ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr Jagadeesh Maane Column: ಬಲಿಷ್ಠ ರಾಷ್ಟ್ರಗಳ ಮೌನವೂ ಮಾತಾಡುತ್ತದೆ!

ವಿದೇಶಾಂಗ ನೀತಿಯು ಅತ್ಯಂತ ಜಟಿಲವಾದ ಕ್ಷೇತ್ರ. ಇಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ; ಯಾರೂ ಶಾಶ್ವತ ಮಿತ್ರರೂ ಅಲ್ಲ. ರಾಷ್ಟ್ರಗಳು ತಮ್ಮ ರಾಷ್ಟ್ರೀಯ ಹಿತಾಸಕ್ತಿ, ಭದ್ರತೆ, ಆರ್ಥಿಕ ಅಭಿವೃದ್ಧಿ ಹಾಗೂ ರಾಜತಾಂತ್ರಿಕ ಅಗತ್ಯಗಳಿಗೆ ಅನುಗುಣವಾಗಿ ತಮ್ಮ ಸ್ನೇಹ ಮತ್ತು ಶತ್ರುತ್ವವನ್ನು ರೂಪಿಸಿ ಕೊಳ್ಳುತ್ತವೆ. ವಿಶ್ವದ ಯಾವುದೇ ರಾಷ್ಟ್ರವು ಮತ್ತೊಂದು ರಾಷ್ಟ್ರದೊಂದಿಗೆ ಕೇವಲ ಭಾವನಾತ್ಮಕ ಕಾರಣಗಳಿಂದ ಸ್ನೇಹ ಬೆಳೆಸುವುದಿಲ್ಲ. ಬದಲಾಗಿ, ತನ್ನ ಸ್ವಹಿತಾಸಕ್ತಿಗಳನ್ನು ಪರಿಗಣಿಸಿ ಮಾತ್ರ ಸಂಬಂಧಗಳನ್ನು ಬೆಳೆಸುತ್ತದೆ.

ಬಲಿಷ್ಠ ರಾಷ್ಟ್ರಗಳ ಮೌನವೂ ಮಾತಾಡುತ್ತದೆ!

-

Profile
Ashok Nayak Jul 8, 2026 6:00 AM

ರಾಜತಂತ್ರ

ಡಾ.ಜಗದೀಶ ಮಾನೆ

ಇಂದಿನ ವಿಶ್ವ ರಾಜಕಾರಣವನ್ನು ನೋಡುತ್ತಿದ್ದರೆ ಇಲ್ಲಿ ಗೌರವವನ್ನು ಯಾರೂ ಕೊಡುವುದಿಲ್ಲ, ಬದಲಾಗಿ ಅದನ್ನು ಗಳಿಸಿಕೊಳ್ಳಬೇಕು. ಆ ಶಕ್ತಿ ಇಲ್ಲದ ರಾಷ್ಟ್ರದ ಮಾತಿಗಿಂದು ಕವಡೆ ಕಾಸಿನ ಕಿಮ್ಮತ್ತಿಲ್ಲ. ಈ ಕಠೋರ ಸತ್ಯವನ್ನು ಅರ್ಥಮಾಡಿಕೊಂಡು ಮುನ್ನಡೆಯುವ ರಾಷ್ಟ್ರಗಳು ವಿಶ್ವದ ನಾಯಕತ್ವವನ್ನು ವಹಿಸುತ್ತವೆ. ಹಾಗಾಗಿ ಆ ಶಕ್ತಿಯುತ ರಾಷ್ಟ್ರಗಳ ಮೌನವೂ ಕೂಡಾ ಜಗತ್ತಿನ ಗಮನ ಸೆಳೆಯುತ್ತದೆ. ಈ ನಿಟ್ಟಿನಲ್ಲಿ ಭಾರತ ಇಂದು ಆ ಹಂತವನ್ನು ತಲುಪುತ್ತಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಸೇರಿದಂತೆ ಜಗತ್ತಿನ ಅನೇಕ ದೇಶಗಳು ಭಾರತದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಬದಲಿಸಿವೆ. ಒಂದು ಕಾಲದಲ್ಲಿ ಪ್ರಾದೇಶಿಕ ಶಕ್ತಿಯಾಗಿ ಪರಿಗಣಿಸಲ್ಪಟ್ಟಿದ್ದ ಭಾರತ, ಇಂದು ಜಾಗತಿಕ ರಾಜಕೀಯದ ಪ್ರಮುಖ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಬಲಿಷ್ಠ ರಾಷ್ಟ್ರವಾಗಿ ಹೊರ ಹೊಮ್ಮಿದೆ.

ವಿದೇಶಾಂಗ ನೀತಿಯು ಅತ್ಯಂತ ಜಟಿಲವಾದ ಕ್ಷೇತ್ರ. ಇಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ; ಯಾರೂ ಶಾಶ್ವತ ಮಿತ್ರರೂ ಅಲ್ಲ. ರಾಷ್ಟ್ರಗಳು ತಮ್ಮ ರಾಷ್ಟ್ರೀಯ ಹಿತಾಸಕ್ತಿ, ಭದ್ರತೆ, ಆರ್ಥಿಕ ಅಭಿವೃದ್ಧಿ ಹಾಗೂ ರಾಜತಾಂತ್ರಿಕ ಅಗತ್ಯಗಳಿಗೆ ಅನುಗುಣವಾಗಿ ತಮ್ಮ ಸ್ನೇಹ ಮತ್ತು ಶತ್ರುತ್ವವನ್ನು ರೂಪಿಸಿ ಕೊಳ್ಳುತ್ತವೆ. ವಿಶ್ವದ ಯಾವುದೇ ರಾಷ್ಟ್ರವು ಮತ್ತೊಂದು ರಾಷ್ಟ್ರದೊಂದಿಗೆ ಕೇವಲ ಭಾವನಾತ್ಮಕ ಕಾರಣಗಳಿಂದ ಸ್ನೇಹ ಬೆಳೆಸುವುದಿಲ್ಲ. ಬದಲಾಗಿ, ತನ್ನ ಸ್ವಹಿತಾಸಕ್ತಿಗಳನ್ನು ಪರಿಗಣಿಸಿ ಮಾತ್ರ ಸಂಬಂಧಗಳನ್ನು ಬೆಳೆಸುತ್ತದೆ.

ದೇಶಗಳ ನಡುವಿನ ಸಂಬಂಧ ಆಡಳಿತಗಾರರ ವೈಯಕ್ತಿಕ ಸ್ನೇಹದ ಪರಿಧಿಗೆ ಮಾತ್ರ ಸೀಮಿತ ವಾಗಿರುವುದಿಲ್ಲ. ಅದು ಇಡೀ ರಾಷ್ಟ್ರದ ಹಿತಾಸಕ್ತಿ ಮತ್ತು ಭದ್ರತೆಗೆ ಸಂಬಂಧಿಸಿದ ವಿಷಯ ವಾಗಿರುತ್ತದೆ. ಸ್ನೇಹವಾಗಲಿ ಅಥವಾ ಶತ್ರುತ್ವವಾಗಲಿ, ಯಾವುದೂ ಶಾಶ್ವತವಲ್ಲ; ಕಾಲ, ಪರಿಸ್ಥಿತಿ ಹಾಗೂ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಅವು ಬದಲಾಗುತ್ತಲಿರುತ್ತವೆ. ಆದ್ದರಿಂದಲೇ ಆಚಾರ್ಯ ಚಾಣಕ್ಯನು ಯುದ್ಧವನ್ನು ಅಕಾರಣವಾಗಿ ಬೆಂಬಲಿಸಿಲ್ಲ; ಅದೇ ರೀತಿ ಯುದ್ಧವನ್ನು ಸಂಪೂರ್ಣವಾಗಿ ವಿರೋಧಿಸಲೂ ಇಲ್ಲ. ರಾಷ್ಟ್ರದ ಭದ್ರತೆ ಮತ್ತು ಹಿತಾಸಕ್ತಿ ಕಾಪಾಡಲು ಅಗತ್ಯ ವಾದಾಗ ಮಾತ್ರ ಯುದ್ಧವನ್ನು ಅಂತಿಮ ಆಯ್ಕೆಯಾಗಿ ಬಳಸಬೇಕೆಂದು ಪ್ರತಿಪಾದಿಸಿದ್ದಾನೆ.

ಇದನ್ನೂ ಓದಿ: Dr Jagadeesh Maane Column: ಯುದ್ಧದ ಹೊಸ ವ್ಯಾಕರಣವನ್ನು ಭಾರತ ಓದಲೇಬೇಕು !

ಯುದ್ಧನೀತಿ, ಸ್ನೇಹ ಸಂಬಂಧಗಳು ಹಾಗೂ ಶತ್ರುತ್ವದ ಬಗ್ಗೆ ಚಾಣಕ್ಯನು ತನ್ನ ಮಂಡಲ ಸಿದ್ಧಾಂತ ದಲ್ಲಿ ಅತ್ಯಂತ ಸ್ಪಷ್ಟವಾದ ವಿವರಣೆಯನ್ನು ನೀಡಿದ್ದಾನೆ. ಮಂಡಲ ಎಂದರೆ ವೃತ್ತ ಅಥವಾ ಸರ್ಕಲ್. ಈ ಸಿದ್ಧಾಂತದ ಪ್ರಕಾರ ಸಾಮ್ರಾಜ್ಯ ವಿಸ್ತರಣೆಯ ಮಹತ್ವಾಕಾಂಕ್ಷೆ ಹೊಂದಿರುವ ರಾಷ್ಟ್ರ ವನ್ನು ಕೇಂದ್ರದಲ್ಲಿರಿಸಿ, ಅದರ ಸುತ್ತಲಿರುವ ರಾಷ್ಟ್ರಗಳನ್ನು ಮಿತ್ರ ಅಥವಾ ಶತ್ರುಗಳೆಂದು ಪರಿಗಣಿಸಲಾಗುತ್ತದೆ. ಈ ಕೇಂದ್ರ ರಾಷ್ಟ್ರವನ್ನು ‘ವಿಜಿಗೀಷು’ ಎಂದು ಕರೆಯಲಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ವಿಜಿಗೀಷುವಿನ ನೆರೆಯ ರಾಷ್ಟ್ರಗಳು ಅವನಿಗೆ ಶತ್ರುಗಳಾಗಿರುತ್ತವೆ. ಒಂದು ವೇಳೆ ಆ ಸಂದರ್ಭದಲ್ಲಿ ಶತ್ರುತ್ವ ಇರದಿದ್ದರೂ, ಅವಕಾಶ ಸಿಕ್ಕಾಗ ಅದು ಶತ್ರುತ್ವಕ್ಕೆ ತಿರುಗುವ ಸಾಧ್ಯತೆ ಇರುತ್ತದೆ.

ಉದಾಹರಣೆಗೆ, ಭಾರತವನ್ನು ಪರಿಗಣಿಸಿದರೆ ಪಾಕಿಸ್ತಾನವು ಭಾರತದ ಪ್ರಮುಖ ಶತ್ರುರಾಷ್ಟ್ರ. ಅದೇ ರೀತಿ ಚೀನಾವೂ ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ಮತ್ತೊಂದು ಪ್ರಮುಖ ಪ್ರತಿಸ್ಪರ್ಧಿ. ಬಾಂಗ್ಲಾದೇಶ ಒಂದು ಕಾಲದಲ್ಲಿ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದರೂ, ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಸಂಬಂಧಗಳಲ್ಲಿ ಬದಲಾವಣೆಗಳು ಕಂಡುಬರುತ್ತಿವೆ. ನೇಪಾಳವೂ ಭಾರತದ ನೆರೆಯ ರಾಷ್ಟ್ರವಾಗಿದ್ದು, ಕಾಲಕಾಲಕ್ಕೆ ವಿವಿಧ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಮತ್ತೊಂದೆಡೆ, ಚೀನಾದೊಂದಿಗೆ ಸ್ಪರ್ಧಾತ್ಮಕ ಸಂಬಂಧ ಹೊಂದಿರುವ ಜಪಾನ್, ದಕ್ಷಿಣ ಕೊರಿಯಾ ಹಾಗೂ ತೈವಾನ್‌ಗಳೊಂದಿಗೆ ಭಾರತ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದೆ. ಚೀನಾದ ಮತ್ತೊಂದು ನೆರೆಯ ರಾಷ್ಟ್ರವಾದ ರಷ್ಯಾ ಕೂಡ ಭಾರತದ ಪ್ರಮುಖ ಮಿತ್ರ ರಾಷ್ಟ್ರಗಳಲ್ಲಿ ಒಂದಾಗಿದೆ. ಅ-ನಿಸ್ತಾನದೊಂದಿಗೆ ಭಾರತ ಹಲವು ವರ್ಷಗಳಿಂದ ಅಭಿವೃದ್ಧಿ ಮತ್ತು ಮೂಲ ಸೌಕರ್ಯ ಕ್ಷೇತ್ರಗಳಲ್ಲಿ ಉತ್ತಮ ಸಹಕಾರ ಹೊಂದಿದೆ. ಟರ್ಕಿಯೊಂದಿಗೆ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಅದರ ನೆರೆಯ ಗ್ರೀಸ್‌ನೊಂದಿಗೆ ಭಾರತ ಉತ್ತಮ ಸಂಬಂಧವನ್ನು ಕಾಯ್ದುಕೊಂಡಿದೆ. ಹೀಗಾಗಿ, ಚಾಣಕ್ಯನ ಮಂಡಲ ಸಿದ್ಧಾಂತದ ಪ್ರಕಾರ ಅನೇಕ ಸಂದರ್ಭಗಳಲ್ಲಿ ‘ಶತ್ರುವಿನ ಶತ್ರು ಮಿತ್ರನಾಗುತ್ತಾನೆ’ ಎಂಬ ರಾಜತಾಂತ್ರಿಕ ತತ್ವವು ಅಂತಾರಾಷ್ಟ್ರೀಯ ಸಂಬಂಧ ಗಳಲ್ಲಿ ಪ್ರಮುಖವಾಗಿದೆ.

62 ok

ಈ ಹಿಂದೆ ಚೀನಾ ಶ್ರೀಲಂಕಾಗೆ ದೊಡ್ಡ ಪ್ರಮಾಣದ ಸಾಲ ನೀಡಿತ್ತು. ನಂತರ ಆರ್ಥಿಕ ಸಂಕಷ್ಟ ಉಂಟಾದಾಗ ಲಂಕಾದ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಿದವು. ಅದೇ ರೀತಿ, ಬಾಂಗ್ಲಾದೇಶದಲ್ಲಿಯೂ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಹಾಗೆಯೇ ರಷ್ಯಾ-ಉಕ್ರೇನ್ ಸಂಘರ್ಷದ ಹಿನ್ನೆಲೆ ಯಲ್ಲಿ, ರಷ್ಯಾ ತನ್ನ ಭದ್ರತಾ ಹಿತಾಸಕ್ತಿಗಳನ್ನು ಮುಂದಿಟ್ಟುಕೊಂಡರೆ, ನ್ಯಾಟೋ ತನ್ನ ವಿಸ್ತರಣೆ ಯ ನೀತಿಯನ್ನು ಮುಂದುವರಿಸಿದೆ. ಇಂತಹ ಬೆಳವಣಿಗೆಗಳು ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಬಲಿಷ್ಠ ರಾಷ್ಟ್ರಗಳ ಪ್ರಭಾವ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ.

ಒಂದು ರಾಷ್ಟ್ರವು ಮತ್ತೊಂದು ರಾಷ್ಟ್ರವನ್ನು ತನ್ನ ಪ್ರಭಾವಕ್ಕೆ ಒಳಪಡಿಸಿಕೊಳ್ಳಲು ಸಾಮ, ದಾನ, ಭೇದ ಮತ್ತು ದಂಡ ಎಂಬ ನಾಲ್ಕು ಮಾರ್ಗಗಳನ್ನು ಬಳಸುತ್ತದೆ ಎಂದು ಚಾಣಕ್ಯನು ವಿವರಿಸಿzನೆ. ಇವುಗಳಲ್ಲಿ ದಂಡ, ಅಂದರೆ ಯುದ್ಧ, ಕೊನೆಯ ಆಯ್ಕೆಯಾಗಿರಬೇಕು. ಏಕೆಂದರೆ ಯುದ್ಧವು ಮಾನವ ಜೀವಹಾನಿ, ಆರ್ಥಿಕ ನಷ್ಟ, ಮೂಲಸೌಕರ್ಯಗಳ ವಿನಾಶ ಮತ್ತು ದೀರ್ಘಕಾಲದ ಅಸ್ಥಿರತೆಗೆ ಕಾರಣವಾಗುತ್ತದೆ. ದೀರ್ಘಕಾಲದ ಯುದ್ಧಗಳು ಸೇನೆಯ ಆತ್ಮಸ್ಥೈರ್ಯವನ್ನು ಕುಗ್ಗಿಸು ವುದರ ಜೊತೆಗೆ ದೇಶದ ಆರ್ಥಿಕ ಬೆಳವಣಿಗೆಯ ಮೇಲೆಯೂ ಗಂಭೀರ ಪರಿಣಾಮ ಬೀರುತ್ತವೆ. ಆದ್ದರಿಂದ ಯುದ್ಧವು ಅನಿವಾರ್ಯವಾದಾಗ ಮಾತ್ರ ಅದನ್ನು ಆಯ್ಕೆ ಮಾಡಬೇಕು ಎಂಬುದು ಚಾಣಕ್ಯನ ನಿಲುವಾಗಿದೆ.

ರಷ್ಯಾ ಉಕ್ರೇನ್ ವಿರುದ್ಧ ಏಕಾಏಕಿ ಯುದ್ಧ ಆರಂಭಿಸಿರಲಿಲ್ಲ. ಅದಕ್ಕೂ ಮೊದಲು ರಾಜತಾಂತ್ರಿಕ ಮಾತುಕತೆಗಳು, ಒಪ್ಪಂದಗಳು ಹಾಗೂ ವಿವಿಧ ಹಂತಗಳ ಪ್ರಯತ್ನಗಳು ನಡೆದಿದ್ದವು. ರಷ್ಯಾದ ವಾದದ ಪ್ರಕಾರ, ತನ್ನ ಭದ್ರತಾ ಆತಂಕಗಳನ್ನು ನಿವಾರಿಸಲು ಹಲವು ಬಾರಿ ಉಕ್ರೇನ್ ಮತ್ತು ಪಾಶ್ಚಾತ್ಯ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಲಾಗಿತ್ತು. ನಂತರ ಪೂರ್ವ ಉಕ್ರೇನ್‌ನಲ್ಲಿ ಉದ್ವಿಗ್ನತೆ ಹೆಚ್ಚಾಯಿತು. ಈ ಎಲ್ಲ ಬೆಳವಣಿಗೆಗಳ ಬಳಿಕವೇ ರಷ್ಯಾ ಅಂತಿಮವಾಗಿ ಯುದ್ಧದ ಮಾರ್ಗವನ್ನು ಅನುಸರಿಸಿತು. ಅದರ ಪರಿಣಾಮವಾಗಿ ಇಂದಿಗೂ ಆ ಸಂಘರ್ಷ ಮುಂದುವರಿಯು ತ್ತಿದ್ದು, ಎರಡೂ ರಾಷ್ಟ್ರಗಳು ಅಪಾರ ಪ್ರಮಾಣದ ಮಾನವೀಯ ಹಾಗೂ ಆರ್ಥಿಕ ನಷ್ಟವನ್ನು ಅನುಭವಿಸುತ್ತಿವೆ.

ಎರಡು ರಾಷ್ಟ್ರಗಳು ಮುಖಾಮುಖಿಯಾಗಿ ನಡೆಸುವ ಯುದ್ಧವನ್ನು ನೇರ ಯುದ್ಧ ಎಂದು ಕರೆಯ ಬಹುದು. ಆದರೆ ಇಂದಿನ ಜಾಗತಿಕ ರಾಜಕೀಯದಲ್ಲಿ ಪರೋಕ್ಷ ಅಥವಾ ನಿಶ್ಶಬ್ದ ಯುದ್ಧಗಳು ಹೆಚ್ಚು ಮಹತ್ವ ಪಡೆದಿವೆ. ಇಂತಹ ಯುದ್ಧಗಳಲ್ಲಿ ನೇರವಾಗಿ ಸೇನೆಗಳನ್ನು ಬಳಸುವುದಕ್ಕಿಂತ, ಬೇಹುಗಾರಿಕೆ, ಸೈಬರ್ ದಾಳಿ, ತಪ್ಪು ಮಾಹಿತಿ ಹರಡುವುದು, ಸಾಮಾಜಿಕ ಅಶಾಂತಿ ಉಂಟು ಮಾಡುವುದು, ರಾಜಕೀಯ ಅಸ್ಥಿರತೆಯನ್ನು ಸೃಷ್ಟಿಸುವುದು ಹಾಗೂ ಜನರಲ್ಲಿ ಆಡಳಿತದ ವಿರುದ್ಧ ಅಪನಂಬಿಕೆ ಮೂಡಿಸುವಂತಹ ತಂತ್ರಗಳನ್ನು ಬಳಸಲಾಗುತ್ತದೆ.

ಗುಪ್ತಚರ ಸಂಸ್ಥೆಗಳು ವಿವಿಧ ರೀತಿಯ ಮಾಹಿತಿಯುದ್ಧ, ಮನೋವೈeನಿಕ ಯುದ್ಧ ಹಾಗೂ ಪ್ರಚಾರ ತಂತ್ರಗಳನ್ನು ಬಳಸಿಕೊಂಡು ಎದುರಾಳಿ ರಾಷ್ಟ್ರದ ಆಡಳಿತ, ಸೇನೆ ಮತ್ತು ಜನರಲ್ಲಿ ಗೊಂದಲ ಹಾಗೂ ಅವಿಶ್ವಾಸ ಉಂಟುಮಾಡಲು ಪ್ರಯತ್ನಿಸುತ್ತವೆ. ಸುಳ್ಳು ಸುದ್ದಿಗಳನ್ನು ಹರಡುವುದು, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚೋದನೆ ನೀಡುವುದು, ಆಂತರಿಕ ವಿಭಜನೆಗಳನ್ನು ಹೆಚ್ಚಿಸುವುದು ಹಾಗೂ ರಾಷ್ಟ್ರದ ಏಕತೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ಕೂಡ ಇಂತಹ ಪರೋಕ್ಷ ಯುದ್ಧದ ಭಾಗವಾಗಿವೆ. ಇಂದಿನ ಜಗತ್ತಿನಲ್ಲಿ ಹಲವು ರಾಷ್ಟ್ರಗಳು ಮಾಧ್ಯಮ, ಸಾಮಾ ಜಿಕ ಜಾಲತಾಣಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮೂಲಕ ತಮ್ಮ ಪ್ರಭಾವವನ್ನು ವಿಸ್ತರಿ ಸಲು ಪ್ರಯತ್ನಿಸುತ್ತಿವೆ. ರಷ್ಯಾ-ಉಕ್ರೇನ್ ಸಂಘರ್ಷದಲ್ಲಿಯೂ ಎರಡೂ ಕಡೆಯವರು ಇಂತಹ ಮಾಹಿತಿ ಮತ್ತು ಪ್ರಚಾರ ತಂತ್ರಗಳನ್ನು ಬಳಸುತ್ತಿರುವುದನ್ನು ಕಾಣಬಹುದು.

ಯುದ್ಧ, ಶಾಂತಿ ಹಾಗೂ ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಶಾಶ್ವತ ಮಿತ್ರರು ಅಥವಾ ಶಾಶ್ವತ ಶತ್ರುಗಳು ಎಂಬ ಪರಿಕಲ್ಪನೆ ಇರುವುದಿಲ್ಲ. ರಾಷ್ಟ್ರಗಳ ಸಂಬಂಧಗಳು ಕಾಲ, ಪರಿಸ್ಥಿತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅನುಗುಣವಾಗಿ ನಿರಂತರವಾಗಿ ಬದಲಾಗುತ್ತಿರುತ್ತವೆ. ಇಂದಿನ ಮಿತ್ರ ನಾಳೆ ಶತ್ರುವಾಗಬಹುದು; ಹಾಗೆಯೇ ಇಂದಿನ ಶತ್ರು ನಾಳೆ ಮಿತ್ರನಾಗಬಹುದು. ಅಂತಾ ರಾಷ್ಟ್ರೀಯ ಸಂಬಂಧಗಳಲ್ಲಿ ಭಾವನೆಗಳಿಗಿಂತ ರಾಷ್ಟ್ರೀಯ ಹಿತಾಸಕ್ತಿಯೇ ಪ್ರಮುಖವಾಗಿರುತ್ತದೆ.

ಒಂದು ರಾಷ್ಟ್ರವು ತನ್ನ ಶತ್ರುವಿಗಿಂತ ದುರ್ಬಲವಾಗಿದ್ದರೆ, ನೇರ ಸಂಘರ್ಷಕ್ಕೆ ಧಾವಿಸುವ ಬದಲು ಸೂಕ್ತ ಸಮಯಕ್ಕಾಗಿ ಕಾಯುವುದು ರಾಜತಾಂತ್ರಿಕವಾಗಿ ಹೆಚ್ಚು ವಿವೇಕಯುತ ನಡೆ. ಆದರೆ ಕಾಯು ವುದು ಎಂದರೆ ಕೈಕಟ್ಟಿ ಕುಳಿತುಕೊಳ್ಳುವುದು ಅಲ್ಲ. ಆ ಅವಧಿಯಲ್ಲಿ ತನ್ನ ಆರ್ಥಿಕ, ತಾಂತ್ರಿಕ, ರಕ್ಷಣಾ ಹಾಗೂ ರಾಜತಾಂತ್ರಿಕ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳುವುದು, ಶತ್ರುವಿನ ಪ್ರಭಾವ ವನ್ನು ಪರೋಕ್ಷವಾಗಿ ಕಡಿಮೆ ಮಾಡುವ ತಂತ್ರಗಳನ್ನು ಅನುಸರಿಸುವುದು ಹಾಗೂ ಸೂಕ್ತ ಅವಕಾಶ ಬಂದಾಗ ತನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸುವುದು ಅತ್ಯಂತ ಮುಖ್ಯವಾಗುತ್ತದೆ. ಬಲಿಷ್ಠ ರಾಷ್ಟ್ರಗಳ ಪರವಾಗಿ ಇತರ ರಾಷ್ಟ್ರಗಳು ನಿಲ್ಲುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಮೊದಲು ಸ್ವಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಅತ್ಯಂತ ಅಗತ್ಯ.

ಚೀನಾ ಹಲವು ವರ್ಷಗಳ ಕಾಲ ಅಮೆರಿಕದೊಂದಿಗೆ ಇದೇ ರೀತಿಯ ತಂತ್ರವನ್ನು ಅನುಸರಿಸಿತು. ಆರಂಭದಲ್ಲಿ ಅಮೆರಿಕದೊಂದಿಗೆ ವ್ಯಾಪಾರ ಮತ್ತು ಆರ್ಥಿಕ ಸಹಕಾರವನ್ನು ಬೆಳೆಸಿಕೊಂಡು ತನ್ನ ಕೈಗಾರಿಕೆ, ತಂತ್ರeನ ಹಾಗೂ ಆರ್ಥಿಕತೆಯನ್ನು ಬಲಪಡಿಸಿತು. ಆರ್ಥಿಕವಾಗಿ ಹಾಗೂ ಸೈನಿಕವಾಗಿ ಸಾಕಷ್ಟು ಬಲಿಷ್ಠವಾದ ನಂತರವೇ ಅಮೆರಿಕದೊಂದಿಗೆ ಹಲವು ವಿಷಯಗಳಲ್ಲಿ ನೇರ ಸ್ಪರ್ಧೆಗೆ ಇಳಿಯಲು ಆರಂಭಿಸಿತು. ಇದೇ ವೇಳೆ ರಷ್ಯಾದೊಂದಿಗೂ ತನ್ನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಇದರಿಂದ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಶಾಶ್ವತ ಸ್ನೇಹ ಅಥವಾ ಶಾಶ್ವತ ದ್ವೇಷಕ್ಕಿಂತ ರಾಷ್ಟ್ರೀಯ ಹಿತಾಸಕ್ತಿಯೇ ಪ್ರಮುಖ ಎಂಬುದು ಮತ್ತೊಮ್ಮೆ ಸ್ಪಷ್ಟವಾಗುತ್ತದೆ.

ಬಲಹೀನ ರಾಷ್ಟ್ರವು ಸಂಕಷ್ಟದ ಸಂದರ್ಭದಲ್ಲಿ ಯಾರ ನೆರವು ಪಡೆಯಬೇಕು ಎಂಬ ಪ್ರಶ್ನೆಯೂ ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಮಹತ್ವದ್ದಾಗಿದೆ. ಇದು ಕೇವಲ ರಾಷ್ಟ್ರಗಳಿಗೆ ಮಾತ್ರವಲ್ಲ, ವ್ಯಕ್ತಿಗಳ ಜೀವನಕ್ಕೂ ಅನ್ವಯಿಸುವ ತತ್ವವಾಗಿದೆ. ಸಹಾಯದ ಅಗತ್ಯ ಬಂದಾಗ ಕೇವಲ ಭಾವನಾ ತ್ಮಕ ಸಂಬಂಧಗಳನ್ನು ಆಧರಿಸಿ ನಿರ್ಧಾರ ಕೈಗೊಳ್ಳದೆ, ವಾಸ್ತವವಾಗಿ ನೆರವಾಗಬಲ್ಲ ಮತ್ತು ತಮ್ಮ ಹಿತಾಸಕ್ತಿಯನ್ನೂ ಪರಿಗಣಿಸುವ ಮಿತ್ರರನ್ನು ಆಯ್ಕೆ ಮಾಡುವುದು ಹೆಚ್ಚು ವಿವೇಕಯುತ ನಡೆ. ಉಕ್ರೇನ್ ರಷ್ಯಾದ ನೆರೆಯ ರಾಷ್ಟ್ರ. ರಷ್ಯಾದ ದೃಷ್ಟಿಕೋನದ ಪ್ರಕಾರ, ಉಕ್ರೇನ್ ತಟಸ್ಥ ರಾಷ್ಟ್ರವಾಗಿ ಉಳಿಯಬೇಕು ಹಾಗೂ ನ್ಯಾಟೋ ಸೇನಾ ಮೈತ್ರಿಕೂಟಕ್ಕೆ ಸೇರ್ಪಡೆಯಾಗ ಬಾರದು. ಉಕ್ರೇನ್ ತನ್ನ ಸಾರ್ವಭೌಮ ಹಕ್ಕಿನ ಆಧಾರದ ಮೇಲೆ ತನ್ನ ಭದ್ರತಾ ಮತ್ತು ವಿದೇಶಾಂಗ ನೀತಿಯನ್ನು ಸ್ವತಂತ್ರ ವಾಗಿ ನಿರ್ಧರಿಸುವ ಹಕ್ಕು ಹೊಂದಿದೆ ಎಂದು ಪ್ರತಿಪಾದಿಸಿತು. ಈ ಭಿನ್ನ ನಿಲುವುಗಳೇ ನಂತರ ಸಂಘರ್ಷಕ್ಕೆ ಕಾರಣವಾದ ಪ್ರಮುಖ ಅಂಶಗಳಲ್ಲಿ ಒಂದಾಗಿ ಪರಿಣಮಿಸಿ ದವು.

ರಾಜಧರ್ಮ ಹಾಗೂ ಯೋಗಕ್ಷೇಮದ ದೃಷ್ಟಿಯಿಂದ ಯಾವುದೇ ರಾಷ್ಟ್ರವು ಯುದ್ಧ ಅಥವಾ ಶಾಂತಿಯ ಸಂದರ್ಭದಲ್ಲಿಯೂ ಮೊದಲ ಆದ್ಯತೆಯನ್ನು ತನ್ನ ರಾಷ್ಟ್ರೀಯ ಹಿತಾಸಕ್ತಿಗೆ ನೀಡ ಬೇಕು. ಯುದ್ಧದಿಂದಾಗಲಿ, ಶಾಂತಿಯಿಂದಾಗಲಿ ಸಮಾನ ಪ್ರಮಾಣದ ಲಾಭ-ನಷ್ಟಗಳಿರುವ ಸಂದರ್ಭದಲ್ಲಿ ತಟಸ್ಥ ನಿಲುವನ್ನು ಅನುಸರಿಸುವುದು ಅತ್ಯಂತ ವಿವೇಕಯುತ ನಿರ್ಧಾರವಾಗು ತ್ತದೆ. ಇದೇ ತತ್ವವನ್ನು ಭಾರತ ಪ್ರಸ್ತುತ ತನ್ನ ವಿದೇಶಾಂಗ ನೀತಿಯಲ್ಲಿ ಅನುಸರಿಸುತ್ತಿದೆ.

ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಭಾರತಕ್ಕೆ ಯಾವುದೇ ನೇರ ವೈಮನಸ್ಸಿಲ್ಲ. ರಷ್ಯಾ ಹಾಗೂ ಉಕ್ರೇನ್ ಎರಡೂ ರಾಷ್ಟ್ರಗಳೊಂದಿಗೆ ಭಾರತ ಹಲವು ದಶಕಗಳಿಂದ ಉತ್ತಮ ರಾಜತಾಂತ್ರಿಕ ಹಾಗೂ ವ್ಯಾಪಾರ ಸಂಬಂಧಗಳನ್ನು ಹೊಂದಿದೆ. ರಷ್ಯಾದಿಂದ ಭಾರತ ರಕ್ಷಣಾ ಉಪಕರಣಗಳು ಹಾಗೂ ಶಸಾಸಗಳನ್ನು ಆಮದು ಮಾಡಿಕೊಳ್ಳುತ್ತದೆ. ಮತ್ತೊಂದೆಡೆ, ಉಕ್ರೇನ್‌ನೊಂದಿಗೆ ಕೃಷಿ ಹಾಗೂ ಸೂರ್ಯಕಾಂತಿ ಎಣ್ಣೆ ಸೇರಿದಂತೆ ಹಲವು ವ್ಯಾಪಾರಿಕ ಸಂಬಂಧಗಳನ್ನು ಹೊಂದಿದೆ. ಆದ್ದರಿಂದ ಭಾರತ ಯಾವುದೇ ಒಂದು ರಾಷ್ಟ್ರದ ಪರವಾಗಿ ನಿಲ್ಲದೆ, ಭಾರತ ಭಾರತದ ಪರ ಎಂಬ ತತ್ವದ ಆಧಾರದ ಮೇಲೆ ತನ್ನ ವಿದೇಶಾಂಗ ನೀತಿಯನ್ನು ರೂಪಿಸಿಕೊಂಡಿದೆ.

ರಷ್ಯಾ ಭಾರತದ ಪ್ರಮುಖ ಕಾರ್ಯತಂತ್ರದ ಮಿತ್ರ ರಾಷ್ಟ್ರಗಳಲ್ಲಿ ಒಂದಾಗಿದೆ. ಚೀನಾ ಭಾರತದ ಪ್ರಮುಖ ಭದ್ರತಾ ಸವಾಲುಗಳಲ್ಲಿ ಒಂದಾಗಿರುವುದರಿಂದ, ರಷ್ಯಾದೊಂದಿಗೆ ಉತ್ತಮ ಸಂಬಂಧ ವನ್ನು ಕಾಪಾಡಿಕೊಳ್ಳುವುದು ಭಾರತದ ದೀರ್ಘಕಾಲೀನ ಹಿತಾಸಕ್ತಿಯ ಭಾಗ. ಅದೇ ಸಮಯದಲ್ಲಿ, ಉಕ್ರೇನ್‌ನೊಂದಿಗೆ ಮಾನವೀಯ ಸಹಕಾರವನ್ನು ಮುಂದುವರಿಸಿಕೊಂಡು, ಸಂಘರ್ಷವನ್ನು ಶಾಂತಿಯುತ ಮಾತುಕತೆಗಳ ಮೂಲಕ ಪರಿಹರಿಸಬೇಕೆಂದು ಭಾರತ ನಿರಂತರವಾಗಿ ಒತ್ತಾಯಿಸು ತ್ತಿದೆ. ಈ ಮೂಲಕ ಭಾರತ ಯಾವುದೇ ಒಂದು ಬಣದ ಪರವಾಗಿ ನಿಲ್ಲದೆ, ಎಲ್ಲ ರಾಷ್ಟ್ರಗಳೊಂದಿಗೆ ಸಮಾನ ಸ್ನೇಹ ಹಾಗೂ ಸಹಕಾರವನ್ನು ಉಳಿಸಿಕೊಳ್ಳುವ ತನ್ನ ಪರಂಪರೆಯ ವಿದೇಶಾಂಗ ನೀತಿಯನ್ನು ಮುಂದುವರಿಸಿದೆ.

ಸ್ವಾತಂತ್ರ್ಯಾನಂತರ ಭಾರತ ಅಲಿಪ್ತ ಚಳವಳಿಯ ಮೂಲಕ ಸ್ವತಂತ್ರ ವಿದೇಶಾಂಗ ನೀತಿ ಅನುಸರಿಸಿ ಜಗತ್ತಿನಲ್ಲಿ ವಿಶಿಷ್ಟ ಸ್ಥಾನ ಗಳಿಸಿತು. ಇಂದು ಭಾರತ ಅಮೆರಿಕ, ರಷ್ಯಾ, ಯುರೋಪ್, ಜಪಾನ್, ಮಧ್ಯಪ್ರಾಚ್ಯ, ಆಫ್ರಿಕಾ ಹಾಗೂ ಜಾಗತಿಕ ದಕ್ಷಿಣದ ರಾಷ್ಟ್ರಗಳೊಂದಿಗೆ ಸಮಾನ ಸ್ನೇಹ ಮತ್ತು ಸಹಕಾರದ ಸಂಬಂಧವನ್ನು ಬೆಳೆಸಿಕೊಂಡಿದೆ. ಈ ಸಮತೋಲಿತ ರಾಜತಾಂತ್ರಿಕತೆಯೇ ಭಾರತದ ಜಾಗತಿಕ ಪ್ರಭಾವವನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಇದೇ ಭಾರತದ ವಿದೇಶಾಂಗ ನೀತಿಯ ನಿಜವಾದ ಶಕ್ತಿ ಮತ್ತು ವಿಶ್ವ ಸಮುದಾಯದಲ್ಲಿ ಅದರ ಹೆಚ್ಚುತ್ತಿರುವ ಗೌರವದ ಪ್ರತೀಕವಾಗಿದೆ.