ಉದ್ಯೋಗಾವಕಾಶಕ್ಕಾಗಿ 30,000 ಆಫರ್ ಇಟ್ಟ ಇಂಜಿನಿಯರಿಂಗ್ ಪದವೀಧರ: ಕೆಲಸ ಹುಡುಕಿಕೊಟ್ಟವರಿಗಿದೆ ಬಹುಮಾನ!
Viral News: ಕೆಲಸ ಸಿಗದೆ ಕಂಗಾಲಾಗಿರುವ ಇಂಜಿನಿಯರಿಂಗ್ ಪದವೀಧರ ತನಗೆ ಉದ್ಯೋಗ ಕೊಡಿಸುವವರಿಗೆ 30,000 ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾನೆ.ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಚರ್ಚೆ ಮಾಡುತ್ತಿದ್ದಾರೆ.
ಇಂಟರ್ ನೆಟ್ ಚಿತ್ರ -
ನವದೆಹಲಿ,ಅ.11: ಇಂದು ಎಷ್ಟೇ ಶಿಕ್ಷಣವಂತರೂ ಆಗಿದ್ದರೂ ಉದ್ಯೋಗ ಪಡೆದುಕೊಳ್ಳುವುದು ಕಷ್ಟ. ಪದವಿ, ಕ್ರಿಯಾಶೀಲತೆ ಬಿಟ್ಟು ಲಂಚ ನೀಡಿ ಅಥವಾ ರೆಫರೆನ್ಸ್ ಮೇಲೆಯೆ ಕೆಲಸ ಗಿಟ್ಟಿಸಿಕೊಂಡರು ಹೆಚ್ಚು. ಇಲ್ಲೊಬ್ಬ IT ಕ್ಷೇತ್ರದಲ್ಲಿ ಇರುವ ಪದವೀಧರನೊಬ್ಬ ಎಲ್ಲ ಕಂಪನಿಗಳಿಗೆ ಅರ್ಜಿ ಸಲ್ಲಿಕೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬೇಸರ ಹೊರಹಾಕಿದ್ದಾನೆ. ಈ ನಿಟ್ಟಿನಲ್ಲಿ ಕೆಲಸ ಸಿಗದೆ ಕಂಗಾಲಾಗಿರುವ ಇಂಜಿನಿಯರಿಂಗ್ ಪದವೀಧರ ತನಗೆ ಉದ್ಯೋಗ ಕೊಡಿಸುವವರಿಗೆ 30,000 ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾನೆ.ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಚರ್ಚೆ ಮಾಡುತ್ತಿದ್ದಾರೆ.
ಇಂದು ದೇಶದಲ್ಲಿ ನಿರುದ್ಯೋಗ ಸಮಸ್ಯೆ ಅನ್ನೋದು ಯುವ ಜನಾಂಗಕ್ಕೆ ದೊಡ್ಡ ಕಂಟಕವಾಗಿದೆ. ಏಷ್ಟೇ ಓದಿದರೂ ತಮಗೆ ಬೇಕಾದ ಜಾಬ್ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೀಗ IT ಕ್ಷೇತ್ರದಲ್ಲಿನ 2025 ರ ಬ್ಯಾಚ್‌ನ ಪದವೀಧರನೊಬ್ಬ, ಎಷ್ಟೇ ಅರ್ಜಿ ಸಲ್ಲಿಸಿದರೂ ಕೆಲಸ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಸೂಕ್ತ ಉದ್ಯೋಗವನ್ನು ಪಡೆಯಲು ಸಹಾಯ ಮಾಡುವ ಯಾರಿಗಾದರೂ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾನೆ. ತಮ್ಮ ಅರ್ಜಿಗಳಿಗೆ ಯಾವುದೇ ಕಂಪನಿಂದ ಪ್ರತಿಕ್ರಿಯೆ ಸಿಗದಿರುವ ಬಗ್ಗೆ ಹತಾಶೆ ವ್ಯಕ್ತಪಡಿಸಿದ ಆತ 2025ರಲ್ಲಿ ಉತ್ತೀರ್ಣನಾಗಿದ್ದೇನೆ, ದಯವಿಟ್ಟು ಸಹಾಯ ಮಾಡಿ, ಅರ್ಜಿ ಸಲ್ಲಿಸಿ ಸಾಕಾಗಿದೆ ಎಂದು ಬರೆದಿದ್ದಾನೆ.
ವಿವಿಧ ಕಂಪನಿಗಳಿಗೆ ರೆಸ್ಯೂಮ್ ಕಳುಹಿಸಿ ಸುಸ್ತಾಗಿದ್ದೇನೆ. ಯಾರಾದರೂ ರೆಫರೆನ್ಸ್ ಮಾಡಿ ಕೆಲಸ ಕೊಡಿಸಿದರೆ ಅವರಿಗೆ 30,000 ನಗದು ನೀಡುವುದಾಗಿ ರೆಡ್ಡಿಟ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾನೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಭಾರತದಲ್ಲಿ ಲಂಚ ಕೊಟ್ಟು ಉದ್ಯೋಗ ಗಿಟ್ಟಿಸಿಕೊಳ್ಳುವುದು ಅಭ್ಯಾಸವಾಗಿದೆ ಎಂದು ಕೆಲವರು ಟೀಕೆ ವ್ಯಕ್ತಪಡಿಸಿದರೆ ಮತ್ತೊಂದೆಡೆ, ಯುವಕರ ಈ ಸಂಕಷ್ಟವನ್ನು ಅರ್ಥಮಾಡಿಕೊಳ್ಳಬೇಕು ಎಂದು ಆತನ ಪರವಾಗಿ ನಿಂತಿದ್ದಾರೆ. ಈ ಘಟನೆಯೂ ನಿರುದ್ಯೋಗ ಸಮಸ್ಯೆ ಯುವಕರನ್ನು ಎಷ್ಟು ಕಾಡುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.