ಬೈಕ್‌ನಿಂದ ರೈಲನ್ನೇ ಎಳೆಯಲು ಹೋದ ಯುವಕ; ರೀಲ್ಸ್ ಹುಚ್ಚಾಟಕ್ಕೆ ನೆಟ್ಟಿಗರು ಗರಂ!
Viral Video: ಇಂದಿನ ಯುವ ಜನತೆ ಅಪಾಯಕಾರಿ ಸಾಹಸಕ್ಕೆ ಮುಂದಾಗುತ್ತಿದೆ. ಯಾವುದೇ ಟ್ರೆಂಡ್ ಆದಾಗ ಅದನ್ನು ಪ್ರಾಣದ ಹಂಗು ತೊರೆದು ರೀಲ್ಸ್ ಮಾಡಿ ಅಪ್ಲೋಡ್ ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ರೈಲು ಎಳೆಯಲು ಹೋಗಿ ಪೇಚೆಗೆ ಸಿಲುಕಿದ್ದಾನೆ. ಯುವಕನು ಬೈಕ್ ಬಳಸಿ ರೈಲನ್ನು ಎಳೆಯಲು ಪ್ರಯತ್ನಿಸಿದ್ದಾನೆ. ಈ ಹುಚ್ಚು ಸಾಹಸ ಕಂಡು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
ರೀಲ್ಸ್ ಗಾಗಿ ರೈಲನ್ನು ಎಳೆಯಲು ಮುಂದಾದ ಯುವಕ -
ಕೊಲ್ಕತ್ತಾ: ಸೋಷಿಯಲ್ ಮೀಡಿಯಾದಲ್ಲಿ (Viral News) ಫೇಮ್ ಗಿಟ್ಟಿಸಿ ಕೊಳ್ಳಬೇಕು ಎಂಬ ಉದ್ದೇಶದಿಂದ ಇಂದಿನ ಯುವ ಜನತೆ ಅಪಾಯಕಾರಿ ಸಾಹಸಕ್ಕೆ ಮುಂದಾಗುತ್ತಿದೆ. ಯಾವುದೇ ಟ್ರೆಂಡ್ ಆದಾಗ ಅದನ್ನು ಪ್ರಾಣದ ಹಂಗು ತೊರೆದು ರೀಲ್ಸ್ ಮಾಡಿ ಅಪ್ಲೋಡ್ ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ರೈಲು ಎಳೆಯಲು ಹೋಗಿ ಪೇಚೆಗೆ ಸಿಲುಕಿದ್ದಾನೆ. ಯುವಕನು ಬೈಕ್ ಬಳಸಿ ರೈಲನ್ನು ಎಳೆಯಲು ಪ್ರಯತ್ನಿಸಿದ್ದಾನೆ. ಈ ಹುಚ್ಚು ಸಾಹಸ ಕಂಡು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಈ ಘಟನೆ ನಡೆದಿದೆ. ಯುವಕನು ಬೈಕಿನ ಮೂಲಕ ರೈಲನ್ನು ಎಳೆಯಲು ಪ್ರಯತ್ನ ಮಾಡಿದ್ದಾನೆ. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಅಜಾಗರೂಕ ಸ್ಟಂಟ್‌ಮ್ಯಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಳಕೆದಾರರು ಒತ್ತಾಯಿಸಿದ್ದಾರೆ. ಸೋಹೆಲ್ ಎಂದು ಗುರುತಿಸಲಾದ ಸವಾರ ಈ ಘಟನೆಯಲ್ಲಿ ಭಾಗಿಯಾಗಿದ್ದಾನೆ, ಈ ಹಿಂದೆ ಎಂಜಿ ಮೆಜೆಸ್ಟರ್ ಎಸ್‌ಯುವಿ ರೈಲನ್ನು ಎಳೆದು ಗಿನ್ನಿಸ್ ದಾಖಲೆಯನ್ನು ಮಾಡಿತ್ತು. ಈ ರೀಲ್ಸ್ ಅನ್ನು ಆತ ಮಾಡಲು ಪ್ರಯತ್ನಿಸಿದ್ದಾನೆ.
ವಿಡಿಯೋ ನೋಡಿ:
After the MG Majestor successfully pulled a train and set a Guinness World Record, Rider Sohel from West Bengal attempted to surpass it by pulling an entire train with his bike :)
— Trains of India 🇮🇳 (@trainwalebhaiya) April 16, 2026
While he couldn’t break the record, there’s a strong possibility that this act was carried out… pic.twitter.com/HYNUVSieVR
ಯುವಕನು ತನ್ನ ಬೈಕ್ ಗೆ ಹಗ್ಗವನ್ನು ಬಳಸಿ ನಿಂತ ರೈಲಿಗೆ ಕಟ್ಟಿ ಮುಂದಕ್ಕೆ ಎಳೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದಾಗ್ಯೂ, ಬೈಕ್‌ನ ಹಿಂದಿನ ಚಕ್ರವು ಎಳೆತವನ್ನು ಪಡೆಯದೆ ಪ್ರಯತ್ನ ವಿಫಲವಾಗಿದೆ. ಇದರಿಂದಾಗಿ ರೈಲು ಒಂಚೂರು ಅಲುಗಾಡಿಲ್ಲ. ಈ ಅಜಾಗರೂಕ ನಡವಳಿಕೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಬಳಕೆದಾರರು ಚರ್ಚೆ ಮಾಡಿದ್ದಾರೆ.
Viral News: ಚಾಲಕನಿಲ್ಲದೆ ಚಲಿಸಿದ ಟ್ರ್ಯಾಕ್ಟರ್; ಭೀಕರ ಅಪಘಾತದಿಂದ ವ್ಯಕ್ತಿಯ ಸ್ಥಿತಿ ಗಂಭೀರ
ಸೋಷಿಯಲ್ ಮೀಡಿಯಾದಲ್ಲಿ ಇಂತಹ ಸಾಹಸ ಜೀವಕ್ಕೆ ಅಪಾಯಕಾರಿ ಎಂದು ಹಲವಾರು ಟೀಕಿಸಿದ್ದಾರೆ. ರೈಲ್ವೆ ಹಳಿಗಳ ಮೇಲೆ ಇಂತಹ ಕೃತ್ಯಗಳನ್ನು ನಡೆಸುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಲವರು ಒತ್ತಾಯಿಸಿದ್ದಾರೆ. ಬಳಕೆದಾರರೊಬ್ಬರು ಇಂತಹ ಹುಚ್ಚು ಸಾಹಸ ಮಾಡಲು ಯಾಕೆ ಮುಂದಾಗಬೇಕು ? ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ರೀಲ್ಸ್ ಗಾಗಿ ವಿಡಿಯೊ ಮಾಡುವವರ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಿಡಿಕಾರಿದ್ದಾರೆ.