Roopa Gururaj Column: ಬಾಲ ಶಂಕರಾಚಾರ್ಯರಿಗೆ ಕಾಳಿಕಾದೇವಿ
ಇತ್ತ ಶಂಕರಾಚಾರ್ಯರು ಒಂದಿಷ್ಟೂ ಅಳುಕದೆ ಅತ್ಯಂತ ಭಕ್ತಿ ಭಾವದಿಂದ ಧನ್ಯೋಸ್ಮಿ ಮಾತಾ... ಟಟ ಕುಪುತ್ರೋ ಜಾಯತ, ಕೋಚಧಪಿಕೋ ಮಾತಾ ನ ಭವತಿ ಟಟ ಅಂದರೆ ಮಾತೆಯದವಳು ಎಂದು ತನ್ನ ಮಗುವನ್ನು ಕೊಲ್ಲಲಾರಳು . ಸೌಮ್ಯ ರೂಪಕ್ಕೆ ಬಂದು ದರ್ಶನ ನೀಡು ತಾಯೆ ಎಂದು ಬಿಡದೆ ಪ್ರಾರ್ಥಿಸುತ್ತಾರೆ.


ಒಂದೊಳ್ಳೆ ಮಾತು
rgururaj628@gmail.com
ಬಾಲ ಸನ್ಯಾಸಿಗಳಾಗಿದ್ದ ಆದಿ ಶಂಕರಾಚಾರ್ಯರು ದೇಶ ಸಂಚಾರ ಮಾಡುವಾಗ ಒಂದು ಮನೆಗೆ ಭಿಕ್ಷೆಗೆಂದು ಹೋಗುತ್ತಾರೆ. ಮಕ್ಕಳಿಲ್ಲದ ಆ ಮನೆಯ ಯಜಮಾನತಿ ಒಬ್ಬ ವಯಸ್ಸಾದ ಹೆಂಗಸು. ಶಂಕರಿಗೆ ಭಿಕ್ಷೆ ನೀಡಿ ಯಾರು ಮಗು ನೀನು ಈ ಇಳಿ ಸಂಜೆಯಲ್ಲಿ ಎಲ್ಲಿ ಹೊರಟಿರುವೆ ಎಂದು ಕೇಳಿದಳು. ಅಮ್ಮ ನಾನೊಬ್ಬ ಸನ್ಯಾಸಿ, ಸಧ್ಯ ಕೊಡಚಾದ್ರಿಯತ್ತ ಹೊರಟಿರುವೆ ಎಂದರು ಬಾಲ ಶಂಕರಾಚಾರ್ಯರು. ಆಗ ಆ ಹಿರಿಯ ಹೆಂಗಸು ಅಕ್ಕರೆಯಿಂದ ಬೇಡ ಮಗು ಈ ಸಮಯದಲ್ಲಿ ಅಲ್ಲಿ ಹೋಗುವುದು ಅಷ್ಟು ಒಳ್ಳೆಯಲ್ಲ. ಇಂದು ಅಮಾವಾಸ್ಯೆ ಬೇರೆ, ನೀನು ಊರ ಹೆಬ್ಬಾಗಿಲು ತಲುಪುವ ವೇಳೆಗೆ ಅರ್ಧ ರಾತ್ರಿಯಾಗಿರತ್ತೆ ಎಂದಳು. ಆದರೆ ಏನಮ್ಮ? ಎಂದು ಶಂಕರರು ಕುತೂಹಲದಿಂದ ಕೇಳುತ್ತಾರೆ.
ಆಗ ಆ ಹಿರಿಯ ಹೆಂಗಸು, ಅಯ್ಯೋ ನಿನಗೆ ಗೊತ್ತಿಲ್ಲ ಅಮಾವಾಸ್ಯೆಯ ರಾತ್ರಿ ಈ ಊರಿನ ಗ್ರಾಮ ದೇವಿ ಉಗ್ರವಾಗಿ ಭದ್ರಕಾಳಿ ಸ್ವರೂಪಳಾಗಿರುತ್ತಾಳೆ. ನೀನು ಆ ದಾರಿಯಾಗಿ ಹೋದರೆ ಬಡಿದು ಬಾಯಿಗೆ ಹಾಕಿ ನುಂಗೇ ಬಿಡುತ್ತಾಳೆ ಎಂದಳು ಆತಂಕದಿಂದ. ಶಂಕರರ ಮುಖದಲ್ಲಿ ಭಯಕ್ಕಿಂತ ಸಂತೋಷನೇ ಜಾಸ್ತಿಯಾಯಿತು.
ಇದನ್ನೂ ಓದಿ: Roopa Gururaj Column: ಹಾಲಿನ ಪಾಲು ಹಾಲಿಗೆ ನೀರಿನ ಪಾಲು ನೀರಿಗೆ
ಈ ನೆಪದಿಂದ ಜಗನ್ಮಾತೆಯ ದರ್ಶನವಾಗುವದೆಂದು ನಂತರ ಶಂಕರರು ಎಲ್ಲಿಯೂ ನಿಲ್ಲದೆ ನಡೆಯುತ್ತಾ ಊರ ಬಾಗಿಲನ್ನು ತಲುಪುತ್ತಾರೆ. ಅಲ್ಲಿ ಆ ಹಿರಿಯ ಹೆಂಗಸು ಹೇಳಿದಂತೆ ಊರ ದೇವಿ ಕಾಳಿಯು, ಹೆಬ್ಬಾಗಿಲ ಬಳಿ ಉಗ್ರ ಸ್ವರೂಪಳಾಗಿ ಘರ್ಜಿಸುತ್ತಿರುತ್ತಾಳೆ. ಅದನ್ನು ಕಂಡ ಶಂಕರರು ಆಹಾ ಧನ್ಯೋಸ್ಮಿ ಎಂದು ಆಕೆಯ ಕಾಲಿಗೆರಗಿ ನಮಸ್ಕರಿಸುತ್ತಾರೆ. ಅದನ್ನು ಕಂಡ ಕಾಳಿ ಹೇ ಬಾಲಕ ನನ್ನನ್ನು ಕಂಡು ಭಯವಿಲ್ಲವೇ? ಏನು ನಿನ್ನ ದುಸ್ಸಾಹಸ ಈ ಸಮಯದಲ್ಲಿ ನನ್ನ ಸ್ಥಳಕ್ಕೆ ಬರುವುದು ಎಂದು ಹೇಳಿ ಶಂಕರನನ್ನು ನುಂಗಲು ಮುಂದಾಗುತ್ತಾಳೆ.
ಇತ್ತ ಶಂಕರಾಚಾರ್ಯರು ಒಂದಿಷ್ಟೂ ಅಳುಕದೆ ಅತ್ಯಂತ ಭಕ್ತಿ ಭಾವದಿಂದ ಧನ್ಯೋಸ್ಮಿ ಮಾತಾ... ಟಟ ಕುಪುತ್ರೋ ಜಾಯತ, ಕೋಚಧಪಿಕೋ ಮಾತಾ ನ ಭವತಿ ಟಟ ಅಂದರೆ ಮಾತೆಯದವಳು ಎಂದು ತನ್ನ ಮಗುವನ್ನು ಕೊಲ್ಲಲಾರಳು . ಸೌಮ್ಯ ರೂಪಕ್ಕೆ ಬಂದು ದರ್ಶನ ನೀಡು ತಾಯೆ ಎಂದು ಬಿಡದೆ ಪ್ರಾರ್ಥಿಸುತ್ತಾರೆ.
ಕಾಳಿ ಆ ಬಾಲಕನ ಧೈರ್ಯ ಮತ್ತು ಭಕ್ತಿಗೆ ಮೆಚ್ಚಿ ಪ್ರಸನ್ನಳಾಗಿ ಸೌಮ್ಯ ರೂಪ ತಾಳಿ. ಸ್ವರ್ಣ ರೇಖಾಂಕಿತ ಶ್ರೀ ಚಕ್ರದ ರಹಸ್ಯವನ್ನ ಶಂಕರರಿಗೆ ಆಶೀರ್ವಾದವಾಗಿ ಅರುಹುತ್ತಾಳೆ. ಅಷ್ಟೇ ಅಲ್ಲ ತನ್ನನ್ನು ಆ ಶ್ರೀ ಚಕ್ರದ ಮೇಲೆ ಪ್ರತಿಷ್ಠಾಪಿಸು. ನಾನು ಸರಸ್ವತಿ, ಲಕ್ಷ್ಮಿ, ಪಾರ್ವತಿ ಸ್ವರೂಪಳಾಗಿ ಮೂಕಾಂಬಿಕಾ ಹೆಸರಿನಲ್ಲಿ ಇಲ್ಲಿಯೇ ನೆಲೆಸುತ್ತೇನೆ. ನೀನು ಜಗತ್ಗುರುವಾಗಿ ಪ್ರಖ್ಯಾತಿಯನ್ನು ಪಡೆ ಎಂದು ಆಶೀರ್ವದಿಸಿದಳು.
ಅತ್ಯಂತ ಭಕ್ತಿ ಭಾವದಿಂದ ನಂತರ ಶಂಕರರು ನಮಸ್ತೇಸ್ತು ಮಹಾ ಮಾಯೆ ಶ್ರೀ ಪೀಠೆ ಸುರಪೂಜಿತೇ ಎಂದು ದೇವಿಯನ್ನು ಸ್ತೋತ್ರ ಮಾಡುತ್ತಾರೆ. ಇದೇ ಘಟನೆಯನ್ನು ಪ್ರತಿಬಿಂಬಿಸುವ ಭಾವಚಿತ್ರ ಗಳನ್ನು ತಾವು ನೋಡಿರುತ್ತೀರಿ. ಪ್ರಸನ್ನಳಾದ ಭದ್ರ ಕಾಳಿ ಆಗಸದಲ್ಲಿ ಬೃಹದಾಕಾರದ ಮಿಂಚೊಂದು ಪ್ರಕಟವಾಗಿ ಆಕಾಶ ಮತ್ತು ಭೂಮಿ ಏಕವಾದ ರೂಪವನ್ನ ಧರಿಸಿ ಮೂಕಾಂಬಿಕೆ ಯಾಗಿ ಶಂಕರಾಚಾರ್ಯರ ಹಿಂದೆಯೇ ಬರುತ್ತಿರುವ ಅದ್ಬುತ ದೃಶ್ಯ ನೋಡಿದಷ್ಟೂ ಕಣ್ತುಂಬಿ ಬರುತ್ತದೆ.
ಇಂತಹ ದೈವಾಂಶ ಸಂಭೂತರಾದ ಶಂಕರಾಚಾರ್ಯರ ಜಯಂತಿಯ ಹಾರ್ದಿಕ ಶುಭಾಶಯಗಳು. ಮಾತೃ ಸ್ವರೂಪಿಯಾದ ತಾಯಿ ಅದೆಷ್ಟೇ ಕಠಿಣ ಹೃದಯಿಯಾದರೂ ಬಿಡದೆ ಭಕ್ತಿ ಭಾವದಿಂದ ಅವಳನ್ನು ಒಲಿಸಿಕೊಳ್ಳಬಹುದು. ಅನೇಕ ಬಾರಿ ನಮಗೆ ಬಂದ ಕಷ್ಟಗಳಿಗೆ ದೇವರನ್ನು ದೂರುತ್ತಿರು ತ್ತೇವೆ. ದೇವರಿಗೆ ಕರುಣೆಯೇ ಇಲ್ಲ ನಮ್ಮನ್ನು ಈ ಕಷ್ಟದಿಂದ ಪಾರು ಮಾಡುವುದಿಲ್ಲ ಎಂದು ನಂಬಿಕೆಯನ್ನೇ ಕಳೆದುಕೊಳ್ಳುತ್ತೇವೆ. ಆದರೆ ಅಂತಹ ಸಮಯದಲ್ಲೇ ನಾವು ಮತ್ತಷ್ಟು ಉತ್ಕಟವಾಗಿ ಭಕ್ತಿ ಭಾವದಿಂದ ದೇವರನ್ನು ನಂಬಿದರೆ ಖಂಡಿತ ನಮ್ಮ ಕಷ್ಟಗಳಿಗೆ ಆ ದೇವಿ/ ದೇವರು ಸ್ಪಂದಿಸದೆ ಇರುವುದಿಲ್ಲ ಎನ್ನುವುದಕ್ಕೆ ಮೇಲಿನ ಘಟನೆ ಅತ್ಯುತ್ತಮ ಸಾಕ್ಷಿ.