ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ವಿಮಾನದ ರೆಕ್ಕೆಗಳು ಮುರಿಯಬಹುದೇ ?

ವಿಮಾನದ ಹಾರಾಟದ ಸಮಯದಲ್ಲಿ ರೆಕ್ಕೆ ಮುರಿಯುವುದು ವಿಮಾನಯಾನದ ಅತ್ಯಂತ ದೊಡ್ಡ ದುರಂತಗಳಲ್ಲಿ ಒಂದಾಗಿದ್ದರೂ, ಎಂಜಿನಿಯರ್‌ಗಳು ಇದನ್ನು ತಡೆಯಲು ಹಲವು ದಶಕಗಳಿಂದ ಕಟ್ಟುನಿಟ್ಟಿನ ಸುರಕ್ಷತಾ ವ್ಯವಸ್ಥೆಗಳನ್ನು ಜಾರಿಗೆ ತಂದಿದ್ದಾರೆ. ವಿಮಾನದ ರೆಕ್ಕೆಗಳು ಮುರಿಯ ದಿರಲು ಕಾರಣ ಅವುಗಳ ವಿನ್ಯಾಸದಲ್ಲಿ ಅಡಗಿದೆ.

Vishweshwar Bhat Column:  ವಿಮಾನದ ರೆಕ್ಕೆಗಳು ಮುರಿಯಬಹುದೇ ?

-

ಸಂಪಾದಕರ ಸದ್ಯಶೋಧನೆ

ವಿಮಾನ ಹಾರಾಟದ ಸಮಯದಲ್ಲಿ ಅದರ ರೆಕ್ಕೆಗಳು ಮುರಿಯುವ ಸಾಧ್ಯತೆ ಇದೆಯೇ? ಇದು ಪ್ರಯಾಣಿಕರಲ್ಲಿ ಆತಂಕ ಮೂಡುವ ಒಂದು ಸಾಮಾನ್ಯ ಪ್ರಶ್ನೆ. ವಿಮಾನ ಎತ್ತರದಲ್ಲಿ ಹಾರುವಾಗ ಪ್ರತಿಕೂಲ ವಾತಾವರಣದಿಂದ ಜೋರಾಗಿ ಅಲುಗಾಡಿದಾಗ, ರೆಕ್ಕೆಗಳು ಮೇಲಕ್ಕೆ-ಕೆಳಕ್ಕೆ ಚಲಿಸುವಾಗ ಈ ಅನುಮಾನ ಮೂಡುವುದು ಸಹಜ.

ಇದಕ್ಕೆ ನೇರವಾದ ಉತ್ತರವೆಂದರೆ, ಸಾಮಾನ್ಯ ಪರಿಸ್ಥಿತಿಗಳಲ್ಲಿ, ವಿಮಾನದ ರೆಕ್ಕೆಗಳು ಮುರಿಯುವ ಸಾಧ್ಯತೆ ಅತ್ಯಂತ ವಿರಳ ಅಥವಾ ಬಹುತೇಕ ಇಲ್ಲವೇ ಇಲ್ಲ ಎನ್ನಬಹುದು. ಆದರೆ, ತೀವ್ರವಾದ ವೈಫಲ್ಯಗಳು, ವಿಪರೀತ ಒತ್ತಡಗಳು ಅಥವಾ ವಿನ್ಯಾಸದ ದೋಷಗಳು ಇದ್ದಾಗ ಇಂಥ ಘಟನೆಗಳು ಇತಿಹಾಸದಲ್ಲಿ ಅಪರೂಪವಾಗಿ ಸಂಭವಿಸಿದ್ದುಂಟು.

ವಿಮಾನದ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆಯಲ್ಲಿರುವ ಅತ್ಯುನ್ನತ ಸುರಕ್ಷತಾ ಮಾನದಂಡ ಗಳು ಈ ಅಪಾಯವನ್ನು ತೀವ್ರವಾಗಿ ಕಡಿಮೆ ಮಾಡಿವೆ. ಆಧುನಿಕ ವಿಮಾನದ ರೆಕ್ಕೆಗಳು ಕೇವಲ ವಿಮಾನವನ್ನು ಗಾಳಿಯಲ್ಲಿ ತೇಲಿಸುವ ರಚನೆಗಳಲ್ಲ. ಅವು ವಿಮಾನದ ವಿನ್ಯಾಸ ಮತ್ತು ಎಂಜಿನಿಯರಿಂಗ್‌ನ ಅತ್ಯಂತ ಮಹತ್ವದ ಭಾಗವಾಗಿದ್ದು, ಹಾರಾಟದ ಪ್ರತಿ ಹಂತದಲ್ಲೂ ಬರುವ ವಿಪರೀತ ಒತ್ತಡಗಳನ್ನು ತಡೆದುಕೊಳ್ಳುವಂತೆ ನಿರ್ಮಿಸಲಾಗಿರುತ್ತದೆ.

ಇದನ್ನೂ ಓದಿ: Vishweshwar Bhat Column: ವಿಮಾನದ ಆಂಟೆನಾಗಳು

ವಿಮಾನದ ಹಾರಾಟದ ಸಮಯದಲ್ಲಿ ರೆಕ್ಕೆ ಮುರಿಯುವುದು ವಿಮಾನಯಾನದ ಅತ್ಯಂತ ದೊಡ್ಡ ದುರಂತಗಳಲ್ಲಿ ಒಂದಾಗಿದ್ದರೂ, ಎಂಜಿನಿಯರ್‌ಗಳು ಇದನ್ನು ತಡೆಯಲು ಹಲವು ದಶಕಗಳಿಂದ ಕಟ್ಟುನಿಟ್ಟಿನ ಸುರಕ್ಷತಾ ವ್ಯವಸ್ಥೆಗಳನ್ನು ಜಾರಿಗೆ ತಂದಿದ್ದಾರೆ. ವಿಮಾನದ ರೆಕ್ಕೆಗಳು ಮುರಿಯ ದಿರಲು ಕಾರಣ ಅವುಗಳ ವಿನ್ಯಾಸದಲ್ಲಿ ಅಡಗಿದೆ.

ವಿಮಾನದ ರೆಕ್ಕೆಗಳನ್ನು ವಿನ್ಯಾಸಗೊಳಿಸುವಾಗ ಎಂಜಿನಿಯರ್‌ಗಳು ಎರಡು ಪ್ರಮುಖ ತತ್ವಗಳನ್ನು ಅನುಸರಿಸುತ್ತಾರೆ. ಪ್ರತಿ ವಿಮಾನವನ್ನು ಅದರ ಸಾಮಾನ್ಯ ಹಾರಾಟದ ಪರಿಸ್ಥಿತಿಗಿಂತ ಹಲವು ಪಟ್ಟು ಹೆಚ್ಚು ಒತ್ತಡವನ್ನು ತಡೆದುಕೊಳ್ಳುವಂತೆ ನಿರ್ಮಿಸಲಾಗುತ್ತದೆ. ಇದನ್ನು ಲೋಡ್ ಫ್ಯಾಕ್ಟರ್ (Load Factor) ಎಂದು ಕರೆಯಲಾಗುತ್ತದೆ.

ವಿಮಾನಯಾನ ನಿಯಮಗಳ ಪ್ರಕಾರ, ರೆಕ್ಕೆಗಳು ವಿಮಾನದ ಸಾಮಾನ್ಯ ಹಾರಾಟದ ಸಮಯದಲ್ಲಿ ಬರುವ ಅತ್ಯಧಿಕ ಒತ್ತಡಕ್ಕಿಂತ ಕನಿಷ್ಠ ಒಂದೂವರೆ ಪಟ್ಟು ಹೆಚ್ಚಿನ ಒತ್ತಡವನ್ನು (ಅಂದರೆ, ಶೇ.150 ರಷ್ಟು ಲೋಡ್ ಫ್ಯಾಕ್ಟರ್) ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರಬೇಕು. ವಿಮಾನಗಳು ಉತ್ಪಾದನಾ ಹಂತದಲ್ಲಿ ವಿನಾಶಕಾರಿ ಪರೀಕ್ಷೆಗೆ (Destructive Testing) ಒಳಗಾಗುತ್ತವೆ. ಈ ಪರೀಕ್ಷೆ ಗಳಲ್ಲಿ, ರೆಕ್ಕೆಗಳು ಮುರಿಯುವವರೆಗೂ ಒತ್ತಡವನ್ನು ಹೇರಲಾಗುತ್ತದೆ.

ರೆಕ್ಕೆಗಳು, ವಿನ್ಯಾಸದಲ್ಲಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಒತ್ತಡದಲ್ಲಿ ಮಾತ್ರ ಮುರಿಯಬೇಕು. ಈ ಪರೀಕ್ಷೆ ಗಳು ರೆಕ್ಕೆಗಳ ವಿನ್ಯಾಸದ ಸಾಮರ್ಥ್ಯವನ್ನು ದೃಢಪಡಿಸುತ್ತವೆ. ವಿಮಾನದ ರೆಕ್ಕೆಯನ್ನು ಮೇಲೆ ಮತ್ತು ಕೆಳಗೆ ಬಲವಾಗಿ ಬಾಗಿಸುವ ಪರೀಕ್ಷೆಗಳು ಇದರಲ್ಲಿ ಸೇರಿವೆ. ವಿಮಾನಗಳು ಸಾವಿರಾರು ಹಾರಾಟಗಳನ್ನು ನಿರ್ವಹಿಸುತ್ತವೆ. ಪ್ರತಿ ಟೇಕ್‌ಆಫ್, ಲ್ಯಾಂಡಿಂಗ್ ಮತ್ತು ಪ್ರಕ್ಷುಬ್ಧತೆಯು ರೆಕ್ಕೆಗಳ ರಚನೆಯ ಮೇಲೆ ಪುನರಾವರ್ತಿತ ಒತ್ತಡವನ್ನು ಉಂಟು ಮಾಡುತ್ತದೆ. ‌

ಇದನ್ನು ಮೆಟಲ್ ಫೆಟಿಗ್ (Metal Fatigue) ಎಂದು ಕರೆಯಲಾಗುತ್ತದೆ. ಆಧುನಿಕ ರೆಕ್ಕೆಗಳನ್ನು ಫೇಲ್ಸೇಫ್ (Fail-Safe) ತತ್ವದ ಮೇಲೆ ನಿರ್ಮಿಸಲಾಗಿದೆ. ಇದರರ್ಥ, ರೆಕ್ಕೆಯ ಒಂದು ಭಾಗದಲ್ಲಿ ಬಿರುಕು ಅಥವಾ ಸಣ್ಣ ಹಾನಿ ಸಂಭವಿಸಿದರೂ, ಸಂಪೂರ್ಣ ರೆಕ್ಕೆಯ ರಚನೆಯು ತಕ್ಷಣವೇ ವಿಫಲ ವಾಗುವುದಿಲ್ಲ.

ರೆಕ್ಕೆಯನ್ನು ಬಹು-ಕಂಬಗಳ ( Multiple Spars) ಮತ್ತು ಬಲವಾದ ಪಟ್ಟಿಗಳ (Ribs) ನೆರವಿನಿಂದ ನಿರ್ಮಿಸಲಾಗಿರುತ್ತದೆ, ಇದರಿಂದ ಒಂದು ಭಾಗ ವಿಫಲವಾದರೆ, ಇತರ ಭಾಗಗಳು ತಾತ್ಕಾಲಿಕವಾಗಿ ಲೋಡ್ ಅನ್ನು ಹೊರಲು ಸಹಾಯ ಮಾಡುತ್ತವೆ, ಪೈಲಟ್‌ಗೆ ಸುರಕ್ಷಿತವಾಗಿ ಇಳಿಯಲು ಸಮಯಾ ವಕಾಶ ಸಿಗುತ್ತದೆ.

ಸಾಮಾನ್ಯ ಹಾರಾಟದ ಸಮಯದಲ್ಲಿ ರೆಕ್ಕೆಗಳು ಮುರಿಯದಿದ್ದರೂ, ಕೆಲವು ವಿಪರೀತ ಸನ್ನಿವೇಶ ಗಳು ಇದಕ್ಕೆ ಕಾರಣವಾಗಬಹುದು. ರೆಕ್ಕೆಗಳ ಮೇಲೆ ಅತ್ಯಧಿಕ ಒತ್ತಡ ಬೀಳಲು ಹವಾಮಾನವೇ ಪ್ರಬಲ ಕಾರಣವಾಗಿರಬಹುದು. ತೀವ್ರ ಪ್ರಕ್ಷುಬ್ಧತೆ (Extreme Turbulence)ಯು ರೆಕ್ಕೆಗಳ ಮೇಲೆ ಅನಿರೀಕ್ಷಿತ ಮತ್ತು ಹಠಾತ್ ಏರಿಕೆ-ಇಳಿಕೆಯ ಬಲಗಳನ್ನು ಉಂಟುಮಾಡುತ್ತದೆ.

ಆದರೆ, ವಿಮಾನಗಳು ಸಾಮಾನ್ಯವಾಗಿ ಅಂಥ ತೀವ್ರ ಪರಿಸ್ಥಿತಿಗಳನ್ನು ಎದುರಿಸುವ ಮುನ್ನವೇ ಅದನ್ನು ಪತ್ತೆಹೆಚ್ಚುತ್ತವೆ. ಪೈಲಟ್ ಅತಿ ಹೆಚ್ಚಿನ ವೇಗದಲ್ಲಿ ವಿಮಾನವನ್ನು ತೀಕ್ಷ್ಣವಾದ ಮತ್ತು ತೀವ್ರ ತಿರುವುಗಳಿಗೆ ಒಳಪಡಿಸಿದರೆ, ರೆಕ್ಕೆಗಳ ಮೇಲೆ ವಿನ್ಯಾಸಗೊಳಿಸಿದ ಮಿತಿಗಿಂತ ಹೆಚ್ಚಿನ ಗುರುತ್ವಾಕರ್ಷಣೆಯ ಬಲ (G-Force) ಬೀಳಬಹುದು. ಇದು ಪೈಲಟ್ ದೋಷದಿಂದ ಉಂಟಾಗುವ ಒಂದು ಸನ್ನಿವೇಶ.