Roopa Gururaj Column: ಭಕ್ತ ಮಾರ್ಕಂಡೇಯ ಮತ್ತು ನಂಬಿಕೆಯ ಶಕ್ತಿ
ನಿಮಗೆ ನೂರು ವರ್ಷ ಬಾಳುವ, ಆದರೆ ಬುದ್ಧಿಹೀನನಾದ ಮಗ ಬೇಕೇ? ಅಥವಾ ಕೇವಲ ಹದಿನಾರೇ ವರ್ಷ ಬದುಕುವ, ಜ್ಞಾನಿಯಾದ ಸದ್ಗುಣ ಸಂಪನ್ನ ಮಗ ಬೇಕೇ? ಎಂದು ಕೇಳಿದನು. ಮಹರ್ಷಿಗಳು ಜ್ಞಾನಿಯಾದ ಮಗನನ್ನೇ ಬೇಡಿದರು. ಹೀಗೆ ಜನಿಸಿದ ಬಾಲಕನೇ ಮಾರ್ಕಂಡೇಯ. ಅವನು ಚಿಕ್ಕ ವಯಸ್ಸಿನ ಸಕಲ ಶಾಸ್ತ್ರಗಳನ್ನು ಕಲಿತು, ಶಿವನ ಪರಮ ಭಕ್ತನಾದನು.
-
ಒಂದೊಳ್ಳೆ ಮಾತು
ನಮ್ಮ ಪುರಾಣಗಳು ಕೇವಲ ದೇವ-ದೇವತೆಗಳ ಕಥೆಗಳನ್ನಷ್ಟೇ ಹೇಳುವುದಿಲ್ಲ. ಬದಲಿಗೆ ಬದುಕಿಗೆ ಅಗತ್ಯವಾದ ಆತ್ಮವಿಶ್ವಾಸ, ಧೈರ್ಯ ಮತ್ತು ಅಚಲವಾದ ನಂಬಿಕೆಯ ಪಾಠಗಳನ್ನು ಕಲಿಸುತ್ತವೆ. ಅಂತಹದ್ದೇ ಒಂದು ಅದ್ಭುತ ಪುರಾಣದ ಕಥೆ ‘ಭಕ್ತ ಮಾರ್ಕಂಡೇಯ’ನದು.
ಮೃಕಂಡು ಮಹರ್ಷಿ ಮತ್ತು ಅವರ ಪತ್ನಿ ಮರುದ್ವತಿಗೆ ಬಹಳ ವರ್ಷಗಳ ಕಾಲ ಮಕ್ಕಳಿರಲಿಲ್ಲ. ಅವರು ಶಿವನನ್ನು ಕುರಿತು ಘೋರ ತಪಸ್ಸನ್ನು ಆಚರಿಸಿದರು. ಅವರ ತಪಸ್ಸಿಗೆ ಒಲಿದ ಶಿವನು ಪ್ರತ್ಯಕ್ಷನಾಗಿ, ನಿಮಗೆ ನೂರು ವರ್ಷ ಬಾಳುವ, ಆದರೆ ಬುದ್ಧಿಹೀನನಾದ ಮಗ ಬೇಕೇ? ಅಥವಾ ಕೇವಲ ಹದಿನಾರೇ ವರ್ಷ ಬದುಕುವ, ಜ್ಞಾನಿಯಾದ ಸದ್ಗುಣ ಸಂಪನ್ನ ಮಗ ಬೇಕೇ? ಎಂದು ಕೇಳಿದನು. ಮಹರ್ಷಿಗಳು ಜ್ಞಾನಿಯಾದ ಮಗನನ್ನೇ ಬೇಡಿದರು. ಹೀಗೆ ಜನಿಸಿದ ಬಾಲಕನೇ ಮಾರ್ಕಂಡೇಯ. ಅವನು ಚಿಕ್ಕ ವಯಸ್ಸಿನ ಸಕಲ ಶಾಸ್ತ್ರಗಳನ್ನು ಕಲಿತು, ಶಿವನ ಪರಮ ಭಕ್ತನಾ ದನು. ಆದರೆ, ಹೆತ್ತವರಿಗೆ ಅವನ ಆಯಸ್ಸು ಮುಗಿಯುತ್ತಾ ಬಂದಿದೆ ಎಂಬ ಯೋಚನೆ ದಿನದಿಂದ ದಿನಕ್ಕೆ ಕಾಡತೊಡಗಿತು. ಕೊನೆಗೆ ತಂದೆ-ತಾಯಿ ಮಗನಿಗೆ ವಿಧಿಯ ಲಿಖಿತವನ್ನು ತಿಳಿಸಿದರು. ಅದನ್ನು ಕೇಳಿ ಮಾರ್ಕಂಡೇಯ ಧೃತಿಗೆಡಲಿಲ್ಲ.
ಇದನ್ನೂ ಓದಿ: Roopa Gururaj Column: ಲೇಡಿ ಮೆಹರ್ʼಬಾಯಿ ಟಾಟಾ ಮತ್ತು ಜುಬಿಲಿ ವಜ್ರ
ನನ್ನನ್ನು ಕಾಯಲು ಆ ಮಹಾದೇವನಿರುವಾಗ ನಾನೇಕೆ ಹೆದರಬೇಕು? ಎಂದು ಶಿವಲಿಂಗದ ಮುಂದೆ ಕುಳಿತು ಘೋರ ತಪಸ್ಸನ್ನು ಆರಂಭಿಸಿದನು. ಅವನಿಗೆ ಹದಿನಾರು ವರ್ಷ ತುಂಬಿದ ಆ ದಿನ, ಕಾಲ ಬಂದೇ ಬಿಟ್ಟಿತು. ಮಾರ್ಕಂಡೇಯನ ಪ್ರಾಣವನ್ನು ಕೊಂಡೊಯ್ಯಲು ಸ್ವತಃ ಯಮ ಧರ್ಮರಾಜನೇ ಪಾಶವನ್ನು ಹಿಡಿದು ಬಂದನು.
ಯಮರಾಜನು ತನ್ನ ಸಾವು ಹತ್ತಿರ ಬಂದಿರುವುದನ್ನು ಕಂಡು ಮಾರ್ಕಂಡೇಯನು ಭಯ ಪಡದೆ, ಅ ಇದ್ದ ಶಿವಲಿಂಗವನ್ನು ಗಟ್ಟಿಯಾಗಿ ಎರಡು ಕೈಗಳಿಂದ ಅಪ್ಪಿಕೊಂಡನು. ಯಮನು ತನ್ನ ಕಾಲ ಪಾಶವನ್ನು ಮಾರ್ಕಂಡೇಯನ ಮೇಲೆ ಎಸೆದಾಗ, ಆ ಪಾಶವು ಮಾರ್ಕಂಡೇಯನ ಜತೆಗೆ ಆ ಶಿವಲಿಂಗಕ್ಕೂ ಸುತ್ತಿಕೊಂಡಿತು.
ತನ್ನ ಪರಮ ಭಕ್ತನನ್ನು ಯಮನು ಮುಟ್ಟಿದ್ದನ್ನು ಕಂಡು ಶಿವಲಿಂಗದಿಂದ ರೌದ್ರಾವತಾರದಲ್ಲಿ ಈಶ್ವರನು ಪ್ರತ್ಯಕ್ಷನಾದನು. ತನ್ನ ಭಕ್ತನನ್ನು ರಕ್ಷಿಸಲು ಶಿವನು ಯಮನ ಎದೆಗೆ ಒದ್ದು, ಮಾರ್ಕಂ ಡೇಯನನ್ನು ಮೃತ್ಯುವಿನಿಂದ ಪಾರು ಮಾಡಿದನು. ಅಷ್ಟೇ ಅಲ್ಲದೆ, ಮಾರ್ಕಂಡೇಯನಿಗೆ ‘ಎಂದೆಂದಿಗೂ ಹದಿನಾರರ ಹರೆಯದ ಚಿರಂಜೀವಿ’ಯಾಗಿ ಬಾಳುವಂತೆ ವರವನ್ನು ನೀಡಿದನು. ಅಂದಿನಿಂದ ಶಿವನಿಗೆ ‘ಮೃತ್ಯುಂಜಯ’ ಎಂಬ ಹೆಸರು ಬಂದಿತು.
ವಿಧಿ ಅಥವಾ ಪರಿಸ್ಥಿತಿ ನಮಗೆ ಎಷ್ಟೇ ಕಠಿಣ ಸವಾಲುಗಳನ್ನು ಒಡ್ಡಿದರೂ, ನಮ್ಮಲ್ಲಿ ಅಚಲ ವಾದ ನಂಬಿಕೆ ಮತ್ತು ಧೈರ್ಯವಿದ್ದರೆ ಮೃತ್ಯುವನ್ನೇ ಗೆಲ್ಲಬಹುದು. ಸೋಲು ಅಥವಾ ಕಷ್ಟಗಳು ಎದುರಾ ದಾಗ ಮನಸ್ಸು ಧೈರ್ಯಗೆಡುವುದು ಸಹಜ. ಪ್ರಾಮಾಣಿಕ ಪ್ರಯತ್ನ ಮತ್ತು ಭಗವಂತನ ಮೇಲಿನ ನಂಬಿಕೆ ನಮ್ಮನ್ನು ಯಾವುದೇ ದೊಡ್ಡ ಸಂಕಟದಿಂದಲಾದರೂ ಪಾರು ಮಾಡುತ್ತದೆ. ಇಂತಹ ಅನೇಕ ಸನ್ನಿವೇಶಗಳು ನಮಗೆ ಬದುಕಿನಲ್ಲಿ ಎದುರಾಗುತ್ತಲೇ ಇರುತ್ತವೆ. ಆದರೆ, ಧೃತಿಗೆಡದಿರು ವುದೇ ಬದುಕಿನ ಅತಿ ದೊಡ್ಡ ಶಕ್ತಿ.