Prakash Shesharaghavachar Column: ನಿಮ್ಮ ರಕ್ಷಣೆಗೆ ಇವರು ಯಾರೂ ಬರುವುದಿಲ್ಲ
ಢೋಂಗಿ ಜಾತ್ಯತೀತವಾದಿಗಳು ದೇಶದ ಬಹುಸಂಖ್ಯಾತರ ಪರ ನಿಲ್ಲುವ ಯಾವುದೇ ಲಕ್ಷಣ ಕಾಣು ವುದೇ ಇಲ್ಲ. ತಮ್ಮ ಮತಬ್ಯಾಂಕ್ ಅನ್ನು ಕಾಪಾಡುವ ಸಲುವಾಗಿ ಹಿಂದೂಗಳ ಹಿತಾಸಕ್ತಿಯ ವಿಷಯದಲ್ಲಿ ರಾಜಿಮಾಡಿಕೊಳ್ಳುವ ಮನಸ್ಥಿತಿ ಇವರಲ್ಲಿ ದಟ್ಟವಾಗಿದೆ. ಹಿಂದೂಗಳನ್ನು ಕಾಪಾಡುವ ಅಥವಾ ಅವರ ರಕ್ಷಣೆಗೆ ನಿಲ್ಲುವ ಪ್ರಜ್ಞಾವಂತ ವಿರೋಧ ಪಕ್ಷ ಇಂದು ಮರೆಯಾಗಿದೆ.


ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ಕೇಂದ್ರ ಸರಕಾರವು ವಕ್ಫ್ ಕಾಯಿದೆಗೆ ತಿದ್ದುಪಡಿ ತಂದಾಗ, ವಿರೋಧ ಪಕ್ಷಗಳು ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡುವ ಬದಲು ಅದನ್ನು ‘ಮುಸ್ಲಿಂ-ವಿರೋಧಿ’ ಎಂದು ಬಿಂಬಿಸಿದವು. ವಿಪಕ್ಷಗಳು ಅಧಿಕಾರದಲ್ಲಿರುವ ಕೆಲವು ರಾಜ್ಯ ಸರಕಾರಗಳು, ತಮ್ಮ ರಾಜ್ಯದಲ್ಲಿ ಈ ಕಾಯಿದೆ ಯನ್ನು ಜಾರಿಗೆ ತರುವುದಿಲ್ಲ ಎಂದು ಹೇಳುವ ಮೂಲಕ ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ ರಾಜಕೀಯ ಕುತಂತ್ರವನ್ನು ಮಾಡಲು ಹೊರಟವು. ವಕ್ಫ್ ಕಾಯಿದೆಯ ಸಿಂಧುತ್ವವನ್ನು ಪ್ರಶ್ನಿಸಿ ವಿರೋಧ ಪಕ್ಷಗಳು ಪೈಪೋಟಿಯಲ್ಲಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದವು. ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ ಮುಂತಾದ ಘಟಾನುಘಟಿ ವಕೀಲರು ಮುಸ್ಲಿಮರ ಪರವಾಗಿ, ವಕ್ಫ್ ತಿದ್ದುಪಡಿಯ ವಿರುದ್ಧವಾಗಿ ನಿಂತರು. ಈ ಕಾಯಿದೆಯಿಂದ ಹಿಂದೂಗಳಿಗೆ ಆಗುತ್ತಿರುವ ಅನ್ಯಾ ಯವು ಇವರಿಗೆ ಬೇಡದ ವಿಷಯವಾಗಿದೆ.
ನಮ್ಮ ವಿರೋಧ ಪಕ್ಷಗಳವರು ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವಿನ ಕದನದಲ್ಲಿ ಪ್ಯಾಲೆಸ್ತೀನ್‌ನ ಪರವಾಗಿ ನಿಲ್ಲುತ್ತಾರೆ. ಪ್ಯಾಲೆಸ್ತೀನಿಯರ ಸಂಕಷ್ಟಕ್ಕೆ ಇವರು ಹೆಂಗರುಳಿನಂತೆ ಮಿಡಿಯುತ್ತಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರಂತೂ ‘ಪ್ಯಾಲೆಸ್ತೀನ್’ ಎಂಬ ಪದವು ಮುದ್ರಿತ ವಾಗಿದ್ದ ಬ್ಯಾಗ್‌ನೊಂದಿಗೆ ಸಂಸತ್ ಭವನಕ್ಕೆ ಬಂದು, ವಯನಾಡಿನಲ್ಲಿ ತಮ್ಮ ಗೆಲುವಿಗೆ ಕಾರಣ ರಾದ ಮುಸ್ಲಿಂ ಸಮುದಾಯದವರ ಋಣಸಂದಾಯ ಮಾಡಿದರು.
ಇದನ್ನೂ ಓದಿ: Prakash Shesharaghavachar Column: 'ವಕ್ಫ್ ತಿದ್ದುಪಡಿ ಕಾಯಿದೆ'- 2025 ಏಕೆ ಬೇಕಿತ್ತು ?
2025ರ ಮಾರ್ಚ್ 17ರಂದು ನಾಗಪುರವು ಕೋಮುಗಲಭೆಯಿಂದಾಗಿ ಹೊತ್ತಿ ಉರಿಯಿತು. ಸುಳ್ಳು ವದಂತಿಯನ್ನು ನಂಬಿದ ಮುಸ್ಲಿಂ ಸಮುದಾಯದ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ಯ ಹೆಸರಿನಲ್ಲಿ ದಾಂಧಲೆ ನಡೆಸಿದರು. ರಸ್ತೆಯಲ್ಲಿ ನಿಲುಗಡೆ ಮಾಡಿದ್ದ ನೂರಾರು ಸ್ಕೂಟರ್ ಮತ್ತು ಕಾರುಗಳು ಬೆಂಕಿಗೆ ಆಹುತಿಯಾದವು. ಔರಂಗಜೇಬನ ಸಮಾಧಿಯ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯು ಕೋಮುಗಲಭೆಯ ಸ್ವರೂಪವನ್ನು ಪಡೆಯಿತು.
ನಾಗರಿಕ ಸಮಾಜದಲ್ಲಿ ಗಲಭೆ ಮತ್ತು ಹಿಂಸಾಚಾರಕ್ಕೆ ಆಸ್ಪದವಿರಬಾರದು; ಆದರೆ ಅಂದು ನಡೆದ ಗಲಭೆಗೆ ಸಂಬಂಧಿಸಿ ವಿರೋಧ ಪಕ್ಷಗಳವರು ಕೇವಲ ಹಿಂದೂಗಳನ್ನು ಗುರಿಮಾಡಿದರು. “ಕೇವಲ ವದಂತಿಯ ಆಧಾರದ ಮೇಲೆ ಗಲಭೆಗಿಳಿಯುವ ಪ್ರವೃತ್ತಿ ತಪ್ಪು" ಎಂದು ಖಂಡಿಸುವ ಎದೆಗಾರಿಕೆ ಯನ್ನು ವಿರೋಧ ಪಕ್ಷದ ಒಬ್ಬ ನಾಯಕನೂ ತೋರಿಸಲಿಲ್ಲ.
2024ರ ನವೆಂಬರ್ 24ರಂದು, ಉತ್ತರ ಪ್ರದೇಶದ ಸಂಭಾಲ್ ನಗರದಲ್ಲಿರುವ 500 ವರ್ಷಗಳ ಹಿಂದಿನ ಶಾಹಿ ಜಾಮಾ ಮಸೀದಿ ಪ್ರದೇಶದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನ್ಯಾಯಾಲಯದ ಆದೇಶದ ಮೇರೆಗೆ ಸಮೀಕ್ಷೆ ನಡೆಸುತ್ತಿರುವ ಸಂದರ್ಭದಲ್ಲಿ ಹಿಂಸಾಚಾರವು ಭುಗಿಲೆದ್ದಿತು. ಮೊಘಲರ ಆಡಳಿತಾವಧಿಯಲ್ಲಿ ಕೆಡವಲಾದ ಹಿಂದೂ ದೇವಾಲಯದ ಅವಶೇಷಗಳ ಮೇಲೆ ಈ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬ ವಾದಗಳ ನಂತರ, ನ್ಯಾಯಾಲಯವು ಈ ಸಮೀಕ್ಷೆಗೆ ಆದೇಶ ನೀಡಿತ್ತು.
ಆದರೆ, ಮಸೀದಿಯ ಆವರಣದಲ್ಲಿ ‘ಜೈ ಶ್ರೀರಾಮ್’ ಎಂಬ ಘೋಷಣೆ ಕೂಗಿದರು ಎಂಬ ವದಂತಿ ಯನ್ನು ನಂಬಿ ಮುಸ್ಲಿಂ ಗುಂಪು ಹಿಂಸಾಚಾರದಲ್ಲಿ ತೊಡಗಿತು. “ಮಸೀದಿಯ ಆವರಣದಲ್ಲಿ ಹಿಂದೂಗಳು ಜೈ ಶ್ರೀರಾಮ್ ಘೋಷಣೆ ಕೂಗಿದ್ದೇ ಹಿಂಸೆಗೆ ಪ್ರಚೋದನೆ ನೀಡಿತು, ಗಲಭೆಗೆ ಕಾರಣ ವಾಯಿತು" ಎನ್ನುವ ಮೂಲಕ ವಿರೋಧ ಪಕ್ಷಗಳವರು ಕೂಡ ಮುಸ್ಲಿಮರ ಪರವಾಗಿ ನಿಂತರು. ಸಣ್ಣ ಪುಟ್ಟ ಕಾರಣಗಳಿಗೆಲ್ಲಾ ಗಲಭೆಗೆ ಮುಂದಾಗುವ ಪ್ರವೃತ್ತಿ ಬೇಡ ಎಂಬ ವಿವೇಕದ ಮಾತನ್ನು ವಿರೋಧ ಪಕ್ಷಗಳವರು ಹೇಳಬೇಕಿತ್ತು.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ತುಷ್ಟೀಕರಣ ರಾಜಕಾರಣ ತಾರಕಕ್ಕೇರಿದೆ. ಇದರ ಫಲವಾಗಿ ಅವರ ಸರಕಾರವು ಅಲ್ಪಸಂಖ್ಯಾತರನ್ನು ಅತಿರೇಕವಾಗಿ ಓಲೈಸುತ್ತಿದೆ. ವಕ್ಫ್ ತಿದ್ದುಪಡಿಯ ವಿರುದ್ಧದ ‘ಮಮತಾ ಪ್ರೇರಿತ’ ಪ್ರತಿಭಟನೆಗಳು ಉಗ್ರ ಹಿಂಸಾರೂಪವನ್ನು ತಳೆದವು. ಮುರ್ಷಿದಾಬಾದ್ ಮತ್ತು ‘20 ಪರಗಣ’ ಜಿಲ್ಲೆಗಳಲ್ಲಿ ಸರಕಾರಿ ಪ್ರಾಯೋಜಿತ ಪ್ರತಿಭಟನೆಯ ಫಲವಾಗಿ ವ್ಯಾಪಕ ಹಿಂಸಾಚಾರಗಳು ನಡೆದವು. ಇದಕ್ಕೆ ಅಲ್ಲಿನ ಹಿಂದೂಗಳು ಭಾರಿ ಬೆಲೆಯನ್ನು ತೆರಬೇಕಾಗಿ ಬಂತು.
ಬಾಂಗ್ಲಾದೇಶದ ಗಡಿಭಾಗದ ಜಿಲ್ಲೆಯಾದ ಮುರ್ಷಿದಾಬಾದ್‌ನಲ್ಲಿ ಸಾವಿರಾರು ಮುಸ್ಲಿಮರು ಪ್ರತಿಭಟನೆಯ ನೆಪದಲ್ಲಿ ಬೀದಿಗಿಳಿದು ಅನೇಕ ಹಿಂದೂ ಮನೆಗಳ ಮೇಲೆ ದಾಳಿಮಾಡಿ ಅವಕ್ಕೆ ಬೆಂಕಿ ಹಚ್ಚಿದರು, ಅಲ್ಲಿನ ಹಿಂದೂ ವ್ಯಾಪಾರಿಗಳ ಬದುಕನ್ನೇ ಕಿತ್ತುಕೊಂಡರು. ಆದರೆ ಮಮತಾ ಬ್ಯಾನರ್ಜಿಯವರು ತಮ್ಮ ಮೂಗಿನಡಿಯಲ್ಲೇ ನಡೆಯುತ್ತಿದ್ದ ದೌರ್ಜನ್ಯವನ್ನು ನಿರ್ಲಕ್ಷಿಸಿ ಗಲಭೆ ಕೋರರ ಬೆಂಬಲಕ್ಕೆ ನಿಂತರು.
“ಇದು ಬಿಜೆಪಿ ಮತ್ತು ಆರೆಸ್ಸೆಸ್ ಪ್ರಚೋದಿತ ಗಲಭೆ" ಎನ್ನುವ ಮೂಲಕ ಗಲಭೆಕೋರರಿಗೆ ಗುರಾಣಿ ಹಿಡಿದರು. ಜನರಿಂದ ‘ದೀದಿ’ ಎಂದು ಕರೆಸಿಕೊಳ್ಳುವ ಮಮತಾರವರ ಕಲ್ಲುಹೃದಯವು ಹಿಂದೂ ಗಳ ದುಸ್ಥಿತಿಗೆ ಮಾತ್ರ ಕರಗುವುದೇ ಇಲ್ಲ. ಮುಸ್ಲಿಮರ ಬಾಹುಳ್ಯವಿರುವ ಈ ಗಡಿಜಿಲ್ಲೆಗಳಲ್ಲಿ ಹಿಂದೂಗಳ ಬದುಕು ನರಕವಾಗಿದೆ. ಅಕ್ರಮವಾಗಿ ನುಸುಳಿಬರುವ ಬಾಂಗ್ಲಾದೇಶೀಯರಿಗೆ ಮಮತಾ ಸರಕಾರವು ಆಶ್ರಯ ನೀಡಿ, ದಶಕಗಳಿಂದ ಬದುಕು ಕಟ್ಟಿಕೊಂಡಿದ್ದ ಹಿಂದೂಗಳ ಬಾಳನ್ನು ಮೂರಾಬಟ್ಟೆ ಮಾಡಿಬಿಟ್ಟಿದೆ. ಹಿಂದೂಗಳು ತಮ್ಮ ಮನೆ ಮತ್ತು ವ್ಯಾಪಾರದ ನೆಲೆಗಳನ್ನು ತೊರೆದು, ತಮ್ಮದೇ ದೇಶದಲ್ಲಿ ನಿರಾಶ್ರಿತರಾಗಿ ಬದುಕಬೇಕಾದ ದಯನೀಯ ಪರಿಸ್ಥಿತಿಗೆ ತಲುಪಿ ದ್ದಾರೆ.
‘ಹಿಂಸೆಗೊಳಗಾಗಿ ಸಂಕಷ್ಟದಲ್ಲಿರುವ ಹಿಂದೂಗಳನ್ನು ಕಾಪಾಡಬೇಕು’ ಎಂದು ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಎಂದೂ ಮನವಿಯನ್ನು ಸಲ್ಲಿಸುವುದಿಲ್ಲ. ಇತರ ವಿಪಕ್ಷ ನಾಯಕರು ಸಹ ಸಂತ್ರಸ್ತ ಹಿಂದೂಗಳ ನೆರವಿಗೆ ಬಂದು ಅವರಿಗೆ ನೈತಿಕ ಸ್ಥೈರ್ಯವನ್ನು ತುಂಬುವ ಕೆಲಸ ಮಾಡಿಲ್ಲ. ಬದಲಿಗೆ, ಗಾಯದ ಮೇಲೆ ಉಪ್ಪು ಸವರಿದ ಹಾಗೆ, “ಬಂಗಾಳದ ಹಿಂಸಾಚಾರಕ್ಕೆ ಬಿಜೆಪಿಯೇ ಕಾರಣ" ಎನ್ನುವ ಮೂಲಕ ಗಲಭೆಕೋರರನ್ನೇ ಬೆಂಬಲಿಸುತ್ತಿದ್ದಾರೆ. ಮುರ್ಷಿದಾಬಾದ್ ಮತ್ತು ‘24 ಪರಗಣ’ ಜಿಲ್ಲೆಗಳಲ್ಲಿ ನಡೆದ ಹಿಂಸಾಚಾರವನ್ನು ನಿಯಂತ್ರಿಸಲು ಮಮತಾ ಬ್ಯಾನರ್ಜಿ ಸರಕಾರವು ಸಂಪೂರ್ಣ ವಿಫಲವಾದಾಗ, ಕೋಲ್ಕತ್ತಾ ಹೈಕೋರ್ಟ್ ಮಧ್ಯ ಪ್ರವೇಶಿಸಿ ಸರಕಾರಕ್ಕೆ ತಪರಾಕಿ ನೀಡಿ, ಕೂಡಲೇ ಕೇಂದ್ರೀಯ ಪಡೆಗಳನ್ನು ನಿಯೋಜಿಸುವಂತೆ ಆದೇಶಿಸಿತು.
ಕೇಂದ್ರೀಯ ಪಡೆಗಳು ಬಂದ ತರುವಾಯವೂ ಪರಿಸ್ಥಿತಿಯು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ ಎಂದರೆ ಗಲಭೆಪೀಡಿತ ಪ್ರದೇಶಗಳಲ್ಲಿನ ಭೀಕರತೆಯನ್ನು ಕಲ್ಪಿಸಿಕೊಳ್ಳುವುದಕ್ಕೂ ಭಯವಾಗುತ್ತದೆ. ಮಮತಾ ಬ್ಯಾನರ್ಜಿಯವರು ಇಲ್ಲಿಯವರೆಗೂ ಸಂತ್ರಸ್ತ ಹಿಂದೂಗಳನ್ನು ಭೇಟಿ ಮಾಡಿಲ್ಲ. ಸಂತ್ರಸ್ತರ ಅಳಲನ್ನು ಕೇಳುವ ಸೌಜನ್ಯವೂ ಅವರಿಗೆ ಇಲ್ಲವಾಗಿದೆ, ಹೀಗಾಗಿ ಅವರ ನೆರವಿಗೆ ಧಾವಿಸುವ ಯಾವ ಸೂಚನೆಯೂ ಕಂಡುಬರುತ್ತಿಲ್ಲ.
ವಕ್ಫ್ ತಿದ್ದುಪಡಿ ಕಾಯಿದೆಯು ಕೆಲವರಿಂದ ನ್ಯಾಯಾಲಯದಲ್ಲಿ ಪ್ರಶ್ನಿಸಲ್ಪಟ್ಟಿದ್ದರೂ, ವಿರೋಧ ಪಕ್ಷಗಳು ಇರುವ ರಾಜ್ಯಗಳಲ್ಲಿ ವಕ್ಫ್ ವಿರುದ್ಧದ ಪ್ರತಿಭಟನೆ ನಡೆಯುತ್ತಲೇ ಇದೆ, ಪ್ರಚೋದನಕಾರಿ ಹೇಳಿಕೆಗಳು ಅವ್ಯಾಹತವಾಗಿ ಹೊಮ್ಮುತ್ತಲೇ ಇವೆ. ಭಾರತದ ಪ್ರಧಾನಿಯನ್ನು ಹತ್ಯೆ ಮಾಡುವು ದಾಗಿ ಖಲಿಸ್ತಾನಿ ಉಗ್ರವಾದಿ ಗುರು ಪತ್ವಂತ್‌ಸಿಂಗ್ ಪನ್ನು ಬೆದರಿಕೆ ಒಡ್ಡಿದ. ಆದರೆ ಅವನ ವಿರುದ್ಧ ಮಾತನಾಡಬೇಕಿದ್ದ ವಿರೋಧ ಪಕ್ಷಗಳವರು ದಿವ್ಯಮೌನಕ್ಕೆ ಶರಣಾದರೇ ಹೊರತು, ಅವನ ಕುಕೃತ್ಯವನ್ನು ಖಂಡಿಸುವ ಎದೆಗಾರಿಕೆಯನ್ನೇ ತೋರಲಿಲ್ಲ.
“ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆ ತನ್ನಿ" ಎಂದು ಪದೇ ಪದೆ ಪ್ರಸ್ತಾಪಿಸುವ ವಿಪಕ್ಷಗಳ ನಾಯಕರು, “ಪನ್ನು ಮತ್ತು ಇತರ ಖಲಿಸ್ತಾನಿ ಭಯೋತ್ಪಾದಕರನ್ನು ಸದೆಬಡಿಯಿರಿ" ಎಂದು ಒಮ್ಮೆಯಾದರೂ ಕೂಗಿ ಹೇಳುವುದೇ ಇಲ್ಲ. ಇನ್ನು ಪ್ರಶಾಂತ್ ಭೂಷಣ್ ಅವರಂತೂ, ರೊಹಿಂಗ್ಯಾ ಮುಸ್ಲಿಮರನ್ನು ದೇಶದಿಂದ ಹೊರ ಹಾಕದಂತೆ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಅವರ ನೆರವಿಗೆ ಧಾವಿಸುತ್ತಾರೆ.
ಆದರೆ ಪಶ್ಚಿಮ ಬಂಗಾಳವು ಮತ್ತೊಂದು ಕಾಶ್ಮೀರವಾಗಿ ಅಲ್ಲಿನ ಹಿಂದೂಗಳು ಕರುಣಾಜನಕ ಸ್ಥಿತಿಯನ್ನು ತಲುಪಿರುವುದರ ಬಗ್ಗೆ ಇವರಿಗೆ ಯಾವ ಕಾಳಜಿಯೂ ಇಲ್ಲ. ಹಿಂದೂಗಳಿಗೆ ತೊಂದರೆ ಯಾದಾಗ ಅದರ ವಿರುದ್ಧ ದನಿಯೆತ್ತುವುದನ್ನು ಇವರಿಂದ ನಿರೀಕ್ಷಿಸುವುದು ಸಾಧ್ಯವಿಲ್ಲವಾಗಿದೆ. “ಮೊದಲು ಷರಿಯಾ ಕಾನೂನು, ನಂತರ ಸಂವಿಧಾನ" ಎಂದು ಜಾರ್ಖಂಡ್‌ನ ಸಚಿವ ಹಫೀಜುಲ್ ಹಸನ್ ಹೇಳಿದರೂ ಅವರ ವಿರುದ್ಧ ಅವರ ಪಕ್ಷವು ಕ್ರಮ ಜರುಗಿಸುವುದಿಲ್ಲ.
ಹಿಂದೂ ಮಹಿಳೆಯರು ಹಣೆಗೆ ಕುಂಕುಮ ಇಡುವ ಬಗ್ಗೆ ಡಿಎಂಕೆ ಸಚಿವ ಕೆ.ಪೊನ್ನಮುಡಿ ಅವಹೇಳನಕಾರಿಯಾಗಿ ಮಾತನಾಡಿದರು; ಅವರ ವಿರುದ್ಧ ಭುಗಿಲೆದ್ದ ಜನಾಕ್ರೋಶಕ್ಕೆ ಕೇವಲ ಅವರಿಗಿದ್ದ ಪಕ್ಷದ ಜವಾಬ್ದಾರಿಯಿಂದ ಮುಕ್ತಗೊಳಿಸಲಾಯಿತು ಅಷ್ಟೇ. ಆಗ ಮದ್ರಾಸ್ ಹೈಕೋರ್ಟ್ ಮಧ್ಯ ಪ್ರವೇಶಿಸಿ ಸದರಿ ಸಚಿವರ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ನಿರ್ದೇಶಿಸ ಬೇಕಾಯಿತು.
ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ, “ಸನಾತನ ಧರ್ಮ ವನ್ನು ನಿರ್ಮೂಲನೆ ಮಾಡಬೇಕು" ಎಂಬುದಾಗಿ ಹೇಳಿದರೂ ಅವರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ, ಈ ಹೇಳಿಕೆಯ ಬಗ್ಗೆ ಮಿತ್ರಪಕ್ಷ ಕಾಂಗ್ರೆಸ್ ತನ್ನ ಆಕ್ಷೇಪವನ್ನು ವ್ಯಕ್ತಪಡಿಸುವು ದಿಲ್ಲ. ಸುಪ್ರೀಂ ಕೋರ್ಟ್ ಕೂಡ ಇವರ ಹೇಳಿಕೆಯ ವಿರುದ್ಧ ಉದಾರ ನಿಲುವು ತಳೆಯುತ್ತದೆ.
ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಫಾರ್ಮುಲಾ ತಡಕಾಡುತ್ತಿರುವ ರಾಹುಲ್ ಗಾಂಧಿಯವರು, ಹಿಂದೂಗಳನ್ನು ಜಾತಿ ಜಾತಿಯಾಗಿ ಒಡೆಯುವ ಕುತಂತ್ರನೀತಿಗೆ ಶರಣಾಗಿದ್ದಾರೆ. ಹೀಗಾಗಿ ಪ್ರತಿ ಯೊಂದು ವಿಷಯದಲ್ಲೂ ಜಾತಿಯನ್ನು ಎಳೆದುತಂದು ಸಮಾಜದಲ್ಲಿ ಒಡಕು ಮೂಡಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ ಹಿಂದುಳಿದ ಮುಸ್ಲಿಮರ ವಿಚಾರ ಬಂದಾಗ, ಅವರಲ್ಲಿನ ಉಪಜಾತಿಗಳ ಬಗ್ಗೆ ಇವರು ತುಟಿಪಿಟಿಕ್ ಎನ್ನುವುದಿಲ್ಲ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮಾರಣಹೋಮ ನಡೆದರೂ ವಿರೋಧ ಪಕ್ಷಗಳವರು ಅದನ್ನು ಖಂಡಿಸಿ ಸಣ್ಣ ಪ್ರತಿಭಟನೆಯನ್ನೂ ಮಾಡುವುದಿಲ್ಲ. ಪತ್ರಿಕಾ ಹೇಳಿಕೆಯನ್ನು ನೀಡಲೂ ಅವರು ಭಯಗ್ರಸ್ತರಾಗಿದ್ದಾರೆ. ಪ್ಯಾಲೆಸ್ತೀನಿಯರ ಹೋರಾಟದ ಬಗ್ಗೆ ಮರುಕ ತೋರುವ ಇವರು, ನೆರೆಯ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವು ತಮಗೆ ಸಂಬಂಧಪಡದ ವಿಷಯ ಎಂಬಂತೆ ವರ್ತಿಸುತ್ತಾರೆ.
ಢೋಂಗಿ ಜಾತ್ಯತೀತವಾದಿಗಳು ದೇಶದ ಬಹುಸಂಖ್ಯಾತರ ಪರ ನಿಲ್ಲುವ ಯಾವುದೇ ಲಕ್ಷಣ ಕಾಣುವುದೇ ಇಲ್ಲ. ತಮ್ಮ ಮತಬ್ಯಾಂಕ್ ಅನ್ನು ಕಾಪಾಡುವ ಸಲುವಾಗಿ ಹಿಂದೂಗಳ ಹಿತಾಸಕ್ತಿಯ ವಿಷಯದಲ್ಲಿ ರಾಜಿಮಾಡಿಕೊಳ್ಳುವ ಮನಸ್ಥಿತಿ ಇವರಲ್ಲಿ ದಟ್ಟವಾಗಿದೆ. ಹಿಂದೂಗಳನ್ನು ಕಾಪಾ ಡುವ ಅಥವಾ ಅವರ ರಕ್ಷಣೆಗೆ ನಿಲ್ಲುವ ಪ್ರಜ್ಞಾವಂತ ವಿರೋಧ ಪಕ್ಷ ಇಂದು ಮರೆಯಾಗಿದೆ. ಹಿಂದೂಗಳ ರಕ್ಷಣೆಗೆ ಅವರು ಯಾರೂ ಹಿಂದೆಯೂ ಬಂದಿಲ್ಲ, ಮುಂದೆಯೂ ಬರುವ ಸಾಧ್ಯತೆ ಯಿಲ್ಲ.
ಹಿಂದೂಗಳಿಗೆ ಪ್ರಬಲ ದನಿಯೇನಾದರೂ ಬಂದಿದ್ದರೆ ಅದು 2014ರ ನಂತರವೇ. ಢೋಂಗಿ ಜಾತ್ಯತೀತವಾದಕ್ಕೆ ತಿಲಾಂಜಲಿಯಿತ್ತ ಮೋದಿ ಸರಕಾರವು ತನ್ಮೂಲಕ ಸನಾತನ ಧರ್ಮಕ್ಕೆ ಸೂಕ್ತ ಗೌರವ ದೊರೆಯುವ ಹಾಗೆ ಮಾಡಿರುವುದು ಪ್ರಶಂಸನೀಯ.
(ಲೇಖಕರು ಬಿಜೆಪಿಯ ವಕ್ತಾರರು)