ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೋಪು ತಿನ್ನಲು ಹೋದ ಕೋತಿಗೆ ಅಕ್ಕರೆಯ ಆರೈಕೆ: ದೃಶ್ಯ ನೋಡಿ ಫಿದಾ ಆದ ನೆಟ್ಟಿಗರು!

Viral Video: ಸೋಪು ತಿನ್ನಲು ಹೋದ ಕೋತಿಗೆ ಮಹಿಳೆಯೊಬ್ಬರು ಅಕ್ಕರೆ ತೋರಿದ ವಿಡಿಯೊವೊಂದು ವೈರಲ್ ಆಗಿದೆ. ತನ್ನ ಕೈಯಲ್ಲಿ ಆಲೂಗಡ್ಡೆಯನ್ನು ಹಿಡಿದುಕೊಂಡು, ಮಹಿಳೆ ನಿಧಾನವಾಗಿ ಕೋತಿಯ ಬಳಿ ಕಾಳಜಿಯುಳ್ಳ ಸ್ವರದಲ್ಲಿ ಸೋಪು ತಿನ್ನಬಾರದು ಎಂದು ಪ್ರೀತಿ ತೋರಿಸಿದ್ದಾರೆ. ಕೋತಿ ಕೂಡ ಮಹಿಳೆಯ ಮಾತನ್ನು ಅರ್ಥೈಸಿಕೊಂಡಿದೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ..

ಸೋಪು ತಿನ್ನಲು ಹೋದ ಕೋತಿಗೆ ಬುದ್ದಿಮಾತು ಹೇಳಿದ ಮಹಿಳೆ: ಕ್ಯೂಟ್ ವಿಡಿಯೊ!

ಸೋಪು ತಿನ್ನಲು ಹೋದ ಕೋತಿಗೆ ಅಮ್ಮನ ಆರೈಕೆ -

Profile
Pushpa Kumari Apr 9, 2026 4:01 PM

ನವದೆಹಲಿ,ಎ.9: ಕೋತಿಗಳು ತಮ್ಮ ತುಂಟಾಟ ಮತ್ತು ಚೇಷ್ಟೆಗೆ ಪ್ರಸಿದ್ಧಿ ಪಡೆದಿದೆ. ಈ ನಡುವೆ ಸೋಪು ತಿನ್ನಲು ಹೋದ ಕೋತಿಗೆ ಮಹಿಳೆಯೊಬ್ಬರು ಅಕ್ಕರೆ ತೋರಿದ ವಿಡಿಯೊವೊಂದು ವೈರಲ್ (Viral News) ಆಗಿದೆ. ತನ್ನ ಕೈಯಲ್ಲಿ ಆಲೂಗಡ್ಡೆಯನ್ನು ಹಿಡಿದುಕೊಂಡು, ಮಹಿಳೆ ನಿಧಾನವಾಗಿ ಕೋತಿಯ ಬಳಿ ಕಾಳಜಿಯುಳ್ಳ ಸ್ವರದಲ್ಲಿ ಸೋಪು ತಿನ್ನಬಾರದು ಎಂದು ಪ್ರೀತಿ ತೋರಿಸಿದ್ದಾರೆ. ಕೋತಿ ಕೂಡ ಮಹಿಳೆಯ ಮಾತನ್ನು ಅರ್ಥೈಸಿಕೊಂಡಿದೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.

ಡಿಜಿಟಲ್ ಕಂಟೆಟ್ ಕ್ರಿಯೇಟರ್ ಪ್ರೀತಮ್ ಇನ್‌ಸ್ಟಾಗ್ರಾಮ್‌ನಲ್ಲಿ ಈ ಕಿರು ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಪ್ರಾಣಿಗಳಿಗೂ ಪ್ರೀತಿ ಮತ್ತು ಕಾಳಜಿಯ ಭಾಷೆ ಅರ್ಥವಾಗುತ್ತದೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

ವಿಡಿಯೊ ನೋಡಿ:

ಈ ದೃಶ್ಯವು ಸೋಪಿನ ಬಾರ್‌ನಂತೆ ಕಾಣುವ ವಸ್ತುವನ್ನು ಕುತೂಹಲದಿಂದ ಹಿಡಿದಿರುವ ಕೋತಿಯೊಂದಿಗೆ ಪ್ರಾರಂಭವಾಗುತ್ತದೆ, ಅದು ಆಹಾರವೆಂದು ತಪ್ಪಾಗಿ ಭಾವಿಸಿ ತಿನ್ನಲು ಮುಂದಾಗುತ್ತದೆ. ಅಲ್ಲಿ ನಿಂತಿರುವ ವ್ಯಕ್ತಿಯೊಬ್ಬರು ಪ್ರಾಣಿ ಸೋಪು ತಿನ್ನಲು ಹೊರಟಿದೆ ಎಂದು ಸೂಚಿಸುತ್ತಾರೆ. ಆದಾಗ್ಯೂ, ನಂತರ ಏನಾಗುತ್ತದೆ ಎಂಬುದೇ ಈ ವಿಡಿಯೊದ ಪ್ರಮುಖ ಹೈಲೆಟ್ ಆಗಿದೆ.

ಸೋಪು ತಿಂದರೆ ಕೋತಿಯ ಆರೋಗ್ಯಕ್ಕೆ ಹಾನಿಯಾಗಬಹುದು ಎಲ್ಲರೂ ಆತಂಕವನ್ನು ವ್ಯಕ್ತ ಪಡಿಸುತ್ತಾರೆ. ಆಗ ಒಬ್ಬ ಮಹಿಳೆ ಶಾಂತವಾಗಿ ಮುಂದೆ ಹೆಜ್ಜೆ ಹಾಕುತ್ತಾಳೆ. ಆ ತಾಯಿ ತನ್ನ ಮಗುವಿಗೆ ಬುದ್ದಿಮಾತನ್ನು ಹೇಳುವಂತೆ ಕೋತಿಗೆ ಅರ್ಥ ಮಾಡಿಸುತ್ತಾಳೆ. ಅದನ್ನು ತಿನ್ನಬಾರದು ತನ್ನ ಕೈಯಲ್ಲಿದ್ದ ಆಲೂಗಡ್ಡೆಯನ್ನು ತಿನ್ನುವಂತೆ ಸನ್ನೆ ಮಾಡುತ್ತಾಳೆ

Viral Video: ಅವಹೇಳನ ಮೆಟ್ಟಿ ನಿಂತು ಯಶಸ್ಸು ಕಂಡ ಸಿಲೇಂದ್ರನ್ ಅರುಣಗಿರಿ: ಜೀವನದ ಗುಟ್ಟು ಹೇಳಿದ ಐಐಎಂ ಪದವೀಧರ

ಆ ಮಹಿಳೆಯ ಪ್ರೀತಿಗೆ ಮರುಳಾದ ಕೋತಿ, ತಕ್ಷಣವೇ ಸೋಪನ್ನು ಪಕ್ಕಕ್ಕೆ ಎಸೆದು ಆಲೂಗಡ್ಡೆ ಯನ್ನು ಪಡೆದುಕೊಂಡು ಹೋಗಿದೆ. ತಾಯಿಯ ಸಹಾನುಭೂತಿ ಮತ್ತು ಕಾಳಜಿಯು ಪ್ರಾಣಿಗಳಿಗೂ ಅರ್ಥವಾಗುತ್ತದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ."ಮಾ ಯಾವಾಗಲೂ ಮಾ" ಎಂಬ ಶೀರ್ಷಿಕೆ ಯೊಂದಿಗೆ, ವೀಡಿಯೊ ಶೇರ್ ಮಾಡಿದ್ದು ತಾಯಿಯ ಕಾಳಜಿಗೆ ಯಾವುದೇ ಮಿತಿಗಳಿಲ್ಲ. ಅದು ಮಗುವಾಗಲಿ, ಅಪರಿಚಿತನಾಗಲಿ ಅಥವಾ ಸೋಪ್ ತಿನ್ನಲು ಹೊರಟಿರುವ ಕೋತಿಯಾಗಲಿ ರಕ್ಷಣೆ ಮಾಡುವ ತಾಯಿಯ ಗುಣ ದೊಡ್ಡದು ಎಂದು ಬರೆಯಲಾಗಿದೆ. ಈ ಹೃದಯಸ್ಪರ್ಶಿ ಕ್ಷಣವು ಭಾರೀ ವೈರಲ್ ಆಗಿದ್ದು ಅನೇಕರು ಈ ವಿಡಿಯೊ ಗೆ ಪ್ರತಿಕ್ರಿಯೆ ನೀಡಿದ್ದಾರೆ.