ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Virat Kohli: ಐಪಿಎಲ್‌ ಮಧ್ಯೆ ದಕ್ಷಿಣ ಆಫ್ರಿಕಾದ ಸುಂದರಿಯ ಫೋಟೊಗೆ ಲೈಕ್‌ ಕೊಟ್ಟ ಕೊಹ್ಲಿ

Virat Kohli likes South African influencer's photo: ಈ ಬಾರಿಯ ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಆಡಿದ 5 ಪಂದ್ಯಗಳಿಂದ 228 ರನ್‌ ಬಾರಿಸಿದ್ದಾರೆ. ಕಳೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೊಣಕಾಲಿನ ನೋವು ಕಾಣಿಸಿಕೊಂಡಿದ್ದ ಕೊಹ್ಲಿ ಗಾಯದ ನಡುವೆಯೂ ಲಖನೌ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್‌ ಆಟಗಾರನಾಗಿ ಆಡಿದ್ದರು.

ದಕ್ಷಿಣ ಆಫ್ರಿಕಾದ ಸುಂದರಿಯ ಫೋಟೊಗೆ ಲೈಕ್‌ ಕೊಟ್ಟ ಕೊಹ್ಲಿ

Virat Kohli likes South African influencer's photo -

Abhilash BC
Abhilash BC Apr 17, 2026 9:52 AM

ಬೆಂಗಳೂರು, ಎ.17: ಟೀಮ್‌ ಇಂಡಿಯಾದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ(Virat Kohli) ಅವರು ದಕ್ಷಿಣ ಆಫ್ರಿಕಾದ ಸುಂದರಿಯ ಫೋಟೊವೊಂದಕ್ಕೆ ಲೈಕ್‌ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೆಂಡ್‌ ಆಗಿದ್ದಾರೆ. ಐಪಿಎಲ್‌(IPL 2026) ನಡುವೆ ಕಿಂಗ್‌ ಕೊಹ್ಲಿಯ ಈ ನಡೆ ಎಲ್ಲರಿಗೂ ಕುತೂಹಲ ಮೂಡಿಸಿದೆ.

ಹೌದು, ಸಾಮಾಜಿಕ ಜಾಲತಾಣ ಇನ್‌ಫ್ಲುಯೆನ್ಸರ್‌ ಹಾಗೂ ಫೋಟೊಗ್ರಾಫರ್‌ ಆಗಿರುವ ದಕ್ಷಿಣ ಆಫ್ರಿಕಾದ ಲಿಜ್ಲಾಜ್ ಅವರು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ಫೋಟೊವೊಂದನ್ನು ಹಾಕಿದ್ದರು. ಈ ಫೋಟೊಗೆ ವಿರಾಟ್‌ ಕೊಹ್ಲಿ ಲೈಕ್‌ ಮಾಡಿದ್ದಾರೆ. ವಿಶೇಷವೆಂದರೆ, ವಿರಾಟ್ ಕೊಹ್ಲಿ ಅವರು ಲಿಜ್ಲಾಜ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಕೂಡ ಮಾಡುತ್ತಿಲ್ಲ. ಆದರೂ ಅವರ ಫೋಟೋಗೆ ಲೈಕ್ ಮಾಡಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ನೆಟ್ಟಿಗರು ಹಲವು ಮೀಮ್ಸ್‌ಗಳನ್ನು ಕೂಡ ಹಂಚಿಕೊಂಡಿದ್ದಾರೆ.

ಅಲ್ಗಾರಿದಮ್ ದೋಷವೇ..?

ಈ ಹಿಂದೆಯೂ ವಿರಾಟ್ ಕೊಹ್ಲಿ ಅವರು ನಟಿ ಅವನೀತ್ ಕೌರ್ ಅವರ ಫೋಟೋವೊಂದನ್ನು ಲೈಕ್‌ ಮಾಡಿದಾಗಲು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಬಳಿಕ ಕೊಹ್ಲಿ ಅದಕ್ಕೆ ಸ್ಪಷ್ಟನೆ ನೀಡಿ, 'ನನ್ನ ಫೀಡ್ ಅನ್ನು ತೆರವುಗೊಳಿಸುವಾಗ, ಅಲ್ಗಾರಿದಮ್ ತಪ್ಪಾಗಿ ಲೈಕ್ ಮಾಡಿರಬಹುದು ಎಂದು ಹೇಳಿದ್ದರು. ಇದೀಗ ಲಿಜ್ಲಾಜ್ ಅವರ ಲೈಕ್‌ ವಿಷಯದಲ್ಲೂ ಅಂತಹದ್ದೇ ಘಟನೆ ನಡೆದಿದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಆದರೆ, ವಿರಾಟ್‌ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.



ಲಿಜ್ಲಾಜ್ ಯಾರು?

ಆರ್‌ಸಿಬಿಯ ಅಭಿಮಾನಿಯಾಗಿರುವ ಲಿಜ್ಲಾಜ್, ಭಾರತದ ಸಂಸ್ಕೃತಿ, ಬೀದಿ ಬದಿಯ ಆಹಾರ ಮತ್ತು ಪ್ರವಾಸಿ ತಾಣಗಳ ಬಗ್ಗೆ ವಿಡಿಯೊ ಮಾಡುವ ಇವರು ಭಾರತದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಮುಂಬೈ, ಬೆಂಗಳೂರು ಮತ್ತು ದೆಹಲಿಯಂತಹ ನಗರಗಳಿಗೆ ಭೇಟಿ ನೀಡಿರುವ ಇವರು ಇನ್‌ಸ್ಟಾಗ್ರಾಮ್‌ನಲ್ಲಿ 4 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಆಡಿದ 5 ಪಂದ್ಯಗಳಿಂದ 228 ರನ್‌ ಬಾರಿಸಿದ್ದಾರೆ. ಕಳೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೊಣಕಾಲಿನ ನೋವು ಕಾಣಿಸಿಕೊಂಡಿದ್ದ ಕೊಹ್ಲಿ ಗಾಯದ ನಡುವೆಯೂ ಲಖನೌ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್‌ ಆಟಗಾರನಾಗಿ ಆಡಿದ್ದರು.