ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪ್ರತಿದಿನ ಬೆಳಗ್ಗೆ ಸ್ವಚ್ಛತಾ ಕಾರ್ಮಿಕರಿಗೆ ಚಹಾ ಹಂಚುವ ಮಹಿಳೆ; ಇದೇ ನನ್ನ ಭಾರತ ಎಂದು ಕೊಂಡಾಡಿದ ನೆಟ್ಟಿಗರು

Woman serves tea: ಪ್ರತಿದಿನ ಬೆಳಗ್ಗೆ ತನ್ನ ಮನೆಯಿಂದ ಹೊರಬಂದು, ಸ್ವಚ್ಛತಾ ಕೆಲಸಗಾರರಿಗೆ ಚಹಾ ಹಂಚುವ ಮಹಿಳೆಯೊಬ್ಬರ ವಿಡಿಯೊ ಇದೀಗ ಜನರ ಮನಸ್ಸನ್ನು ಗೆದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೊ ಜನರನ್ನು ದಯೆಯ ಮೌಲ್ಯವನ್ನು ನೆನಪಿಗೆ ತರುವಂತೆ ಮಾಡುತ್ತಿದೆ. ಇದೇ ನನ್ನ ಭಾರತ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.

ಪ್ರತಿದಿನ ಸ್ವಚ್ಛತಾ ಕಾರ್ಮಿಕರಿಗೆ ಚಹಾ ಹಂಚುವ ಮಹಿಳೆ; ವಿಡಿಯೊ ವೈರಲ್

ಸ್ವಚ್ಛತಾ ಕಾರ್ಮಿಕರಿಗೆ ಚಹಾ ನೀಡುವ ಮಹಿಳೆ -

Priyanka P
Priyanka P Dec 14, 2025 3:49 PM

ನವದೆಹಲಿ, ಡಿ. 14: ಎಲ್ಲ ಹೀರೋಗಳು ಸಮವಸ್ತ್ರ ಧರಿಸುವುದಿಲ್ಲ ಅಥವಾ ಫಲಕಗಳನ್ನು ಹಿಡಿದುಕೊಂಡು ಹೋಗುವುದಿಲ್ಲ. ಕರುಣಾಮಯಿಗಳು, ದಯೆಯುಳ್ಳವರು ನಮ್ಮಲ್ಲಿದ್ದಾರೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೊ (Viral Video) ದಿನನಿತ್ಯದ ಸಣ್ಣ ಕಾರ್ಯಗಳಲ್ಲೂ ಮಾನವೀಯತೆ ಇದೆ ಎನ್ನುವುದನು ಸಾರಿ ಹೇಳಿದೆ. ಮಹಿಳೆಯೊಬ್ಬರ ಮಾನವೀಯತೆಯ ಕಾರ್ಯದ ವಿಡಿಯೊ ನೋಡಿ ನೆಟ್ಟಿಗರು ಕೊಂಡಾಡಿದ್ದಾರೆ.

ಮಹಿಳೆಯೊಬ್ಬಳು ಸರಳವಾದ, ಎಲ್ಲರಿಗೂ ಮಾದರಿಯಾಗಬಲ್ಲ ಬೆಳಗ್ಗಿನ ದಿನಚರಿಯನ್ನು ಅನುಸರಿಸುತ್ತಿರುವುದನ್ನು ವಿಡಿಯೊದಲ್ಲಿ ತೋರಿಸಲಾಗಿದೆ. ಅದು ಈಗ ಲಕ್ಷಾಂತರ ಜನರನ್ನು ತಲುಪಿದೆ. ಪ್ರತಿದಿನ ಬೆಳಗ್ಗೆ 7:15ರ ಸುಮಾರಿಗೆ, ಕಸ ಸಂಗ್ರಹಿಸುವ ಟ್ರಕ್‌ಗಳು ಮನೆಯ ಸಮೀಪದಲ್ಲಿ ಹಾದುಹೋಗುವಾಗ, ಅವರು ಆಗಷ್ಟೇ ತಯಾರಿಸಿದ ಚಹಾ ಪಾತ್ರೆಯೊಂದಿಗೆ ಮನೆಯ ಹೊರಗೆ ಹೆಜ್ಜೆ ಹಾಕುತ್ತಾರೆ.

ಒಂದೇ ಬೈಕ್‍ನಲ್ಲಿ 6 ಮಂದಿಯ ಸವಾರಿ; ಕ್ಯಾಮರಾ ನೋಡಿ ಏನು ಮಾಡಿದ್ರು ಗೊತ್ತಾ?

ಕಸ ಸಂಗ್ರಹಿಸುವ ಕಾರ್ಮಿಕರು ಟ್ರಕ್ ಮೇಲೆ ನಿಂತು ತಮ್ಮ ಕೆಲಸದಲ್ಲಿ ನಿರತರಾಗಿದ್ದರೆ, ಮಹಿಳೆ ಬಂದು ಅವರಿಗೆ ಒಂದು ಕಪ್ ಚಹಾ ನೀಡುತ್ತಾರೆ. ಒಂದೆರಡು ಮಾತನಾಡಿ ಅವರಿಗೆ ಚಹಾ ಕೊಡುತ್ತಾರೆ. ಇದನ್ನು ಅವರು ಪ್ರತಿನಿತ್ಯ ಚಾಚೂ ತಪ್ಪದೆ ಮಾಡುತ್ತಿದ್ದಾರೆ. ಸದ್ಯ ಈ ವಿಡಿಯೊ ನೋಡಿ ಹಲವರು ಮಹಿಳೆಯ ಸರಳತೆಗೆ, ಮಾನವೀಯತೆಗೆ ಜೈ ಎಂದಿದ್ದಾರೆ.

ʼʼಮಹಿಳೆಯೊಬ್ಬರು ಬೆಳಗ್ಗೆ 7:15ಕ್ಕೆ ನೈರ್ಮಲ್ಯ ಕಾರ್ಮಿಕರಿಗೆ ಚಹಾ ನೀಡಲು ಬರುತ್ತಾರೆ. ಈ ಸಣ್ಣ ಕಾರ್ಯವು ಅವರ ದಿನವನ್ನು ಸುಂದರವಾಗಿಸುತ್ತದೆ. ನಮ್ಮ ನಗರಕ್ಕಾಗಿ ಶ್ರಮಿಸುತ್ತಿರುವ ಕಾರ್ಮಿಕರಿಗೆ ಸಣ್ಣ ಕರುಣೆಯ ಇಂತಹ ಕಾರ್ಯಗಳು ಸಹ ಬಹಳಷ್ಟು ಅರ್ಥವನ್ನು ನೀಡುತ್ತವೆ ಎಂಬುದನ್ನು ಇದು ನಮಗೆ ನೆನಪಿಸುತ್ತದೆʼʼ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

ವಿಡಿಯೊ ವೀಕ್ಷಿಸಿ:



ಈ ವಿಡಿಯೊ ವೈರಲ್ ಆಗುತ್ತಿದ್ದಂತೆ, ಅನೇಕ ಬಳಕೆದಾರರು ತಾವು ಕೂಡ ತಮ್ಮ ದೈನಂದಿನ ಜೀವನದಲ್ಲಿ ಇದೇ ರೀತಿ ಮಾಡುತ್ತಿರುವುದಾಗಿ ಹೇಳಿದರು. ನಾವು ಕಸ ಗುಡಿಸುವವರಿಗೆ ಚಹಾ ನೀಡುತ್ತೇವೆ. ಹೆಚ್ಚಿನ ಭಾರತೀಯರು ಇದನ್ನು ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದರೆ ನಾವು ಎಲ್ಲವನ್ನೂ ರೆಕಾರ್ಡ್ ಮಾಡುವ ಅಗತ್ಯವಿಲ್ಲ ಎಂದು ಬರೆದಿದ್ದಾರೆ.

ಮತ್ತೊಬ್ಬರು ಆ ಮಹಿಳೆಯ ದಯೆಯನ್ನು ಶ್ಲಾಘಿಸಿದ್ದಾರೆ. ಜಗತ್ತಿನಲ್ಲಿ ಇನ್ನೂ ನಿಜವಾಗಿಯೂ ಒಳ್ಳೆಯ ಜನರಿದ್ದಾರೆ. ಮಾನವೀಯತೆ ಜೀವಂತವಾಗಿದೆ ಎಂದು ಅನಿಸುತ್ತಿದೆ. ಇದೇ ಭಾರತ ನಾನು ನೋಡಲು ಇಚ್ಛಿಸುವುದು. ಹೆಚ್ಚಿನ ಜನರು ಜಾತಿವಾದದಲ್ಲಿ ತೊಡಗಿದ್ದಾರೆ. ನೈರ್ಮಲ್ಯ ಕಾರ್ಮಿಕರನ್ನು ಮುಟ್ಟುವುದಿಲ್ಲ. ಆದರೆ ಈ ಮಹಿಳೆ ಕರುಣೆ ತೋರಿಸಿದರು ಎಂದು ಒತ್ತಿ ಹೇಳಿದ್ದಾರೆ.

ನೈರ್ಮಲ್ಯ ಕಾರ್ಮಿಕರಿಗೆ ಚಹಾ ನೀಡುವುದರಿಂದ ಈ ಮಹಿಳೆ ಕರುಣಾಮಯಿ ಮತ್ತು ಜಾತಿಯ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ ಎಂದು ತೋರುತ್ತದೆ. ಕಸ ಸಂಗ್ರಹಿಸುವವರು ಬೀದಿಗಳನ್ನು ಸ್ವಚ್ಛವಾಗಿಡುತ್ತಾರೆ ಮತ್ತು ಈ ಮಹಿಳೆಯ ಕುಟುಂಬವನ್ನು ರೋಗಗಳಿಂದ ರಕ್ಷಿಸುತ್ತಾರೆ ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.