ಜಿಲ್ಲಾಧಿಕಾರಿಗೂ ತಟ್ಟಿದ್ದ ಸೈಬರ್ ಕಳ್ಳರ ಕಾಟ
Yadgir News: ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೆಸರು ಬಳಸಿಕೊಂಡು ಹಣಕ್ಕೆ ಬೇಡಿಕೆ ಇಡುತ್ತಿರುವ ಪ್ರಕರಣ ವರದಿಯಾಗಿದ್ದು, ಭಾರಿ ಸದ್ದು ಮಾಡುತ್ತಿದೆ. ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರ ಫೋಟೊ ಬಳಸಿಕೊಡು ಅವರ ಹೆಸರಿನಲ್ಲಿ ವಾಟ್ಸ್ಆ್ಯಪ್ ಖಾತೆ ತೆರೆದಿರುವ ಆರೋಪಿ ಇಲಾಖೆಯ ಹಲವು ಅಧಿಕಾರಿಗಳಿಗೆ ಹಣ ನೀಡುವಂತೆ ಸಂದೇಶ ಕಳುಹಿಸಿದ್ದಾನೆ. ಈ ಸಂದೇಶಕ್ಕೆ ಪ್ರತಿಕ್ರಿಯಿಸಿ ಆರೋಗ್ಯ ಇಲಾಖೆ ಅಧಿಕಾರಿಯೋರ್ವರು 50 ಸಾವಿರ ರೂ. ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ವಾಟ್ಸ್ಆ್ಯಪ್ ಡಿಪಿಯಲ್ಲಿ ಜಿಲ್ಲಾಧಿಕಾರಿ ಹೆಸರು ಮತ್ತು ಫೋಟೊ ಬಳಸಿ ಮೊಬೈಲ್ ಸಂಖ್ಯೆ 84922021308, 84886912413 ಮೂಲಕ ನಕಲಿ ಖಾತೆಗಳನ್ನು ರಚಿಸಿ ಸಂದೇಶ ರವಾನಿಸಲಾಗಿತ್ತು.