ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಹನುಮಂತನನ್ನು ಸಂಪ್ರೀತಗೊಳಿಸಲು ವೀಳ್ಯದೆಲೆ ಹಾರ

ಅಶೋಕವನದಲ್ಲಿ ಬೇರೆ ಹೂವುಗಳು ಕಾಣದೆ, ಅಲ್ಲಿಯೇ ಬೆಳೆದಿದ್ದ ಹಸಿರಾದ ವೀಳ್ಯದೆಲೆಗಳನ್ನು ಕೊಯ್ದು ಪ್ರೀತಿಯಿಂದ ಒಂದು ಸುಂದರ ಹಾರವನ್ನು ಕಟ್ಟಿ ಹನುಮಂತನ ಕೊರಳಿಗೆ ಹಾಕಿದಳು. ಜಗನ್ಮಾತೆಯ ಈ ಪ್ರೀತಿಯ ಉಡುಗೊರೆಯಿಂದ ಪುಳಕಿತನಾದ ಆಂಜನೇಯನು, ತಾಯೇ, ಇಂದಿನಿಂದ ಯಾರೇ ಭಕ್ತರು ಭಕ್ತಿ ಯಿಂದ ನನಗೆ ವೀಳ್ಯದೆಲೆಯ ಹಾರವನ್ನು ಅರ್ಪಿಸುತ್ತಾರೋ, ಅವರ ಕಷ್ಟ-ಕಾರ್ಪಣ್ಯ, ಮಾಟ-ಮಂತ್ರದ ದೋಷ, ಭಯ ಮತ್ತು ಗ್ರಹದೋಷಗಳನ್ನು ನಿವಾರಿಸಿ ಇಷ್ಟಾರ್ಥಗಳನ್ನು ಈಡೇರಿಸುತ್ತೇನೆ ಎಂದು ವರವಿತ್ತನು.

ಹನುಮಂತನನ್ನು ಸಂಪ್ರೀತಗೊಳಿಸಲು ವೀಳ್ಯದೆಲೆ ಹಾರ

-

ಒಂದೊಳ್ಳೆ ಮಾತು

ತ್ರೇತಾಯುಗದಲ್ಲಿ ಸೀತಾದೇವಿಯು ರಾವಣನ ಸೆರೆಯಲ್ಲಿದ್ದು ಲಂಕೆಯ ಅಶೋಕವನದಲ್ಲಿ ದುಃಖಿಸುತ್ತ ಕುಳಿತಿದ್ದಳು. ಆಗ ಶ್ರೀರಾಮನ ದೂತನಾಗಿ ಬಂದ ಹನು ಮಂತನು, ಮರದ ಮೇಲೆ ಕುಳಿತು ರಾಮ ನಾಮವನ್ನು ಗುಣಗಾನ ಮಾಡಿ, ಸೀತೆಯ ಮುಂದೆ ಬಂದು ನಿಂತು ರಾಮಮುದ್ರಿಕೆ ಯನ್ನು ನೀಡಿ ಆಕೆಯ ಕಣ್ಣೀರನ್ನು ಒರೆಸಿದನು. ರಾಮನು ತನ್ನನ್ನು ರಕ್ಷಿಸಲು ಶೀಘ್ರದ ಬರುತ್ತಾ ನೆಂಬ ಸುದ್ದಿ ಕೇಳಿ ಸಂತಸ ಗೊಂಡ ಸೀತಾದೇವಿಯು, ಹನುಮಂತ ನಿಗೆ ಏನಾದರೂ ಬಹುಮಾನ ನೀಡಬೇಕೆಂದು ಸುತ್ತಲೂ ನೋಡಿ ದಳು.

ಅಶೋಕವನದಲ್ಲಿ ಬೇರೆ ಹೂವುಗಳು ಕಾಣದೆ, ಅಲ್ಲಿಯೇ ಬೆಳೆದಿದ್ದ ಹಸಿರಾದ ವೀಳ್ಯದೆಲೆಗಳನ್ನು ಕೊಯ್ದು ಪ್ರೀತಿ ಯಿಂದ ಒಂದು ಸುಂದರ ಹಾರವನ್ನು ಕಟ್ಟಿ ಹನುಮಂತನ ಕೊರಳಿಗೆ ಹಾಕಿದಳು. ಜಗನ್ಮಾತೆಯ ಈ ಪ್ರೀತಿಯ ಉಡುಗೊರೆ ಯಿಂದ ಪುಳಕಿತನಾದ ಆಂಜನೇಯನು, ತಾಯೇ, ಇಂದಿನಿಂದ ಯಾರೇ ಭಕ್ತರು ಭಕ್ತಿ ಯಿಂದ ನನಗೆ ವೀಳ್ಯದೆಲೆಯ ಹಾರವನ್ನು ಅರ್ಪಿಸುತ್ತಾರೋ, ಅವರ ಕಷ್ಟ-ಕಾರ್ಪಣ್ಯ, ಮಾಟ-ಮಂತ್ರದ ದೋಷ, ಭಯ ಮತ್ತು ಗ್ರಹದೋಷಗಳನ್ನು ನಿವಾರಿಸಿ ಇಷ್ಟಾರ್ಥಗಳನ್ನು ಈಡೇರಿಸುತ್ತೇನೆ ಎಂದು ವರವಿತ್ತನು.

ಇದನ್ನೂ ಓದಿ: Roopa Gururaj Column: ಸಮೃದ್ಧಿಯ ಸಾಕಾರಮೂರ್ತಿ ಶ್ರೀಲಕ್ಮೀಯ ಹದಿನೆಂಟು ಸದ್ಗುಣ ತತ್ವಗಳು

ಅಂದಿನಿಂದ ಆಂಜನೇಯನಿಗೆ ಮಂಗಳವಾರ, ಶನಿವಾರಗಳಂದು 16, 48 ಅಥವಾ 108 ಎಲೆಗಳ ಹಾರ ವನ್ನು ಅರ್ಪಿಸುವ ಪದ್ಧತಿ ಲೋಕದಲ್ಲಿ ರೂಢಿಗೆ ಬಂದಿತು. ಹೀಗೆ ಪವಿತ್ರತೆ ಪಡೆದ ವೀಳ್ಯದೆಲೆ ಯು ಸಾಕ್ಷಾತ್ ಲಕ್ಷ್ಮೀದೇವಿಯ ವಾಸಸ್ಥಾನವಾಗಿ ಬದ ಲಾಯಿತು. ಆ ಎಲೆಯ ಬಲಕ್ಕೆ ಬ್ರಹ್ಮ, ಮಧ್ಯದಲ್ಲಿ ಸರಸ್ವತಿ, ಎಡಕ್ಕೆ ಪಾರ್ವತಿ, ದಂಟಿನಲ್ಲಿ ವಿಷ್ಣು, ಹಿಂದೆ ಚಂದ್ರ, ಮೃದು ಮಧ್ಯದಲ್ಲಿ ಮನ್ಮಥ ಹಾಗೂ ಮೂಲೆಮೂಲೆಗಳಲ್ಲಿ ಪರಮೇಶ್ವರನೇ ನೆಲೆನಿಂತರು. ಆದರೆ ಎಲೆಯ ತುದಿಯಲ್ಲಿ ಮೃತ್ಯುದೇವತೆಯೂ, ತೊಟ್ಟಿನಲ್ಲಿ ಅಹಂಕಾರದ ದೇವತೆಯಾದ ಜ್ಯೇಷ್ಠಾಲಕ್ಷ್ಮಿಯೂ ನೆಲೆಯಾಗಿ ದ್ದರಿಂದ, ಜನರು ಎಲೆಯ ತುದಿ-ತೊಟ್ಟುಗಳನ್ನು ಮುರಿದು, ‘ಕರ್ಪೂರ ಚೂರ್ಣಸಂಯುಕ್ತಂ ತಾಂಬೂಲಂ ಪ್ರತಿಗೃಹ್ಯತಾಮ’ ಎಂದು ಭಗವಂತನಿಗೆ ನಿವೇದಿಸಿ, ಊಟದ ನಂತರ ಅತಿಥಿಗಳಿಗೂ ತಾಂಬೂಲ ನೀಡಿ ಆಶೀರ್ವಾದ ಪಡೆಯುವ ಪದ್ಧತಿ ಶುರುವಾಯಿತು.

ಮದುವೆ, ಉಪನಯನ, ನಿಶ್ಚಿತಾರ್ಥಗಳಂತಹ ಪ್ರತಿಯೊಂದು ಮಂಗಳಕಾರ್ಯಕ್ಕೂ ಈ ತಾಂಬೂ ಲವೇ ಪರಸ್ಪರ ಪ್ರೀತಿ, ಒಪ್ಪಿಗೆ ಮತ್ತು ಗೌರವದ ಸಂಕೇತವಾಯಿತು. ಮನೆಗೆ ಬಂದ ವರಿಗೆ ಎರಡು ಎಲೆ, ಅಡಿಕೆ ಮತ್ತು ಫಲದಕ್ಷಿಣೆ ನೀಡುವುದು ಶ್ರೇಷ್ಠ ಸಂಪ್ರದಾಯವಾಯಿತು. ಸಮಾರಂಭಗಳಲ್ಲಿ ಉಳಿದ ಎಲೆಗಳನ್ನು ವ್ಯರ್ಥ ಮಾಡದೆ, ಅಡಿಕೆ ಪುಡಿ, ಸಕ್ಕರೆ, ಏಲಕ್ಕಿ, ಲವಂಗ ಬೆರೆಸಿ ಅರೆದು ಮುಖವಾಸವಾಗಿ ಸಂರಕ್ಷಿಸಿ ಬಳಸಲು ಕಲಿತರು.ಅಷ್ಟೇ ಅಲ್ಲದೆ, ಈ ವಿಳ್ಳೇ ದೆಲೆಯು ಸಂಜೀವಿನಿ ಯಂತೆ ಜನರ ಆರೋಗ್ಯ ರಕ್ಷಣೆಗೂ ನಿಂತಿತು. ನೆಗಡಿ-ಕಫವಾದಾಗ ಶುಂಠಿ -ಜೇನುತುಪ್ಪದೊಂದಿಗೆ, ಅಜೀರ್ಣವಾದಾಗ ಕಾಳುಮೆಣಸಿನೊಂದಿಗೆ, ಪುಟ್ಟ ಮಕ್ಕಳಿಗೆ ಹೊಟ್ಟೆ ಉಬ್ಬರವಾದಾಗ ಹರಳೆಣ್ಣೆ ಸವರಿ ಬೆಚ್ಚಗೆ ಮಾಡಿ ಹೊಟ್ಟೆಗೆ ಇಡುವ ಮೂಲಕ ದಿವ್ಯ ಔಷಧಿಯಾಗಿ ಮನೆಮನೆಯಲ್ಲೂ ನೆಲೆಸಿತು.

ತುಳಸಿಯಂತೆಯೇ ಮನೆಯಂಗಳದಲ್ಲಿ ಈ ಬಳ್ಳಿಯನ್ನು ಪಾವಿತ್ರ್ಯದಿಂದ ಪೋಷಿಸತೊಡಗಿದರು. ಹೀಗೆ ದೈವಭಕ್ತಿ, ಆರೋಗ್ಯ ಮತ್ತು ಸತ್ಕಾರದ ಪ್ರತೀಕವಾದ ತಾಂಬೂಲದ ಮಹತ್ವವನ್ನು ಸಾರುತ್ತಾ, ವಿದ್ಯೆಯನ್ನು ಗುರುವಿನಿಂದ, ಭೋಜನವನ್ನು ತಾಯಿಯಿಂದ, ಪ್ರೀತಿಯ ತಾಂಬೂಲವನ್ನು ಪತ್ನಿಯ ಕೈಯಿಂದ ಮತ್ತು ರಾಜನಿಂದ ಮನ್ನಣೆಯನ್ನು ಪಡೆಯುವುದೇ ಮನುಷ್ಯನ ಪರಮ ಭಾಗ್ಯ ಎಂಬ ಮಾತು ಸಮಾಜದಲ್ಲಿ ಸದಾ ಕಾಲಕ್ಕೂ ಅಚ್ಚಳಿಯದೆ ಉಳಿದುಕೊಂಡಿತು.

ನಮ್ಮ ಭಾರತೀಯ ಆಹಾರ ಪದ್ಧತಿಯನ್ನು ಆಯುರ್ವೇದದ ಹಿನ್ನೆಲೆಯಿಂದ ಅದೆಷ್ಟು ಜಾಣ್ಮೆ ಯಿಂದ ಮಾಡಿದ್ದಾರೆ. ನಮ್ಮ ಅಡಿಗೆ ಮನೆಯಲ್ಲಿರುವ ಪ್ರತಿಯೊಂದು ಧಾನ್ಯದಲ್ಲೂ ಔಷಧಿ ಇದೆ. ನಾವು ಬಳಸುವ ಪ್ರತಿ ಸೊಪ್ಪು ಕೂಡ ನಮಗೆ ಸಂಜೀವಿನಿಯಾಗಿ ಆರೋಗ್ಯವನ್ನು ವೃದ್ಧಿಸುತ್ತದೆ. ಆಹಾರದ ನಂತರ ಜಗಿಯುವ ವೀಳ್ಯದೆಲೆ ಆಹಾರವನ್ನು ಜೀರ್ಣಿಸಲು ಮತ್ತು ಅನೇಕ ಉದರ ಸಂಬಂಧಿ ತೊಂದರೆಗಳಿಂದ ಪಾರು ಮಾಡಲು ಸಹಾಯಕವಾಗುತ್ತದೆ.

ಅಷ್ಟೇ ಅಲ್ಲ ನಮ್ಮ ಮನೆಯ ಪೂಜಾ ಕಾರ್ಯಗಳಲ್ಲಿ ವೀಳ್ಯದೆಲೆಗೆ ವಿಶೇಷ ಸ್ಥಾನ. ಹೀಗಾಗಿ ಮನೆಯಲ್ಲಿ ಸದಾ ಇದು ಇದ್ದೇ ಇರುತ್ತದೆ. ಎಲ್ಲಾ ವಯೋ ಮಾನದವರಿಗೂ ವೀಳ್ಯದೆಲೆ ದಿವ್ಯ ಔಷಧ. ಇದರ ಔಷಧಿಯ ಗುಣಗಳನ್ನು ತಿಳಿದು ಬಳಸುವ ಜಾಣ್ಮೆ ನಮಗಿದ್ದರಾಯಿತು. ನಮ್ಮ ಹಿರಿಯರು ಮಾಡಿರುವ ಪದ್ಧತಿಗಳು ಹಾಕಿ ಕೊಟ್ಟಿರುವ ರೂಢಿಗಳಲ್ಲಿ ಎಷ್ಟೊಂದು ಮೌಲ್ಯಯುತ ವಾದ ವಿಚಾರಗಳು ಅಡಗಿವೆ ಅವುಗಳನ್ನು ತಿಳಿದು ಆಚರಿಸುವ ಸಂಪ್ರದಾಯ ಬೆಳೆಸಿಕೊಳ್ಳೋಣ.