2ನೇ ತರಗತಿ ಪುಸ್ತಕಗಳಿಗೆ 9 ಸಾವಿರ ರೂ.! ಶಾಲಾ ವಸ್ತುಗಳ ಬೆಲೆ ಏರಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಪೋಷಕರು!
Viral Video: ಪೋಷಕರಿಗೆ ಶಾಲಾ ಶುಲ್ಕದ ಬಿಸಿ ಕೂಡ ತಟ್ಟಿದೆ. ಇದೀಗ ಚಂಡೀಗಢದ ಪೋಷಕರೊಬ್ಬರು ಹಂಚಿ ಕೊಂಡಿರುವ ವಿಡಿಯೋ ಶಾಲಾ ಕೋರ್ಸ್, ಪುಸ್ತಕ ಎಷ್ಟು ದುಬಾರಿಯಾಗಿವೆ ಎಂಬುದನ್ನು ತೋರಿಸುತ್ತವೆ. ಸದ್ಯ ಖಾಸಗಿ ಶಾಲೆಯ ಶುಲ್ಕ ಪಾವತಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭವಾಗಿದೆ..
ದುಬಾರಿ ಶಾಲಾ ಮೊತ್ತದ ಬಗ್ಗೆ ಕಿಡಿಕಾರಿದ ಪೋಷಕರು -
ಹೊಸ ದೆಹಲಿ, ಎ.9: ಶಾಲಾ ಶೈಕ್ಷಣಿಕ ವರ್ಷ ಪ್ರಾರಂಭ ಆಗುತ್ತಿದ್ದಂತೆ ಪೋಷಕರಿಗೆ ಶಾಲೆ ಆಯ್ಕೆ ಬಗ್ಗೆ ಅನೇಕ ಗೊಂದಲ ಇರುತ್ತದೆ. ಈ ನಡುವೆ ಪೋಷಕರಿಗೆ ಶಾಲಾ ಶುಲ್ಕದ ಬಿಸಿ ಕೂಡ ತಟ್ಟಿದೆ. ಇದೀಗ ಚಂಡೀಗಢದ ಪೋಷಕರೊಬ್ಬರು ಹಂಚಿಕೊಂಡಿರುವ ವಿಡಿಯೋ (Viral News) ಶಾಲಾ ಕೋರ್ಸ್, ಪುಸ್ತಕ ಎಷ್ಟು ದುಬಾರಿಯಾಗಿವೆ ಎಂಬುದನ್ನು ತೋರಿಸುತ್ತವೆ. ಸದ್ಯ ಖಾಸಗಿ ಶಾಲೆಯ ಶುಲ್ಕ ಪಾವತಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭವಾಗಿದೆ.
ನಗರಗಳಾದ್ಯಂತ ಪೋಷಕರು ಶಾಲಾ ಪುಸ್ತಕಗಳಿಗೆ ದುಬಾರಿ ಖರ್ಚು ಮಾಡುತ್ತಿದ್ದಾರೆ ಎಂದು ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ವೈರಲ್ ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ತಮ್ಮ ಮಕ್ಕಳ ಎರಡನೇ ತರಗತಿಯ ಪುಸ್ತಕಕ್ಕೆ 9,000 ರೂಪಾಯಿ ಪಾವತಿ ಮಾಡಿರುವುದಾಗಿ ತಿಳಿಸಿದ್ದಾರೆ.
ವಿಡಿಯೋ ನೋಡಿ:
Hey! Quick question - could you share the total cost of books for your kids this new academic year? If it’s not too much trouble, I’d really appreciate a copy of the receipt too. Also, if you have any extra thoughts, a short video, or even a tweet about it, I’d love to amplify… https://t.co/m6xlmum2NR
— Piyush Rai (@Benarasiyaa) April 6, 2026
ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಕೈಯಲ್ಲಿ ಪುಸ್ತಕಗಳು ಮತ್ತು ಸಾಮಗ್ರಿಗಳ ದೊಡ್ಡ ಬಂಡಲ್ ನೊಂದಿಗೆ ಶಾಲಾ ಸಾಮಗ್ರಿಗಳನ್ನು ಖರೀದಿಸುವಾಗ ಪೋಷಕರು ಎದುರಿಸುತ್ತಿರುವ ಪರಿಸ್ಥಿತಿಯನ್ನು ಅವರು ವಿವರಿಸಿದ್ದಾರೆ. ಶಿಕ್ಷಣ ಇಲಾಖೆಯ ನಿಯಮದ ಪ್ರಕಾರ ಪೋಷಕರು ತಮಗೆ ಇಷ್ಟ ಬಂದ ಅಂಗಡಿಯಲ್ಲಿ ಪುಸ್ತಕ ಖರೀದಿ ಮಾಡಲು ಅವಕಾಶ ಇರಬೇಕು. ಆದರೆ ಶಾಲೆಗಳು ಆಯ್ಕೆ ಮಾಡಿದ ಅಂಗಡಿಯಲ್ಲೇ ಖರೀದಿ ಮಾಡಬೇಕು ಎಂದು ಆದೇಶ ನೀಡುತ್ತಾರೆ.
ಇದೀಗ ನಾನು ನನ್ನ ಮಕ್ಕಳಿಗೆ ಕನಿಷ್ಠ 30 ಕಿಲೋಗ್ರಾಂಗಳಷ್ಟು ತೂಕದ ಹೊರೆಯನ್ನು ಹೊತ್ತುಕೊಂಡು ಹೋಗುತ್ತಿದ್ದೇನೆ. ಮತ್ತು 2 ನೇ ತರಗತಿಯ ಸಾಮಗ್ರಿಗಳ ಬಿಲ್ ರೂ. 9,000 ಆಗಿದೆ.ಶಾಲೆಗಳು ಅಥವಾ ಶಿಕ್ಷಣ ಇಲಾಖೆ ಈ ವಿಷಯದ ಬಗ್ಗೆ ಮಾತನಾಡುತ್ತಿಲ್ಲ. ಈ ವಿಷಯ ವನ್ನು ಅರ್ಥೈಸಿಕೊಳ್ಳುವಂತೆ ನಾನು ಇಡೀ ಚಂಡೀಗಢ ಆಡಳಿತಕ್ಕೆ ಮನವಿ ಮಾಡುತ್ತೇನೆ ಎಂದಿದ್ದಾರೆ.
ಈ ಪೋಸ್ಟ್‌ಗಳನ್ನು ನೋಡುತ್ತಿದ್ದಂತೆ, ಅನೇಕರು ತಮ್ಮದೇ ಆದ ಅನುಭವಗಳನ್ನು ಹಂಚಿ ಕೊಳ್ಳುತ್ತಿದ್ದಾರೆ. ಒಬ್ಬ ಬಳಕೆದಾರರು ಇದಕ್ಕೆ ಕಠಿಣ ಕ್ರಮದ ಅಗತ್ಯವಿದೆ ಎಂದಿದ್ದಾರೆ. ಮತ್ತೊಬ್ಬರು ಮಕ್ಕಳ ಹೆಸರಿನಲ್ಲಿ ಖಾಸಗಿ ಶಾಲೆಗಳು ಹಣ ಮಾಡುತ್ತೀವೆ ಎಂದು ಕಿಡಿಕಾರಿದ್ದಾರೆ.