ಗಂಡನಿಗೆ ತಿಳಿಸದೆ 12 ಲಕ್ಷ ರೂ. ಪೆಟ್ಟಿಗೆಯೊಳಗೆ ಬಚ್ಚಿಟ್ಟಿದ್ದ ಮಹಿಳೆ: ನಗದು ಚೂರು ಚೂರು ಮಾಡಿದ ಇಲಿಗಳು!
Viral News: ಇಲ್ಲೊಬ್ಬ ಮಹಿಳೆ ಗಂಡನಿಗೆ ತಿಳಿಸದೇ ಸುಮಾರು 8 ವರ್ಷದಿಂದ ಪೆಟ್ಟಿಗೆಯೊಂದರಲ್ಲಿ ಹಣವನ್ನು ಬಚ್ಚಿಟ್ಟಿದ್ದಳು. ಆದರೆ ಈ ಲಕ್ಷಾಂತರ ರೂಪಾಯಿ ನಗದನ್ನು ಇಲಿಗಳು ತಿಂದು ಹಾಕಿವೆ. ಈ ಹೃದಯ ವಿದ್ರಾವಕ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ನಗದು ಚೂರಚೂರು ಮಾಡಿದ ಇಲಿಗಳು -
ಗೋಂಡ,ಆ.25: ಬ್ಯಾಂಕ್, ಡಿಜಿಟಲ್ ಪಾವತಿ ಎಷ್ಟೇ ಅಭಿವೃದ್ಧಿಯಾದರೂ ಯಾರಿಗೂ ತಿಳಿಯದಂತೆ ಹಣವನ್ನು ಒಟ್ಟು ಮಾಡಿ ಉಳಿತಾಯ ಮಾಡುವ ಅಭ್ಯಾಸ ಹೆಚ್ಚಿನವರಿಗೆ ಇರುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ಗಂಡನಿಗೆ ತಿಳಿಸದೇ ಸುಮಾರು 8 ವರ್ಷದಿಂದ ಪೆಟ್ಟಿಗೆಯೊಂದರಲ್ಲಿ ಹಣವನ್ನು ಬಚ್ಚಿಟ್ಟಿದ್ದಳು. ಆದರೆ ಈ ಲಕ್ಷಾಂತರ ರೂಪಾಯಿ ನಗದನ್ನು ಇಲಿಗಳು ತಿಂದು ಹಾಕಿವೆ. ಈ ಹೃದಯ ವಿದ್ರಾವಕ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.
ಸಣ್ಣ- ಪುಟ್ಟ ಉಳಿತಾಯದ ಹಣದಿಂದ ಆಭರಣ ಖರೀದಿಸುವ ಆಸೆಯಿಂದ ತನ್ನ ಗಂಡನಿಗೆ ತಿಳಿಯದಂತೆ ಹಣ ಬಚ್ಚಿಟ್ಟಿದ್ದರು. ಆದರೆ ಸುಮಾರು 8 ವರ್ಷಗಳಿಂದ ಪೆಟ್ಟಿಗೆಯಲ್ಲಿ ಬಚ್ಚಿಟ್ಟಿದ್ದ ಲಕ್ಷಾಂತರ ರೂಪಾಯಿ ನಗದನ್ನು ಇಲಿಗಳು ಸಂಪೂರ್ಣವಾಗಿ ತಿಂದು ಹಾಳು ಮಾಡಿವೆ.
यूपी के गोंडा से एक बहुत ही हैरान करने वाली खबर सामने आई है..
— 𝗔𝗦𝗧𝗬𝗟𝗘𝗦 ®️ (@AstylesIND) August 23, 2026
एक महिला ने गहने खरीदने के लिए अपने पति से छिपाकर 8 साल में करीब 12 लाख रुपये जमा किए थे
लेकिन जब इतने लंबे समय बाद ट्रंक खोला तो पता चला कि सारे के सारे नोट चूहों ने कुतर दिए हैं.. pic.twitter.com/QBwZc9cPiU
ಮಹಿಳೆಯೂ ಪೆಟ್ಟಿಗೆ ಅನ್ನು ತೆರೆದಾಗ ಆಘಾತಕ್ಕೊಳಗಾಗಿದ್ದಾರೆ. ಅಲ್ಲಿ ಅವರು ವರ್ಷಗಳಿಂದ ಹಣವನ್ನು ಉಳಿಸಿದ್ದು ಸುಮಾರು 12 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದ್ದರು. ಈ ಮಹಿಳೆ 2019 ರಿಂದ ಬ್ಯಾಂಕ್‌ನಲ್ಲಿ ಠೇವಣಿ ಇಡುವ ಬದಲಾಗಿ, ಪತಿಯಿಂದ ಗುಟ್ಟಾಗಿ ಮನೆಯಲ್ಲಿಯೇ ಇದ್ದ ಕಬ್ಬಿಣದ ಟ್ರಂಕ್ ಪೆಟ್ಟಿಗೆ ಒಂದರಲ್ಲಿ ಇಡುತ್ತಿದ್ದರು.
ತಾನು ಕಷ್ಟಪಟ್ಟು ಕೂಡಿಟ್ಟ ಹಣ ಪೆಟ್ಟಿಗೆಯಲ್ಲಿ ಸುರಕ್ಷಿತವಾಗಿದೆ ಎಂದೇ ಮಹಿಳೆ ಭಾವಿಸಿದ್ದರು. ಆದರೆ ಹೆಚ್ಚಿನ ಸಂಖ್ಯೆಯ ಕರೆನ್ಸಿ ನೋಟುಗಳನ್ನು ಇಲಿಗಳು ಕಚ್ಚಿವೆ. ಹಲವಾರು ನೋಟುಗಳು ಹರಿದು ತೀವ್ರವಾಗಿ ಹಾನಿಗೊಳಗಾಗಿವೆ. ಹಾಳಾದ ನೋಟುಗಳು ಟ್ರಂಕ್‌ನಲ್ಲಿ ಹರಡಿ ಕೊಂಡಿ ರುವುದು ಕಂಡುಬಂದಿದೆ. ಈ ಆಘಾತಕಾರಿ ಘಟನೆಯು ಆನ್‌ಲೈನ್‌ನಲ್ಲಿ ಪ್ರತಿಕ್ರಿಯೆಗಳನ್ನು ಹುಟ್ಟು ಹಾಕಿದೆ. ಕೆಲವರು ಮಹಿಳೆಯ ಬಗ್ಗೆ ಸಹಾನುಭೂತಿ ಹೊಂದಿದ್ದರೂ, ಇತರರು ಮನೆಯಲ್ಲಿ ದೊಡ್ಡ ಮೊತ್ತದ ಹಣವನ್ನು ಇಟ್ಟುಕೊಳ್ಳುವ ಅಪಾಯದ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚೆಗೆ ರೈತನೊಬ್ಬ ಗದ್ದೆಯಲ್ಲಿ ಹೂತಿಟ್ಟ ಲಕ್ಷಾಂತರ ರೂಪಾಯಿ ಹಣ ಗೆದ್ದಲು ತಿಂದ ಘಟನೆಯೂ ರಾಜಸ್ಥಾನದ ಬಲೋತ್ರಾ ಜಿಲ್ಲೆಯಲ್ಲಿ ನಡೆದಿತ್ತು. ರೈತನೊಬ್ಬ ತಾನು ಕೂಡಿಟ್ಟ ಹಣದ ಬಗ್ಗೆ ಮನೆಯವರಿಗೆ ತಿಳಿಯ ಬಾರದೆಂದು ಹೊಲದಲ್ಲಿ ರಹಸ್ಯವಾಗಿ ಹಣ ಹೂತಿಟ್ಟಿದ್ದ. ಆದರೆ ಗೆದ್ದಲುಗಳು ಹಣವನ್ನು ನಾಶ ಪಡಿಸಿದ್ದು ಐದು ಲಕ್ಷ ರುಪಾಯಿ ಮೌಲ್ಯದ 500 ರುಪಾಯಿ ನೋಟುಗಳು ನಾಶವಾಗಿದ್ದವು.