ಗಂಗಾ ಮಾತೆ ಪೂಜೆ ಮಾಡಿ ನದಿ ದಡದಲ್ಲಿ ಪ್ಲಾಸ್ಟಿಕ್ ಎಸೆದ ಮಹಿಳೆ; ವಿಡಿಯೋ ಮಾಡಿದ ವಿದೇಶಿ ಯುವತಿ
Viral Video: ಮಹಿಳೆಯೊಬ್ಬಳು ಪೂಜಾ ಧಾರ್ಮಿಕ ಕೆಲಸ ಮುಗಿದ ಬಳಿಕ ಪ್ಲಾಸ್ಟಿಕ್ ಚೀಲ ಮರಳಿನಲ್ಲಿ ಹೂತುಹಾಕುತ್ತಿರುವ ದೃಶ್ಯ ಕಂಡು ಬಂದಿದೆ. ವಿದೇಶಿ ಪ್ರವಾಸಿಗರೊಬ್ಬರು ಈ ವಿಡಿಯೊ ಸೆರೆ ಹಿಡಿದಿದಿದ್ದಾರೆ. ಈ ದೃಶ್ಯ ನೋಡಿದ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರ್ಮಿಕ ಪೂಜೆ ಸಲ್ಲಿಸಿ ಕಸವನ್ನು ನದಿ ದಡದಲ್ಲೇ ಎಸೆದ ಮಹಿಳೆ -
ರಿಷಿಕೇಶ,ಎ.12: ಇತ್ತೀಚೆಗೆ ಧಾರ್ಮಿಕ ನಂಬಿಕೆಯ ಹೆಸರಿನಲ್ಲಿ ಭಕ್ತರು ಬೇಕಾಬಿಟ್ಟಿಯಾಗಿ ವರ್ತಿಸುವ ಘಟನೆ ಹೆಚ್ಚಾಗಿದೆ. ಈ ನಡುವೆ ಮಹಿಳೆಯೊಬ್ಬಳು ಪೂಜಾ ಧಾರ್ಮಿಕ ಕೆಲಸ ಮುಗಿದ ಬಳಿಕ ಪ್ಲಾಸ್ಟಿಕ್ ಚೀಲ ಮರಳಿನಲ್ಲಿ ಹೂತುಹಾಕುತ್ತಿರುವ ದೃಶ್ಯ (Viral News) ಕಂಡು ಬಂದಿದೆ. ವಿದೇಶಿ ಪ್ರವಾಸಿಗರೊಬ್ಬರು ಈ ವಿಡಿಯೊ ಸೆರೆಹಿಡಿದಿದಿದ್ದಾರೆ. ಈ ದೃಶ್ಯ ನೋಡಿದ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಿಷಿಕೇಶದ ಗಂಗಾ ನದಿಯ ದಡದಲ್ಲಿ ಧಾರ್ಮಿಕ ತ್ಯಾಜ್ಯವನ್ನು ಎಸೆಯುತ್ತಿರುವ ದೃಶ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ, ಇದು ಪರಿಸರ ವ್ಯವಸ್ಥೆಗೆ ಹಾನಿ ಮಾಡಿದೆ ಎಂದು ಟೀಕೆ ವ್ಯಕ್ತವಾಗಿದೆ. ಸಾಯಿಘಾಟ್ ಬಳಿ ಈ ಘಟನೆ ನಡೆದಿದ್ದು ಮಹಿಳೆಯೂ ಗಂಗಾ ಮಾತೆಯನ್ನು ಪೂಜೆ ಮಾಡಿ ಅಲ್ಲಿಯೆ ಕಸಗಳನ್ನು ಎಸೆದಿದ್ದಾರೆ.
ವಿಡಿಯೋ ನೋಡಿ:
ಘಟನೆಯನ್ನು ವಿದೇಶಿ ಸಂದರ್ಶಕ ಸಿಯೆರಾ ಲಿಲಿಯನ್ ಹಂಚಿಕೊಂಡಿದ್ದಾರೆ, ಅವರು ನದಿಯ ಬಳಿ ಇದ್ದಾಗ ತಾವು ಕಂಡದ್ದನ್ನು ರೆಕಾರ್ಡ್ ಮಾಡಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ ಮಹಿಳೆಯೊಬ್ಬರು ಮರಳಿನಲ್ಲಿ ಆಳವಿಲ್ಲದ ಗುಂಡಿಯನ್ನು ಅಗೆದು ಪ್ಲಾಸ್ಟಿಕ್‌ನಂತಹ ಜೈವಿಕ ವಿಘಟನೀಯವಲ್ಲದ ವಸ್ತುಗಳನ್ನು ಹೂತುಹಾಕಿದ್ದಾರೆ.
ಇದಕ್ಕೆ ವಿದೇಶಿ ಪ್ರವಾಸಿಗ ಇಲ್ಲಿಯೇ ಕಸ ಹಾಕುವುದು ಎಷ್ಟು ಸರಿ?" ಎಂದು ಮಹಿಳೆಯನ್ನು ಪ್ರಶ್ನಿಸಿದ್ದಾರೆ. ಆದರೆ ಆ ಮಹಿಳೆ ಏನೂ ಮಾತನಾಡದೆ ಹೊರ ನಡೆದಿದ್ದಾರೆ..ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.. ಗಂಗಾ ಮಾತೆಯನ್ನು ಪ್ರಾರ್ಥಿಸಲು ಬಂದು ತ್ಯಾಜ್ಯವನ್ನು ಇಲ್ಲಿ ಬಿಡುವುದರಲ್ಲಿ ಅರ್ಥವೇನು? ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಇಂತಹ ಭಕ್ತಿ ಯಾವುದಕ್ಕೂ ಪ್ರಯೋಜನವಿಲ್ಲ ಎಂದಿದ್ದಾರೆ.