ಪುರುಷರೇ ತುಂಬಿದ ರೈಲಿನ ಶೌಚಾಲಯದೊಳಗೆ ಸಿಕ್ಕಿ ಹಾಕಿಕೊಂಡ ಮಹಿಳೆ... ಮುಂದೇನಾಯ್ತು? ವಿಡಿಯೊ ನೋಡಿ
ಪುರುಷರೇ ತುಂಬಿಕೊಂಡಿದ್ದ ರೈಲು ಬೋಗಿಯೊಳಗಿನ ಶೌಚಾಲಯದಲ್ಲಿ ಮಹಿಳೆಯೊಬ್ಬರು ಸಿಕ್ಕಿ ಹಾಕಿಕೊಂಡು ಪರದಾಡಿದ ಘಟನೆ ಬಿಹಾರದ ಕತಿಹಾರ್ ನಲ್ಲಿ ನಡೆದಿದೆ. ಕೊನೆಗೆ ಆಕೆ ಮೊಬೈಲ್ ಮೂಲಕ ವಿಡಿಯೊ ಮಾಡಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. ಇದರಿಂದ ತಕ್ಷಣ ಪೊಲೀಸರು ಆಕೆಯ ರಕ್ಷಣೆಗೆ ಧಾವಿಸಿದರು.
(ಸಂಗ್ರಹ ಚಿತ್ರ) -
ಬಿಹಾರ: ಒಂಟಿ ಮಹಿಳೆ ಪ್ರಯಾಣಿಸುತ್ತಿದ್ದ ರೈಲು (bihar train) ಬೋಗಿಯೊಳಗೆ ಏಕಕಾಲಕ್ಕೆ 30ರಿಂದ 40 ಪುರುಷರು ಬಂದಿದ್ದು ಇದರಿಂದ ಗಾಬರಿಯಾದ ಮಹಿಳೆ ರೈಲಿನ ಶೌಚಾಲಯದೊಳಗೆ (train toilet) ಪ್ರವೇಶಿಸಿ ಸಿಕ್ಕಿ ಹಾಕಿಕೊಂಡ ಘಟನೆ ಬಿಹಾರದಲ್ಲಿ (Bihar) ನಡೆದಿದೆ. ತಾನು ಗಾಬರಿಯಾಗಿರುವ ಕುರಿತು ವಿಡಿಯೊ (Viral video) ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಟ್ಟಿದ್ದಾಳೆ. ಇದು ವೈರಲ್ ಆಗಿದ್ದು, ಮಾಹಿತಿ ತಿಳಿದ ಕೂಡಲೇ ರೈಲು ಅಧಿಕಾರಿಗಳು ಆಕೆಯ ರಕ್ಷಣೆಗೆ ಧಾವಿಸಿದರು. ಈ ಘಟನೆ ಬಿಹಾರದ ಕತಿಹಾರ್ (katihar junction) ನಲ್ಲಿ ನಡೆದಿದೆ.
ಬಿಹಾರದ ಕತಿಹಾರ್ ಜಂಕ್ಷನ್ ನಿಂದ ಒಂಟಿಯಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಇದ್ದ ಬೋಗಿಯೊಳಗೆ 30ರಿಂದ 40 ಪುರುಷರು ಏಕಾಏಕಿ ಪ್ರವೇಶಿಸಿದ್ದಾರೆ. ಇದರಿಂದ ಗಾಬರಿಯಾದ ಮಹಿಳೆ ಈ ಸ್ಥಳ ತನಗೆ ಅಸುರಕ್ಷಿತವೆಂದು ಭಾವಿಸಿ ರೈಲು ಶೌಚಾಲಯದೊಳಗೆ ಪ್ರವೇಶಿಸಿದ್ದಾರೆ. ಬಳಿಕ ಇದರ ವಿಡಿಯೊ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. ರೈಲ್ವೆ ರಕ್ಷಣಾ ಪಡೆ ಬರುವವರೆಗೂ ಅವರು ಶೌಚಾಲಯದೊಳಗೆ ಇದ್ದರು ಎಂದು ಹೇಳಿದ್ದಾರೆ.
Today I understood why safety concerns during travel feel so real.
— Potato!🚩 (@Avoid_potato) December 10, 2025
I was travelling alone and my train stopped at Katihar Junction(Bihar). Suddenly 30–40 young men rushed into the coach, shouting and pushing each other.
I was in the washroom and couldn’t even step out-people were… pic.twitter.com/2N5KMNgOuh
ವಿಡಿಯೊದಲ್ಲಿ ಏನಿದೆ?
ಮಹಿಳೆ ವಿಡಿಯೊದಲ್ಲಿ ತನ್ನ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ತಾವು ನಿಗದಿತ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ಅಷ್ಟರಲ್ಲಿ ಯುವಕರ ಗುಂಪೊಂದು ಬೋಗಿಯೊಳಗೆ ನುಗ್ಗಿದ್ದು, ಜೋರಾಗಿ ಕೂಗುತ್ತಾ ಮತ್ತು ಪರಸ್ಪರ ತಳ್ಳುತ್ತಾ ಬಂದಿದ್ದಾರೆ. ಇದರಿಂದ ತಮಗೆ ಹೊರ ಹೋಗುವುದು ಅಸಾಧ್ಯವಾಗಿದೆ. ಕೂಡಲೇ ರೈಲು ಶೌಚಾಲಯದೊಳಗೆ ನುಗ್ಗಿದ ಆಕೆ ರೈಲ್ವೆ ಸಹಾಯವಾಣಿ ಸಂಖ್ಯೆ 139 ಕ್ಕೆ ಕರೆ ಮಾಡಿ ಸಹಾಯಕ್ಕಾಗಿ ವರದಿ ಮಾಡಿದರು. ತಕ್ಷಣ ಪ್ರತಿಕ್ರಿಯಿಸಿದ ಆರ್‌ಪಿಎಫ್ ತಂಡ ಬೋಗಿಗೆ ತೆರಳಿ ಜನರನ್ನು ಸರಿಸಿ ಮಹಿಳೆಯನ್ನು ಸುರಕ್ಷಿತವಾಗಿ ಹಿಂದಿರುಗಲು ಸಹಾಯ ಮಾಡಿದರು.
ಈ ಕುರಿತು ಮಹಿಳೆ ಹೇಳಿರುವುದು ಹೀಗೆ.. ಪ್ರಯಾಣದ ಸಮಯದಲ್ಲಿ ಸುರಕ್ಷತೆ ಬಗ್ಗೆ ಕಾಳಜಿ ವಹಿಸುವುದು ಏಕೆ ಮುಖ್ಯವೆಂದು ನನಗೆ ಈಗ ಅರ್ಥವಾಗಿದೆ. ನಾನು ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದೆ. ರೈಲು ಬಿಹಾರದ ಕತಿಹಾರ್ ಜಂಕ್ಷನ್‌ನಲ್ಲಿ ನಾನು ಇಳಿಯಬೇಕಿತ್ತು. ಆದರೆ ಇದ್ದಕ್ಕಿದ್ದಂತೆ 30–40 ಯುವಕರು ಬೋಗಿಗೆ ನುಗ್ಗಿದ್ದು ಒಬ್ಬರನ್ನೊಬ್ಬರು ತಳ್ಳಿದರು. ಇದರಿಂದ ಗಾಬರಿಯಾಗಿ ನಾನು ಶೌಚಾಲಯದ ಒಳಗೆ ಸೇರಿದೆ. ಅಲ್ಲಿಂದ ಹೊರಗೆ ಹೆಜ್ಜೆ ಇಡಲೂ ಸಾಧ್ಯವಾಗಲಿಲ್ಲ. ಅವರೆಲ್ಲ ಬಾಗಿಲಲ್ಲಿ ನಿಂತಿದ್ದರು. ಕೂಡಲೇ ರೈಲ್ವೆ ಸಹಾಯವಾಣಿಗೆ ಕರೆ ಮಾಡಿದೆ. ಅದೃಷ್ಟವಶಾತ್ ಆರ್‌ಪಿಎಫ್ ಬಂದಿತು. ಅವರು ಬಂದು ನನಗೆ ಮರಳಲು ಸಹಾಯ ಮಾಡಿದರು. ಇದೊಂದು ಅತ್ಯಂತ ಭಯಾನಕ ಅನುಭವ ಎಂದು ಹೇಳಿದ್ದಾರೆ.
ಈ ಕುರಿತು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು ಇದು ಭಾರಿ ವೈರಲ್ ಆಗಿದೆ. ರೈಲು ಪ್ರಯಾಣದ ವೇಳೆ ಮಹಿಳೆಯರು ಎದುರಿಸುವ ಸುರಕ್ಷತಾ ಕಾಳಜಿಗಳ ಕುರಿತು ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ತ್ವರಿತವಾಗಿ ರೈಲ್ವೇ ಸಿಬ್ಬಂದಿ ಪ್ರತಿಕ್ರಿಯಿಸಿರುವುದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಕೋಚ್ ಒಳಗೆ ಹಠಾತ್ ಜನಸಂದಣಿಗೆ ಕಾರಣವೇನು ಎಂದು ಪ್ರಶ್ನಿಸಿದ್ದು, ಇದಕ್ಕೆ ರೈಲ್ವೆ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.