ್ಷದ ಬಳಿಕ ಪತ್ನಿಗೆ ಇಬ್ಬರು ಗಂಡಂದಿರು ಎಂಬ ವಿಚಾರ ಬಯಲಾಗಿದ್ದೇ ರೋಚಕ. ಮೊದಲ ಗಂಡನ ಸಹೋದರಿಗೆ ಈ ವಿಚಾರ ಗೊತ್ತಾಗಿದೆ. ಎರಡನೇ ಗಂಡನ ಜತೆ ವಿವಾಹವಾದ ರಿಜಿಸ್ಟ್ರೇಷನ್ ಪೇಪರ್ ಅನ್ನು ಸಹೋದರಿ ನೋಡಿ ಶಾಕ್ ಆಗಿದ್ದಾಳೆ. ಇದನ್ನು ಆಕೆ ತನ್ನ ಸಹೋದರನಿಗೆ ತೋರಿಸಿದ್ದಾಳೆ. ವಿವಾಹ ನೋಂದಣಿ ಪತ್ರವನ್ನು ನೋಡಿದ ಮೊದಲನೇ ಗಂಡ ಕೂಡ ಶಾಕ್ ಆಗಿದ್ದಾನೆ. ತಾನು ಒಂದು ವರ್ಷದಿಂದ ಸಂಸಾರ ನಡೆಸುತ್ತಿದ್ದು, ತನಗೆ ಏನೂ ಗೊತ್ತಾಗಲೇ ಇಲ್ಲವಲ್ಲ ಎಂದು ಅವಕ್ಕಾಗಿದ್ದಾನೆ. ತಾನು ಮತ್ತೊಬ್ಬನ ಜತೆ ಹೆಂಡತಿಯನ್ನು ಮತ್ತೊಬ್ಬನೊಂದಿಗೆ ಶೇರ್ ಮಾಡಿದ್ದೇನೆಂದು ತಿಳಿದು ಆಘಾತಗೊಂಡಿದ್ದಾನೆ.

ಗರ್ಲ್‌ಫ್ರೆಂಡ್‌ ಪೋಷಕರನ್ನು ಮೆಚ್ಚಿಸಲು ಹೋಗಿ ಪ್ರಾಣವನ್ನೇ ಬಿಟ್ಟ ಯುವಕ

ಮೊದಲನೇ ಗಂಡನ ಸಹೋದರಿ ಎಕಿನ್ ಹೇಳಿದ ಪ್ರಕಾರ, ಮಹಿಳೆ ಬಹಳ ಚಾಲಾಕಿಯಾಗಿದ್ದಳು ಎಂದು ಹೇಳಿದ್ದಾಳೆ. ಮೊದಲ ಗಂಡ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ, ಇನ್ನೊಬ್ಬಾತ ತನ್ನ ಮನೆಯಲ್ಲಿ ವಾಸಿಸುತ್ತಿದ್ದ. ಮೊದಲ ಗಂಡ ಡೇ ಶಿಫ್ಟ್ ಕೆಲಸ ಮಾಡುತ್ತಿದ್ದ. ಹೀಗಾಗಿ ಆಕೆ ರಾತ್ರಿ ಅವನೊಂದಿಗೆ ಕಾಲ ಕಳೆಯುತ್ತಿದ್ದಳು. ಮತ್ತೊಬ್ಬ ಗಂಡ ನೈಟ್ ಶಿಫ್ಟ್ ಕೆಲಸ ಮಾಡುತ್ತಿದ್ದ. ಬೆಳಗಾಗುತ್ತಲೇ ಆಕೆ ಎರಡನೇ ಗಂಡ ಮನೆಗೆ ಹೋಗುತ್ತಿದ್ದಳು. ಹೀಗಾಗಿ ಗಂಡಂದಿರಿಗೆ ಈ ಸಂಶಯವೇ ಬಂದಿರಲಿಲ್ಲ.

ಈ ಕಥೆಯನ್ನು ಮೊದಲನೇ ಪತಿಯ ಸಹೋದರಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾಳೆ. ಆದರೆ ಸಿಟ್ಟಿಗೆದ್ದ ಮಹಿಳೆಯು ತನ್ನ ಅತ್ತಿಗೆ (ಗಂಡನ ಸಹೋದರಿ)ಯ ವಿರುದ್ಧ ಪೊಲೀಸ್ ದೂರು ನೀಡಿದ್ದಾಳೆ. ತನ್ನ ಕುಟುಂಬಕ್ಕೆ ಆಕೆ ತುಂಬಾ ತೊಂದರೆ ಕೊಟ್ಟಿದ್ದಾಳೆ ಎಂದು ಆರೋಪಿಸಿ ಅತ್ತಿಗೆಯ ವಿರುದ್ಧ ನಾದಿನಿ ದೂರು ನೀಡಿದ್ದಾಳೆ. ಪ್ರಸ್ತುತ ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಗೆ ಕೈಕೊಟ್ಟು ಬೇರೊಬ್ಬಳ ಜತೆ ಮದುವೆಯಾಗುತ್ತಿದ್ದ ಯುವಕನ ಮದುವೆ ಮಂಟಪಕ್ಕೆ ಬಂದು ಗಲಾಟೆ ನಡೆಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಈ ಘಟನೆ ಡಿಸೆಂಬರ್ 13ರಂದು ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಮೂಲದ ಶರತ್ ಎಂಬ ಯುವಕ ಹಾಸನ ಜಿಲ್ಲೆಯ ಬೇಲೂರು ತಾಲೂಕದ ಯುವತಿಯನ್ನು ಕಳೆದ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಯುವತಿಗೆ ಕೈಕೊಟ್ಟು ಮತ್ತೊಬ್ಬ ಯುವತಿಯೊಂದಿಗೆ ಹಸೆಮಣೆ ಏರಿದ್ದಾನೆ. ಇದರಿಂದ ನೊಂದ ಯುವತಿ ಮದುವೆ ಮಂಟಪಕ್ಕೆ ಬಂದು ಗಲಾಟೆ ಮಾಡಿದ್ದಾಳೆ.