ಅಂಕದ ಪರದೆ ಜಾರಿದ ಮೇಲೆ ನಾಟಕವಿನ್ನೂ ಉಳಿದಿಹುದೆ ?
ಹೊನ್ನಪ್ಪ ಭಾಗವತರ್ ಅವರ ತಂಡದಲ್ಲಿದ್ದ ಕು.ರ.ಸೀತಾರಾಮ ಶಾಸ್ತ್ರಿಗಳು, ಪರಮೇಶ್, ರಾಮನಾಥ್ ಎಲ್ಲರೂ ಮೇಕಪ್ ಟೆಸ್ಟ್ ನಂತರ ‘ಕಣ್ಣಿನಲ್ಲಿ ಒಂದು ಮಚ್ಚೆ ಇದೆ, ಸಣ್ಣ ಅಪರೇಷನ್ ಮಾಡಿ ಅದನ್ನು ತೆಗೆದರೆ ಪಾತ್ರ ಮಾಡಬಹುದು’ ಎಂದು ರೇಗಿಸಿದರು. ಚಿಕ್ಕ ಹುಡುಗಿ ಭಯದಿಂದ ‘ಈಗಲೇ ಬೆಂಗಳೂರಿಗೆ ಹೋಗೋಣ’ ಎಂದು ಅಳಲು ಆರಂಭಿಸಿದಳು.